ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ಗೌರವಾನ್ವಿತ ರಾಷ್ಟ್ರಪತಿ ಅವರು ಡಿಸೆಂಬರ್ 27 ರಿಂದ 30 ರವರೆಗೆ ಗೋವಾ, ಕರ್ನಾಟಕ ಮತ್ತು ಜಾರ್ಖಂಡ್ ರಾಜ್ಯಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ


प्रविष्टि तिथि: 26 DEC 2025 5:00PM by PIB Bengaluru

ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 2025ರ ಡಿಸೆಂಬರ್ 27 ರಿಂದ 30 ರವರೆಗೆ ಗೋವಾ, ಕರ್ನಾಟಕ ಮತ್ತು ಜಾರ್ಖಂಡ್ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಅವರು ಡಿಸೆಂಬರ್ 27ರ ಸಂಜೆ ಗೋವಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಡಿಸೆಂಬರ್ 28ರಂದು, ರಾಷ್ಟ್ರಪತಿಯವರು ಕರ್ನಾಟಕದ ಕಾರವಾರ ಬಂದರಿನಿಂದ ಜಲಂತರಗಾಮಿಯಲ್ಲಿ ಸಮುದ್ರಯಾನ ಕೈಗೊಳ್ಳಲಿದ್ದಾರೆ.

ಡಿಸೆಂಬರ್ 29ರಂದು, ರಾಷ್ಟ್ರಪತಿಯವರು ಜಾರ್ಖಂಡ್‌ನ ಜಮ್‌ಶೆಡ್‌ಪುರದಲ್ಲಿ ನಡೆಯಲಿರುವ 'ಓಲ್ ಚಿಕಿ' ಲಿಪಿಯ ಶತಮಾನೋತ್ಸವ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ. ಅದೇ ದಿನ, ಅವರು ಜಮ್‌ಶೆಡ್‌ಪುರದ ಎನ್‌ಐಟಿ (NIT) ಸಂಸ್ಥೆಯ 15ನೇ ಘಟಿಕೋತ್ಸವ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಡಿಸೆಂಬರ್ 30ರಂದು, ರಾಷ್ಟ್ರಪತಿಯವರು ಜಾರ್ಖಂಡ್‌ನ ಗುಮ್ಲಾದಲ್ಲಿ ನಡೆಯಲಿರುವ 'ಅಂತಾರಾಜ್ಯ ಜನ ಸಾಂಸ್ಕೃತಿಕ ಸಮಾಗಮ ಸಮಾರೋಪ – ಕಾರ್ತಿಕ ಜಾತ್ರೆ'ಯಲ್ಲಿ ಭಾಷಣ ಮಾಡಲಿದ್ದಾರೆ.

 

*****


(रिलीज़ आईडी: 2208893) आगंतुक पटल : 69
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Bengali-TR , Tamil , Malayalam