ಜಲ ಶಕ್ತಿ ಸಚಿವಾಲಯ
azadi ka amrit mahotsav

ತಳಮಟ್ಟದ ನೀರಿನ ಆಡಳಿತವನ್ನು ಬಲಪಡಿಸಲು 'ಸುಜಲ ಗ್ರಾಮ ಸಂವಾದ'ದ ಎರಡನೇ ಆವೃತ್ತಿ


ಗ್ರಾಮಗಳ ಸಬಲೀಕರಣ: ನೀರಿನ ಆಡಳಿತಕ್ಕಾಗಿ ಸುಜಲ ಗ್ರಾಮ ಸಂವಾದದ ಎರಡನೇ ಆವೃತ್ತಿ

ಬಹುಭಾಷಾ ಸಂವಾದ: ಎಂಟು ರಾಜ್ಯಗಳಲ್ಲಿ ಗ್ರಾಮೀಣ ನೀರಿನ ಉಪಕ್ರಮಗಳ ಬಲವರ್ಧನೆ

प्रविष्टि तिथि: 18 DEC 2025 5:21PM by PIB Bengaluru

ಜಲಶಕ್ತಿ ಸಚಿವಾಲಯದ ಅಧೀನದಲ್ಲಿರುವ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (ಡಿಡಿಡಬ್ಲ್ಯೂಎಸ್), ಡಿಸೆಂಬರ್ 19, 2025 ರಂದು ನಾಳೆ 'ಸುಜಲ ಗ್ರಾಮ ಸಂವಾದ' ಎರಡನೇ ಆವೃತ್ತಿಯನ್ನು ಆಯೋಜಿಸಲಿದೆ. ಈ ಮಹತ್ವದ ಉಪಕ್ರಮವು ಕೇಂದ್ರ ಸರ್ಕಾರ ಮತ್ತು ಗ್ರಾಮೀಣ ಸಮುದಾಯಗಳ ನಡುವೆ ನೇರ ಸಂವಾದಕ್ಕಾಗಿ ಬಹುಭಾಷಾ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಈ ಅಧಿವೇಶನದಲ್ಲಿ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ಉಪಸ್ಥಿತರಿರುವ ನಿರೀಕ್ಷೆಯಿದ್ದು, ಅವರು ಬೆಳಿಗ್ಗೆ 11:00 ಗಂಟೆಗೆ ಪ್ರಾರಂಭವಾಗುವ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಫಲಾನುಭವಿಗಳು ಮತ್ತು ಪಾಲುದಾರರೊಂದಿಗೆ ಸಂವಾದ ನಡೆಸಲಿದ್ದಾರೆ.

ಸುಜಲ ಗ್ರಾಮ ಸಂವಾದವು ನೀತಿ ನಿರೂಪಕರು ಮತ್ತು ತಳಮಟ್ಟದ ಜನರ ನಡುವಿನ ಅಂತರವನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾದ ವಿಶಿಷ್ಟ ಉಪಕ್ರಮವಾಗಿದೆ. ಪ್ರಾದೇಶಿಕ ಭಾಷೆಗಳಲ್ಲಿ ಸಂವಾದಗಳನ್ನು ನಡೆಸುವ ಮೂಲಕ, ಮಹಿಳೆಯರು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ (ವಿಡಬ್ಲ್ಯೂಎಸ್‌ಸಿ) ಸದಸ್ಯರು, ವಿದ್ಯಾರ್ಥಿಗಳು ಮತ್ತು ಸಮುದಾಯದ ಮುಖಂಡರು ಸೇರಿದಂತೆ ಗ್ರಾಮದ ಪ್ರತಿನಿಧಿಗಳು 'ಹರ್ ಘರ್ ಜಲ್' ನೊಂದಿಗಿನ ತಮ್ಮ ಅನುಭವಗಳನ್ನು ತಮ್ಮದೇ ಆದ ಭಾಷೆಯಲ್ಲಿ ಹಂಚಿಕೊಳ್ಳುವುದನ್ನು ಕಾರ್ಯಕ್ರಮವು ಖಚಿತಪಡಿಸುತ್ತದೆ.

ನವೆಂಬರ್ 18, 2025 ರಂದು ನಡೆದ ಮೊದಲ ಸಂವಾದದ ಯಶಸ್ಸಿನ ನಂತರ (ಇದು 12 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು 12 ಭಾಷೆಗಳಲ್ಲಿ ಒಳಗೊಂಡಿತ್ತು), ಎರಡನೇ ಆವೃತ್ತಿಯು ಎಂಟು ನಿರ್ದಿಷ್ಟ ರಾಜ್ಯಗಳ ಮೇಲೆ ಕೇಂದ್ರೀಕರಿಸಿದೆ. ಸುಗಮ ಸಂವಹನವನ್ನು ಖಚಿತಪಡಿಸಿಕೊಳ್ಳಲು, ಭಾಗವಹಿಸುವ ಗ್ರಾಮಗಳ ಸ್ಥಳೀಯ ಉಪಭಾಷೆಗಳಲ್ಲಿ ಹೆಚ್ಚಿನ ಪ್ರಾವೀಣ್ಯತೆ ಹೊಂದಿರುವ ವಿಶೇಷ ಅಧಿಕಾರಿಗಳು ಮತ್ತು ಸಲಹೆಗಾರರನ್ನು ಇಲಾಖೆ ನಿಯೋಜಿಸಿದೆ.

ಕಾರ್ಯಕ್ರಮದ ವಿವರಗಳು

ದಿನಾಂಕ: ಡಿಸೆಂಬರ್ 19, 2025

  • ಸಮಯ: ಬೆಳಿಗ್ಗೆ 11:00 ಗಂಟೆ
  • ವಿಧಾನ: ವಿಡಿಯೋ ಕಾನ್ಫರೆನ್ಸಿಂಗ್
  • ಗ್ರಾಮಗಳ ಪ್ರಮುಖ ಭಾಗಿಗಳು: ಸರಪಂಚರು, ಗ್ರಾಮ ಪಂಚಾಯತ್ ಕಾರ್ಯನಿರ್ವಾಹಕರು, ಜಲ ಜೀವನ್ ಮಿಷನ್ ಫಲಾನುಭವಿಗಳು, ವಿಡಬ್ಲ್ಯೂಎಸ್‌ಸಿ ಸದಸ್ಯರು, ಮಹಿಳಾ ಗುಂಪುಗಳು ಮತ್ತು ಸಮುದಾಯ ಮುಖಂಡರು.

ಭಾಗವಹಿಸುವ ರಾಜ್ಯಗಳು, ಜಿಲ್ಲೆಗಳು ಮತ್ತು ಗ್ರಾಮಗಳ ವಿವರಗಳು:

ರಾಜ್ಯ

ಜಿಲ್ಲೆ

ಗ್ರಾಮ

ಕರ್ನಾಟಕ

ಉಡುಪಿ

ಕೋಡಿ

ಅಸ್ಸಾಂ

ಜೋರ್ಹತ್

ದಕ್ಷಿಣ ಪರ್ಬೋತಿಯಾ

ಸಿಕ್ಕಿಂ

ಪಾಕ್ಯಾಂಗ್

ಪಾಚೆಖಾನಿ

ಉತ್ತರಾಖಂಡ

ಡೆಹ್ರಾಡೂನ್

ಕಾಲುವಾಲಾ

ಜಾರ್ಖಂಡ್

ಸಿಮ್ಡೆಗಾ

ಆರಣಿ

ಗುಜರಾತ್

ಮೆಹ್ಸಾನಾ

ಜಹೀರ್‌ಪುರ

ಜಮ್ಮು ಮತ್ತು ಕಾಶ್ಮೀರ

ಶೋಪಿಯಾನ್

ಅವನೀರಾ

ಮಹಾರಾಷ್ಟ್ರ

ಚಂದ್ರಾಪುರ

ಲೋಹರಾ

 

****


(रिलीज़ आईडी: 2206184) आगंतुक पटल : 19
इस विज्ञप्ति को इन भाषाओं में पढ़ें: Nepali , English , Urdu , हिन्दी , Assamese , Gujarati