ಹಣಕಾಸು ಸಚಿವಾಲಯ
azadi ka amrit mahotsav

ಗ್ರಾಮೀಣ ಬೇಡಿಕೆಯಲ್ಲಿ ವಿಸ್ತೃತ ಪರಿಧಿ-ಆಧಾರಿತ ಪುನರುಜ್ಜೀವನ, ಹೆಚ್ಚುತ್ತಿರುವ ಆದಾಯ ಮತ್ತು ಅಭೂತಪೂರ್ವ ಆಶಾವಾದವು ನಬಾರ್ಡ್ ಸಮೀಕ್ಷೆಯಲ್ಲಿ ದೃಢವಾದ ರೀತಿಯಲ್ಲಿ ಕಂಡುಬಂದಿದೆ


80% ರಷ್ಟು ಗ್ರಾಮೀಣ ಕುಟುಂಬಗಳು ಕಳೆದ ವರ್ಷಕ್ಕಿಂತ ನಿರಂತರವಾಗಿ ಹೆಚ್ಚಿನ ಬಳಕೆಯನ್ನು ವರದಿ ಮಾಡುತ್ತವೆ

प्रविष्टि तिथि: 11 DEC 2025 9:57AM by PIB Bengaluru

ನಬಾರ್ಡ್ ನ ಗ್ರಾಮೀಣ ಆರ್ಥಿಕ ಪರಿಸ್ಥಿತಿಗಳು ಮತ್ತು ಭಾವನೆಗಳ ಸಮೀಕ್ಷೆಯ (ಆರ್.ಇ.ಸಿ.ಎಸ್.ಎಸ್) ಎಂಟನೇ ಸುತ್ತು, ಕಳೆದ ವರ್ಷ ಗ್ರಾಮೀಣ ಬೇಡಿಕೆಯಲ್ಲಿ ವಿಶಾಲ-ಆಧಾರಿತ ಪುನರುಜ್ಜೀವನ, ಹೆಚ್ಚುತ್ತಿರುವ ಆದಾಯ ಮತ್ತು ಸುಧಾರಿತ ಮನೆಯ ಯೋಗಕ್ಷೇಮದ ಸ್ಪಷ್ಟ ಪುರಾವೆಗಳನ್ನು ಪ್ರಸ್ತುತಪಡಿಸುತ್ತದೆ. ಆರ್.ಇ.ಸಿ.ಎಸ್.ಎಸ್‌. ಎಂಬುದು ಸೆಪ್ಟೆಂಬರ್ 2024 ರಿಂದ ನಬಾರ್ಡ್ ನಡೆಸುತ್ತಿರುವ ಗ್ರಾಮೀಣ ಮಹತ್ವದ ಹೆಚ್ಚಿನ ಆವರ್ತನ, ದ್ವೈಮಾಸಿಕ ಮೌಲ್ಯಮಾಪನವಾಗಿದೆ.

ಈ ಸಮೀಕ್ಷೆಯು ಈಗ ಉತ್ತಮ ಹಾಗೂ ಸಮೃದ್ಧವಾಗಿ ಮತ್ತು ಸಮಗ್ರ ರೀತಿಯಲ್ಲಿ, ವರ್ಷವಿಡೀ ದತ್ತಾಂಶವನ್ನು ನೀಡುತ್ತದೆ, ಹಿಂದುಳಿದ ಪರಿಸ್ಥಿತಿಗಳು ಮತ್ತು ಭವಿಷ್ಯದ ಮನೆಯ ಭಾವನೆಗಳೆರಡರ ಗ್ರಾಮೀಣ ಆರ್ಥಿಕ ಬದಲಾವಣೆಗಳ ವಾಸ್ತವಿಕ ಮೌಲ್ಯಮಾಪನವನ್ನು ಸಕ್ರಿಯಗೊಳಿಸುತ್ತದೆ.

ಕಳೆದ ಒಂದು ವರ್ಷವು ಗ್ರಾಮೀಣ ಆರ್ಥಿಕ ಮೂಲಭೂತ ಅಂಶಗಳ ಸ್ಪಷ್ಟ ಬಲವರ್ಧನೆಯನ್ನು ಕಂಡಿದೆ. ಬಲವಾದ ಬಳಕೆ, ಹೆಚ್ಚುತ್ತಿರುವ ಆದಾಯ, ಹಣದುಬ್ಬರವನ್ನು ನಿಯಂತ್ರಿಸುವುದು ಮತ್ತು ಆರೋಗ್ಯಕರ ಆರ್ಥಿಕ ನಡವಳಿಕೆಯೊಂದಿಗೆ, ಗ್ರಾಮೀಣ ಭಾರತವು ಸಕಾರಾತ್ಮಕ ಪಥದಲ್ಲಿದೆ. ಸುಸ್ಥಿರ ಕಲ್ಯಾಣ ಬೆಂಬಲ ಮತ್ತು ಬಲವಾದ ಸಾರ್ವಜನಿಕ ಹೂಡಿಕೆ ಈ ತೀವ್ರತೆಯನ್ನು ಬಲಪಡಿಸುತ್ತಿವೆ.

ಪ್ರಮುಖ ಸಂಶೋಧನೆಗಳು ಹಾಗೂ ಅಂಕಿಅಂಶಗಳು: ಗ್ರಾಮೀಣ ಆರ್ಥಿಕತೆಯು ಗಮನಾರ್ಹವಾಗಿ ಬಲಗೊಳ್ಳುತ್ತದೆ (ಸೆಪ್ಟೆಂಬರ್ 2024 - ನವೆಂಬರ್ 2025)

1. ನಿಜವಾದ ಖರೀದಿ ಶಕ್ತಿಯಿಂದ ನಡೆಸಲ್ಪಡುವ ಬಳಕೆಯ ಉತ್ಕರ್ಷ

ಕಳೆದ ವರ್ಷದಿಂದ ಸುಮಾರು 80% ರಷ್ಟು ಗ್ರಾಮೀಣ ಕುಟುಂಬಗಳು ನಿರಂತರವಾಗಿ ಹೆಚ್ಚಿನ ಬಳಕೆಯನ್ನು ವರದಿ ಮಾಡಿವೆ - ಇದು ಹೆಚ್ಚುತ್ತಿರುವ ಸಮೃದ್ಧಿಯ ಲಕ್ಷಣವಾಗಿದೆ.

ಮಾಸಿಕ ಆದಾಯದ 67.3% ರಷ್ಟನ್ನು ಈಗ ಬಳಕೆಗೆ ಖರ್ಚು ಮಾಡಲಾಗುತ್ತಿದೆ, ಸಮೀಕ್ಷೆ ಪ್ರಾರಂಭವಾದಾಗಿನಿಂದ ಇದು ಅತ್ಯಧಿಕ ಪಾಲು ಆಗಿದ್ದು ಮಾತ್ರವಲ್ಲದೆ, ಇದು ಜಿ.ಎಸ್.ಟಿ. ದರ ತರ್ಕಬದ್ಧಗೊಳಿಸುವಿಕೆಯಿಂದ ಪೂರಕವಾಗಿದೆ.

ಇದು ಬಲವಾದ, ವಿಸ್ತಾರ/ವಿಸ್ತೃತ ಪರಿಧಿ-ಆಧಾರಿತ ಬೇಡಿಕೆಯನ್ನು ಪ್ರದರ್ಶಿಸುತ್ತದೆ - ವಿರಳ ಅಥವಾ ನಿರ್ದಿಷ್ಟ ವಿಭಾಗಗಳಲ್ಲಿ ಕೇಂದ್ರೀಕೃತವಾಗಿಲ್ಲ.

2. ಸಮೀಕ್ಷೆ ಪ್ರಾರಂಭವಾದಾಗಿನಿಂದ ಆದಾಯದ ಬೆಳವಣಿಗೆ ಅತ್ಯಧಿಕ

42.2% ರಷ್ಟು ಗ್ರಾಮೀಣ ಕುಟುಂಬಗಳು ಆದಾಯದ ಬೆಳವಣಿಗೆಯನ್ನು ಅನುಭವಿಸಿವೆ - ಎಲ್ಲಾ ಸಮೀಕ್ಷೆಯ ವಿವಿಧ ಸುತ್ತುಗಳಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಇದಾಗಿದೆ.

ಕೇವಲ 15.7% ರಷ್ಟು ಜನರು ಯಾವುದೋ ರೀತಿಯಲ್ಲಿ ಆದಾಯ ಕುಸಿತ ಆಗಿದೆ ಎಂದು ವರದಿ ಮಾಡಿದ್ದಾರೆ - ಇದುವರೆಗೆ ದಾಖಲಾದ ಅತ್ಯಂತ ಕಡಿಮೆ ಸಂಖ್ಯೆಯಿದು.

ಭವಿಷ್ಯದ ಮುನ್ನೋಟ ಅಸಾಧಾರಣವಾಗಿ ಪ್ರಬಲವಾಗಿದೆ: 75.9% ರಷ್ಟು ಜನರು ಮುಂದಿನ ವರ್ಷ ಆದಾಯ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ - ಸೆಪ್ಟೆಂಬರ್ 2024 ರ ನಂತರದ ಅತ್ಯುನ್ನತ ಮಟ್ಟದ ಆಶಾವಾದ.

3. ಗ್ರಾಮೀಣ ಹೂಡಿಕೆ ಚಟುವಟಿಕೆ ತೀವ್ರವಾಗಿ ಚೇತರಿಸಿಕೊಂಡಿದೆ

29.3% ರಷ್ಟು ಕುಟುಂಬಗಳು ಕಳೆದ ವರ್ಷ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಿವೆ - ಹಿಂದಿನ ಯಾವುದೇ ಸುತ್ತಿಗಿಂತ ಹೆಚ್ಚು, ಕೃಷಿ ಮತ್ತು ಕೃಷಿಯೇತರ ವಲಯಗಳಲ್ಲಿ ನವೀಕರಿಸಿದ ಆಸ್ತಿ ಸೃಷ್ಟಿಯನ್ನು ತೋರಿಸುತ್ತಿದೆ ಎಂದು ಹೇಳಿದ್ದಾರೆ.

ಹೂಡಿಕೆಯಲ್ಲಿನ ಏರಿಕೆಯು ಬಲವಾದ ಬಳಕೆ ಮತ್ತು ಆದಾಯ ಲಾಭಗಳಿಂದ ನಡೆಸಲ್ಪಡುತ್ತದೆ, ಸಾಲದ ಒತ್ತಡದಿಂದಲ್ಲ.

4. ಔಪಚಾರಿಕ ಮೂಲಗಳಿಗೆ ಗ್ರಾಮೀಣ ಸಾಲದ ಲಭ್ಯತೆಯು ಅತ್ಯಧಿಕ ಮಟ್ಟವನ್ನು ತಲುಪಿದೆ

58.3% ರಷ್ಟು ಗ್ರಾಮೀಣ ಕುಟುಂಬಗಳು ಔಪಚಾರಿಕ ಸಾಲದ ಮೂಲಗಳನ್ನು ಮಾತ್ರ ಪ್ರವೇಶಿಸಿವೆ - ಈ ಸಮೀಕ್ಷೆಯ ಎಲ್ಲಾ ಸುತ್ತುಗಳಲ್ಲಿ ಇದುವರೆಗಿನ ಅತ್ಯಧಿಕ, ಸೆಪ್ಟೆಂಬರ್, 2024 ರಲ್ಲಿ ಇದ್ದ 48.7% ರಿಂದ ಬಹಳಷ್ಟು ಹೆಚ್ಚಾಗಿದೆ.

ಹಾಗೂ, ಅನೌಪಚಾರಿಕ ಸಾಲದ ಪಾಲು ಸುಮಾರು 20% ರಷ್ಟಿದ್ದು, ಆಳವಾದ ಔಪಚಾರಿಕ ಸಾಲದ ನುಗ್ಗುವಿಕೆಗೆ ನಿರಂತರ ಒತ್ತಡದ ಅಗತ್ಯವನ್ನು ತಿಳಿಸುತ್ತದೆ

5. ಸರ್ಕಾರಿ ವರ್ಗಾವಣೆಗಳು ಅವಲಂಬನೆಯನ್ನು ಸೃಷ್ಟಿಸದೆ ಬೇಡಿಕೆಯನ್ನು ಬೆಂಬಲಿಸುವುದನ್ನು ಮುಂದುವರಿಸುತ್ತವೆ

ಸರಾಸರಿ ಮಾಸಿಕ ಆದಾಯದ 10% ರಷ್ಟನ್ನು ಸಬ್ಸಿಡಿ ಆಹಾರ, ವಿದ್ಯುತ್, ನೀರು, ಅಡುಗೆ ಅನಿಲ, ರಸಗೊಬ್ಬರಗಳು, ಶಾಲಾ ಬೆಂಬಲ, ಪಿಂಚಣಿಗಳು, ಸಾರಿಗೆ ಪ್ರಯೋಜನಗಳು ಮತ್ತು ಹೆಚ್ಚಿನವುಗಳಂತಹ ಕಲ್ಯಾಣ ವರ್ಗಾವಣೆಗಳ ಮೂಲಕ ಪರಿಣಾಮಕಾರಿಯಾಗಿ ಪೂರೈಸಲಾಗುತ್ತದೆ.

ಕೆಲವು ಮನೆಗಳಿಗೆ, ವರ್ಗಾವಣೆಗಳು ಒಟ್ಟು ಆದಾಯದ 20% ರಷ್ಟು ಮೀರುತ್ತದೆ, ಅಗತ್ಯ ಬಳಕೆ ಬೆಂಬಲವನ್ನು ಒದಗಿಸುತ್ತದೆ ಮತ್ತು ಗ್ರಾಮೀಣ ಬೇಡಿಕೆಯನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.

6. ಹಣದುಬ್ಬರ ಗ್ರಹಿಕೆಗಳು ಒಂದು ವರ್ಷದಲ್ಲಿ ಅವುಗಳ ಕನಿಷ್ಠ ಮಟ್ಟಕ್ಕೆ ಇಳಿಯುತ್ತವೆ

ಸರಾಸರಿ ಹಣದುಬ್ಬರ ಗ್ರಹಿಕೆ 3.77% ಕ್ಕೆ ಮಧ್ಯಮವಾಗಿದೆ, ಸಮೀಕ್ಷೆ ಪ್ರಾರಂಭವಾದ ನಂತರ ಮೊದಲ ಬಾರಿಗೆ 4% ರಷ್ಟಕ್ಕಿಂತ ಕಡಿಮೆಯಾಗಿದೆ.

84.2% ರಷ್ಟು ಮಂದಿ ಹಣದುಬ್ಬರವನ್ನು 5% ರಷ್ಟು ಅಥವಾ ಅದಕ್ಕಿಂತ ಕಡಿಮೆ ಎಂದು ಗ್ರಹಿಸುತ್ತಾರೆ ಮತ್ತು ಸುಮಾರು 90% ರಷ್ಟು ಮಂದಿ ಅಲ್ಪಾವಧಿಯ ಹಣದುಬ್ಬರವು 5% ರಷ್ಟಕ್ಕಿಂತ ಕಡಿಮೆ ಇರುತ್ತದೆ ಎಂದು ನಿರೀಕ್ಷಿಸುತ್ತಾರೆ.

ಈ ಹಣದುಬ್ಬರ ಕಡಿತವು ನೈಜ ಆದಾಯವನ್ನು ಹೆಚ್ಚಿಸಿದೆ, ಖರೀದಿ ಶಕ್ತಿಯನ್ನು ಸುಧಾರಿಸಿದೆ ಮತ್ತು ಒಟ್ಟಾರೆ ಕಲ್ಯಾಣವನ್ನು ಹೆಚ್ಚಿಸಿದೆ.

7. ಸಾಲ ಮರುಪಾವತಿ ಮತ್ತು ಬಂಡವಾಳ ಹೂಡಿಕೆ ಪರಿಸ್ಥಿತಿಗಳು ಸುಧಾರಿಸಿವೆ

ಕಡಿಮೆ ಹಣದುಬ್ಬರ ಮತ್ತು ಬಡ್ಡಿದರದ ಮಿತಗೊಳಿಸುವಿಕೆಯೊಂದಿಗೆ, ಸಾಲ ಮರುಪಾವತಿಗೆ ನಿಗದಿಪಡಿಸಿದ ಆದಾಯದ ಪಾಲು ಹಿಂದಿನ ಸುತ್ತುಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ.

29.3% ರಷ್ಟು ಗ್ರಾಮೀಣ ಕುಟುಂಬಗಳು ಕಳೆದ ವರ್ಷದಲ್ಲಿ ಹೆಚ್ಚಿದ ಬಂಡವಾಳ ಹೂಡಿಕೆಯನ್ನು ಕೈಗೊಂಡಿವೆ, ಇದು ಸಮೀಕ್ಷೆಯ ಎಲ್ಲಾ ಸುತ್ತುಗಳಲ್ಲಿ ಅತ್ಯುನ್ನತ ಮಟ್ಟವಾಗಿದೆ.

8. ಗ್ರಾಮೀಣ ಮೂಲಸೌಕರ್ಯ ಮತ್ತು ಮೂಲಭೂತ ಸೇವೆಗಳು ಬಲವಾದ ಅನುಮೋದನೆಯನ್ನು ಪಡೆಯುತ್ತವೆ

ಗ್ರಾಮೀಣ ಕುಟುಂಬಗಳು ಈ ಕೆಳಗಿನ ಸುಧಾರಣೆಗಳ ಬಗ್ಗೆ ಹೆಚ್ಚಿನ ತೃಪ್ತಿಯನ್ನು ವ್ಯಕ್ತಪಡಿಸುತ್ತವೆ:

ರಸ್ತೆಗಳು,
ಶಿಕ್ಷಣ,
ವಿದ್ಯುತ್,
ನಂತರ ಕುಡಿಯುವ ನೀರು ಮತ್ತು ಆರೋಗ್ಯ ಸೇವೆಗಳು.

ಈ ಸುಧಾರಣೆಗಳು ಹೆಚ್ಚುತ್ತಿರುವ ಆದಾಯಕ್ಕೆ ಪೂರಕವಾಗಿವೆ ಮತ್ತು ದೀರ್ಘಕಾಲೀನ ಸಮೃದ್ಧಿಯನ್ನು ಬೆಂಬಲಿಸುತ್ತವೆ.

ನಬಾರ್ಡ್ ನ ಗ್ರಾಮೀಣ ಆರ್ಥಿಕ ಪರಿಸ್ಥಿತಿಗಳು ಮತ್ತು ಭಾವನೆಗಳ ಸಮೀಕ್ಷೆಯ (ಆರ್.ಇ.ಸಿ.ಎಸ್.ಎಸ್) ಸಮೀಕ್ಷೆಯ ಬಗ್ಗೆ

ನಬಾರ್ಡ್ ಸಂಸ್ಥೆಯ ಗ್ರಾಮೀಣ ಆರ್ಥಿಕ ಪರಿಸ್ಥಿತಿಗಳು ಮತ್ತು ಸಾಮಾಜಿಕ ಭಾವನೆಗಳ ಸಮೀಕ್ಷೆಯನ್ನು ಭಾರತದಾದ್ಯಂತ ಪ್ರತಿ ಎರಡು ತಿಂಗಳಿಗೊಮ್ಮೆ ನಡೆಸಲಾಗುತ್ತದೆ. ಇದು ಆದಾಯ, ಬಳಕೆ, ಹಣದುಬ್ಬರ, ಸಾಲ, ಹೂಡಿಕೆ ಮತ್ತು ನಿರೀಕ್ಷೆಗಳಿಗೆ ಸಂಬಂಧಿಸಿದ ಪರಿಮಾಣಾತ್ಮಕ ಸೂಚಕಗಳು ಮತ್ತು ಮನೆಯ ಗ್ರಹಿಕೆ-ಭಾವನೆಗಳನ್ನು ಸಾಂಕೇತಿಕವಾಗಿ ಸೆರೆಹಿಡಿಯುತ್ತದೆ.

 

*****


(रिलीज़ आईडी: 2202297) आगंतुक पटल : 8
इस विज्ञप्ति को इन भाषाओं में पढ़ें: English , Urdu , Marathi , हिन्दी , Punjabi , Gujarati , Tamil