ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಭಾರತದಾದ್ಯಂತ ಇಂಧನ ಲಭ್ಯತೆಯವನ್ನು ಸುಧಾರಿಸಲು ರಾಷ್ಟ್ರೀಯ ಅನಿಲ ಗ್ರಿಡ್ ವಿಸ್ತರಣೆಯನ್ನು ತೀವ್ರಗೊಳಿಸಲಾಗಿದೆ

प्रविष्टि तिथि: 08 DEC 2025 3:49PM by PIB Bengaluru

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (ಪಿ.ಎಮ್.ಜಿ.ಆರ್.ಬಿ.) ನೈಸರ್ಗಿಕ ಅನಿಲ ಪೈಪ್‌ಲೈನ್ ಗಳನ್ನು (ಎನ್.ಜಿ.ಪಿ.ಎಲ್.) ಹಾಕಲು, ನಿರ್ಮಿಸಲು, ನಿರ್ವಹಿಸಲು ಮತ್ತು ವಿಸ್ತರಿಸಲು ಘಟಕಗಳಿಗೆ ಅಧಿಕಾರ ನೀಡುವ ಅಧಿಕಾರವನ್ನು ಹೊಂದಿದೆ. ದೇಶಾದ್ಯಂತ ನೈಸರ್ಗಿಕ ಅನಿಲದ ಲಭ್ಯತೆಯನ್ನು ಹೆಚ್ಚಿಸುವ ಗುರಿಯೊಂದಿಗೆ, ಪಿ.ಎಮ್.ಜಿ.ಆರ್.ಬಿ. ಸಾಮಾನ್ಯ ವಾಹಕ, ಸ್ಪರ್ ಲೈನ್, ಟೈ-ಇನ್ ಸಂಪರ್ಕ ಮತ್ತು ದೇಶಾದ್ಯಂತ ವಿವಿಧ ಘಟಕಗಳಿಗೆ ಮೀಸಲಾದ ಪೈಪ್‌ಲೈನ್ ಅನ್ನು ಒಳಗೊಂಡ ಸುಮಾರು 34,233 ಕಿ.ಮೀ. ಎನ್.ಜಿ.ಪಿ.ಎಲ್. ನೆಟ್ವರ್ಕ್ ಅನ್ನು ಅಧಿಕೃತಗೊಳಿಸಿದೆ. ಈ ನಿಟ್ಟಿನಲ್ಲಿ ಜೂನ್ 2025ರ ಹೊತ್ತಿಗೆ 25,429 ಕಿ.ಮೀ. ಕಾರ್ಯನಿರ್ವಹಿಸಲು ಪ್ರಾರಂಭಿಸಲಾಗಿದೆ. 10,459 ಕಿ.ಮೀ. ಉದ್ದದ ಪೈಪ್‌ ಲೇನ್ ಈಗಾಗಲೇ ನಿರ್ಮಾಣದ ವಿವಿಧ ಹಂತಗಳಲ್ಲಿವೆ.

ಕೇಂದ್ರ ಸರ್ಕಾರವು 'ಒಂದು ರಾಷ್ಟ್ರ, ಒಂದು ಅನಿಲ ಗ್ರಿಡ್' ಅನ್ನು ಜಾರಿಗೆ ತರಲು ವಿವಿಧ ಕ್ರಮಗಳನ್ನು ತೆಗೆದುಕೊಂಡಿದೆ.  ಇದರಲ್ಲಿ, ಪ್ರಮುಖ ಟ್ರಂಕ್ ಪೈಪ್‌ಲೇನ್ ಗಳಿಗೆ ಅನುಮೋದನೆ ನೀಡುವುದು, ಕಡಿಮೆ ಬೇಡಿಕೆಯ ಪ್ರದೇಶಗಳಲ್ಲಿ ಕಾರ್ಯಸಾಧ್ಯತೆಯ ಅಂತರ ನಿಧಿಯನ್ನು ಒದಗಿಸುವುದು, ಏಕೀಕೃತ ಸುಂಕವನ್ನು ಪರಿಚಯಿಸುವುದು, ಸಿಜಿಡಿ ಜಾಲದ ವಿಸ್ತರಣೆಯನ್ನು ವೇಗಗೊಳಿಸುವುದು, ದ್ರವೀಕೃತ ನೈಸರ್ಗಿಕ ಅನಿಲ (ಎಲ್.ಎನ್.ಜಿ) ಟರ್ಮಿನಲ್ ಗಳನ್ನು ಸ್ಥಾಪಿಸುವುದು, ಹೆಚ್ಚಿನ ಒತ್ತಡ/ಹೆಚ್ಚಿನ ತಾಪಮಾನದ ಪ್ರದೇಶಗಳು, ಆಳವಾದ ನೀರು ಮತ್ತು ಅತಿ-ಆಳವಾದ ನೀರು ಮತ್ತು ಕಲ್ಲಿದ್ದಲು ಸ್ತರಗಳಿಂದ ಉತ್ಪಾದಿಸುವ ಅನಿಲಕ್ಕೆ ಗರಿಷ್ಠ ಬೆಲೆಯೊಂದಿಗೆ ಮಾರುಕಟ್ಟೆ ಮತ್ತು ಬೆಲೆ ಸ್ವಾತಂತ್ರ್ಯವನ್ನು ಅನುಮತಿಸುವುದು, ಜೈವಿಕ-ಸಿ.ಎನ್.ಜಿ. ಅನ್ನು ಉತ್ತೇಜಿಸಲು ಸುಸ್ಥಿರ ಪರ್ಯಾಯ ಕೈಗೆಟುಕುವ ಸಾರಿಗೆ (ಎಸ್.ಎ.ಟಿ.ಎ.ಟಿ) ಉಪಕ್ರಮ ಇತ್ಯಾದಿ ವ್ಯವಸ್ಥೆಗಳು ಸೇರಿವೆ.

ರಾಷ್ಟ್ರೀಯ ಅನಿಲ ಗ್ರಿಡ್ ನಿರ್ಮಾಣವನ್ನು ತ್ವರಿತಗೊಳಿಸಲು ಮತ್ತು ಸವಾಲುಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಮತ್ತು ಕಾರ್ಯನಿರ್ವಾಹಕ ಸಂಸ್ಥೆಗಳೊಂದಿಗೆ ನಿರಂತರವಾಗಿ ಪರಿಶೀಲಿಸುತ್ತದೆ ಮತ್ತು ಸಂಯೋಜಿಸುತ್ತದೆ.

ಅನಿಲ ಪೈಪ್ಲೈನ್ ಜಾಲಗಳ ವಿಸ್ತರಣೆಯು - ಶುದ್ಧ, ವಿಶ್ವಾಸಾರ್ಹ ಮತ್ತು ವಿತರಿಸಬಹುದಾದ ಇಂಧನಕ್ಕೆ ಪ್ರವೇಶವನ್ನು ಹೆಚ್ಚಿಸುತ್ತದೆ, ಗೃಹ/ವಸತಿ/ಮನೆಯ ಅನುಕೂಲತೆಯನ್ನು ಸುಧಾರಿಸುತ್ತದೆ, ಗ್ರಾಮೀಣ ಪ್ರದೇಶಗಳು, ಕೈಗಾರಿಕಾ ಕ್ಲಸ್ಟರ್ಗಳು ಮತ್ತು ನಗರ ಅನಿಲ ವಿತರಣಾ (ಸಿಜಿಡಿ) ಜಾಲಗಳಲ್ಲಿ ಸಾಂಪ್ರದಾಯಿಕ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಕೈಗಾರಿಕಾ ಪ್ರದೇಶಗಳಲ್ಲಿ, ಸ್ಪರ್ಧಾತ್ಮಕ ಬೆಲೆಗಳಲ್ಲಿ ಖಚಿತವಾದ ಅನಿಲ ಪೂರೈಕೆಯು ಉತ್ಪಾದನಾ ಸ್ಪರ್ಧಾತ್ಮಕತೆಯನ್ನು ಬಲಪಡಿಸುತ್ತದೆ, ಹೊಸ ಹೂಡಿಕೆಗಳನ್ನು ಆಕರ್ಷಿಸುತ್ತದೆ, ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದೆ. ಸಿಜಿಡಿ ಜಾಲಗಳಲ್ಲಿ, ಸಿ.ಎನ್.ಜಿ. ಮತ್ತು ಪಿ.ಎನ್.ಜಿ. ಲಭ್ಯತೆಯು ಶುದ್ಧ ಚಲನಶೀಲತೆ ಮತ್ತು ದೇಶೀಯ ಇಂಧನ ಬಳಕೆಯನ್ನು ಉತ್ತೇಜಿಸುತ್ತದೆ - ಇದು ಸುಧಾರಿತ ಗಾಳಿಯ ಗುಣಮಟ್ಟ ಮತ್ತು ಹೆಚ್ಚಿನ ಪರಿಸರ ಸುಸ್ಥಿರತೆಗೆ ಕಾರಣವಾಗುತ್ತದೆ.

ಈ ಮಾಹಿತಿಯನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಸುರೇಶ್ ಗೋಪಿ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ನೀಡಿದ್ದಾರೆ.

 

*****


(रिलीज़ आईडी: 2200427) आगंतुक पटल : 6
इस विज्ञप्ति को इन भाषाओं में पढ़ें: English , Urdu , हिन्दी , Gujarati , Tamil