ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸ್ವಾಹಿದ್ ದಿನದ ಸಂದರ್ಭದಲ್ಲಿ ಗೌರವ ಸಲ್ಲಿಸಿದ ಪ್ರಧಾನಮಂತ್ರಿ 

प्रविष्टि तिथि: 10 DEC 2025 8:51AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸ್ವಾಹಿದ್ ದಿನದ ಸಂದರ್ಭದಲ್ಲಿ ಐತಿಹಾಸಿಕ ಅಸ್ಸಾಂ ಚಳವಳಿಯ ಭಾಗವಾಗಿದ್ದ ಎಲ್ಲರ ಶೌರ್ಯವನ್ನು ಸ್ಮರಿಸಿದರು.

ಅಸ್ಸಾಂ ಚಳವಳಿಯು ಪೀಳಿಗೆಯಿಂದ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದೆ ಎಂದು ಶ್ರೀ ನರೇಂದ್ರ ಮೋದಿ ತಿಳಿಸಿದರು ಮತ್ತು ರಾಜ್ಯದ ಸಾಂಸ್ಕೃತಿಕ ಶಕ್ತಿ ಮತ್ತು ಸಮಗ್ರ ಅಭಿವೃದ್ಧಿಯ ದೂರದೃಷ್ಟಿಯನ್ನು ಸಾಕಾರಗೊಳಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. 

ಪ್ರಧಾನಮಂತ್ರಿ ತಮ್ಮ ಎಕ್ಸ್‌ ಪೊಸ್ಟ್‌ ನಲ್ಲಿ ಹೀಗೆ ಹೇಳಿದ್ದಾರೆ:

“ಇಂದು ಸ್ವಾಹಿದ್ ದಿನದ ಸಂದರ್ಭದಲ್ಲಿ ಅಸ್ಸಾಂ ಚಳವಳಿಯ ಭಾಗವಾಗಿದ್ದ ಎಲ್ಲರ ಶೌರ್ಯವನ್ನು ನಾವು ಸ್ಮರಿಸುತ್ತೇವೆ. ಈ ಚಳವಳಿಯು ನಮ್ಮ ಇತಿಹಾಸದಲ್ಲಿ ಸದಾ ಪ್ರಮುಖ ಸ್ಥಾನವನ್ನು ಹೊಂದಿದೆ. ಅಸ್ಸಾಂ ಚಳವಳಿಯಲ್ಲಿ ಭಾಗವಹಿಸಿದವರ ಕನಸುಗಳನ್ನು ನನಸಾಗಿಸುವ, ವಿಶೇಷವಾಗಿ ಅಸ್ಸಾಂನ ಸಂಸ್ಕೃತಿಯನ್ನು ಬಲವರ್ಧನೆಗೊಳಿಸುವ ಮತ್ತು ರಾಜ್ಯದ ಸರ್ವತೋಮುಖ ಪ್ರಗತಿಯನ್ನು ಸಾಧಿಸುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ’’. 

“আজি শ্বহীদ দিৱস উপলক্ষে অসম আন্দোলনত অংশগ্ৰহণ কৰা সকলোৰে শৌৰ্য্যক স্মৰণ কৰিছো। এই আন্দোলনে সদায় আমাৰ ইতিহাসত এক গুৰুত্বপূৰ্ণ স্থান অধিকাৰ কৰি থাকিব।  আমি পুনৰ উল্লেখ কৰিব বিচাৰো যে, অসমৰ সংস্কৃতিক সবল কৰাৰ লগতে ৰাজ্যখনৰ সৰ্বাংগীন উন্নয়নৰ সপোন যিসকল আন্দোলনকাৰীয়ে দেখিছিল, সেই সপোনসমূহ পূৰণ কৰিবলৈ আমি প্ৰতিশ্ৰুতিবদ্ধ।”

 

*****

 


(रिलीज़ आईडी: 2201311) आगंतुक पटल : 6
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Assamese , Bengali , Gujarati , Tamil , Telugu , Malayalam