ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಸಾಮಾಜಿಕ ಮಾಧ್ಯಮಗಳಿಂದ ಒಟಿಟಿ ವೇದಿಕೆಗಳವರೆಗೆ: ಆನ್‌ಲೈನ್‌ನಲ್ಲಿನ ಅಶ್ಲೀಲತೆ, ತಪ್ಪು ಮಾಹಿತಿ ಮತ್ತು ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ಸರ್ಕಾರದಿಂದ ಕಟ್ಟುನಿಟ್ಟಾದ ಹೊಣೆಗಾರಿಕೆ ಜಾರಿ
ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಇಂಟೆರ್ ನೆಟ್
ಅಶ್ಲೀಲ, ಹಾನಿಕಾರಕ ಮತ್ತು ಕಾನೂನುಬಾಹಿರ ಆನ್ ಲೈನ್ ವಿಷಯಗಳನ್ನು ಎದುರಿಸಲು ಐಟಿ ಕಾಯ್ದೆ, ಐಟಿ ನಿಯಮಗಳು 2021 ಮತ್ತು ಭಾರತೀಯ ನ್ಯಾಯ ಸಂಹಿತೆಯಿಂದ ಅಧಿಕಾರಿಗಳಿಗೆ ಅಧಿಕಾರ
50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳು ಸ್ಥಳೀಯ ಅಧಿಕಾರಿಗಳನ್ನು ನೇಮಿಸುವುದು ಮತ್ತು ಅನುಸರಣಾ ವರದಿಗಳನ್ನು ಪ್ರಕಟಿಸುವುದು ಕಡ್ಡಾಯ
प्रविष्टि तिथि:
17 DEC 2025 2:23PM by PIB Bengaluru
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ತನ್ನೆಲ್ಲಾ ಬಳಕೆದಾರರಿಗೆ ಮುಕ್ತ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಇಂಟೆರ್ ನೆಟ್ ವ್ಯವಸ್ಥೆಯನ್ನು ಒದಗಿಸುವುದು ಸರ್ಕಾರದ ನೀತಿಗಳ ಮುಖ್ಯ ಉದ್ದೇಶವಾಗಿದೆ.
ಭಾರತದಲ್ಲಿನ ಇಂಟರ್ನೆಟ್ ವ್ಯವಸ್ಥೆಯು ಯಾವುದೇ ರೀತಿಯ ಕಾನೂನುಬಾಹಿರ ವಿಷಯಗಳಿಂದ, ವಿಶೇಷವಾಗಿ ಅಸಭ್ಯ ಮತ್ತು ಅಶ್ಲೀಲ ಮಾಹಿತಿಯಿಂದ ಮುಕ್ತವಾಗಿರುವುದನ್ನು ಖಚಿತಪಡಿಸಲು ಸರ್ಕಾರ ಬದ್ಧವಾಗಿದೆ.
ಡಿಜಿಟಲ್ ವೇದಿಕೆಗಳಲ್ಲಿ ಕಾನೂನುಬಾಹಿರ ವಿಷಯಗಳನ್ನು ತಡೆಗಟ್ಟಲು ಇರುವ ಕಾನೂನು ಚೌಕಟ್ಟುಗಳು
ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ, 2000
ಐಟಿ ಕಾಯಿದೆ ಮತ್ತು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ) ನಿಯಮಗಳು, 2021 (ಐಟಿ ನಿಯಮಗಳು, 2021) ಜಂಟಿಯಾಗಿ, ಡಿಜಿಟಲ್ ವಲಯದಲ್ಲಿನ ಕಾನೂನುಬಾಹಿರ ಮತ್ತು ಹಾನಿಕಾರಕ ವಿಷಯಗಳನ್ನು ಎದುರಿಸಲು ಕಠಿಣವಾದ ಚೌಕಟ್ಟನ್ನು ರೂಪಿಸಿವೆ.
ಇದು ಹೊಣೆಗಾರಿಕಯನ್ನು ಖಚಿತಪಡಿಸಲು ಮಧ್ಯವರ್ತಿಗಳ ಮೇಲೆ ಸ್ಪಷ್ಟವಾದ ಕಟ್ಟುಪಾಡುಗಳನ್ನು ವಿಧಿಸುತ್ತದೆ.
ಐಟಿ ಕಾಯ್ದೆಯು ಗೌಪ್ಯತೆಯ ಉಲ್ಲಂಘನೆ (ಸೆಕ್ಷನ್ 66E), ಅಶ್ಲೀಲ ಅಥವಾ ಲೈಂಗಿಕವಾಗಿ ಸ್ಪಷ್ಟವಾಗಿರುವ ವಿಷಯಗಳನ್ನು ಪ್ರಕಟಿಸುವುದು ಅಥವಾ ರವಾನಿಸುವುದು (ಸೆಕ್ಷನ್ 67, 67A, 67B)ಮೊದಲಾದ ವಿವಿಧ ಸೈಬರ್ ಅಪರಾಧಗಳಿಗೆ ಶಿಕ್ಷೆಯನ್ನು ವಿಧಿಸುತ್ತದೆ.
ಅಲ್ಲದೆ, ಅಪರಾಧಗಳನ್ನು ತನಿಖೆ ಮಾಡಲು (ಸೆಕ್ಷನ್ 78), ಸಾರ್ವಜನಿಕ ಸ್ಥಳವನ್ನು ಪ್ರವೇಶಿಸಲು ಹಾಗೂ ಶಂಕಿತ ವ್ಯಕ್ತಿಯನ್ನು ಶೋಧಿಸಲು ಮತ್ತು ಬಂಧಿಸಲು (ಸೆಕ್ಷನ್ 80) ಈ ಕಾಯ್ದೆಯು ಪೊಲೀಸರಿಗೆ ಅಧಿಕಾರ ನೀಡುತ್ತದೆ.
ಐಟಿ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ) ನಿಯಮಗಳು, 2021
ಐಟಿ ನಿಯಮಗಳು, 2021, ಸಾಮಾಜಿಕ ಜಾಲತಾಣಗಳು ಸೇರಿದಂತೆ ಎಲ್ಲಾ ಮಧ್ಯವರ್ತಿಗಳ ಮೇಲೆ 'ಸೂಕ್ತ ಪರಿಶೀಲನಾ ಜವಾಬ್ದಾರಿಗಳನ್ನು' (Due-diligence obligations) ವಿಧಿಸುತ್ತವೆ. ಕಾನೂನುಬಾಹಿರ ವಿಷಯಗಳನ್ನು ತಮ್ಮ ತಾಣಗಳಲ್ಲಿ ಪ್ರಕಟಿಸುವುದು ಅಥವಾ ರವಾನಿಸುವುದನ್ನು ತಡೆಗಟ್ಟಲು, ಈ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಈ ನಿಯಮಗಳು ಮಧ್ಯವರ್ತಿಗಳಿಗೆ ಕಡ್ಡಾಯಗೊಳಿಸುತ್ತವೆ.
ಐಟಿ ನಿಯಮಗಳು, 2021ರ ಅಡಿಯಲ್ಲಿರುವ ಪ್ರಮುಖ ನಿಬಂಧನೆಗಳು:
|
ನಿಬಂಧನೆ
|
ವಿವರಗಳು
|
|
ನಿರ್ಬಂಧಿತ ಮಾಹಿತಿ
ನಿಯಮ 3(1)(b) ಅಡಿಯಲ್ಲಿ
|
ಇತರ ವಿಷಯಗಳ ಜೊತೆಗೆ, ಈ ಕೆಳಗಿನ ಸ್ವರೂಪದ ಮಾಹಿತಿ ಅಥವಾ ವಿಷಯವನ್ನು ಹೋಸ್ಟ್ ಮಾಡುವುದು, ಸಂಗ್ರಹಿಸುವುದು, ರವಾನಿಸುವುದು, ಪ್ರದರ್ಶಿಸುವುದು ಅಥವಾ ಪ್ರಕಟಿಸುವುದನ್ನು ಇದು ನಿರ್ಬಂಧಿಸುತ್ತದೆ:
- ಅಶ್ಲೀಲ, ಪೋರ್ನೋಗ್ರಾಫಿಕ್, ಇನ್ನೊಬ್ಬರ ಗೌಪ್ಯತೆಗೆ ಧಕ್ಕೆ ತರುವ, ಲಿಂಗದ ಆಧಾರದ ಮೇಲೆ ಅವಮಾನಿಸುವ ಅಥವಾ ಕಿರುಕುಳ ನೀಡುವ, ಜನಾಂಗೀಯವಾಗಿ ಅಥವಾ ಜನಾಂಗೀಯ ಮೂಲದ ಆಧಾರದ ಮೇಲೆ ಆಕ್ಷೇಪಾರ್ಹವಾದ, ಅಥವಾ ದ್ವೇಷ ಹಾಗೂ ಹಿಂಸಾಚಾರವನ್ನು ಪ್ರಚೋದಿಸುವಂತಹ ವಿಷಯಗಳು;
- ಮಕ್ಕಳಿಗೆ ಹಾನಿಕಾರಕವಾದ ವಿಷಯಗಳು;
- ಡೀಪ್‌ಫೇಕ್‌ಗಳ ಮೂಲಕವೂ ಸೇರಿದಂತೆ, ವಂಚಿಸುವ ಅಥವಾ ದಾರಿ ತಪ್ಪಿಸುವ ವಿಷಯಗಳು;
- ಕೃತಕ ಬುದ್ಧಿಮತ್ತೆಯ ಮೂಲಕವೂ ಸೇರಿದಂತೆ, ಬೇರೆಯವರಂತೆ ಬಿಂಬಿಸಿಕೊಳ್ಳುವ ಅಥವಾ ಸೋಗು ಹಾಕುವ (Impersonates) ವಿಷಯಗಳು;
- ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಬೆದರಿಕೆ ಒಡ್ಡುವ ವಿಷಯಗಳು;
- ಜಾರಿಯಲ್ಲಿರುವ ಯಾವುದೇ ಕಾನೂನನ್ನು ಉಲ್ಲಂಘಿಸುವ ವಿಷಯಗಳು.
|
|
ಬಳಕೆದಾರರ ಜಾಗೃತಿ
ಕಟ್ಟುಪಾಡುಗಳು
|
ಕಾನೂನುಬಾಹಿರ ವಿಷಯವನ್ನು ಹಂಚಿಕೊಳ್ಳುವುದರಿಂದ ಆಗುವ ಪರಿಣಾಮಗಳ ಬಗ್ಗೆ ಮಧ್ಯವರ್ತಿಗಳು ತಮ್ಮ ಸೇವಾ ನಿಯಮಗಳು ಮತ್ತು ಬಳಕೆದಾರರ ಒಪ್ಪಂದಗಳ ಮೂಲಕ ಬಳಕೆದಾರರಿಗೆ ಸ್ಪಷ್ಟವಾಗಿ ತಿಳಿಸಬೇಕು, ಇದರಲ್ಲಿ ವಿಷಯವನ್ನು ತೆಗೆದುಹಾಕುವುದು, ಖಾತೆಯನ್ನು ಅಮಾನತುಗೊಳಿಸುವುದು ಅಥವಾ ರದ್ದುಗೊಳಿಸುವುದು ಸೇರಿದೆ.
|
|
ವಿಷಯ ತೆಗೆದುಹಾಕುವಿಕೆಯಲ್ಲಿ ಹೊಣೆಗಾರಿಕೆ
|
ನ್ಯಾಯಾಲಯದ ಆದೇಶಗಳು, ಸರ್ಕಾರದಿಂದ ಕಾರಣ ಸಹಿತ ಸೂಚನೆ ಅಥವಾ ಬಳಕೆದಾರರ ದೂರುಗಳ ಮೇರೆಗೆ, ನಿಗದಿತ ಕಾಲಮಿತಿಯೊಳಗೆ ಕಾನೂನುಬಾಹಿರ ವಿಷಯವನ್ನು ತೆಗೆದುಹಾಕಲು ಮಧ್ಯವರ್ತಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು.
|
|
ಕುಂದುಕೊರತೆ ಪರಿಹಾರ
|
- ಮಧ್ಯವರ್ತಿಗಳು ಕುಂದುಕೊರತೆ ಅಧಿಕಾರಿಗಳನ್ನು ನೇಮಿಸಬೇಕು.
- ಕಾನೂನುಬಾಹಿರ ವಿಷಯವನ್ನು ತೆಗೆದುಹಾಕುವ ಮೂಲಕ 72 ಗಂಟೆಗಳ ಒಳಗೆ ದೂರುಗಳನ್ನು ಪರಿಹರಿಸುವುದನ್ನು ಕಡ್ಡಾಯಗೊಳಿಸುತ್ತದೆ.
- ಗೌಪ್ಯತೆಯನ್ನು ಉಲ್ಲಂಘಿಸುವ, ವ್ಯಕ್ತಿಗಳ ಸೋಗು ಹಾಕುವ ಅಥವಾ ನಗ್ನತೆಯನ್ನು ಪ್ರದರ್ಶಿಸುವ ವಿಷಯವನ್ನು, ಅಂತಹ ಯಾವುದೇ ದೂರಿನ ಮೇರೆಗೆ 24 ಗಂಟೆಗಳ ಒಳಗೆ ತೆಗೆದುಹಾಕಬೇಕು.
|
|
ಕುಂದುಕೊರತೆ ಮೇಲ್ಮನವಿ ಸಮಿತಿಗಳ (GACs) ಕಾರ್ಯವಿಧಾನ
|
ಮಧ್ಯವರ್ತಿಗಳ ಕುಂದುಕೊರತೆ ಅಧಿಕಾರಿಗಳು ತಮ್ಮ ದೂರುಗಳನ್ನು ಇತ್ಯರ್ಥಪಡಿಸದಿದ್ದರೆ, ಬಳಕೆದಾರರು www.gac.gov.in ನಲ್ಲಿ ಆನ್‌ಲೈನ್ ಮೂಲಕ ಮೇಲ್ಮನವಿ ಸಲ್ಲಿಸಬಹುದು. ವಿಷಯ ನಿಯಂತ್ರಣ ನಿರ್ಧಾರಗಳಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು GACಗಳು ಖಚಿತಪಡಿಸುತ್ತವೆ.
|
|
ಸರ್ಕಾರಿ ಏಜೆನ್ಸಿಗಳಿಗೆ ಮಧ್ಯವರ್ತಿಗಳಿಂದ ನೆರವು
|
ಗುರುತು ಪರಿಶೀಲನೆಗಾಗಿ, ಅಥವಾ ಸೈಬರ್ ಭದ್ರತಾ ಘಟನೆಗಳು ಸೇರಿದಂತೆ ಅಪರಾಧಗಳ ತಡೆಗಟ್ಟುವಿಕೆ, ಪತ್ತೆಹಚ್ಚುವಿಕೆ, ತನಿಖೆ ಅಥವಾ ಕಾನೂನು ಕ್ರಮಕ್ಕಾಗಿ, ಮಧ್ಯವರ್ತಿಗಳು ತಮ್ಮ ನಿಯಂತ್ರಣದಲ್ಲಿರುವ ಮಾಹಿತಿಯನ್ನು ಅಥವಾ ನೆರವನ್ನು ಅಧಿಕೃತ ಸರ್ಕಾರಿ ಏಜೆನ್ಸಿಗಳಿಗೆ ಒದಗಿಸಬೇಕು.
|
|
ಪ್ರಮುಖ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳ (SSMIs) ಹೆಚ್ಚುವರಿ ಬಾಧ್ಯತೆಗಳು (ಅಂದರೆ, ಭಾರತದಲ್ಲಿ 50 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು)
|
- ಸಂದೇಶ ಸೇವೆಗಳನ್ನು ನೀಡುವ SSMIಗಳು, ಗಂಭೀರ ಅಥವಾ ಸೂಕ್ಷ್ಮ ಸ್ವರೂಪದ ವಿಷಯದ ಮೂಲ ಸೃಷ್ಟಿಕರ್ತರನ್ನು ಪತ್ತೆಹಚ್ಚಲು ಕಾನೂನು ಜಾರಿ ಸಂಸ್ಥೆಗಳಿಗೆ ನೆರವಾಗಬೇಕು.
- ನಿರ್ದಿಷ್ಟ ಕಾನೂನುಬಾಹಿರ ವಿಷಯವನ್ನು ಪತ್ತೆಹಚ್ಚಲು ಮತ್ತು ಅದರ ಹರಡುವಿಕೆಯನ್ನು ಮಿತಿಗೊಳಿಸಲು SSMIಗಳು ಸ್ವಯಂಚಾಲಿತ ಪರಿಕರಗಳನ್ನು ಬಳಸಬೇಕು.
- ನಿಯಮಗಳ ಅನುಸರಣೆ ಮತ್ತು ಕಾನೂನು ಜಾರಿ ಸಮನ್ವಯಕ್ಕಾಗಿ, SSMIಗಳು ಅನುಸರಣಾ ವರದಿಗಳನ್ನು ಪ್ರಕಟಿಸಬೇಕು, ಸ್ಥಳೀಯ ಅಧಿಕಾರಿಗಳನ್ನು ನೇಮಿಸಬೇಕು ಮತ್ತು ಭಾರತದಲ್ಲಿರುವ ತಮ್ಮ ಭೌತಿಕ ವಿಳಾಸವನ್ನು ಹಂಚಿಕೊಳ್ಳಬೇಕು.
- SSMIಗಳು ಬಳಕೆದಾರರಿಗೆ ಸ್ವಯಂಪ್ರೇರಿತ ದೃಢೀಕರಣದ ಅವಕಾಶ ನೀಡಬೇಕು, ಆಂತರಿಕ ಮೇಲ್ಮನವಿಗಳಿಗೆ ಅವಕಾಶ ಕಲ್ಪಿಸಬೇಕು ಮತ್ತು ಸ್ವಯಂಪ್ರೇರಿತವಾಗಿ (Suo-moto) ಕ್ರಮ ಕೈಗೊಳ್ಳುವ ಮೊದಲು ನ್ಯಾಯಯುತ ವಿಚಾರಣೆಗೆ ಅವಕಾಶ ನೀಡಬೇಕು.
|
ಐಟಿ ನಿಯಮಗಳು, 2021ರಲ್ಲಿ ಒದಗಿಸಲಾದ ಕಾನೂನುಬದ್ಧ ಜವಾಬ್ದಾರಿಗಳನ್ನು ಪಾಲಿಸಲು ಮಧ್ಯವರ್ತಿಗಳು ವಿಫಲವಾದರೆ, ಐಟಿ ಕಾಯ್ದೆಯ ಸೆಕ್ಷನ್ 79ರ ಅಡಿಯಲ್ಲಿ 'ಮೂರನೇ ವ್ಯಕ್ತಿಯ ಮಾಹಿತಿಗೆ' ಸಂಬಂಧಿಸಿದಂತೆ ಅವರಿಗೆ ಸಿಗುವ ವಿನಾಯಿತಿಯನ್ನು ಅವರು ಕಳೆದುಕೊಳ್ಳುತ್ತಾರೆ.
ಅಂತಹ ಸಂದರ್ಭದಲ್ಲಿ, ಪ್ರಸ್ತುತ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ಜರುಗಿಸಬಹುದಾದ ಕ್ರಮ ಅಥವಾ ಕಾನೂನು ವಿಚಾರಣೆಗೆ ಅವರು ಹೊಣೆಗಾರರಾಗಿರುತ್ತಾರೆ.
ಭಾರತೀಯ ನ್ಯಾಯ ಸಂಹಿತೆ (BNS), 2023
ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ನಡೆಯುವ ಅಪರಾಧಗಳು ಸೇರಿದಂತೆ, ಆನ್‌ಲೈನ್ ಹಾನಿ, ಅಶ್ಲೀಲತೆ, ತಪ್ಪು ಮಾಹಿತಿ ಮತ್ತು ಇತರ ಸೈಬರ್ ಸಂಬಂಧಿತ ಅಪರಾಧಗಳನ್ನು ಎದುರಿಸಲು BNS, 2023 ಕಾನೂನು ಚೌಕಟ್ಟನ್ನು ಬಲಪಡಿಸುತ್ತದೆ.
- ಇದು ಅಶ್ಲೀಲ ಕೃತ್ಯಗಳು (ಸೆಕ್ಷನ್ 296) ಹಾಗೂ ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಿಷಯಗಳನ್ನು ಪ್ರದರ್ಶಿಸುವುದು ಸೇರಿದಂತೆ, ಅಶ್ಲೀಲ ವಸ್ತುಗಳ ಮಾರಾಟದಂತಹ (ಸೆಕ್ಷನ್ 294) ಅಪರಾಧಗಳಿಗೆ ಶಿಕ್ಷೆಯನ್ನು ವಿಧಿಸುತ್ತದೆ.
ಅದೇ ರೀತಿ, ಒಟಿಟಿ (OTT) ವೇದಿಕೆಗಳಲ್ಲಿನ ಹಾನಿಕಾರಕ ವಿಷಯಗಳ ದುಷ್ಪರಿಣಾಮಗಳನ್ನು ತಡೆಗಟ್ಟಲು, ಸರ್ಕಾರವು ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಅಡಿಯಲ್ಲಿ ದಿನಾಂಕ 25.02.2021 ರಂದು 'ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ) ನಿಯಮಗಳು, 2021' ಅನ್ನು ಅಧಿಸೂಚನೆ ಮೂಲಕ ಹೊರಡಿಸಿದೆ.
- ಈ ನಿಯಮಗಳ ಭಾಗ-III, ಡಿಜಿಟಲ್ ಸುದ್ದಿ ಪ್ರಕಾಶಕರು ಮತ್ತು ಆನ್‌ಲೈನ್ ಕ್ಯುರೇಟೆಡ್ ಕಂಟೆಂಟ್ ಪ್ರಕಾಶಕರಿಗೆ (OTT ವೇದಿಕೆಗಳು) 'ನೀತಿ ಸಂಹಿತೆ'ಯನ್ನು ಒದಗಿಸುತ್ತದೆ.
- ಪ್ರಸ್ತುತ ಜಾರಿಯಲ್ಲಿರುವ ಕಾನೂನಿನಡಿಯಲ್ಲಿ ನಿಷೇಧಿಸಲಾದ ಯಾವುದೇ ವಿಷಯವನ್ನು ಪ್ರಸಾರ ಮಾಡದಂತೆ ಒಟಿಟಿ ವೇದಿಕೆಗಳ ಮೇಲೆ ಕಟ್ಟುಪಾಡುಗಳನ್ನು ವಿಧಿಸಲಾಗಿದೆ.
- ಅಶ್ಲೀಲ ವಿಷಯಗಳನ್ನು ಪ್ರದರ್ಶಿಸಿದ್ದಕ್ಕಾಗಿ ಸರ್ಕಾರವು ಇಲ್ಲಿಯವರೆಗೆ 43 ಒಟಿಟಿ ವೇದಿಕೆಗಳಿಗೆ ಭಾರತದಲ್ಲಿ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಿದೆ.
ಲೋಕಸಭೆಯಲ್ಲಿ ಶ್ರೀ ನಿಶಿಕಾಂತ್ ದುಬೆ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ, ಮಾಹಿತಿ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಸಚಿವರಾದ ಡಾ. ಎಲ್. ಮುರುಗನ್ ಅವರು ಇಂದು ಈ ಮಾಹಿತಿಯನ್ನು ನೀಡಿದರು.
*****
(रिलीज़ आईडी: 2205271)
आगंतुक पटल : 11