ಪ್ರಧಾನ ಮಂತ್ರಿಯವರ ಕಛೇರಿ
ಪ್ರಸಿದ್ಧ ಶಿಲ್ಪಿ ಶ್ರೀ ರಾಮ್ ಸುತಾರ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
प्रविष्टि तिथि:
18 DEC 2025 12:01PM by PIB Bengaluru
ಶ್ರೀ ರಾಮ್ ಸುತಾರ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಶ್ರೀ ರಾಮ್ ಸುತಾರ್ ಅವರು ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆ ಸೇರಿದಂತೆ ಭಾರತಕ್ಕೆ ಕೆಲವು ಅಪ್ರತಿಮ ಮಹಾನ್ ಹೆಗ್ಗುರುತು ಕಲಾಕೃತಿಗಳನ್ನು ನೀಡಿದ ಅದ್ಭುತ ಪಾಂಡಿತ್ಯ ಹೊಂದಿದ ಶಿಲ್ಪಿಯಾಗಿದ್ದಾರೆ ಎಂದು ಪ್ರಧಾನಮಂತ್ರಿಯವರು ಹೇಳಿದ್ದಾರೆ. ಅವರ ಕೃತಿಗಳನ್ನು ಭಾರತದ ಇತಿಹಾಸ, ಸಂಸ್ಕೃತಿ ಮತ್ತು ಸಾಮೂಹಿಕ ಮನೋಭಾವದ ಪ್ರಬಲ ಅಭಿವ್ಯಕ್ತಿಗಳಾಗಿ ಯಾವಾಗಲೂ ಪ್ರಶಂಸಿಸಲಾಗುತ್ತದೆ ಮತ್ತು ಅವರು ಮುಂದಿನ ಪೀಳಿಗೆಗೆ ರಾಷ್ಟ್ರೀಯ ಹೆಮ್ಮೆಯನ್ನು ಅಮರಗೊಳಿಸಿದ್ದಾರೆ. ಅವರ ಕೃತಿಗಳು ಕಲಾವಿದರು ಮತ್ತು ನಾಗರಿಕರಿಗೆ ಸಮಾನವಾಗಿ ಸ್ಫೂರ್ತಿ ನೀಡುತ್ತವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ತಾಣದ ಸಂದೇಶದಲ್ಲಿ ಈ ರೀತಿ ಸಂದೇಶ ಬರೆದಿದ್ದಾರೆ;
“ಕೆವಾಡಿಯಾದಲ್ಲಿನ ಏಕತಾ ಪ್ರತಿಮೆ ಸೇರಿದಂತೆ ಭಾರತಕ್ಕೆ ಕೆಲವು ಅಪ್ರತಿಮ ಹೆಗ್ಗುರುತುಗಳನ್ನು ನೀಡಿದ ಅದ್ಭುತ ಶಿಲ್ಪಿ ಶ್ರೀ ರಾಮ್ ಸುತಾರ್ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರ ಕಲಾಕೃತಿಗಳು ಭಾರತದ ಇತಿಹಾಸ, ಸಂಸ್ಕೃತಿ ಮತ್ತು ಸಾಮೂಹಿಕ ಮನೋಭಾವದ ಪ್ರಬಲ ಅಭಿವ್ಯಕ್ತಿಗಳಾಗಿ ಯಾವಾಗಲೂ ಮೆಚ್ಚುಗೆ ಪಡೆಯುತ್ತವೆ. ಅವರು ಮುಂದಿನ ಪೀಳಿಗೆಗೆ ರಾಷ್ಟ್ರೀಯ ಹೆಮ್ಮೆಯನ್ನು ಅಮರವಾಗಿಸಿದ್ದಾರೆ. ಅವರ ಕೃತಿಗಳು ಕಲಾವಿದರು ಮತ್ತು ನಾಗರಿಕರನ್ನು ಸಮಾನವಾಗಿ ಪ್ರೇರೇಪಿಸುತ್ತಲೇ ಇರುತ್ತವೆ. ಅವರ ಕುಟುಂಬ, ಅಭಿಮಾನಿಗಳು ಮತ್ತು ಅವರ ಅದ್ಭುತ ಜೀವನ ಮತ್ತು ಕೆಲಸದಿಂದ ಸ್ಪರ್ಶಿಸಲ್ಪಟ್ಟ ಎಲ್ಲರಿಗೂ ನನ್ನ ಹೃತ್ಪೂರ್ವಕ ಸಂತಾಪಗಳು. ಓಂ ಶಾಂತಿ.”
“श्री राम सुतार जी यांच्या निधनाने मन अत्यंत दुःखी झाले आहे, त्यांच्या अद्वितीय शिल्पांच्या माध्यमातून भारताला काही प्रतिष्ठीत मानचिन्हे लाभली, त्यात केवाडिया येथील स्टॅच्यू ऑफ युनिटी हे प्रतीकात्मक शिल्प विशेष उल्लेखनीय आहे. त्यांच्या कलाकृती भारताच्या इतिहास, संस्कृती आणि सामूहिक चेतनेचे प्रभावी दर्शन घडवतात. राष्ट्राभिमानाला त्यांनी शाश्वत रूप देत पुढील पिढ्यांसाठी एक अमूल्य वारसा निर्माण केला आहे. त्यांच्या कलाकृती कलाकार आणि नागरिकांना सदैव प्रेरणा देत राहतील. त्यांचे कुटुंब, चाहते आणि त्यांच्या महान जीवनकार्याचा प्रभाव असलेल्या सर्वांप्रति मी माझ्या संवेदना व्यक्त करतो. ॐ शांती."
*****
(रिलीज़ आईडी: 2205821)
आगंतुक पटल : 10
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Bengali-TR
,
Assamese
,
Manipuri
,
Punjabi
,
Gujarati
,
Tamil
,
Telugu
,
Malayalam