ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಯುವಜನ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬೆಂಬಲಿಸಲು ಕ್ರೀಡಾಪಟು-ಕೇಂದ್ರಿತ ನಿರ್ಧಾರಗಳನ್ನು ಕೇಂದ್ರ ಕ್ರೀಡಾ ಸಚಿವರು ಮಹತ್ವಪೂರ್ಣವಾಗಿ ಸೂಚಿಸುತ್ತಿದ್ದಂತೆ ಭಾರತ ಕ್ರೀಡಾ ಪ್ರಾಧಿಕಾರದ (ಎಸ್.ಎ.ಐ.) ಆಡಳಿತ ಮಂಡಳಿಯು ಬಹು ಮೂಲಸೌಕರ್ಯಗಳ ಕ್ರೀಡಾ ಅಭಿವೃದ್ಧಿ ಮತ್ತು ಉನ್ನತೀಕರಣ ಯೋಜನೆಗಳಿಗೆ ಅನುಮೋದನೆ ನೀಡಿದೆ


ಭಾರತೀಯ ಕ್ರೀಡಾ ಪರಿಸರ ವ್ಯವಸ್ಥೆಯು ಈಗ ತನ್ನ ಯೌವನದಲ್ಲಿದೆ, ಮತ್ತು ಅದು ಉಜ್ವಲ ಭವಿಷ್ಯವನ್ನು ಹೊಂದಲು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಅದನ್ನು ಬಲಪಡಿಸುವುದು ಈ ಸಮಯದ ಹಾಗೂ ಇಂದಿನ ಅಗತ್ಯವಾಗಿದೆ: ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ

ಕೆ.ಎಸ್.ಎಸ್.ಆರ್. ಹೊಸ ಲೇಸರ್ ಶೂಟಿಂಗ್ ಗುರಿಗಳನ್ನು ಹೊಂದಲಿದೆ, ಬೆಂಗಳೂರಿನ ಎನ್.ಎಸ್.ಎಸ್.ಗೆ ಹೊಸ ಹಾಕಿ ಟರ್ಫ್ ಲಭಿಸಿದೆ, ಹಾಗೂ ಭೋಪಾಲ್ ನ ಎಸ್.ಎ.ಐ.ನಲ್ಲಿ ಸಿಂಥೆಟಿಕ್ ಟ್ರ್ಯಾಕ್ ಪಡೆಯಲಿದೆ, ಮುಂತಾದ ಹಲವಾರು ಯೋಜನೆಗಳನ್ನು ಆಡಳಿತ ಮಂಡಳಿಯ ಯೋಜನೆಗಳಲ್ಲಿ ಅನುಮೋದಿಸಲಾಗಿದೆ

प्रविष्टि तिथि: 22 DEC 2025 7:32PM by PIB Bengaluru

ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ ಇಂದು ನವದೆಹಲಿಯಲ್ಲಿ ನಡೆದ  ಭಾರತ ಕ್ರೀಡಾ ಪ್ರಾಧಿಕಾರದ (ಎಸ್.ಎ.ಐ.) ಆಡಳಿತ ಮಂಡಳಿಯ (ಜಿ.ಬಿ.) ಸಭೆಯಲ್ಲಿ ದೇಶಾದ್ಯಂತ ವ್ಯಾಪಕ ಶ್ರೇಣಿಯ ಮೂಲಸೌಕರ್ಯ ಅಭಿವೃದ್ಧಿ ಮತ್ತು ಉನ್ನತೀಕರಣ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಭಾರತ ಕ್ರೀಡಾ ಪ್ರಾಧಿಕಾರದ (ಎಸ್.ಎ.ಐ.) ಆಡಳಿತ ಮಂಡಳಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಡಾ. ಮಾಂಡವಿಯಾ ಅವರು "ಭಾರತೀಯ ಕ್ರೀಡಾ ಪರಿಸರ ವ್ಯವಸ್ಥೆಯು ಈಗ ಯೌವನದಲ್ಲಿದೆ, ಮತ್ತು ಅದಕ್ಕೆ ಉಜ್ವಲ ಭವಿಷ್ಯವಿರುವಂತೆ ಅದನ್ನು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಬಲಪಡಿಸುವುದು ಇಂದಿನ ಅಗತ್ಯವಾಗಿದೆ. ಇಂದು ನಾವು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಕ್ರೀಡಾಪಟು-ಕೇಂದ್ರಿತವಾಗಿವೆ ಮತ್ತು ಆಟಗಾರರಿಗೆ ಅಗತ್ಯವಿರುವ ಅತ್ಯುತ್ತಮ ಮೂಲಸೌಕರ್ಯವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿವೆ, ಇದರಿಂದಾಗಿ ಸಿ.ಡಬ್ಲ್ಯೂ.ಜಿ. ಮತ್ತು ಒಲಿಂಪಿಕ್ಸ್‌ ಗಾಗಿ ನಮ್ಮ ಮನಸ್ಸಿನಲ್ಲಿರುವ ಪದಕ ಗಳಿಕೆಯನ್ನು ಪೂರಕ ವ್ಯವಸ್ಥೆಯನ್ನು ಪೂರೈಸಲಾಗುತ್ತದೆ" ಎಂದು ಹೇಳಿದರು.

ಭಾರತೀಯ ಪುರುಷ ಮತ್ತು ಮಹಿಳಾ ರಾಷ್ಟ್ರೀಯ ಮತ್ತು 'ಎ' ಹಾಕಿ ತಂಡಗಳಿಗೆ ತರಬೇತಿ ಕೇಂದ್ರವಾಗಿ ಕಾರ್ಯನಿರ್ವಹಿಸುವ ಬೆಂಗಳೂರಿನ ಎಸ್.ಎ.ಐ. ಎನ್.ಎಸ್.ಎಸ್.ಸಿ ಗಾಗಿ ಪೋಲಿಗ್ರಾಸ್ ಪ್ಯಾರಿಸ್ ಜಿಟಿ ಝೀರೋ ಹಾಕಿ ಟರ್ಫ್ ಅನ್ನು ಖರೀದಿಸುವುದು ಆಡಳಿತ ಮಂಡಳಿ ಶಿಫಾರಸು ಮಾಡಿದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ.

ಭಾರತದ ಗಣ್ಯರು ಮತ್ತು ಉದಯೋನ್ಮುಖ ಶೂಟರ್‌ಗಳ ತರಬೇತಿ ಮೈದಾನವಾದ ಕರ್ಣಿ ಸಿಂಗ್ ಶೂಟಿಂಗ್ ರೇಂಜ್ (ಕೆ.ಎಸ್.ಎಸ್.ಆರ್.) ನಲ್ಲಿ ಅಸ್ತಿತ್ವದಲ್ಲಿರುವ ಎಲೆಕ್ಟ್ರಾನಿಕ್ ಶೂಟಿಂಗ್ ಗುರಿಗಳನ್ನು "ಲೇಸರ್ ಗುರಿ" ವ್ಯವಸ್ಥೆಗಳೊಂದಿಗೆ ಬದಲಾಯಿಸಲು ಆಡಳಿತ ಮಂಡಳಿಯು ಒಪ್ಪಿಕೊಂಡು ಅನುಮೋದಿಸಿದೆ.

ಈ ಪ್ರಮುಖ ನಿರ್ಧಾರಗಳ ಜೊತೆಗೆ, ತೀವ್ರ ತರಬೇತಿ ಮತ್ತು ಸಮಗ್ರ ಕ್ರೀಡಾಪಟು ಅಭಿವೃದ್ಧಿಯನ್ನು ಸುಗಮಗೊಳಿಸಲು ಎಸ್.ಎ.ಐ ಎನ್.ಸಿ.ಒ.ಇ. ಛತ್ರಪತಿ ಸಂಭಾಜಿನಗರ (ಹಿಂದೆ ಎಸ್.ಎ.ಐ. ಔರಂಗಾಬಾದ್), ಎಸ್.ಎ.ಐ. ಎನ್.ಎಸ್.‌ಎನ್.‌ಐ.ಎಸ್ ಪಟಿಯಾಲ ಮತ್ತು ಎಸ್.ಎ.ಐ ಎಲ್.ಎನ್.ಸಿ.ಪಿ.ಇ. ತಿರುವನಂತಪುರದಲ್ಲಿ ಮೂರು ಬಹುಪಯೋಗಿ ಸಭಾಂಗಣಗಳ ನಿರ್ಮಾಣಕ್ಕೂ ಆಡಳಿತ ಮಂಡಳಿ ಅನುಮೋದನೆ ನೀಡಿದೆ.

ಎಸ್.ಎ.ಐ. ಎನ್.ಸಿ.ಒ.ಇ. ಛತ್ರಪತಿ ಸಂಭಾಜಿನಗರದಲ್ಲಿರುವ ಸೌಲಭ್ಯವು ಮೀಸಲಾದ ಹವಾಮಾನ ನಿರೋಧಕ ಬಾಕ್ಸಿಂಗ್ ತರಬೇತಿ ವಲಯ, ಶಕ್ತಿ ಮತ್ತು ಕಂಡೀಷನಿಂಗ್ ಪ್ರದೇಶ ಮತ್ತು ವಾಲಿಬಾಲ್ ಮತ್ತು ಬ್ಯಾಡ್ಮಿಂಟನ್‌ ಗಾಗಿ ಗೊತ್ತುಪಡಿಸಿದ ಒಳಾಂಗಣ ಸ್ಥಳಗಳನ್ನು ಹೊಂದಿರುತ್ತದೆ, ಆದರೆ ಎಸ್.ಎ.ಐ. ಎನ್ಸಿಸ್  ಪಟಿಯಾಲದಲ್ಲಿರುವ ಒಳಾಂಗಣ ತರಬೇತಿ ಸಭಾಂಗಣವು ಸೌಲಭ್ಯದ ಒಳಾಂಗಣ ತರಬೇತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಕ್ರೀಡಾ ಪ್ರದರ್ಶನ, ಕ್ರೀಡಾ ವಿಜ್ಞಾನ ಬೆಂಬಲ, ಕಂಡೀಷನಿಂಗ್ ಮತ್ತು ಚೇತರಿಕೆಗಾಗಿ ಆಧುನಿಕ, ಸಂಯೋಜಿತ ಪರಿಸರ ವ್ಯವಸ್ಥೆಯನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಭಾರತದ ಪ್ರಮುಖ ಶೈಕ್ಷಣಿಕ ಸಂಸ್ಥೆ ಮತ್ತು ಉನ್ನತ-ಕಾರ್ಯಕ್ಷಮತೆಯ ತರಬೇತಿ ಕೇಂದ್ರವಾದ ಎಲ್.ಎನ್.ಸಿ.ಪಿ.ಇ. ತಿರುವನಂತಪುರಕ್ಕೆ ವರ್ಷಪೂರ್ತಿ ನಿರಂತರ ತರಬೇತಿ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ಖಚಿತಪಡಿಸಿಕೊಳ್ಳಲು ಹೊಸ ಬಹುಪಯೋಗಿ ಸಭಾಂಗಣವನ್ನು ಸಹ ನೀಡಲಾಗಿದೆ.

ಪಶ್ಚಿಮ ಬಂಗಾಳದ ಎಸ್.ಎ.ಐ. ಎಸ್.ಟಿ.ಸಿ  ಜಲ್ಪೈಗುರಿಯಲ್ಲಿ 400 ಮೀಟರ್, 8-ಲೇನ್ ಸಿಂಥೆಟಿಕ್ ಅಥ್ಲೆಟಿಕ್ಸ್ ಟ್ರ್ಯಾಕ್ ನಿರ್ಮಾಣಕ್ಕೂ ಆಡಳಿತ ಮಂಡಳಿ (ಜಿ.ಬಿ) ಅನುಮೋದನೆ ನೀಡಿದೆ.  ಎಸ್.ಎ.ಐ. ಎಸ್.ಟಿ.ಸಿ  ಜಲ್ಪೈಗುರಿ ಅಥ್ಲೆಟಿಕ್ಸ್ ತರಬೇತಿಗೆ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ ಮತ್ತು ಸೀಮಿತ ಮೂಲಸೌಕರ್ಯಗಳ ಹೊರತಾಗಿಯೂ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಿರಂತರವಾಗಿ ಶ್ಲಾಘನೀಯ ಪ್ರದರ್ಶನಗಳನ್ನು ನೀಡುತ್ತಿದೆ ಎಂದು ಆಡಳಿತ ಮಂಡಳಿಯ ಸಮಿತಿ ಗಮನಿಸಿದೆ.

ಎಸ್.ಎ.ಐ. ಎಸ್.ಟಿ.ಸಿ. ಜಲ್ಪೈಗುರಿಯ ಜೊತೆಗೆ, ಭೋಪಾಲ್‌ ನ ಎಸ್.ಎ.ಐ. ಸಿ.ಆರ್.ಸಿ. ಯಲ್ಲಿ ಹೊಸ ಸಿಂಥೆಟಿಕ್ ಟ್ರ್ಯಾಕ್ ಅನ್ನು ಹಾಕಲು ಸಮಿತಿಯು ಅನುಮೋದನೆ ನೀಡಿದೆ. ಬಹು ಕ್ರೀಡಾ ವಿಭಾಗಗಳ ಕ್ರೀಡಾಪಟುಗಳು ಇದರಲ್ಲಿ ತರಬೇತಿ ಪಡೆಯುತ್ತಿರುವ ಈ ಕೇಂದ್ರವು ಇಬ್ಬರು ಒಲಿಂಪಿಯನ್‌ ಗಳು ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ನಿರಂತರವಾಗಿ ತಯಾರು ಮಾಡಿದೆ.

 

****


(रिलीज़ आईडी: 2207550) आगंतुक पटल : 52
इस विज्ञप्ति को इन भाषाओं में पढ़ें: English , Gujarati , Malayalam , Urdu , हिन्दी , Tamil , Telugu