ರೈಲ್ವೇ ಸಚಿವಾಲಯ
ಇಂದಿನಿಂದ ಆರಂಭಗೊಂಡು ಮುಂದಿನ 3 ದಿನಗಳ ಕಾಲ, ವಿವಿಧ ವಲಯಗಳಲ್ಲಿ ಭಾರತೀಯ ರೈಲ್ವೆಯು 89 ವಿಶೇಷ ರೈಲು ಸೇವೆಗಳನ್ನು (ಒಟ್ಟು 100ಕ್ಕೂ ಹೆಚ್ಚು ಟ್ರಿಪ್ ಗಳು) ನಡೆಸಲಿದೆ
ಮುಂಬೈ, ದೆಹಲಿ, ಪುಣೆ, ಹೌರಾ, ಹೈದರಾಬಾದ್ ಮುಂತಾದ ಮಹಾನಗರಗಳಿಗೆ ಬರುವ ಮತ್ತು ಅಲ್ಲಿಂದ ಹೊರಹೋಗುವ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಈ ವಿಶೇಷ ರೈಲುಗಳು ಸಹಕಾರಿಯಾಗಲಿವೆ. ಇದೇ ವೇಳೆ, ಈಶಾನ್ಯ ರೈಲ್ವೆಯು (NER) ದೆಹಲಿ ಮತ್ತು ಮುಂಬೈ ನಡುವೆ 6 ಟ್ರಿಪ್ ಗಳನ್ನು ನಡೆಸಲಿದೆ
प्रविष्टि तिथि:
06 DEC 2025 8:20PM by PIB Bengaluru
ವ್ಯಾಪಕವಾದ ವಿಮಾನ ರದ್ದತಿ ಮತ್ತು ಚಳಿಗಾಲದ ದಟ್ಟಣೆಯ ಹಿನ್ನೆಲೆಯಲ್ಲಿ, ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿರುವ ಭಾರತೀಯ ರೈಲ್ವೆಯು ಸುಗಮ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಿದೆ. ಇಂದಿನಿಂದ ಪ್ರಾರಂಭವಾಗಿ ಮುಂದಿನ ಮೂರು ದಿನಗಳ ಕಾಲ ವಿವಿಧ ವಲಯಗಳಲ್ಲಿ 89 ವಿಶೇಷ ರೈಲು ಸೇವೆಗಳು (100ಕ್ಕೂ ಹೆಚ್ಚು ಟ್ರಿಪ್‌ಗಳು) ಸಂಚರಿಸಲಿವೆ. ರೈಲು ಪ್ರಯಾಣಕ್ಕೆ ಹೆಚ್ಚುತ್ತಿರುವ ಬೇಡಿಕೆಯ ನಡುವೆ, ಪ್ರಯಾಣಿಕರಿಗೆ ಸಮರ್ಪಕ ಸಂಪರ್ಕ ಮತ್ತು ಸುಗಮ ಪ್ರಯಾಣವನ್ನು ಖಚಿತಪಡಿಸಲು ಇದು ಸಹಕಾರಿಯಾಗಲಿದೆ.
ಪ್ರಯಾಣಿಕರ ಹೆಚ್ಚುವರಿ ಬೇಡಿಕೆಯನ್ನು ಪೂರೈಸಲು ಮಧ್ಯ ರೈಲ್ವೆಯು 14 ವಿಶೇಷ ರೈಲು ಸೇವೆಗಳನ್ನು ನಿರ್ವಹಿಸಲಿದೆ. ಇವುಗಳಲ್ಲಿ ರೈಲು ಸಂಖ್ಯೆ 01413/01414 ಪುಣೆ–ಬೆಂಗಳೂರು–ಪುಣೆ (ಡಿಸೆಂಬರ್ 6 ಮತ್ತು 7 ರಂದು); 01409/01410 ಪುಣೆ–ಹಜರತ್ ನಿಜಾಮುದ್ದೀನ್–ಪುಣೆ (ಡಿಸೆಂಬರ್ 7 ಮತ್ತು 9 ರಂದು); 01019/01020 ಲೋಕಮಾನ್ಯ ತಿಲಕ್ ಟರ್ಮಿನಸ್ (LTT)–ಮಡ್ಗಾಂವ್–LTT (ಡಿಸೆಂಬರ್ 7 ಮತ್ತು 8 ರಂದು); 01077/01078 ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT)–ಹಜರತ್ ನಿಜಾಮುದ್ದೀನ್–CSMT (ಡಿಸೆಂಬರ್ 6 ಮತ್ತು 7 ರಂದು); 01015/01016 ಎಲ್ ಟಿ ಟಿ–ಲಕ್ನೋ–ಎಲ್ ಟಿ ಟಿ (ಡಿಸೆಂಬರ್ 6 ಮತ್ತು 7 ರಂದು); 01012/01011 ನಾಗ್ಪುರ–ಸಿ ಎಸ್ ಎಂ ಟಿ–ನಾಗ್ಪುರ (ಡಿಸೆಂಬರ್ 6 ಮತ್ತು 7 ರಂದು); 05587/05588 ಗೋರಖ್ ಪುರ–ಎಲ್ ಟಿ ಟಿ–ಗೋರಖ್ ಪುರ (ಡಿಸೆಂಬರ್ 7 ಮತ್ತು 9 ರಂದು); ಮತ್ತು 08245/08246 ಬಿಲಾಸ್ ಪುರ–ಎಲ್ ಟಿ ಟಿ–ಬಿಲಾಸ್ ಪುರ (ಡಿಸೆಂಬರ್ 10 ಮತ್ತು 12 ರಂದು) ರೈಲುಗಳು ಸೇರಿವೆ.
ಇತ್ತೀಚಿನ ವಿಮಾನ ರದ್ದತಿಯಿಂದ ಉಂಟಾದ ಬೇಡಿಕೆಯ ಏರಿಕೆಯನ್ನು ನಿಭಾಯಿಸಲು ಆಗ್ನೇಯ ರೈಲ್ವೆಯು ವಿಶೇಷ ರೈಲುಗಳನ್ನು ಯೋಜಿಸಿದೆ. ಇವುಗಳಲ್ಲಿ ರೈಲು ಸಂಖ್ಯೆ 08073/08074 ಸಾಂತ್ರಾಗಾಚಿ–ಯಲಹಂಕ–ಸಾಂತ್ರಾಗಾಚಿ ರೈಲು ಸೇರಿದ್ದು, 08073 ಸಾಂತ್ರಾಗಾಚಿಯಿಂದ ಡಿಸೆಂಬರ್ 7 ರಂದು ಹೊರಡಲಿದ್ದು, 08074 ಯಲಹಂಕದಿಂದ ಡಿಸೆಂಬರ್ 9 ರಂದು ಹಿಂತಿರುಗಲಿದೆ. ರೈಲು ಸಂಖ್ಯೆ 02870/02869 ಹೌರಾ–ಸಿ ಎಸ್ ಎಂ ಟಿ–ಹೌರಾ ವಿಶೇಷ ರೈಲು, ಇದರಲ್ಲಿ 02870 ಹೌರಾದಿಂದ ಡಿಸೆಂಬರ್ 6 ರಂದು ಮತ್ತು 02869 ಸಿ ಎಸ್ ಎಂ ಟಿ ಯಿಂದ ಡಿಸೆಂಬರ್ 8 ರಂದು ಹೊರಡಲಿದೆ. ರೈಲು ಸಂಖ್ಯೆ 07148/07149 ಚೆರ್ಲಪಲ್ಲಿ–ಶಾಲಿಮಾರ್–ಚೆರ್ಲಪಲ್ಲಿ ರೈಲು, ಇದರಲ್ಲಿ 07148 ಚೆರ್ಲಪಲ್ಲಿಯಿಂದ ಡಿಸೆಂಬರ್ 6 ರಂದು ಮತ್ತು 07149 ಶಾಲಿಮಾರ್ ನಿಂದ ಡಿಸೆಂಬರ್ 8 ರಂದು ಹೊರಡಲಿದೆ.
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು, ದಕ್ಷಿಣ ಮಧ್ಯ ರೈಲ್ವೆಯು ಇಂದು, 2025 ರ ಡಿಸೆಂಬರ್ 6 ರಂದು ಮೂರು ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಚೆರ್ಲಪಲ್ಲಿಯಿಂದ ಶಾಲಿಮಾರ್ ಗೆ ರೈಲು ಸಂಖ್ಯೆ 07148, ಸಿಕಂದರಾಬಾದ್‌ನಿಂದ ಚೆನ್ನೈ ಎಗ್ಮೋರ್‌ಗೆ ರೈಲು ಸಂಖ್ಯೆ 07146 ಮತ್ತು ಹೈದರಾಬಾದ್ ನಿಂದ ಮುಂಬೈ ಎಲ್ ಟಿ ಟಿ ಗೆ ರೈಲು ಸಂಖ್ಯೆ 07150 ಇಂದು ಹೊರಟಿವೆ.
ಪೂರ್ವ ರೈಲ್ವೆಯು ಹೌರಾ, ಸೀಲ್ದಾ ಮತ್ತು ಪ್ರಮುಖ ಸ್ಥಳಗಳ ನಡುವೆ ವಿಶೇಷ ರೈಲು ಸೇವೆಗಳನ್ನು ನಡೆಸಲಿದೆ. ರೈಲು ಸಂಖ್ಯೆ 03009/03010 ಹೌರಾ–ನವ ದೆಹಲಿ–ಹೌರಾ ವಿಶೇಷ ರೈಲು, ಇದರಲ್ಲಿ 03009 ಹೌರಾದಿಂದ ಡಿಸೆಂಬರ್ 6 ರಂದು ಹೊರಡಲಿದ್ದು, 03010 ನವ ದೆಹಲಿಯಿಂದ ಡಿಸೆಂಬರ್ 8 ರಂದು ಹೊರಡಲಿದೆ. ರೈಲು ಸಂಖ್ಯೆ 03127/03128 ಸೀಲ್ದಾ–ಎಲ್ ಟಿ ಟಿ–ಸೀಲ್ದಾ ವಿಶೇಷ ರೈಲು, ಇದರಲ್ಲಿ 03127 ಸೀಲ್ದಾದಿಂದ ಡಿಸೆಂಬರ್ 6 ರಂದು ಹೊರಡಲಿದ್ದು, 03128 ಎಲ್ ಟಿ ಟಿ ಯಿಂದ ಡಿಸೆಂಬರ್ 9 ರಂದು ಹೊರಡಲಿದೆ.
ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ಪಶ್ಚಿಮ ರೈಲ್ವೆಯು ಏಳು ವಿಶೇಷ ರೈಲುಗಳನ್ನು ನಿರ್ವಹಿಸಲಿದೆ. ಇವುಗಳಲ್ಲಿ ರೈಲು ಸಂಖ್ಯೆ 09001/09002 ಮುಂಬೈ ಸೆಂಟ್ರಲ್–ಭಿವಾನಿ ಸೂಪರ್ ಫಾಸ್ಟ್ ಸ್ಪೆಷಲ್ (ವಾರಕ್ಕೆ ಎರಡು ಬಾರಿ) ಸೇರಿದೆ. ಇದು ಡಿಸೆಂಬರ್ 9 ಮತ್ತು 30 ರ ನಡುವೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಮುಂಬೈ ಸೆಂಟ್ರಲ್ ನಿಂದ ಹಾಗೂ ಡಿಸೆಂಬರ್ 10 ಮತ್ತು 31 ರ ನಡುವೆ ಪ್ರತಿ ಬುಧವಾರ ಮತ್ತು ಶನಿವಾರ ಭಿವಾನಿಯಿಂದ ಸಂಚರಿಸಲಿದ್ದು, ಒಟ್ಟು 14 ಟ್ರಿಪ್ ಗಳನ್ನು ಪೂರ್ಣಗೊಳಿಸಲಿದೆ. ಈ ರೈಲು ಮಾರ್ಗಮಧ್ಯೆ ಎರಡೂ ದಿಕ್ಕುಗಳಲ್ಲಿ ಬೋರಿವಲಿ, ಪಾಲ್ಘರ್, ವಾಪಿ, ವಲ್ಸಾದ್, ಸೂರತ್, ಭರೂಚ್, ವಡೋದರಾ, ರತ್ಲಾಂ, ಮಂದಸೋರ್, ನಿಮಾಚ್, ಚಿತ್ತೋರ್ ಗಢ, ಭಿಲ್ವಾರಾ, ಬಿಜಯನಗರ, ನಸಿರಾಬಾದ್, ಅಜ್ಮೀರ್, ಕಿಶನ್‌ಗಢ್, ಜೈಪುರ, ಗಾಂಧಿನಗರ ಜೈಪುರ, ಬಂದಿಕುಯಿ, ಅಲ್ವಾರ್, ರೇವಾರಿ, ಕೋಸ್ಲಿ ಮತ್ತು ಚಾರ್ಖಿ ದಾದ್ರಿ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ರೈಲು ಸಂಖ್ಯೆ 09003/09004 ಮುಂಬೈ ಸೆಂಟ್ರಲ್–ಶಕುರ್ ಬಸ್ತಿ ಸೂಪರ್ ಫಾಸ್ಟ್ ಸ್ಪೆಷಲ್, ಮುಂಬೈ ಸೆಂಟ್ರಲ್ ನಿಂದ ಡಿಸೆಂಬರ್ 8 ಮತ್ತು 29 ರ ನಡುವೆ ಮಂಗಳವಾರ ಮತ್ತು ಶುಕ್ರವಾರ ಹೊರತುಪಡಿಸಿ ಪ್ರತಿದಿನ ಸಂಚರಿಸಲಿದೆ. ಹಾಗೆಯೇ, ಶಕುರ್ ಬಸ್ತಿಯಿಂದ ಡಿಸೆಂಬರ್ 9 ಮತ್ತು 30 ರ ನಡುವೆ ಬುಧವಾರ ಮತ್ತು ಶನಿವಾರ ಹೊರತುಪಡಿಸಿ ಪ್ರತಿದಿನ ಸಂಚರಿಸಲಿದ್ದು, ಒಟ್ಟು 32 ಟ್ರಿಪ್ ಗಳನ್ನು ಮಾಡಲಿದೆ. ಇದಕ್ಕೆ ಬುಕ್ಕಿಂಗ್ ಡಿಸೆಂಬರ್ 6 ರಂದು ಪ್ರಾರಂಭವಾಗುತ್ತದೆ. ರೈಲು ಸಂಖ್ಯೆ 09730/09729 ಬಾಂದ್ರಾ ಟರ್ಮಿನಸ್–ದುರ್ಗಾಪುರ ಸೂಪರ್ ಫಾಸ್ಟ್ ಸ್ಪೆಷಲ್ ರೈಲಿನಲ್ಲಿ, 09730 ಬಾಂದ್ರಾ ಟರ್ಮಿನಸ್ ನಿಂದ ಡಿಸೆಂಬರ್ 8 ರಂದು ಮತ್ತು 09729 ದುರ್ಗಾಪುರದಿಂದ ಡಿಸೆಂಬರ್ 7 ರಂದು ಹೊರಡಲಿದೆ. ಇದಕ್ಕೂ ಡಿಸೆಂಬರ್ 6 ರಂದು ಬುಕ್ಕಿಂಗ್ ತೆರೆಯಲಿದೆ. ಈ ರೈಲು ಫಸ್ಟ್ ಎಸಿ, ಎಸಿ-2 ಟೈರ್, ಎಸಿ-3 ಟೈರ್, ಸ್ಲೀಪರ್ ಕ್ಲಾಸ್ ಮತ್ತು ಜನರಲ್ ಸೆಕೆಂಡ್ ಕ್ಲಾಸ್ ಕೋಚ್ ಗಳನ್ನು ಒಳಗೊಂಡಿರುತ್ತದೆ.
ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿ, ಭಾರತೀಯ ರೈಲ್ವೆಯು ಗೋರಖ್ ಪುರದಿಂದ ಹೆಚ್ಚುವರಿ ಸೇವೆಗಳನ್ನು ನಿರ್ವಹಿಸಲಿದೆ. ರೈಲು ಸಂಖ್ಯೆ 05591/05592 ಗೋರಖ್‌ಪುರ–ಆನಂದ್ ವಿಹಾರ್ ಟರ್ಮಿನಲ್–ಗೋರಖ್‌ಪುರ ರೈಲು ಎರಡು ಟ್ರಿಪ್‌ಗಳಿಗೆ ಸಂಚರಿಸಲಿದ್ದು, ಗೋರಖ್ ಪುರದಿಂದ ಡಿಸೆಂಬರ್ 7 ಮತ್ತು 8 ರಂದು ಹಾಗೂ ಆನಂದ್ ವಿಹಾರ್ ಟರ್ಮಿನಲ್ ನಿಂದ ಡಿಸೆಂಬರ್ 8 ಮತ್ತು 9 ರಂದು ಹೊರಡಲಿವೆ. ರೈಲು ಸಂಖ್ಯೆ 05587/05588 ಗೋರಖ್ ಪುರ–ಎಲ್ ಟಿ ಟಿ–ಗೋರಖ್ ಪುರ ರೈಲು, ಗೋರಖ್ ಪುರದಿಂದ ಡಿಸೆಂಬರ್ 7 ರಂದು ಮತ್ತು ಎಲ್ ಟಿ ಟಿ ಯಿಂದ ಡಿಸೆಂಬರ್ 9 ರಂದು ಹೊರಡಲಿದೆ.
ಬಿಹಾರದಿಂದ ಚಳಿಗಾಲದ ಪ್ರಯಾಣವನ್ನು ಸುಗಮಗೊಳಿಸಲು, ಪೂರ್ವ ಮಧ್ಯ ರೈಲ್ವೆಯು ಪಾಟ್ನಾ ಮತ್ತು ದರ್ಬಾಂಗ್ ನಿಂದ ಆನಂದ್ ವಿಹಾರ್ ಟರ್ಮಿನಲ್ ಗೆ ವಿಶೇಷ ರೈಲುಗಳನ್ನು ಓಡಿಸಲಿದೆ. ರೈಲು ಸಂಖ್ಯೆ 02309/02310 ಪಾಟ್ನಾ–ಆನಂದ್ ವಿಹಾರ್ ಟರ್ಮಿನಲ್–ಪಾಟ್ನಾ ರೈಲು, ಪಾಟ್ನಾದಿಂದ ಡಿಸೆಂಬರ್ 6 ಮತ್ತು 8 ರಂದು ಹಾಗೂ ಆನಂದ್ ವಿಹಾರ್ ಟರ್ಮಿನಲ್ ನಿಂದ ಡಿಸೆಂಬರ್ 7 ಮತ್ತು 9 ರಂದು ಹೊರಡಲಿವೆ. ರೈಲು ಸಂಖ್ಯೆ 02395/02396 ಪಾಟ್ನಾ–ಆನಂದ್ ವಿಹಾರ್ ಟರ್ಮಿನಲ್–ಪಾಟ್ನಾ ರೈಲು, ಇದರಲ್ಲಿ 02395 ಪಾಟ್ನಾದಿಂದ ಡಿಸೆಂಬರ್ 7 ರಂದು ಮತ್ತು 02396 ಆನಂದ್ ವಿಹಾರ್ ಟರ್ಮಿನಲ್ ನಿಂದ ಡಿಸೆಂಬರ್ 8 ರಂದು ಹೊರಡಲಿದೆ. ರೈಲು ಸಂಖ್ಯೆ 05563/05564 ದರ್ಬಾಂಗ್–ಆನಂದ್ ವಿಹಾರ್ ಟರ್ಮಿನಲ್–ದರ್ಬಾಂಗ್ ರೈಲು, ಇದರಲ್ಲಿ 05563 ದರ್ಬಾಂಗ್ ನಿಂದ ಡಿಸೆಂಬರ್ 7 ರಂದು ಮತ್ತು 05564 ಆನಂದ್ ವಿಹಾರ್ ಟರ್ಮಿನಲ್ ನಿಂದ ಡಿಸೆಂಬರ್ 9 ರಂದು ಹೊರಡಲಿದೆ.
ಮುಂಬರುವ ಪ್ರಯಾಣದ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ವಾಯುವ್ಯ ರೈಲ್ವೆಯು 'ಒಂದು ಟ್ರಿಪ್' (one-trip basis) ಆಧಾರದ ಮೇಲೆ ಎರಡು ವಿಶೇಷ ದರದ ವಿಶೇಷ ರೈಲುಗಳನ್ನು ಓಡಿಸಲಿದೆ. ರೈಲು ಸಂಖ್ಯೆ 04725 ಹಿಸಾರ್–ಖಡ್ಕಿ ವಿಶೇಷ ರೈಲು ಡಿಸೆಂಬರ್ 7, 2025 ರಂದು ಹಿಸಾರ್ ನಿಂದ ಹೊರಡಲಿದ್ದು, ಹಿಂದಿರುಗುವ ರೈಲು ಸಂಖ್ಯೆ 04726 ಖಡ್ಕಿ–ಹಿಸಾರ್ ವಿಶೇಷ ರೈಲು ಡಿಸೆಂಬರ್ 8, 2025 ರಂದು ಖಡ್ಕಿಯಿಂದ ಹೊರಡಲಿದೆ. ವಾಯುವ್ಯ ರೈಲ್ವೆಯು ಒಂದು ಟ್ರಿಪ್ ಸಂಚರಿಸುವ ವಿಶೇಷ ದರದ ವಿಶೇಷ ರೈಲು ಸಂಖ್ಯೆ 09729 ದುರ್ಗಾಪುರ–ಬಾಂದ್ರಾ ಟರ್ಮಿನಸ್ ವಿಶೇಷ ರೈಲನ್ನು ಸಹ ಓಡಿಸಲಿದ್ದು, ಇದು ಡಿಸೆಂಬರ್ 7, 2025 ರಂದು ದುರ್ಗಾಪುರದಿಂದ ಹೊರಡಲಿದೆ. ಹಿಂದಿರುಗುವ ರೈಲು ಸಂಖ್ಯೆ 09730 ಬಾಂದ್ರಾ ಟರ್ಮಿನಸ್–ದುರ್ಗಾಪುರ ವಿಶೇಷ ರೈಲು, ಡಿಸೆಂಬರ್ 8, 2025 ರಂದು ಬಾಂದ್ರಾ ಟರ್ಮಿನಸ್ ನಿಂದ ಹೊರಡಲಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ, ಉತ್ತರ ಮಧ್ಯ ರೈಲ್ವೆಯು ಪ್ರಯಾಗ್ ರಾಜ್ ಮತ್ತು ನವ ದೆಹಲಿ ನಡುವೆ ವಿಶೇಷ ರೈಲುಗಳನ್ನು ನಿರ್ವಹಿಸಲಿದೆ. ರೈಲು ಸಂಖ್ಯೆ 02417 ಪ್ರಯಾಗ್‌ರಾಜ್‌ನಿಂದ ಡಿಸೆಂಬರ್ 6 ಮತ್ತು 8 ರಂದು ಹೊರಡಲಿದ್ದು, ರೈಲು ಸಂಖ್ಯೆ 02418 ಆಗಿ ನವ ದೆಹಲಿಯಿಂದ ಡಿಸೆಂಬರ್ 7 ಮತ್ತು 9 ರಂದು ಹಿಂತಿರುಗಲಿದೆ. ಇದು ಎರಡೂ ದಿಕ್ಕುಗಳಲ್ಲಿ ಒಟ್ಟು ಎರಡು ಟ್ರಿಪ್‌ಗಳನ್ನು ಪೂರ್ಣಗೊಳಿಸಲಿದೆ. ಅದೇ ರೀತಿ, ರೈಲು ಸಂಖ್ಯೆ 02275 ಪ್ರಯಾಗ್ ರಾಜ್ ನಿಂದ ಡಿಸೆಂಬರ್ 7 ರಂದು ಹೊರಡಲಿದ್ದು, ರೈಲು ಸಂಖ್ಯೆ 02276 ಆಗಿ ನವ ದೆಹಲಿಯಿಂದ ಡಿಸೆಂಬರ್ 8 ರಂದು ಹಿಂತಿರುಗಲಿದೆ. ಇದು ಎರಡೂ ಕಡೆ ತಲಾ ಒಂದು ಟ್ರಿಪ್ ಸಂಚರಿಸಲಿದೆ.
ಉತ್ತರ ರೈಲ್ವೆಯು ಡಿಸೆಂಬರ್ 6, 2025 ರಂದು 02439 ನವ ದೆಹಲಿ–ಶಹೀದ್ ಕ್ಯಾಪ್ಟನ್ ತುಷಾರ್ ಮಹಾಜನ್ ಉಧಂಪುರ ವಂದೇ ಭಾರತ್ ರೈಲನ್ನು ಹಾಗೂ ಅದೇ ದಿನಾಂಕದಂದು ಹಿಂದಿರುಗುವ 02440 ಉಧಂಪುರ–ನವ ದೆಹಲಿ ವಂದೇ ಭಾರತ್ ರೈಲನ್ನು ಓಡಿಸಲಿದೆ. ಇದು ರಾಷ್ಟ್ರ ರಾಜಧಾನಿ ಮತ್ತು ಜಮ್ಮು ಮತ್ತು ಕಾಶ್ಮೀರದ ನಡುವೆ ವೇಗವಾದ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸುತ್ತದೆ. ಉತ್ತರ ಮತ್ತು ಪಶ್ಚಿಮದ ನಡುವಿನ ದೂರದ ಪ್ರಯಾಣವನ್ನು ಸುಗಮಗೊಳಿಸಲು, ರೈಲು ಸಂಖ್ಯೆ 04002 ನವ ದೆಹಲಿ–ಮುಂಬೈ ಸೆಂಟ್ರಲ್ ಡಿಸೆಂಬರ್ 6, 2025 ರಂದು ಕಾರ್ಯನಿರ್ವಹಿಸಲಿದ್ದು, ಹಿಂದಿರುಗುವ ರೈಲು ಸಂಖ್ಯೆ 04001 ಮುಂಬೈ ಸೆಂಟ್ರಲ್–ನವ ದೆಹಲಿ ಡಿಸೆಂಬರ್ 7, 2025 ರಂದು ಸಂಚರಿಸಲಿದೆ. ಉತ್ತರ ರೈಲ್ವೆಯು ದೆಹಲಿಯನ್ನು ದಕ್ಷಿಣ ರೈಲ್ವೆಯೊಂದಿಗೆ ಸಂಪರ್ಕಿಸಲು ಡಿಸೆಂಬರ್ 6, 2025 ರಂದು 04080 ಹಜರತ್ ನಿಜಾಮುದ್ದೀನ್–ತಿರುವನಂತಪುರಂ ಸೆಂಟ್ರಲ್ ವಿಶೇಷ ರೈಲನ್ನು ಓಡಿಸಲಿದೆ. ದಕ್ಷಿಣ ಮಧ್ಯ ರೈಲ್ವೆ ನೆಟ್ ವರ್ಕ್ ನಲ್ಲಿ ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸಲು, ರೈಲು ಸಂಖ್ಯೆ 07703 ಚಲಿಪಲ್ಲಿ–ಜಲಿಮಾರ್ ರೈಲು ಡಿಸೆಂಬರ್ 7, 2025 ರಂದು ಕಾರ್ಯನಿರ್ವಹಿಸಲಿದೆ.
ಚಳಿಗಾಲದ ಜನದಟ್ಟಣೆಯನ್ನು ನಿರ್ವಹಿಸಲು, ದುರ್ಗ್ ಮತ್ತು ಹಜರತ್ ನಿಜಾಮುದ್ದೀನ್ ನಡುವೆ ವಿಶೇಷ ರೈಲು ಓಡಲಿದೆ. ರೈಲು 08760 ಡಿಸೆಂಬರ್ 7, 2025 ರಂದು ದುರ್ಗ್ ನಿಂದ ಹೊರಡಲಿದೆ ಮತ್ತು ರೈಲು 08761 ಡಿಸೆಂಬರ್ 8, 2025 ರಂದು ಹಜರತ್ ನಿಜಾಮುದ್ದೀನ್ ನಿಂದ ಹೊರಡಲಿದೆ.
*****
(रिलीज़ आईडी: 2199921)
आगंतुक पटल : 10