ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ 2025 ರ ವರ್ಷಾಂತ್ಯದ ವಿಮರ್ಶೆ
14 ಪ್ರಮುಖ ವಲಯಗಳಲ್ಲಿ ಉತ್ಪಾದನಾ-ಸಂಬಂಧಿತ ಪ್ರೋತ್ಸಾಹವು ಭಾರತದ ಉತ್ಪಾದನಾ ಸಾಮರ್ಥ್ಯ ಮತ್ತು ರಫ್ತುಗಳನ್ನು ತೀವ್ರಗೊಳಿಸಿದೆ
2 ಲಕ್ಷಕ್ಕೂ ಹೆಚ್ಚು ಘಟಕಗಳನ್ನು ಸ್ಟಾರ್ಟ್‌ಅಪ್‌ಗಳೆಂದು ಗುರುತಿಸಲಾಗಿದ್ದು, ಇವು ದೇಶದಲ್ಲಿ 21 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ
ಡಿಜಿಟಲ್ ವಾಣಿಜ್ಯಕ್ಕಾಗಿ ಮುಕ್ತ ನೆಟ್‌ವರ್ಕ್ ನಲ್ಲಿ (ONDC) 326 ಮಿಲಿಯನ್‌ಗಿಂತಲೂ ಹೆಚ್ಚು ಆರ್ಡರ್‌ಗಳನ್ನು ಪ್ರಕ್ರಿಯೆಗೊಳಿಸಲಾಗಿದ್ದು, ಸರಾಸರಿ ದೈನಂದಿನ ವಹಿವಾಟುಗಳು 5,90,000+ ತಲುಪಿವೆ
47,000ಕ್ಕೂ ಹೆಚ್ಚು ಅನುಸರಣೆಗಳನ್ನು ಕೃಶಗೊಳಿಸಲಾಗಿದ್ದು, 4,458 ನಿಬಂಧನೆಗಳನ್ನು ಅಪರಾಧ ಮುಕ್ತಗೊಳಿಸಲಾಗಿದೆ
ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಯ ಮೂಲಕ ಇಲ್ಲಿಯವರೆಗೆ 8,29,750 ಅನುಮೋದನೆಗಳನ್ನು ನೀಡಲಾಗಿದೆ
ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಪ್ಲಾಟ್‌ಫಾರ್ಮ್ ಅನ್ನು ಈಗ ಖಾಸಗಿ ವಲಯಕ್ಕೂ ತೆರೆಯಲಾಗಿದೆ
ಯೂನಿಟ್ ಲಿಂಕ್ಡ್ ವಿಮಾ ಯೋಜನೆಯನ್ನು 2000+ ದತ್ತಾಂಶ ಕ್ಷೇತ್ರಗಳನ್ನು ಒಳಗೊಂಡ 136 ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ ಗಳ ಮೂಲಕ 11 ಸಚಿವಾಲಯಗಳ 44 ವ್ಯವಸ್ಥೆಗಳೊಂದಿಗೆ ಸಂಯೋಜಿಸಲಾಗಿದೆ
ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಯ (NICDP) ಅಡಿಯಲ್ಲಿ ಗೌರವಾನ್ವಿತ ಪ್ರಧಾನಿಯವರಿಂದ ಕೃಷ್ಣಪಟ್ಟಣಂ, ಕೊಪ್ಪರ್ತಿ ಮತ್ತು ಓರ್ವಕಲ್ ಕೈಗಾರಿಕಾ ಪ್ರದೇಶಗಳಲ್ಲಿ ಶಂಕುಸ್ಥಾಪನಾ ಕಾರ್ಯಕ್ರಮ (NICDP)
2025-26ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಕೈಗಾರಿಕಾ ಉತ್ಪಾದನಾ ಸೂಚ್ಯಂಕವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 3.0 ರಷ್ಟು ಹೆಚ್ಚಿದೆ
2025-26ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಎಂಟು ಪ್ರಮುಖ ಕೈಗಾರಿಕಾ ಸೂಚ್ಯಂಕವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 2.5 ರಷ್ಟು ಹೆಚ್ಚಿದೆ
2014-2024ರ ಅವಧಿಯಲ್ಲಿ ಭಾರತೀಯ ನಾವೀನ್ಯಕಾರರಿಂದ ದೇಶೀಯ ಪೇಟೆಂಟ್ ಅರ್ಜಿಗಳು ಶೇಕಡಾ 425 ರಷ್ಟು ಹೆಚ್ಚಾಗಿವೆ
ಜಾಗತಿಕ ನಾವೀನ್ಯತಾ ಸೂಚ್ಯಂಕದ ಪ್ರಕಾರ ಭಾರತದ ಸ್ಥಾನವು GII 2025 ಶ್ರೇಯಾಂಕದಲ್ಲಿ 38 ನೇ ಸ್ಥಾನಕ್ಕೆ ಏರಿದೆ
ಪ್ರಾಜೆಕ್ಟ್ ಮಾನಿಟರಿಂಗ್ ಗ್ರೂಪ್ ಪೋರ್ಟಲ್‌ನಲ್ಲಿ ರೂ. 76.4 ಲಕ್ಷ ಕೋಟಿ ಮೌಲ್ಯದ 3,022 ಯೋಜನೆಗಳ ಸೇರ್ಪಡೆ
प्रविष्टि तिथि:
10 DEC 2025 11:03AM by PIB Bengaluru
ಉತ್ಪಾದನಾ-ಸಂಬಂಧಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆಗಳು
• ಭಾರತದ 'ಆತ್ಮನಿರ್ಭರ'ತೆಯ ದೃಷ್ಟಿಕೋನದಿಂದ ಭಾರತದ ಉತ್ಪಾದನಾ ಸಾಮರ್ಥ್ಯ ಮತ್ತು ರಫ್ತುಗಳನ್ನು ಹೆಚ್ಚಿಸಲು, 14 ಪ್ರಮುಖ ವಲಯಗಳಿಗೆ 1.97 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಉತ್ಪಾದನಾ-ಸಂಬಂಧಿಸಿದ ಪ್ರೋತ್ಸಾಹಕ (ಪಿಎಲ್ಐ) ಯೋಜನೆಗಳನ್ನು ಪ್ರಾರಂಭಿಸಲಾಗಿದೆ.
• ಜೂನ್ 2025 ರವರೆಗೆ 14 ವಲಯಗಳಲ್ಲಿ 1.88 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ವಾಸ್ತವಿಕ ಹೂಡಿಕೆಯಾಗಿದ್ದು, 17 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ಉತ್ಪಾದನೆ/ಮಾರಾಟ ಮತ್ತು 12.3 ಲಕ್ಷಕ್ಕೂ ಹೆಚ್ಚಿನ ನೇರ ಮತ್ತು ಪರೋಕ್ಷ ಉದ್ಯೋಗಗಳ ಸೃಷ್ಟಿಯಾಗಿದೆ.
• ಉತ್ಪಾದನಾ-ಸಂಬಂಧಿಸಿದ ಪ್ರೋತ್ಸಾಹಕ ಯೋಜನೆಗಳ ರಫ್ತು ರೂ. 7.5 ಲಕ್ಷ ಕೋಟಿಗಳನ್ನು ಮೀರಿದ್ದು, ಎಲೆಕ್ಟ್ರಾನಿಕ್ಸ್, ಔಷಧಗಳು, ಟೆಲಿಕಾಂ ಮತ್ತು ನೆಟ್‌ವರ್ಕಿಂಗ್ ಉತ್ಪನ್ನಗಳು ಮತ್ತು ಆಹಾರ ಸಂಸ್ಕರಣೆಯಂತಹ ವಲಯಗಳಿಂದ ಗಮನಾರ್ಹ ಕೊಡುಗೆಗಗಳನ್ನು ಪಡೆಯಲಾಗಿದೆ.
ಸ್ಟಾರ್ಟ್ಅಪ್ ಇಂಡಿಯಾ ಉಪಕ್ರಮ
• ಕೇಂದ್ರ ಸರ್ಕಾರವು 2016 ರಲ್ಲಿ ಪ್ರಾರಂಭಿಸಿದ ಸ್ಟಾರ್ಟ್ಅಪ್ ಇಂಡಿಯಾ ಉಪಕ್ರಮವು ದೇಶದಲ್ಲಿ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯ ನಿರಂತರ ಬೆಳವಣಿಗೆಗೆ ಪ್ರಬಲ ಅಡಿಪಾಯವನ್ನು ಹಾಕಿದೆ. ಇಲ್ಲಿಯವರೆಗೆ, ಒಟ್ಟು 2,01,335 ಸ್ಟಾರ್ಟ್ಅಪ್‌ಗಳನ್ನು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯು ಗುರುತಿಸಿದ್ದು, ಈ ಸ್ಟಾರ್ಟ್ಅಪ್‌ಗಳು ದೇಶಾದ್ಯಂತ 21 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ.
• ನಾರಿ ಶಕ್ತಿ ಉಗಮದ ಉತ್ಸಾಹದಲ್ಲಿ, ಭಾರತೀಯ ಸ್ಟಾರ್ಟ್ಅಪ್ ಭೂದೃಶ್ಯದಲ್ಲಿ ಮಹಿಳಾ ಉದ್ಯಮಿಗಳ ಕೊಡುಗೆಯು ಗಮನಾರ್ಹವಾಗಿದೆ. ಭಾರತದಲ್ಲಿ ಮಾನ್ಯತೆ ಪಡೆದ ಸ್ಟಾರ್ಟ್ಅಪ್‌ಗಳಲ್ಲಿ 48% ಕ್ಕಿಂತ ಹೆಚ್ಚು ಉದ್ಯಮಗಳು ಕನಿಷ್ಠ ಒಬ್ಬ ಮಹಿಳಾ ನಿರ್ದೇಶಕರನ್ನು ಹೊಂದಿವೆ.
ಡಿಜಿಟಲ್ ವಾಣಿಜ್ಯಕ್ಕಾಗಿ ಮುಕ್ತ ನೆಟ್‌ವರ್ಕ್ (ONDC)
• ಭಾರತದಲ್ಲಿ ಇ-ವಾಣಿಜ್ಯವನ್ನು ಪ್ರಜಾಪ್ರಭುತ್ವೀಕರಿಸುವ ಗುರಿಯನ್ನು ONDC ಹೊಂದಿದ್ದು, ಡಿಜಿಟಲ್ ವಾಣಿಜ್ಯವನ್ನು ಎಲ್ಲರನ್ನೂ ಒಳಗೊಳ್ಳುವಂತೆ ಮತ್ತು ಎಲ್ಲರಿಗೂ ಕೈಗೆಟಕುವಂತೆ ಮಾಡಿ, ಇ-ವಾಣಿಜ್ಯ ಪರಿಸರ ವ್ಯವಸ್ಥೆಯ ಎಲ್ಲಾ ಪಾಲುದಾರರಿಗೂ ನಾವೀನ್ಯತೆಯನ್ನು ತೆರೆದು, ಇ-ವಾಣಿಜ್ಯ ಮೌಲ್ಯ ಸರಪಳಿಯಲ್ಲಿನ ಎಲ್ಲಾ ಪಾಲುದಾರರಿಗೂ ಸಂಭಾವ್ಯ ಪ್ರಯೋಜನಗಳನ್ನು ತರುವ ನಿರೀಕ್ಷೆಯಿದೆ.
• ಅಕ್ಟೋಬರ್ 2025 ರ ವೇಳೆಗೆ ONDC ಯು 326 ಮಿಲಿಯನ್+ ಆರ್ಡರ್‌ಗಳನ್ನು ಪ್ರಕ್ರಿಯೆಗೊಳಿಸಿದ್ದಲ್ಲದೆ, ಅಕ್ಟೋಬರ್ 2025 ರಲ್ಲಿ, 18.2 ಮಿಲಿಯನ್ ಆರ್ಡರ್‌ಗಳನ್ನು ಪ್ರಕ್ರಿಯೆಗೊಳಿಸಲಾಗಿದ್ದು, ಸರಾಸರಿ ದೈನಂದಿನ ವಹಿವಾಟುಗಳು ಸರಿಸುಮಾರು 5,90,000+ ತಲುಪಿದೆ.
ಒಂದು ಜಿಲ್ಲೆ - ಒಂದು ಉತ್ಪನ್ನ (ODOP)
• ದೇಶದ ಪ್ರತಿ ಜಿಲ್ಲೆಯಿಂದ (ಒಂದು ಜಿಲ್ಲೆ - ಒಂದು ಉತ್ಪನ್ನ) ಒಂದು ಉತ್ಪನ್ನವನ್ನು ಆಯ್ಕೆ ಮಾಡಿ, ಬ್ರ್ಯಾಂಡಿಂಗ್ ಮಾಡಿ, ಪ್ರಚಾರ ಮಾಡುವ ಮೂಲಕ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯನ್ನು ಬೆಳೆಸುವ ಗುರಿಯನ್ನು ಈ ಉಪಕ್ರಮವು ಹೊಂದಿದೆ. ಈ ಯೋಜನೆಯ ಅಡಿಯಲ್ಲಿ, 775 ಜಿಲ್ಲೆಗಳಲ್ಲಿ 1240+ ಕ್ಕೂ ಹೆಚ್ಚು ಉತ್ಪನ್ನಗಳನ್ನು ಗುರುತಿಸಲಾಗಿದೆ.
• ODOP ಉತ್ಪನ್ನಗಳ ಉತ್ತೇಜನಕ್ಕಾಗಿ ಎಲ್ಲಾ ರಾಜ್ಯಗಳಲ್ಲಿ ಯೂನಿಟಿ ಮಾಲ್‌ಗಳನ್ನು ರಚಿಸಲು PM ಏಕ್ತಾ ಮಾಲ್‌ಗಳು ರಾಜ್ಯಗಳಿಗೆ ಬಂಡವಾಳವನ್ನು ಒದಗಿಸುತ್ತವೆ. PM ಏಕ್ತಾ ಮಾಲ್‌ಗಾಗಿ DPR ಅನ್ನು ಅನುಮೋದಿಸಲಾದ 27 ರಾಜ್ಯಗಳಲ್ಲಿ, 25 ರಾಜ್ಯಗಳು ಕೆಲಸದ ಆದೇಶಗಳನ್ನು ನೀಡಿದ್ದು, ಹೆಚ್ಚಿನ ರಾಜ್ಯಗಳಲ್ಲಿ ನಿರ್ಮಾಣಕಾರ್ಯವು ಪ್ರಾರಂಭವಾಗಿದೆ.
ವ್ಯವಹಾರ ಸುಗಮಗೊಳಿಸುವಿಕೆ
• ದೇಶಾದ್ಯಂತ ವ್ಯವಹಾರ ಸುಗಮಗೊಳಿಸುವಿಕೆಯನ್ನು (EoDB) ಉತ್ತೇಜಿಸಲು, ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯು (DPIIT) ಹಲವಾರು ಪ್ರಮುಖ ಸುಧಾರಣಾ ಉಪಕ್ರಮಗಳನ್ನು ಹಮ್ಮಿಕೊಂಡಿದ್ದು, ಅವುಗಳಲ್ಲಿ ವ್ಯಾಪಾರ ಸುಧಾರಣಾ ಕ್ರಿಯಾ ಯೋಜನೆ (BRAP), ಬಿ-ರೆಡಿ ಮೌಲ್ಯಮಾಪನ, ಜನ್ ವಿಶ್ವಾಸ್ ಕಾಯ್ದೆ ಮತ್ತು ಅನುಸರಣಾ ಹೊರೆಯನ್ನು ಕಡಿಮೆ ಮಾಡುವ (RCB) ಚೌಕಟ್ಟು ಸೇರಿವೆ.
• ಇಲ್ಲಿಯವರೆಗೆ, BRAP ಯ ಏಳು ಆವೃತ್ತಿಗಳನ್ನು (2015, 2016, 2017–18, 2019, 2020, 2022, ಮತ್ತು 2024) ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗಿದ್ದು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಅದಕ್ಕೆ ಅನುಗುಣವಾಗಿ ನಿರ್ಣಯಿಸಲಾಗಿದೆ. ಏಳನೇ ಆವೃತ್ತಿಯ (BRAP 2024) ಫಲಿತಾಂಶಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, BRAP 2026 ರ ಎಂಟನೇ ಆವೃತ್ತಿಯನ್ನು ಔಪಚಾರಿಕವಾಗಿ 11 ನವೆಂಬರ್ 2025 ರಂದು ಬಿಡುಗಡೆ ಮಾಡಲಾಗಿದೆ.
• ಇದಲ್ಲದೆ, ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಗಳನ್ನು ಬಲಪಡಿಸಲು ಮತ್ತು ಪಾರದರ್ಶಕತೆ, ದಕ್ಷತೆ ಮತ್ತು ಬಳಕೆದಾರರ ಅನುಭವವನ್ನು ವೃದ್ದಿಸಲು, ಸಮಗ್ರ ಪರಿಶೀಲನೆಯನ್ನು ಕೈಗೊಳ್ಳಲಾಗಿದೆ. ಇದಕ್ಕೆ ಅನುಗುಣವಾಗಿ, ಎಂಟು ಅಗತ್ಯ ಮತ್ತು ಐದು ಅಪೇಕ್ಷಣೀಯ ವೈಶಿಷ್ಟ್ಯಗಳನ್ನು ವಿವರಿಸುವ ವಿವರವಾದ ಮಾರ್ಗದರ್ಶಿ ಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು. ಈ ಉಪಕ್ರಮವು ರಾಜ್ಯಗಳಾದ್ಯಂತ ಹೆಚ್ಚು ಸ್ಪಂದಿತ, ಹೂಡಿಕೆದಾರ-ಸ್ನೇಹಿ ವ್ಯಾಪಾರ ವಾತಾವರಣವನ್ನು ಸೃಷ್ಟಿಸುವತ್ತ ಮಹತ್ವದ ಹೆಜ್ಜೆಯಾಗಿದೆ.
• ಕಳೆದ ವರ್ಷ ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ನಡೆಸಿದ ಚರ್ಚೆಗಳಿಗೆ ಅನುಗುಣವಾಗಿ, ಜಿಲ್ಲಾ ವ್ಯವಹಾರ ಸುಧಾರಣಾ ಕ್ರಿಯಾ ಯೋಜನೆಯನ್ನು (D-BRAP) ಕೂಡಾ ಪ್ರಾರಂಭಿಸಲಾಗಿದೆ. ಈ ಪರಿವರ್ತನಾಶೀಲ ಉಪಕ್ರಮವು ರಾಜ್ಯಗಳು ವ್ಯವಹಾರ ಸುಧಾರಣೆಗಳನ್ನು ಜಿಲ್ಲಾ ಮಟ್ಟಕ್ಕೇರಿಸಲು ಅನುವು ಮಾಡಿಕೊಡುವುದಲ್ಲದೆ, ಕೈಗಾರಿಕಾ ಕ್ಲಸ್ಟರ್‌ಗಳು ಮತ್ತು ಸ್ಥಳೀಯ ಉದ್ಯಮ ಪರಿಸರ ವ್ಯವಸ್ಥೆಗಳಲ್ಲಿ ಸಕಾಲಿಕ ಮತ್ತು ಪರಿಣಾಮಕಾರಿ ಅನುಮೋದನೆಗಳು ಮತ್ತು ಸೇವೆಗಳನ್ನು ಒದಗಿಸುತ್ತದೆ.
• ಅನುಸರಣಾ ಹೊರೆಯನ್ನು ಕಡಿಮೆ ಮಾಡುವ ಕ್ರಮದ ಭಾಗವಾಗಿ, ನಿಯಂತ್ರಕ ಅನುಸರಣಾ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಡೇಟಾವನ್ನು ಆಧರಿಸಿ, ಕೇಂದ್ರ ಸಚಿವಾಲಯಗಳು/ಇಲಾಖೆಗಳು ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಹೊರೆಯಾದ ಅನುಸರಣೆಗಳ ವ್ಯಾಪಕ ಸ್ವಯಂ-ಗುರುತಿಸುವಿಕೆಯನ್ನು ಕೈಗೊಂಡಿವೆ. ಇದರ ಪರಿಣಾಮವಾಗಿ, ನವೆಂಬರ್ 2025 ರವರೆಗೆ 47,000 ಕ್ಕೂ ಹೆಚ್ಚು ಅನುಸರಣೆಗಳನ್ನು ಕಡಿಮೆ ಮಾಡಲಾಗಿದೆ. ಇವುಗಳಲ್ಲಿ, 16,108 ಅನುಸರಣೆಗಳನ್ನು ಸರಳೀಕರಿಸಲಾಗಿದ್ದು; 22,287 ಅನುಸರಣೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ; 4,458 ಅನುಸರಣೆಗಳನ್ನು ಅಪರಾಧಮುಕ್ತಗೊಳಿಸಲಾಗಿದೆ ಮತ್ತು 4,270 ಅನಗತ್ಯ ಅನುಸರಣೆಗಳನ್ನು ತೆಗೆದುಹಾಕಲಾಗಿದೆ.
• ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಕಾಯ್ದೆ, 2023 ನ್ನು ಕಳೆದ ವರ್ಷ ಜಾರಿಗೆ ತರಲಾಗಿದ್ದು, ಇದರಲ್ಲಿ ಉಲ್ಲೇಖಿಸಲಾದ 42 ಕಾಯ್ದೆಗಳಲ್ಲಿ 183 ನಿಬಂಧನೆಗಳನ್ನು ಅಪರಾಧ ಮುಕ್ತಗೊಳಿಸಲಾಯಿತು. ಈ ಪ್ರಯತ್ನಗಳ ಮುಂದುವರಿಕೆಯಲ್ಲಿ, 355 ನಿಬಂಧನೆಗಳನ್ನು ಒಳಗೊಂಡ ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆ, 2025 ಅನ್ನು ಆಗಸ್ಟ್ 18, 2025 ರಂದು ಲೋಕಸಭೆಯಲ್ಲಿ ಮಂಡಿಸಲಾಯಿತು, ಅವುಗಳಲ್ಲಿ 288 ನಿಬಂಧನೆಗಳನ್ನು ವ್ಯವಹಾರ ಸುಗಮಗೊಳಿಸುವಿಕೆಯನ್ನು ಉತ್ತೇಜಿಸಲು ಅಪರಾಧ ಮುಕ್ತಗೊಳಿಸುವಿಕೆಗೆ ಮತ್ತು 67 ಜೀವನ ಸುಲಭತೆಯನ್ನು ಹೆಚ್ಚಿಸಲು ತಿದ್ದುಪಡಿಗೆ ಪ್ರಸ್ತಾಪಿಸಲಾಗಿದೆ. ಕೇಂದ್ರ ಸಚಿವ ಸಂಪುಟವು ಈ ಹಿಂದೆ ಅನುಮೋದಿಸಿದ ಮಸೂದೆಯನ್ನು ಗೌರವಾನ್ವಿತ ಸ್ಪೀಕರ್ ಅವರು ಆಯ್ಕೆ ಸಮಿತಿಗೆ ವರ್ಗಾಯಿಸಿದ್ದಾರೆ, ಅದು ಮುಂದಿನ ಅಧಿವೇಶನದ ಮೊದಲ ದಿನದೊಳಗೆ ತನ್ನ ವರದಿಯನ್ನು ಪ್ರಸ್ತುತಪಡಿಸುತ್ತದೆ.
• ಹೆಚ್ಚುವರಿಯಾಗಿ, ವಿಶಾಲವಾದ ವ್ಯವಹಾರ ಸುಗಮಗೊಳಿಸುವಿಕೆಯ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಸರ್ಕಾರವು ಕೇಂದ್ರೀಕೃತ KYC ಮತ್ತು ರಚನಾತ್ಮಕ ನಿಯಂತ್ರಕ ಪರಿಣಾಮ ಮೌಲ್ಯಮಾಪನ ಚೌಕಟ್ಟಿನ ಅನುಷ್ಠಾನದತ್ತ ಸಾಗುತ್ತಿದ್ದು, ಇದರಿಂದಾಗಿ ವಿದೇಶಿ ನೇರ ಹೂಡಿಕೆ ಮತ್ತು ದೇಶೀಯ ಉತ್ಪಾದನೆಗೆ ಮತ್ತಷ್ಟು ಉತ್ತೇಜನ ಸಿಗುತ್ತದೆ.
• ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆ: ನವೆಂಬರ್ 2025 ರಲ್ಲಿ (20 ನವೆಂಬರ್ 2025 ರವರೆಗೆ), ಒಟ್ಟು 26,504 ಅರ್ಜಿಗಳಲ್ಲಿ 11,568 ಅನುಮೋದನೆಗಳನ್ನು ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಯ (NSWS) ಅಡಿಯಲ್ಲಿ ನೀಡಲಾಗಿದೆ. ಒಟ್ಟಾರೆಯಾಗಿ, 20 ನವೆಂಬರ್ 2025 ರವರೆಗೆ, 11,75,435 ಅನುಮೋದನೆಗಳನ್ನು ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಯ ಮೂಲಕ ಅನ್ವಯಿಸಲಾಗಿದ್ದು, 8,29,750 ಅನುಮೋದನೆಗಳನ್ನು ನೀಡಲಾಗಿದೆ.
ವ್ಯವಸ್ಥಾಪನ ತಂತ್ರ:
PM ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ (NMP)
• ಅಕ್ಟೋಬರ್ 2021 ರಲ್ಲಿ ಪ್ರಾರಂಭಿಸಲಾದ PM ಗತಿಶಕ್ತಿಯು (PMGS) ಬಹು-ಮಾದರಿ ಸಂಪರ್ಕಕ್ಕಾಗಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ (NMP) ಆಗಿದೆ. ಇದು ಲೋಪಗಳನ್ನು ಕಡಿಮೆ ಮಾಡಿ, ನಕಲುತನ ತಪ್ಪಿಸಲು ಬಹು-ಸಚಿವಾಲಯಗಳಲ್ಲಿ (ರಸ್ತೆಗಳು, ರೈಲ್ವೆಗಳು, ಬಂದರುಗಳು, ವಾಯುಯಾನ, ಒಳನಾಡಿನ ಜಲಮಾರ್ಗಗಳು, ಇಂಧನ, ಇತ್ಯಾದಿ) ಮೂಲಸೌಕರ್ಯ ಯೋಜನೆಯನ್ನು ಸಂಯೋಜಿಸುತ್ತದೆ.
• 57 ಸಚಿವಾಲಯಗಳು/ಇಲಾಖೆಗಳನ್ನು PMGS ನಲ್ಲಿ ಸೇರಿಸಲಾಗಿದೆ. ಈ ಸಚಿವಾಲಯಗಳು/ಇಲಾಖೆಗಳ ಡೇಟಾ ಪದರಗಳನ್ನು NMP ನಲ್ಲಿ ಸಂಯೋಜಿಸಲಾಗಿದ್ದು, ಸಚಿವಾಲಯಗಳು/ಇಲಾಖೆಗಳು ತಮ್ಮ ತಮ್ಮ ವಲಯಗಳಲ್ಲಿ ಮೂಲಸೌಕರ್ಯ ಯೋಜನೆಗಾಗಿ NMP ಬಳಕೆಯನ್ನು ಪ್ರಾರಂಭಿಸಿವೆ. ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 1700 ಡೇಟಾ ಪದರಗಳನ್ನು (731 ಸಚಿವಾಲಯದ ಡೇಟಾ ಪದರಗಳು ಮತ್ತು 969 ರಾಜ್ಯ ಡೇಟಾ ಪದರಗಳು) GIS-ಡೇಟಾ ಆಧಾರಿತ PMGS NMP ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
• PM ಗತಿಶಕ್ತಿ NMP ವೇದಿಕೆಯನ್ನು ಈಗ ಖಾಸಗಿ ವಲಯಕ್ಕೂ ಮುಕ್ತಗೊಳಿಸಲಾಗಿದ್ದು, ರಾಷ್ಟ್ರೀಯ ಜಿಯೋಸ್ಪೇಷಿಯಲ್ ಡೇಟಾ ರಿಜಿಸ್ಟ್ರಿಯನ್ನು (NGDR) ಮಧ್ಯವರ್ತಿ ವೇದಿಕೆಯಾಗಿ ಬಳಸಿಕೊಂಡು, ಏಕೀಕೃತ ಜಿಯೋಸ್ಪೇಷಿಯಲ್ ಇಂಟರ್ಫೇಸ್ (UGI) ಹೊಂದಿರುವ ಪ್ರಶ್ನೆ-ಆಧಾರಿತ ವಿಶ್ಲೇಷಣಾ ಕಾರ್ಯವಿಧಾನವನ್ನು BISAG-N ಅಭಿವೃದ್ಧಿಪಡಿಸಿದೆ, ಇದು ಖಾಸಗಿ ಬಳಕೆದಾರರಿಗಾಗಿ ಮೂಲಸೌಕರ್ಯ ಅಭಿವರ್ಧಕರು, ಸಲಹೆಗಾರರು, ಯೋಜನಾ ಯೋಜಕರು ಮತ್ತು ಶೈಕ್ಷಣಿಕ/ಸಂಶೋಧಕರಿಗೆ ಕಾರ್ಯಸಾಧ್ಯವಾದ ಒಳನೋಟಗಳನ್ನು ಒದಗಿಸಲು ಸಹಾಯ ಮಾಡುತ್ತದೆ.
• 26 ರಾಜ್ಯಗಳನ್ನು ಒಳಗೊಂಡ 28 ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಪ್ರಾರಂಭಿಸಲಾದ PM ಗತಿಶಕ್ತಿ ಜಿಲ್ಲಾ ಮಾಸ್ಟರ್ ಪ್ಲಾನ್ ಅನ್ನು ಈಗ ಎಲ್ಲಾ 112 ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತಿದೆ. ಈ ಪೋರ್ಟಲ್ ಜಿಲ್ಲೆಗಳಲ್ಲಿ ಮಾಸ್ಟರ್ ಪ್ಲಾನ್ ತಯಾರಿಸಲು ಮತ್ತು ಆರ್ಥಿಕ ಮತ್ತು ಸಾಮಾಜಿಕ ಮೂಲಸೌಕರ್ಯ ಯೋಜನೆಗಳ ಉಪಸ್ಥಿತಿಗೆ ಜಿಯೋ-ಸ್ಪೇಷಿಯಲ್ ತಂತ್ರಜ್ಞಾನ ಆಧಾರಿತ ಪರಿಕರಗಳ ಮೂಲಕ ಬೆಂಬಲಿಸುತ್ತದೆ.
ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ (NLP)
• ವೆಚ್ಚ-ಪರಿಣಾಮಕಾರಿ ಲಾಜಿಸ್ಟಿಕ್ಸ್ ಜಾಲದ ಮೂಲಕ ದೇಶದ ಆರ್ಥಿಕ ಬೆಳವಣಿಗೆ ಮತ್ತು ವ್ಯವಹಾರ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸೆಪ್ಟೆಂಬರ್ 17, 2022 ರಂದು NLP ಅನ್ನು ಪ್ರಾರಂಭಿಸಲಾಯಿತು.
• ಲಾಜಿಸ್ಟಿಕ್ಸ್ ವಲಯದಲ್ಲಿ ವಲಯ-ನಿರ್ದಿಷ್ಟ ಅಗತ್ಯಗಳನ್ನು ಪೂರೈಸಿ, ದೇಶದಲ್ಲಿ ಬೃಹತ್ ಮತ್ತು ಬ್ರೇಕ್-ಬಲ್ಕ್ ಸರಕುಗಳ ಚಲನೆಯನ್ನು ಸುಗಮಗೊಳಿಸಲು, ಬಳಕೆದಾರ ಸಚಿವಾಲಯಗಳು ದಕ್ಷ ಲಾಜಿಸ್ಟಿಕ್ಸ್ ಗಾಗಿ ವಲಯ ಯೋಜನೆಗಳನ್ನು (SPEL) ಅಭಿವೃದ್ಧಿಪಡಿಸುತ್ತಿವೆ. ಕಲ್ಲಿದ್ದಲು ವಲಯಕ್ಕಾಗಿ ವಲಯ ಯೋಜನೆಗಳನ್ನು ಸೂಚಿಸಲಾಗಿದೆ. ಸಿಮೆಂಟ್ ವಲಯಕ್ಕಾಗಿ SPEL ಅನ್ನು ಅನುಮೋದಿಸಲಾಗಿದೆ ಮತ್ತು ಉಕ್ಕು, ಔಷಧ, ರಸಗೊಬ್ಬರ, ಆಹಾರ ಸಂಸ್ಕರಣೆ ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣೆಗಾಗಿ SPEL ಮುಂದುವರಿದ ಹಂತದಲ್ಲಿದೆ.
• ರಾಜ್ಯ ಮಟ್ಟದಲ್ಲಿ ಸಾರ್ವಜನಿಕ ನೀತಿಯಲ್ಲಿ 'ಲಾಜಿಸ್ಟಿಕ್ಸ್' ಮೇಲೆ ಸಮಗ್ರ ಗಮನವನ್ನು ತರಲು, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು NLP ಯೊಂದಿಗೆ ಹೊಂದಿಕೊಂಡ ರಾಜ್ಯ ಲಾಜಿಸ್ಟಿಕ್ಸ್ ಯೋಜನೆಗಳನ್ನು (SLPs) ಅಭಿವೃದ್ಧಿಪಡಿಸುತ್ತಿವೆ. ಇಲ್ಲಿಯವರೆಗೆ, 27 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ತಮ್ಮ ರಾಜ್ಯ ಲಾಜಿಸ್ಟಿಕ್ಸ್ ನೀತಿಗಳನ್ನು ಸೂಚಿಸಿವೆ.
ಏಕೀಕೃತ ಲಾಜಿಸ್ಟಿಕ್ಸ್ ಇಂಟರ್ಫೇಸ್ ಪ್ಲಾಟ್‌ಫಾರ್ಮ್ (ULIP)
• ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯಡಿಯಲ್ಲಿ ಅಭಿವೃದ್ಧಿಪಡಿಸಲಾದ ಏಕೀಕೃತ ಲಾಜಿಸ್ಟಿಕ್ಸ್ ಇಂಟರ್ಫೇಸ್ ಪ್ಲಾಟ್‌ಫಾರ್ಮ್ (ULIP), ಡಿಜಿಟಲ್ ಏಕೀಕರಣ ಪದರವಾಗಿದ್ದು, ಇದು ಸಚಿವಾಲಯದ ದತ್ತಾಂಶ ಕಂದಕಗಳನ್ನು ಮುಚ್ಚಿ, ಲಾಜಿಸ್ಟಿಕ್ಸ್ ಪರಿಸರ ವ್ಯವಸ್ಥೆಯಾದ್ಯಂತ ಪಾಲುದಾರರ ನಡುವೆ ತಡೆರಹಿತ ದತ್ತಾಂಶ ವಿನಿಮಯವನ್ನು ಸುಗಮಗೊಳಿಸುತ್ತದೆ.
• ಪ್ರಸ್ತುತವಾಗಿ, ULIP ಅನ್ನು 2000+ ಡೇಟಾ ಕ್ಷೇತ್ರಗಳನ್ನು ಒಳಗೊಂಡ 136 API ಗಳ ಮೂಲಕ 11 ಸಚಿವಾಲಯಗಳ 44 ವ್ಯವಸ್ಥೆಗಳೊಂದಿಗೆ ಸಂಯೋಜಿಸಲಾಗಿದೆ. ULIP ಪೋರ್ಟಲ್‌ನಲ್ಲಿ ಅಂದರೆ, www.goulip.in ನಲ್ಲಿ 1700 ಕ್ಕೂ ಹೆಚ್ಚು ಕಂಪನಿಗಳು ನೋಂದಾಯಿಸಲ್ಪಟ್ಟಿವೆ. ಇದಲ್ಲದೆ, ಈ ಕಂಪನಿಗಳಿಂದ 200+ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು ಉದ್ಯಮದಾರರಿಂದ 200 ಕೋಟಿಗೂ ಹೆಚ್ಚು API ವಹಿವಾಟುಗಳಿಗೆ ಕಾರಣವಾಗಿದೆ. 20 ಕ್ಕೂ ಹೆಚ್ಚು ರಾಜ್ಯಗಳ ಸಾರ್ವಜನಿಕ ವಿತರಣಾ ವ್ಯವಸ್ಥೆಗಳು ಬೆಳೆ ಚಲನೆಯನ್ನು ಸುಗಮಗೊಳಿಸಲು ULIP API ಗಳನ್ನು ಬಳಸಿಕೊಳ್ಳುತ್ತಿವೆ
ಲಾಜಿಸ್ಟಿಕ್ ಡೇಟಾ ಬ್ಯಾಂಕ್ (LDB)
• ಲಾಜಿಸ್ಟಿಕ್ಸ್ ಡೇಟಾ ಬ್ಯಾಂಕ್ (LDB) ವ್ಯವಸ್ಥೆಯು ಏಕ ಗವಾಕ್ಷಿ ಲಾಜಿಸ್ಟಿಕ್ಸ್ ದೃಶ್ಯೀಕರಣ ಪರಿಹಾರವಾಗಿದ್ದು, ಇದು ಸಾಗಣೆ ಕಂಟೇನರ್ ಸಂಖ್ಯೆಗಳನ್ನು ಮಾತ್ರ ಬಳಸಿಕೊಂಡು ಭಾರತದಾದ್ಯಂತ 100% EXIM ಕಂಟೇನರ್ ಚಲನೆಯನ್ನು ಟ್ರ್ಯಾಕಿಂಗ್ ಮಾಡುತ್ತದೆ. ಪ್ರಸ್ತುತವಾಗಿ, ಲಾಜಿಸ್ಟಿಕ್ಸ್ ಡೇಟಾ ಬ್ಯಾಂಕ್ ಸರಕು ಕಾರ್ಯಾಚರಣೆ ಮಾಹಿತಿ ವ್ಯವಸ್ಥೆಯ (FOIS) ಮೂಲಕ 18 ಬಂದರುಗಳು (31 ಟರ್ಮಿನಲ್‌ಗಳು), 5800 ರೈಲು ನಿಲ್ದಾಣಗಳನ್ನು ಒಳಗೊಂಡಿವೆ.
ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ
• ಜಾಗತಿಕ ಉತ್ಪಾದನೆ ಮತ್ತು ಹೂಡಿಕೆ ತಾಣಗಳೊಂದಿಗೆ ಸ್ಪರ್ಧಿಸಲು ಭಾರತದಾದ್ಯಂತ ಭವಿಷ್ಯದ ಕೈಗಾರಿಕಾ ನಗರಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವ ಪ್ರಮುಖ ಉಪಕ್ರಮವೆಂದರೆ NICDC. ಇದು ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ಒಟ್ಟಾರೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕಾರಣವಾಗುವ ಆರ್ಥಿಕ ಬೆಳವಣಿಗೆಯನ್ನು ಸೃಷ್ಟಿಸುತ್ತದೆ. ಇದು ಬಹುಮಾದರಿಯ ಸಂಪರ್ಕ, ಸ್ಥಿತಿಸ್ಥಾಪಕ ಮೂಲಸೌಕರ್ಯ ಮತ್ತು "ಪ್ಲಗ್-ಅಂಡ್-ಪ್ಲೇ" ಸೌಲಭ್ಯಗಳೊಂದಿಗೆ ವ್ಯವಸ್ಥಿತವಾದ ಸುಸ್ಥಿರ ಅಭಿವೃದ್ಧಿಯನ್ನು ಒದಗಿಸುವತ್ತ ಗಮನಹರಿಸುತ್ತದೆ. ಪ್ರಸ್ತುತ, ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP) ಅಡಿಯಲ್ಲಿ, ಭಾರತ ಸರ್ಕಾರವು 13 ರಾಜ್ಯಗಳು ಮತ್ತು 7 ಕೈಗಾರಿಕಾ ಕಾರಿಡಾರ್‌ಗಳನ್ನು ಒಳಗೊಂಡ 20 ಯೋಜನೆಗಳನ್ನು ಅನುಮೋದಿಸಿದೆ.
- ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಕೃಷ್ಣಪಟ್ಟಣಂ ಕೈಗಾರಿಕಾ ಪ್ರದೇಶದ (KRIS ನಗರ) ಅಡಿಪಾಯವನ್ನು ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿyaವರು ಜನವರಿ 08, 2025 ರಂದು ಹಾಕಿದ್ದಾರೆ.
- ಮಾನ್ಯ ಪ್ರಧಾನಮಂತ್ರಿಗಳು ಅಕ್ಟೋಬರ್ 16, 2025 ರಂದು ಕೊಪ್ಪರ್ತಿ ಕೈಗಾರಿಕಾ ಪ್ರದೇಶ ಮತ್ತು ಓರ್ವಕಲ್ ಕೈಗಾರಿಕಾ ಪ್ರದೇಶದಲ್ಲಿ ಶಂಕುಸ್ಥಾಪನೆ ಮಾಡಿದ್ದಾರೆ. ಇದು NICDP ಅಡಿಯಲ್ಲಿ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿಯನ್ನು ತ್ವರಿತಗೊಳಿಸುತ್ತದೆ.
- ಪೂರ್ಣಗೊಂಡ ನಾಲ್ಕು ಹಸಿರು ಕ್ಷೇತ್ರ ಕೈಗಾರಿಕಾ ನೋಡ್ ಯೋಜನೆಗಳಲ್ಲಿ (ಧೋಲೇರಾ, ಶೇಂದ್ರ ಬಿಡ್ಕಿನ್, ಗ್ರೇಟರ್ ನೋಯ್ಡಾ, ವಿಕ್ರಮ್ ಉದ್ಯೋಗಪುರಿ) ಅಕ್ಟೋಬರ್, 2025 ರವರೆಗೆ ಒಟ್ಟು 430 ಪ್ಲಾಟ್‌ಗಳನ್ನು (4,552 ಎಕರೆ) ಹಂಚಿಕೆ ಮಾಡಲಾಗಿದೆ.
ಕೈಗಾರಿಕಾ ಕಾರ್ಯಕ್ಷಮತೆ
• ಕೈಗಾರಿಕಾ ಉತ್ಪಾದನಾ ಸೂಚ್ಯಂಕದಿಂದ (IIP) ಅಳೆಯಲಾದ ಕೈಗಾರಿಕಾ ಉತ್ಪಾದನೆಯು ಏಪ್ರಿಲ್-ಸೆಪ್ಟೆಂಬರ್ 2025-26 ರ ಅವಧಿಯಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 3.0% ರಷ್ಟು ಹೆಚ್ಚಾಗಿದೆ, ಇದು ವಿಸ್ತಾರ ಆಧಾರಿತ ಬೆಳವಣಿಗೆಯ ಹಿನ್ನೆಲೆಯಲ್ಲಿ ಕಂಡುಬಂದಿದೆ.
ಎಂಟು ಪ್ರಮುಖ ಕೈಗಾರಿಕೆಗಳ ಬೆಳವಣಿಗೆಯ ಪ್ರವೃತ್ತಿಗಳು
• ಎಂಟು ಪ್ರಮುಖ ಕೈಗಾರಿಕೆಗಳ ಸೂಚ್ಯಂಕವು (ICI) ಎಂಟು ಪ್ರಮುಖ ಕೈಗಾರಿಕೆಗಳ ಕಾರ್ಯಕ್ಷಮತೆಯನ್ನು ಅಳೆಯುತ್ತದೆ. ಅವುಗಳೆಂದರೆ, ಸಿಮೆಂಟ್, ಕಲ್ಲಿದ್ದಲು, ಕಚ್ಚಾ ತೈಲ, ವಿದ್ಯುತ್, ರಸಗೊಬ್ಬರಗಳು, ನೈಸರ್ಗಿಕ ಅನಿಲ, ಪೆಟ್ರೋಲಿಯಂ ಸಂಸ್ಕರಣಾಗಾರ ಉತ್ಪನ್ನಗಳು ಮತ್ತು ಉಕ್ಕು. ಈ ಎಂಟು ಪ್ರಮುಖ ಕೈಗಾರಿಕೆಗಳು ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ (IIP) ಸೇರಿಸಲಾದ ವಸ್ತುಗಳ ತೂಕದ ಶೇಕಡಾ 40.27 ರಷ್ಟನ್ನು ಒಳಗೊಂಡಿವೆ.
• ಏಪ್ರಿಲ್-ಅಕ್ಟೋಬರ್ 2025-26 ರ ಅವಧಿಯಲ್ಲಿ ಈ ಎಂಟು ಪ್ರಮುಖ ಕೈಗಾರಿಕೆಗಳ ಸೂಚ್ಯಂಕದ ಸಂಚಿತ ಬೆಳವಣಿಗೆಯ ದರವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2.5% ರಷ್ಟಿದೆ.
ಬೌದ್ಧಿಕ ಆಸ್ತಿ ಹಕ್ಕುಗಳ ಬಲವರ್ಧನೆ
• ಭಾರತವು ಬೌದ್ಧಿಕ ಆಸ್ತಿಯಲ್ಲಿ (IP) ಜಾಗತಿಕ ನಾಯಕನಾಗಿ ಹೊರಹೊಮ್ಮಿದ್ದು, ಪೇಟೆಂಟ್‌ಗಳು, ಟ್ರೇಡ್‌ಮಾರ್ಕ್‌ಗಳು ಮತ್ತು ಕೈಗಾರಿಕಾ ವಿನ್ಯಾಸಗಳಲ್ಲಿ ಮೊದಲ 10 ರಲ್ಲಿ ಸ್ಥಾನ ಪಡೆದಿದೆ.
- ಮೊದಲ 20 ಮೂಲಗಳಲ್ಲಿ, ಭಾರತೀಯ ನಾವೀನ್ಯಕಾರರು ಸಲ್ಲಿಸಿದ ಪೇಟೆಂಟ್ ಅರ್ಜಿಗಳು 2024 ರಲ್ಲಿ 19.1% ರಷ್ಟು ಅತ್ಯಧಿಕ ಬೆಳವಣಿಗೆಯನ್ನು ದಾಖಲಿಸಿವೆ. ಇದು ನಿವಾಸಿ ನೊಂದಣಿಗಳಲ್ಲಿ ಗಮನಾರ್ಹ ಹೆಚ್ಚಳದ ಎರಡಂಕಿಯ ಬೆಳವಣಿಗೆಯ ಸತತ ಆರನೇ ವರ್ಷವನ್ನು ಗುರುತಾಗಿದೆ. ಕಳೆದ ದಶಕದಲ್ಲಿ, ಭಾರತೀಯ ನಾವೀನ್ಯಕಾರರಿಂದ ದೇಶೀಯ ಪೇಟೆಂಟ್ ನೊಂದಣಿಗಳು 425% ರಷ್ಟು ಹೆಚ್ಚಾಗಿವೆ (2014 ರಲ್ಲಿ 12,040 ಮತ್ತು 2024 ರಲ್ಲಿ 63,217), ಆದರೆ ಭಾರತೀಯ ನಾವೀನ್ಯಕಾರರಿಂದ ವಿದೇಶಿ ನೊಂದಣಿಗಳು 27% ರಷ್ಟು ಹೆಚ್ಚಾಗಿವೆ (2014 ರಲ್ಲಿ 10,405 ಮತ್ತು 2024 ರಲ್ಲಿ 13,188).
- ಭಾರತವು ಜಾಗತಿಕವಾಗಿ 4 ನೇ ಅತ್ಯಧಿಕ ಟ್ರೇಡ್ ಮಾರ್ಕ್ ಫೈಲಿಂಗ್ ಅನ್ನು ದಾಖಲಿಸಿದೆ, ಇದು ವೇಗವಾಗಿ ವಿಸ್ತರಿಸುತ್ತಿರುವ ವ್ಯವಹಾರ ಮತ್ತು ಬ್ರ್ಯಾಂಡ್ ಪರಿಸರ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ. ಇದು 2024 ರಲ್ಲಿ 5.5 ಲಕ್ಷಕ್ಕೂ ಹೆಚ್ಚು ಟ್ರೇಡ್ ಮಾರ್ಕ್ ಅರ್ಜಿಗಳನ್ನು ಹೊಂದಿದೆ. ಕಳೆದ ದಶಕದಲ್ಲಿ, ವಿದೇಶದಲ್ಲಿರುವ ಭಾರತೀಯ ನಿವಾಸಿಗಳಿಂದ ಟ್ರೇಡ್‌ಮಾರ್ಕ್ ನೊಂದಣಿಗಳು 125% ರಷ್ಟು ಹೆಚ್ಚಾಗಿದೆ (2014 ರಲ್ಲಿ 9,028 ಮತ್ತು 2024 ರಲ್ಲಿ 20,303 ಕ್ಕೆ ಹೆಚ್ಚಿವೆ), ಇದು ಭಾರತದ ಅಂತರರಾಷ್ಟ್ರೀಯ ಬ್ರ್ಯಾಂಡ್ ಹೆಜ್ಜೆಗುರುತು ವಿಸ್ತರಿಸುತ್ತಿರುವುದನ್ನು ಪ್ರತಿಬಿಂಬಿಸುತ್ತದೆ.
- 2024 ರಲ್ಲಿ 40,000 ಕ್ಕೂ ಹೆಚ್ಚು ವಿನ್ಯಾಸ ನೊಂದಣಿಗಳೊಂದಿಗೆ, ಭಾರತವು 20 ಬೌದ್ಧಿಕ ಆಸ್ತಿ ಕಚೇರಿಗಳಲ್ಲಿ 43.2% ರಷ್ಟು ಅತ್ಯಧಿಕ ಬೆಳವಣಿಗೆಯನ್ನು ದಾಖಲಿಸಿದೆ. 2023 ರಲ್ಲಿ 11 ನೇ ಸ್ಥಾನದಲ್ಲಿದ್ದ ಭಾರತ 2024 ರಲ್ಲಿ 7 ನೇ ಸ್ಥಾನಕ್ಕೆ ಏರಿದೆ. ಕಳೆದ ದಶಕದಲ್ಲಿ ವಿದೇಶದಲ್ಲಿರುವ ಭಾರತೀಯ ನಾವೀನ್ಯಕಾರರಿಂದ ವಿನ್ಯಾಸ ನೊಂದಣಿಗಳು 600% ರಷ್ಟು ಹೆಚ್ಚಾಗಿದೆ (2014 ರಲ್ಲಿ 368 ಮತ್ತು 2024 ಕ್ಕೆ ತಲುಪಿವೆ).
• ಕಳೆದ ಮೂರುವರೆ ವರ್ಷಗಳಲ್ಲಿ 2.5 ಮಿಲಿಯನ್‌ಗಿಂತಲೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಜಾಗೃತಿ ಉಪಕ್ರಮಗಳ ಮೂಲಕ ಸಂಪರ್ಕ ಸಾಧಿಸಿದ್ದು, ಇದರಲ್ಲಿ ಡಿಸೆಂಬರ್ 2021 ರಲ್ಲಿ ಪ್ರಾರಂಭಿಸಲಾದ ರಾಷ್ಟ್ರೀಯ ಬೌದ್ಧಿಕ ಆಸ್ತಿ ಜಾಗೃತಿ ಮಿಷನ್ ಕೂಡಾ ಸೇರಿದೆ, ಇದು ಭಾರತೀಯ ಶಿಕ್ಷಣ ಸಂಸ್ಥೆಗಳಿಂದ ಪೇಟೆಂಟ್ ಅರ್ಜಿಗಳಲ್ಲಿ 90% ಹೆಚ್ಚಳಕ್ಕೆ ಕಾರಣವಾಯಿತು, 2022-23 ರಲ್ಲಿ 19,155 ರಿಂದ 2024-25 ರಲ್ಲಿ 36,525 ಕ್ಕೆ ಹೆಚ್ಚಳವಾಗಿದೆ.
• ಬೌದ್ಧಿಕ ಆಸ್ತಿ ಆಡಳಿತ ಮತ್ತು ನಿರ್ವಹಣೆಯಲ್ಲಿ ಡಿಜಿಟಲ್ ತಂತ್ರಜ್ಞಾನದ ಅಳವಡಿಕೆ, ಸ್ವಯಂ ಮೌಲ್ಯಮಾಪನಕ್ಕಾಗಿ ಪ್ರಾದೇಶಿಕ ಭಾಷೆಗಳಲ್ಲಿ ಐಪಿ ರೋಗನಿರ್ಣಯ ಸಾಧನದ ಪ್ರಾರಂಭ, ಕುಂದುಕೊರತೆ ಪರಿಹಾರಕ್ಕಾಗಿ ಓಪನ್-ಹೌಸ್ ಪೋರ್ಟಲ್, ಸಹಾಯ ಮತ್ತು ಮಾರ್ಗದರ್ಶನಕ್ಕಾಗಿ ಐಪಿ ಸಾರಥಿ ಚಾಟ್‌ಬಾಟ್, ಟ್ರೇಡ್‌ಮಾರ್ಕ್‌ಗಳಿಗಾಗಿ ಎಐ-ಎಂಎಲ್ ಆಧಾರಿತ ಹುಡುಕಾಟ ಸಾಧನ ಇತ್ಯಾದಿಗಳು ಈ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿಸಿದೆ.
• ಜಾಗತಿಕ ನಾವೀನ್ಯತೆ ಸೂಚ್ಯಂಕದ (GII) 139 ಆರ್ಥಿಕತೆಗಳಲ್ಲಿ ಭಾರತದ ಶ್ರೇಯಾಂಕವು 2015 ರಲ್ಲಿ 81 ನೇ ಸ್ಥಾನದಿಂದ GII 2025 ರ ಶ್ರೇಯಾಂಕದಲ್ಲಿ 38 ನೇ ಸ್ಥಾನಕ್ಕೆ ಏರಿದೆ. 2025 ರ GII ವರದಿಯು ಭಾರತವನ್ನು ದೀರ್ಘಾವಧಿ ಪ್ರದರ್ಶಕ ದೇಶಗಳಲ್ಲಿ ಒಂದೆಂದು ಗುರುತಿಸಿದೆ. ಭಾರತವು ಸತತವಾಗಿ 15 ನೇ ವರ್ಷವೂ ಅದರ ಅಭಿವೃದ್ಧಿ ಮಟ್ಟಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಪ್ರದರ್ಶನ ನೀಡಿದೆ.
ಪ್ರಾಜೆಕ್ಟ್ ಮಾನಿಟರಿಂಗ್ ಗ್ರೂಪ್ (PMG)
• ಯೋಜನಾ ಮೇಲ್ವಿಚಾರಣಾ ತಂಡ (PMG) ದೊಡ್ಡ ಪ್ರಮಾಣದ ಮೂಲಸೌಕರ್ಯ ಯೋಜನೆಗಳ ಮೈಲಿಗಲ್ಲು-ಆಧಾರಿತ ಮೇಲ್ವಿಚಾರಣೆಗಾಗಿ ಮತ್ತು ರೂ. 500 ಕೋಟಿಗಳಿಗಿಂತ ಹೆಚ್ಚಿನ ಹೂಡಿಕೆಯ ಯೋಜನೆಗಳಲ್ಲಿನ ಸಮಸ್ಯೆಗಳು ಮತ್ತು ನಿಯಂತ್ರಕ ಅಡಚಣೆಗಳ ತ್ವರಿತ ಪರಿಹಾರಕ್ಕಾಗಿ ಒಂದು ಸಾಂಸ್ಥಿಕ ಕಾರ್ಯವಿಧಾನವಾಗಿದೆ. ವಾಣಿಜ್ಯ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಇಲಾಖೆಯ (DPIIT) ಅಡಿಯಲ್ಲಿ PMG, ಯೋಜನೆಯ ಅನುಷ್ಠಾನದ ಎಲ್ಲಾ ಹಂತಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆದಾರರಿಗೆ ಒಂದೇ ಸ್ಥಳದಲ್ಲಿ ಸೌಲಭ್ಯ ಒದಗಿಸುವ ತಾಣವಾಗಿ ಕಾರ್ಯನಿರ್ವಹಿಸುತ್ತದೆ. ಪ್ರಧಾನಮಂತ್ರಿಗಳ ಕಛೇರಿಯು ಆಗಸ್ಟ್ 2021 ರಲ್ಲಿ ಮೇಲ್ವಿಚಾರಣಾ ತಂಡಕ್ಕೆ PMG ಅನ್ನು ಅಧಿಕೃತ ಕಾರ್ಯದರ್ಶಿಯಾಗಿ ನೇಮಿಸಿತು.
• PMG ಎಲ್ಲಾ ಮಧ್ಯಮ ಮತ್ತು ದೊಡ್ಡ ಗಾತ್ರದ ಸಾರ್ವಜನಿಕ, ಖಾಸಗಿ ಮತ್ತು 'ಸಾರ್ವಜನಿಕ-ಖಾಸಗಿ ಸಹಭಾಗಿತ್ವ' (PPP) ಯೋಜನೆಗಳನ್ನು ಅನುಮೋದನೆಗಳ ತ್ವರಿತ ಟ್ರ್ಯಾಕಿಂಗ್, ವಲಯ ನೀತಿ ಸಮಸ್ಯೆಗಳು ಮತ್ತು ಯೋಜನಾ ಕಾರ್ಯಾರಂಭವನ್ನು ತ್ವರಿತಗೊಳಿಸಲು ಅಡಚಣೆಗಳನ್ನು ತೆಗೆದುಹಾಕುವ ಮೂಲಕ ಬೆಂಬಲಿಸುತ್ತದೆ.
• 2025 ರಲ್ಲಿ, PMG ಅನ್ನು ಸಮಸ್ಯೆಗಳ ಸೂಕ್ತ ಮಟ್ಟದ ಪರಿಹಾರಕ್ಕಾಗಿ ನಿಯಮಿತ ಸಮಸ್ಯೆಗಳಿಗೆ ಆಯಾ ಸಚಿವಾಲಯದಿಂದ ಪ್ರಾರಂಭಿಸಿ, ಸಂಕೀರ್ಣ ಸಮಸ್ಯೆಗಳಿಗೆ PRAGATI ವರೆಗೆ ವಿಸ್ತರಿಸುತ್ತದೆ ಎಂಬ ಖಚಿತತೆಯೊಂದಿಗೆ ರಚನಾತ್ಮಕ 5-ಹಂತದ ಏರಿಕೆಯ ಕಾರ್ಯವಿಧಾನವಾಗಿ ಮೇಲ್ದರ್ಜೆಗೇರಿಸಲಾಯಿತು. ಈ ವಿಧಾನವು ಪರಿಶೀಲನಾ ಕಾರ್ಯವಿಧಾನವನ್ನು ಸುಗಮಗೊಳಿಸಿ, ನಕಲಿಕೆಯನ್ನು ತಡೆಯುತ್ತದೆ ಮತ್ತು ಉನ್ನತ ಅಧಿಕಾರಿಗಳು ತಮ್ಮ ಹಸ್ತಕ್ಷೇಪದ ಅಗತ್ಯವಿರುವ ನಿರ್ಣಾಯಕ ಸಮಸ್ಯೆಗಳ ಮೇಲೆ ಗಮನಹರಿಸಲು ಅನುವು ಮಾಡಿಕೊಡುತ್ತದೆ.
• 2025ರ ನವೆಂಬರ್ 11 ರವರೆಗೆ PMG ಪೋರ್ಟಲ್‌ನಲ್ಲಿ ರೂ. 76.4 ಲಕ್ಷ ಕೋಟಿ ಮೌಲ್ಯದ ಒಟ್ಟು 3,022 ಯೋಜನೆಗಳನ್ನು ಪ್ರಾರಂಭಿಸಲಾಗಿದೆ.
• ಆರಂಭದಿಂದಲೂ, ರೂ. 55.48 ಲಕ್ಷ ಕೋಟಿ ಮೌಲ್ಯದ 1,761 ಯೋಜನೆಗಳಲ್ಲಿ ಒಟ್ಟು 8,121 ಸಮಸ್ಯೆಗಳನ್ನು ಪರಿಹರಿಸಲಾಗಿದೆ. 2025 ರಲ್ಲಿ, 01.01.2025 ರಿಂದ 11.11.205 ರವರೆಗೆ, ರೂ. 11.04 ಲಕ್ಷ ಕೋಟಿ ಮೌಲ್ಯದ 250 ಯೋಜನೆಗಳಲ್ಲಿ 403 ಸಮಸ್ಯೆಗಳನ್ನು ಪರಿಹರಿಸಲಾಗಿದೆ.
ವಿದೇಶಿ ನೇರ ಹೂಡಿಕೆ
• ಭಾರತವು ತನ್ನ ಆರ್ಥಿಕ ಪ್ರಯಾಣದಲ್ಲಿ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದೆ, ಏಪ್ರಿಲ್ 2000 ರಿಂದ ಜೂನ್ 2025 ರವರೆಗೆ ಒಟ್ಟು ವಿದೇಶಿ ನೇರ ಹೂಡಿಕೆಯ (FDI) ಒಳಹರಿವು ಪ್ರಭಾವಶಾಲಿ USD 1.1 ಟ್ರಿಲಿಯನ್ ತಲುಪಿದೆ. ಭಾರತದ ಒಟ್ಟು ವಾರ್ಷಿಕ FDI ಒಳಹರಿವು 2013-14 ರ ಹಣಕಾಸು ವರ್ಷದಲ್ಲಿ USD 36.05 ಬಿಲಿಯನ್ ನಿಂದ FY 2024-25 ರಲ್ಲಿ USD 80.62 ಬಿಲಿಯನ್ ಗೆ ದ್ವಿಗುಣಗೊಂಡಿದೆ. 2025-26 ರ ಅವಧಿಯಲ್ಲಿ (ಜೂನ್ 25 ರವರೆಗೆ), ಭಾರತವು ಕಳೆದ ವರ್ಷಕ್ಕಿಂತ 17% ರಷ್ಟು ಹೆಚ್ಚಾಗಿ 26.61 ಬಿಲಿಯನ್ USD ಯ ತಾತ್ಕಾಲಿಕ FDI ಒಳಹರಿವನ್ನು ದಾಖಲಿಸಿದೆ.
• ಕಳೆದ 11 ಹಣಕಾಸು ವರ್ಷಗಳಲ್ಲಿ (2014–25), ಭಾರತವು FDI ಯಲ್ಲಿ USD 748.38 ಬಿಲಿಯನ್ ಅನ್ನು ಆಕರ್ಷಿಸಿದೆ. ಇದು ಹಿಂದಿನ 11 ವರ್ಷಗಳಲ್ಲಿ (2003–14) ಪಡೆದ USD 308.38 ಬಿಲಿಯನ್ ಗೆ ಹೋಲಿಸಿದರೆ 143% ಹೆಚ್ಚಳವಾಗಿದೆ. ಕಳೆದ 25 ವರ್ಷಗಳಿಗೆ ಹೋಲಿಸಿದರೆ (2000-25: USD 1,071.96 ಬಿಲಿಯನ್) 2014-25ರ ಅವಧಿಯಲ್ಲಿ ಒಟ್ಟು FDI ಒಳಹರಿವು ಸುಮಾರು 70% ರಷ್ಟಿದೆ. ಈ ಅಂಕಿಅಂಶಗಳು ಜಾಗತಿಕವಾಗಿ ಅತ್ಯಂತ ಆಕರ್ಷಕ ಹೂಡಿಕೆ ತಾಣಗಳಲ್ಲಿ ಒಂದಾಗಿ ಭಾರತ ಹೊರಹೊಮ್ಮುವುದನ್ನು ದಾರ್ಶೀಕರಿಸುತ್ತದೆ.
*****
(रिलीज़ आईडी: 2202120)
आगंतुक पटल : 9