ಭೂವಿಜ್ಞಾನ ಸಚಿವಾಲಯ
azadi ka amrit mahotsav

ಭಾರತವು ಈಗ ತಂತ್ರಜ್ಞಾನ ಚಾಲಿತ ಬೆಳವಣಿಗೆಯಲ್ಲಿ ಜಾಗತಿಕ ಪ್ರವೃತ್ತಿಗಳನ್ನು ರೂಪಿಸುತ್ತಿದೆ, ಸಾಂಪ್ರದಾಯಿಕ ಆರ್ಥಿಕತೆಯಿಂದ ನಾವೀನ್ಯತೆಯ ಆರ್ಥಿಕತೆಗೆ ಸ್ಥಳಾಂತರಗೊಂಡಿದೆ: ಪಂಚಕುಲದ ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ ಡಾ. ಜಿತೇಂದ್ರ ಸಿಂಗ್


ಹೊಸ ರಾಷ್ಟ್ರೀಯ ಸಂಶೋಧನೆ ಮತ್ತು ಅಭಿವೃದ್ಧಿ ನಿಧಿಯು ಹೆಚ್ಚಿನ ಅಪಾಯದ, ಹೆಚ್ಚಿನ ಪ್ರಭಾವ ಬೀರುವ ಆಳವಾದ ತಂತ್ರಜ್ಞಾನದ (ಡೀಪ್ ಟೆಕ್) ನಾವೀನ್ಯತೆಯನ್ನು ಅನ್ಲಾಕ್ ಮಾಡುತ್ತದೆ: ಡಾ. ಜಿತೇಂದ್ರ ಸಿಂಗ್

प्रविष्टि तिथि: 07 DEC 2025 6:16PM by PIB Bengaluru

ಭಾರತವು ಸಾಂಪ್ರದಾಯಿಕ ಆರ್ಥಿಕತೆಯಿಂದ ನಾವೀನ್ಯತೆ ಚಾಲಿತ ರಾಷ್ಟ್ರವಾಗಿ ವಿಕಾಸಗೊಳ್ಳುವಲ್ಲಿ ನಿರ್ಣಾಯಕ ಹಂತವನ್ನು ಪ್ರವೇಶಿಸಿದೆ ಮತ್ತು ಈಗ ತಂತ್ರಜ್ಞಾನ ಆಧಾರಿತ ಬೆಳವಣಿಗೆಯಲ್ಲಿ ಜಾಗತಿಕ ಪ್ರವೃತ್ತಿಗಳನ್ನು ರೂಪಿಸುತ್ತಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ); ಪ್ರಧಾನ ಮಂತ್ರಿಗಳ ಕಛೇರಿಯಲ್ಲಿ ರಾಜ್ಯ ಸಚಿವರು; ಮತ್ತು ಪರಮಾಣು ಇಂಧನ ಮತ್ತು ಬಾಹ್ಯಾಕಾಶ ಇಲಾಖೆಗಳ ರಾಜ್ಯ ಸಚಿವರೂ ಆಗಿರುವ ಡಾ. ಜಿತೇಂದ್ರ ಸಿಂಗ್ ಅವರು ಪ್ರಸ್ತುತ ಇಲ್ಲಿ ನಡೆಯುತ್ತಿರುವ 4 ದಿನಗಳ ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ (ಐ.ಐ.ಎಸ್.ಎಫ್) ದಲ್ಲಿ ಹೇಳಿದರು.

ಐ.ಐ.ಎಸ್‌.ಎಫ್‌ನಲ್ಲಿ ನಡೆದ ವಿಶೇಷ ಫೈರ್‌ಸೈಡ್ ಚಾಟ್‌ನಲ್ಲಿ (ಅನೌಪಚಾರಿಕ ಸಂವಾದ) ಮಾತನಾಡಿದ ಸಚಿವರು, ಕಳೆದ ದಶಕವು ಭಾರತದ ವೈಜ್ಞಾನಿಕ ಮನೋಭಾವ, ನೀತಿ ನಿರ್ದೇಶನ ಮತ್ತು ಆಡಳಿತ ವಿಧಾನದಲ್ಲಿ ಮೂಲಭೂತ ಬದಲಾವಣೆಯನ್ನು ತಂದಿದೆ ಎಂದು ಹೇಳಿದರು. ಭಾರತದ ಆರ್ಥಿಕ ಬೆಳವಣಿಗೆಯು ಈಗ ಸ್ಪಷ್ಟವಾಗಿ ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆಗಳಿಂದ ಮುನ್ನಡೆಸಲ್ಪಡುತ್ತಿದೆ ಮತ್ತು ಜಾಗತಿಕ ಸಮುದಾಯವು ಹೆಚ್ಚಾಗಿ, ಭಾರತವನ್ನು ಆಡಳಿತ, ಸಾರ್ವಜನಿಕ ಸೇವಾ ವಿತರಣೆ ಮತ್ತು ತಂತ್ರಜ್ಞಾನ ನೇತೃತ್ವದ ಅಭಿವೃದ್ಧಿಗೆ ಹೊಸ ಮಾದರಿಗಳ ಮೂಲವಾಗಿ ನೋಡುತ್ತಿದೆ ಎಂದು ಅವರು ಹೇಳಿದರು.

ಭಾರತದಲ್ಲಿ ಪ್ರತಿಭೆ, ಸಾಮರ್ಥ್ಯ ಅಥವಾ ಬದ್ಧತೆಯ ಕೊರತೆ ಎಂದಿಗೂ ಇರಲಿಲ್ಲ, ಆದರೆ ಈಗ ಅದರ ರಾಜಕೀಯ ಬೆಂಬಲದ ಗುಣಮಟ್ಟ ಮತ್ತು ರಾಷ್ಟ್ರೀಯ ಉದ್ದೇಶದ ಸ್ಪಷ್ಟತೆ ಬದಲಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಜಾಗತಿಕ ತಾಂತ್ರಿಕ ಪರಿವರ್ತನೆಗಳಿಗೆ ಭಾರತ ಇನ್ನು ಮುಂದೆ ವಿಳಂಬಿಸುವುದಿಲ್ಲ,  ಮತ್ತು ಜೈವಿಕ ತಂತ್ರಜ್ಞಾನ, ಪರಮಾಣು ನಾವೀನ್ಯತೆ, ಪುನರುತ್ಪಾದಕ ವಿಜ್ಞಾನಗಳು ಮತ್ತು ಮುಂದಿನ ಪೀಳಿಗೆಯ ಬಾಹ್ಯಾಕಾಶ ತಂತ್ರಜ್ಞಾನಗಳು ಸೇರಿದಂತೆ ಅನೇಕ ಉದಯೋನ್ಮುಖ ಕ್ಷೇತ್ರಗಳಲ್ಲಿ, ದೇಶವು ಈಗ ನಿರ್ಣಾಯಕ ನಾಯಕತ್ವದ ಪಾತ್ರವನ್ನು ವಹಿಸುತ್ತಿದೆ ಎಂದು ಅವರು ಹೇಳಿದರು.

ಉತ್ಸವದಲ್ಲಿ, ಹೊಸ ರಾಷ್ಟ್ರೀಯ ಸಂಶೋಧನೆ ಮತ್ತು ಅಭಿವೃದ್ಧಿ ನಿಧಿಯ ಉದ್ಘಾಟನೆಯ ಕುರಿತು ಸಚಿವರು ವ್ಯಾಪಕವಾಗಿ ಮಾತನಾಡಿದರು, ಇದು ಹೆಚ್ಚಿನ ಅಪಾಯದ, ಹೆಚ್ಚಿನ ಪರಿಣಾಮ ಬೀರುವ ನಾವೀನ್ಯತೆಯನ್ನು ಅನ್‌ಲಾಕ್ ಮಾಡಲು ಒಂದು ಪರಿವರ್ತಕ ಹೆಜ್ಜೆಯಾಗಿದೆ ಎಂದು ಹೇಳಿದರು. ಖಾಸಗಿ ಕಂಪನಿಗಳಿಗೆ ಹಿಂದೆ ಪ್ರವೇಶಿಸಲಾಗದ ಬಾಹ್ಯಾಕಾಶ ಮತ್ತು ಪರಮಾಣು ಶಕ್ತಿಯಂತಹ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಉದ್ಯಮವನ್ನು ನಿಧಿ ಬೆಂಬಲಿಸುತ್ತದೆ ಎಂದು ಅವರು ಹೇಳಿದರು. ಕಡಿಮೆ ಬಡ್ಡಿದರ, ದೀರ್ಘಾವಧಿಯ ಹಣಕಾಸಿನ ನೆರವಿನ ಮೂಲಕ ಭಾರತೀಯ ಉದ್ಯಮವು ದೀರ್ಘಕಾಲೀನ ಸಾಮರ್ಥ್ಯಗಳನ್ನು ನಿರ್ಮಿಸಲು ಸಹಾಯ ಮಾಡಲು ವಿನ್ಯಾಸಗೊಳಿಸಲಾದ "ವೇಗವರ್ಧಕ ಪುಶ್" (ವೇಗವರ್ಧಕ ಬಲ) ಎಂದು ಅವರು ಉಪಕ್ರಮವನ್ನು ವಿವರಿಸಿದರು, ಇದು ಕಂಪನಿಗಳು ಭಾರತದ ತಾಂತ್ರಿಕತೆಯು ಎತ್ತರಕ್ಕೆ   ಏರುವುದಕ್ಕೆ  ಬಲವಾದ, ಸ್ವತಂತ್ರ ಕೊಡುಗೆದಾರರಾಗಿ ಹೊರಹೊಮ್ಮುವುದಕ್ಕೆ ಭರವಸೆಯಿಂದ  ಮುಂದುವರಿಯಲು ಅನುವು ಮಾಡಿಕೊಡುತ್ತದೆ.

ಬಾಹ್ಯಾಕಾಶ ವಲಯದ ತೆರೆಯುವಿಕೆಯ ಬಗ್ಗೆ ಮಾತನಾಡಿದ ಸಚಿವರು, ರಾಕೆಟ್ ಉಡಾವಣೆಯ ಸಮಯದಲ್ಲಿ ಪತ್ರಕರ್ತರನ್ನು ಸಹ ಶ್ರೀಹರಿಕೋಟಾದ ದ್ವಾರಗಳ ಒಳಗೆ ಅನುಮತಿಸದ ಕಾಲವಿತ್ತು ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ತಂದ ಬದಲಾವಣೆಯು ಕೆಲವೇ ಕೆಲವು ಆಟಗಾರರಿಂದ ಸುಮಾರು 400 ಬಾಹ್ಯಾಕಾಶ ನವೋದ್ಯಮಗಳಿಗೆ ರೋಮಾಂಚಕ ವಿಸ್ತರಣೆಗೆ ಕಾರಣವಾಗಿದೆ, ಅವುಗಳಲ್ಲಿ ಹಲವು ಈಗ ಜಾಗತಿಕವಾಗಿ ಗುರುತಿಸಲ್ಪಟ್ಟಿವೆ ಎಂದು ಅವರು ಹೇಳಿದರು. ಭಾರತವು ಇನ್ನು ಮುಂದೆ ತನ್ನ ಬಾಹ್ಯಾಕಾಶ ಸಾಧನೆಗಳನ್ನು ರಾಕೆಟ್ ಉಡಾವಣೆಗಳಿಗೆ ಮಾತ್ರ ಸೀಮಿತಗೊಳಿಸಿಲ್ಲ ,  ಅದು ಕೃಷಿ, ಆರೋಗ್ಯ ರಕ್ಷಣೆ, ಕುಡಿಯುವ ನೀರಿನ ಪರಿಹಾರಗಳು ಮತ್ತು ವಿಪತ್ತು ನಿರ್ವಹಣೆಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಬಳಸುವ ಜಾಗತಿಕ ಮಾದರಿಗಳನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು.

ಪರಮಾಣು ವಲಯದಲ್ಲೂ ಅದೇ ಪರಿವರ್ತನೆ ಗೋಚರಿಸುತ್ತಿದೆ ಎಂದು ಅವರು ಹೇಳಿದರು, ಅಲ್ಲಿ ನಾವೀನ್ಯತೆಗಳು ಈಗ ಕ್ಯಾನ್ಸರ್ ಆರೈಕೆ ಜಾಲಗಳು, ಸಮುದಾಯ ನೀರು ಶುದ್ಧೀಕರಣ ವ್ಯವಸ್ಥೆಗಳು ಮತ್ತು ಇತರ ಅನ್ವಯಿಕೆಗಳ ಮೂಲಕ ನಾಗರಿಕರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತಿವೆ. ಭಾರತದ ಪರಮಾಣು ಮತ್ತು ಬಾಹ್ಯಾಕಾಶ ಯಶಸ್ಸಿನ ಕಥೆಗಳು ಕಾರ್ಯತಂತ್ರದ ತಂತ್ರಜ್ಞಾನಗಳು ಜೀವನ ಸುಗಮತೆಯನ್ನು ಹೇಗೆ ಆಳವಾಗಿ ಸುಧಾರಿಸಬಹುದು ಎಂಬುದನ್ನು ಪ್ರದರ್ಶಿಸುತ್ತವೆ ಎಂದೂ ಅವರು ಹೇಳಿದರು.

ಭಾರತದ ಜಾಗತಿಕ ಸ್ಥಾನಮಾನ ಬೆಳೆಯುತ್ತಿರುವ ಬಗ್ಗೆ ಚರ್ಚಿಸುತ್ತಾ, ಡಾ. ಜಿತೇಂದ್ರ ಸಿಂಗ್, ಇಂದಿನ ಯುವ ಭಾರತೀಯರು ಹಿಂದಿನ ತಲೆಮಾರುಗಳಿಗಿಂತ ವಿದೇಶಗಳಲ್ಲಿ ಹೆಚ್ಚಿನ ಗೌರವವನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದರು. ಒಬ್ಬ ಭಾರತೀಯ ವೃತ್ತಿಪರರು ವಿದೇಶದಲ್ಲಿ ತಮ್ಮನ್ನು ಭಾರತೀಯ ಎಂದು ಪರಿಚಯಿಸಿಕೊಂಡಾಗ, ಉದ್ಯೋಗ ಮಾರುಕಟ್ಟೆಯಲ್ಲಿ ಅವರ ವಿಶ್ವಾಸಾರ್ಹತೆ ತಕ್ಷಣವೇ ಏರುತ್ತದೆ ಎಂದು ಅವರು ಹೇಳಿದರು, ಎರಡು ದಶಕಗಳ ಹಿಂದೆ ಇದ್ದ ಪರಿಸ್ಥಿತಿಯು "ಸಂಪೂರ್ಣ ಬದಲಾಗಿದೆ" ಎಂದು ಅವರು ಬಣ್ಣಿಸಿದರು. ಇತ್ತೀಚಿನ ತಿಂಗಳುಗಳಲ್ಲಿ ವಿವಿಧ ಪ್ರದೇಶಗಳ ದೇಶಗಳ ನಿಯೋಗಗಳು ಭಾರತಕ್ಕೆ ಭೇಟಿ ನೀಡಿ ಅದರ ಕುಂದುಕೊರತೆ ಪರಿಹಾರ ವ್ಯವಸ್ಥೆಗಳು, ಹಿರಿಯ ನಾಗರಿಕರಿಗೆ ಡಿಜಿಟಲ್ ಪ್ರಮಾಣೀಕರಣ ಕಾರ್ಯವಿಧಾನಗಳು ಮತ್ತು ಇತರ ಸಾರ್ವಜನಿಕ ಸೇವಾ ನಾವೀನ್ಯತೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡಿವೆ. ಇದು ಭಾರತವು ಜಾಗತಿಕವಾಗಿ ಪ್ರಸ್ತುತವಾದ ಅತ್ಯುತ್ತಮ ಅಭ್ಯಾಸಗಳ ಸೃಷ್ಟಿಕರ್ತನಾಗಿ ಹೇಗೆ ಮಾರ್ಪಟ್ಟಿದೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ಕಳೆದ ದಶಕದಲ್ಲಿ ಜಾರಿಗೆ ತಂದಿರುವ ಬದಲಾಗುತ್ತಿರುವ ಕೆಲಸದ ಸಂಸ್ಕೃತಿಯೇ ದೇಶದ ನವೀಕೃತ ವಿಶ್ವಾಸಕ್ಕೆ ಕಾರಣ ಎಂದು ಸಚಿವರು ಹೇಳಿದರು. ಸರ್ಕಾರ ಈಗ ಹೆಚ್ಚಿನ ಉದ್ದೇಶ, ಹೊಣೆಗಾರಿಕೆ ಮತ್ತು ಸ್ಪಂದಿಸುವಿಕೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ಉಜ್ವಲ ಯೋಜನೆಯಂತಹ ಯೋಜನೆಗಳು ಜಾತಿ, ಧರ್ಮ ಅಥವಾ ರಾಜಕೀಯ ಆದ್ಯತೆಯ ತಾರತಮ್ಯವಿಲ್ಲದೆ ನಾಗರಿಕರನ್ನು ತಲುಪುವ ಸಮಗ್ರ ಪ್ರಜಾಪ್ರಭುತ್ವದ ಹೊಸ ಮನೋಭಾವವನ್ನು ಪ್ರತಿನಿಧಿಸುತ್ತವೆ ಎಂದು ಅವರು ಹೇಳಿದರು. ಅವರ ಪ್ರಕಾರ, ಈ ಬದಲಾವಣೆಯು ನಾಗರಿಕರು ಮತ್ತು ಆಡಳಿತದ ನಡುವೆ ವಿಶ್ವಾಸವನ್ನು ಪುನರ್ನಿರ್ಮಿಸಿದೆ.

ಭಾರತದ ತಾಂತ್ರಿಕ ಪ್ರಗತಿಯು ದೇಶಾದ್ಯಂತ ನಡೆಯುತ್ತಿರುವ ಅವಕಾಶಗಳ ಪ್ರಜಾಪ್ರಭುತ್ವೀಕರಣದಿಂದ ಬೇರ್ಪಡಿಸಲಾಗದು ಎಂದು ಸಚಿವರು ಹೇಳಿದರು. ಡಿಜಿಟಲ್ ಸಂಪರ್ಕ ಮತ್ತು ಕೈಗೆಟುಕುವ ಮಾಹಿತಿ ಪ್ರವೇಶದೊಂದಿಗೆ, ಸಣ್ಣ ಪಟ್ಟಣಗಳು ​​ಮತ್ತು ಗ್ರಾಮೀಣ ಜಿಲ್ಲೆಗಳ ಯುವಜನರು ಈಗ ಪ್ರಮುಖ ನಗರಗಳ ಯುವಜನರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಸ್ಪರ್ಧಿಸುತ್ತಿದ್ದಾರೆ. ಪೂಂಚ್‌ನಂತಹ ಜಿಲ್ಲೆಗಳು, ಪಂಜಾಬ್-ಹರಿಯಾಣ ಬೆಲ್ಟ್ ಬಳಿಯ ಪ್ರದೇಶಗಳು ಮತ್ತು ಇತರ ಮಹಾನಗರೇತರ ಪ್ರದೇಶಗಳಿಂದ ಬಂದಿರುವವರಿಂದ ಯುಪಿಎಸ್‌ಸಿ ಟಾಪರ್‌ಗಳ ಬದಲಾಗುತ್ತಿರುವ ಪ್ರೊಫೈಲ್ ರೂಪಾಂತರವನ್ನು ವಿವರಿಸುತ್ತದೆ ಎಂದು ಅವರು ಹೇಳಿದರು. "ಭಾರತ್" ನಿಂದ ಆಕಾಂಕ್ಷೆಯ ಉಲ್ಬಣವು ಭಾರತದ ದೊಡ್ಡ ಶಕ್ತಿಗಳಲ್ಲಿ ಒಂದಾಗಿದೆ ಎಂದು ಅವರು ಬಣ್ಣಿಸಿದರು.

ಭಾರತವು ತನ್ನ ನಾವೀನ್ಯತೆಯ ಪ್ರಗತಿಯನ್ನು ಹೇಗೆ ಅಳೆಯಬೇಕು ಎಂಬ ಪ್ರಶ್ನೆಗೆ, ಡಾ. ಜಿತೇಂದ್ರ ಸಿಂಗ್ ಅವರು ನಿಜವಾದ ಅಳತೆ ಎಂದರೆ ಸುಸ್ಥಿರತೆ ಎಂದು ಹೇಳಿದರು. ಆಲೋಚನೆಗಳು ಬಲವಾದ ಕೈಗಾರಿಕೆ ಮತ್ತು ಮಾರುಕಟ್ಟೆ ಸಂಪರ್ಕಗಳೊಂದಿಗೆ ಕಾರ್ಯಸಾಧ್ಯವಾದ ಉದ್ಯಮಗಳಾಗಿ ರೂಪಾಂತರಗೊಳ್ಳಬೇಕು. ನಾವೀನ್ಯತೆ ತತ್ವಾದರ್ಶವಾದಕ್ಕೆ ಸೀಮಿತವಾಗಿರಬಾರದು; ಅದು ಸಮಾಜದಲ್ಲಿ ಘನತೆ, ಆರ್ಥಿಕ ಭದ್ರತೆ ಮತ್ತು ಸಮಾನತೆಯ ಪ್ರಜ್ಞೆಯನ್ನು ಸಹ ನೀಡಬೇಕು ಎಂದು ಅವರು ಹೇಳಿದರು. ಅರ್ಥಪೂರ್ಣ ಮತ್ತು ಆರ್ಥಿಕವಾಗಿ ಯಶಸ್ವಿ ಉದ್ಯಮಗಳನ್ನು ನಿರ್ಮಿಸಲು ಹೆಚ್ಚಿನ ಒತ್ತಡದ ಕಾರ್ಪೊರೇಟ್ ಉದ್ಯೋಗಗಳನ್ನು ತೊರೆದ ವೃತ್ತಿಪರರು ಸ್ಥಾಪಿಸಿದ ಲ್ಯಾವೆಂಡರ್ ಆಧಾರಿತ (ಲ್ಯಾವೆಂಡರ್ ಉದ್ಯಮ) ಉದ್ಯಮಗಳು ಸೇರಿದಂತೆ ಲಾಭದಾಯಕ ಕೃಷಿ-ಸ್ಟಾರ್ಟ್-ಅಪ್‌ಗಳ ಉದಯವನ್ನು ಅವರು ಉಲ್ಲೇಖಿಸಿದರು.

ಭವಿಷ್ಯವನ್ನು ಅವಲೋಕಿಸಿದ, ಡಾ. ಜಿತೇಂದ್ರ ಸಿಂಗ್, ಭಾರತದ ಅತಿದೊಡ್ಡ ಶಕ್ತಿ ಅದರ ಪ್ರತಿಭೆಯಾಗಿದ್ದು, ಅದು ತಲೆಮಾರುಗಳನ್ನು ದಾಟಿ ಹೋಗುತ್ತದೆ ಎಂದು ಹೇಳಿದರು. ಭಾರತವು ಜಗತ್ತನ್ನು ಅಚ್ಚರಿಗೊಳಿಸುವ ಕ್ಷೇತ್ರಗಳಲ್ಲಿ ಬಾಹ್ಯಾಕಾಶವೂ ಒಂದು ಎಂದು ಅವರು ಹೇಳಿದರು ಮತ್ತು ಮುಂದಿನ 15 ರಿಂದ 20 ವರ್ಷಗಳಲ್ಲಿ ಭಾರತೀಯನೊಬ್ಬ ಚಂದ್ರನ ಮೇಲೆ ಕಾಲಿಡುತ್ತಾನೆ ಎಂದು ಭವಿಷ್ಯ ನುಡಿದರು. ಕೃತಕ ಬುದ್ಧಿಮತ್ತೆಯನ್ನು ಜವಾಬ್ದಾರಿಯುತವಾಗಿ ಮತ್ತು ಪ್ರಬುದ್ಧವಾಗಿ ನಿರ್ವಹಿಸಿದರೆ ಭಾರತದಲ್ಲಿ ಅದು ದೈನಂದಿನ ಜೀವನವನ್ನು ತ್ವರಿತವಾಗಿ ಪರಿವರ್ತಿಸುತ್ತದೆ ಎಂದು ಅವರು ಹೇಳಿದರು. ಯುವ ನಾವೀನ್ಯಕಾರರಿಗೆ ಅವರ ಸಂದೇಶವು ನೇರವಾಗಿತ್ತು: ಅಪಾಯಗಳನ್ನು ತೆಗೆದುಕೊಳ್ಳಿ, ಉದ್ಯಮದೊಂದಿಗೆ ಬಲವಾದ ಪಾಲುದಾರಿಕೆಯನ್ನು ಹುಡುಕಿ ಮತ್ತು ಸರ್ಕಾರ ನೀಡುತ್ತಿರುವ ಸಂಪರ್ಕಗಳು ಮತ್ತು ಬೆಂಬಲವನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ.

ಪಂಚಕುಲದಲ್ಲಿ ಐ.ಐ.ಎಸ್.ಎಫ್ ಮುಂದುವರಿದಂತೆ, ಇಂತಹ ವೇದಿಕೆಗಳ ಉದ್ದೇಶ ಆತ್ಮವಿಶ್ವಾಸವನ್ನು ಪ್ರೇರೇಪಿಸುವುದು, ಕುತೂಹಲವನ್ನು ಜಾಗೃತಗೊಳಿಸುವುದು ಮತ್ತು ಜಾಗತಿಕ ವೈಜ್ಞಾನಿಕ ಸಮುದಾಯವನ್ನು ಮುನ್ನಡೆಸಲು ಭಾರತದ ಸಿದ್ಧತೆಯನ್ನು ಪ್ರದರ್ಶಿಸುವುದಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಅವರು ಹೇಳಿದರು. ಭಾರತವು ಇಂದು ತನ್ನ ಇತ್ತೀಚಿನ ಇತಿಹಾಸದ ಯಾವುದೇ ಒಂದು ಬಿಂದುವಿನಲ್ಲಿ ನಿಂತು ನೋಡಿದರೂ ಅದು ಈಗ  ಹೆಚ್ಚು ಬಲವಾದ, ಹೆಚ್ಚು ಗೌರವಾನ್ವಿತ ಸ್ಥಾನದಲ್ಲಿದೆ ಮತ್ತು ಮುಂಬರುವ ದಶಕವು ವೈಜ್ಞಾನಿಕ ಕಲ್ಪನೆಯನ್ನು ರಾಷ್ಟ್ರೀಯ ಉದ್ದೇಶದೊಂದಿಗೆ ಸಂಯೋಜಿಸುವವರಿಗೆ ಸೇರಿದೆ ಎಂದೂ ಅವರು ಹೇಳಿದರು.

 

****

 


(रिलीज़ आईडी: 2200149) आगंतुक पटल : 18
इस विज्ञप्ति को इन भाषाओं में पढ़ें: English , Urdu , हिन्दी , Marathi , Punjabi , Malayalam