ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಹಣಕಾಸು ಲಭ್ಯತೆಯನ್ನು ಸುಧಾರಿಸಲು ಎಂ ಎಸ್ ಎಂ ಇಗಳಿಗೆ ಬೆಂಬಲ ನೀಡಲು ಹಲವು ಉಪಕ್ರಮಗಳನ್ನು ಕೈಗೊಂಡ ಸರ್ಕಾರ
ಅತಿ ಸಣ್ಣ ಮತ್ತು ಸಣ್ಣ ಕೈಗಾರಿಕೆಗಳಿಗೆ ಸಾಲ ಖಾತ್ರಿ ಟ್ರಸ್ಟ್ ನಿಧಿ (ಸಿ ಜಿ ಟಿ ಎಂ ಎಸ್ ಇ) ಮಿತಿ 5 ಕೋಟಿ ರೂ.ಗಳಿಂದ 10 ಕೋಟಿ ರೂ.ಗಳಿಗೆ ಹೆಚ್ಚಳ
ಪ್ರಧಾನಮಂತ್ರಿ ಅವರ ಉದ್ಯೋಗ ಸೃಷ್ಟಿ ಕಾರ್ಯಕ್ರಮ (ಪಿಎಂಇಜಿಪಿ) ಅಡಿಯಲ್ಲಿ ವಿತರಿಸಲಾದ ಕೃಷಿಯೇತರ ವಲಯದಲ್ಲಿ ಶೇ.35ರವರೆಗೆ ಮಾರ್ಜಿನ್ ಮನಿ (ಎಂಎಂ) ಸಬ್ಸಿಡಿ
18 ಸಾಂಪ್ರದಾಯಿಕ ವ್ಯಾಪಾರಗಳ ಕುಶಲಕರ್ಮಿಗಳಿಗೆ ಶೇ 8ರವರೆಗೆ ಬಡ್ಡಿ ವಿನಾಯ್ತಿಯೊಂದಿಗೆ 3 ಲಕ್ಷ ರೂ.ಗಳವರೆಗೆ ಪ್ರಧಾನ ಮಂತ್ರಿ ವಿಶ್ವಕರ್ಮ ಅಡಿಯಲ್ಲಿ ಸಾಲ ಸೌಲಭ್ಯ
ಸ್ವಯಂ ನಿರ್ಭರ ಭಾರತ (ಎಸ್ ಆರ್ ಐ) ನಿಧಿಯಿಂದ ಎಂಎಸ್ ಎಂಇ ಗಳಲ್ಲಿ 50,000 ಕೋಟಿ ರೂ. ಈಕ್ವಿಟಿ ನಿಧಿಯಾಗಿ ಸೇರ್ಪಡೆ
प्रविष्टि तिथि:
05 DEC 2025 11:56AM by PIB Bengaluru
ಎಂ ಎಸ್ ಎಂ ಇ ವಲಯ ಸೇರಿದಂತೆ ನೀತಿ ನಿರೂಪಣೆಯಲ್ಲಿ ಪಾಲುದಾರರ ಸಮಾಲೋಚನೆ ನಿರಂತರ ಪ್ರಕ್ರಿಯೆಯಾಗಿದೆ. ಹಣಕಾಸು ಲಭ್ಯತೆಯನ್ನು ಸುಧಾರಿಸಲು ಭಾರತ ಸರ್ಕಾರವು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂ ಎಸ್ ಎಂ ಇ) ಬೆಂಬಲ ನೀಡಲು ಹಲವು ಉಪಕ್ರಮಗಳು ಮತ್ತು ಕ್ರಮಗಳನ್ನು ತೆಗೆದುಕೊಂಡಿದೆ. ಅವುಗಳಲ್ಲಿ ಕೆಲವು:
- ಭಾರತೀಯ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್ ಐ ಡಿ ಬಿ ಐ) ಸಚಿವಾಲಯವು ಜಂಟಿಯಾಗಿ 2000 ನೇ ಇಸವಿಯಲ್ಲಿ ಅತಿಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ (ಎಂ ಎಲ್ ಐ ಗಳು) ಸದಸ್ಯ ಸಾಲ ನೀಡುವ ಸಂಸ್ಥೆಗಳು (ಎಂ ಎಲ್ ಐಗಳು) ಸಾಲ ಖಾತರಿ ಯೋಜನೆ (ಸಿಜಿಎಸ್) ಅಡಿಯಲ್ಲಿ ಮೇಲಾಧಾರ ಭದ್ರತೆ ಅಥವಾ ಮೂರನೇ ವ್ಯಕ್ತಿಯ ಖಾತರಿಯ ಅಗತ್ಯವಿಲ್ಲದೆ ಸಾಲ ಖಾತರಿಗಳನ್ನು ಒದಗಿಸಲು 2000ನೇ ಇಸವಿಯಲ್ಲಿ ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ (ಸಿಜಿಟಿಎಂಎಸ್ ಇ) ಕ್ರೆಡಿಟ್ ಗ್ಯಾರಂಟಿ ಟ್ರಸ್ಟ್ ಫಂಡ್ ಅನ್ನು ಸ್ಥಾಪಿಸಿತು. ಇತ್ತೀಚೆಗೆ ಗ್ಯಾರಂಟಿ ಮಿತಿಯನ್ನು 5 ಕೋಟಿ ರೂ,ಗಳಿಂದ ರೂ. 10 ಕೋಟಿಗೆ ಹೆಚ್ಚಿಸಲಾಗಿದೆ.
- ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮವು ಕೃಷಿಯೇತರ ವಲಯದಲ್ಲಿ ಹೊಸ ಅತಿ ಸಣ್ಣ ಉದ್ಯಮಗಳನ್ನು ಸ್ಥಾಪಿಸಲು ಮಾರ್ಜಿನ್ ಮನಿ ಸಬ್ಸಿಡಿಯನ್ನು ಶೇ.35ರವರೆಗೆ ಒದಗಿಸುತ್ತದೆ, ಯೋಜನಾ ವೆಚ್ಚ ಕ್ರಮವಾಗಿ ಉತ್ಪಾದನೆ ಮತ್ತು ಸೇವಾ ಉದ್ಯಮಗಳಿಗೆ 50 ಲಕ್ಷ ರೂ. ಮತ್ತು 20 ಲಕ್ಷ ರೂ. ನಿಗದಿಪಡಿಸಲಾಗಿದೆ.
- ತಮ್ಮ ಕೈಗಳು ಮತ್ತು ಸಾಧನಗಳಿಂದ ಕೆಲಸ ಮಾಡುವ 18 ಸಾಂಪ್ರದಾಯಿಕ ವ್ಯಾಪಾರಗಳ ಕುಶಲಕರ್ಮಿಗಳು ಮತ್ತು ಕಸಬುದಾರರಿಗೆ ಸಮಗ್ರ ಬೆಂಬಲವನ್ನು ಒದಗಿಸಲು ಪಿಎಂ ವಿಶ್ವಕರ್ಮ ಯೋಜನೆಯನ್ನು 2023ರ ಸೆ. 17 ರಂದು ಆರಂಭಿಸಲಾಯಿತು. ಈ ಯೋಜನೆಯು ಗರಿಷ್ಠ ಶೇ.8 ವರೆಗಿನ ಬಡ್ಡಿ ವಿನಾಯ್ತಿಯೊಂದಿಗೆ 3 ಲಕ್ಷ ರೂ,ಗಳವರೆಗೆ ಸಾಲಗಳನ್ನು ಒದಗಿಸುವುದನ್ನು ಒಳಗೊಂಡಿದೆ.
- ಸ್ವಾವಲಂಬಿ ಭಾರತ (ಎಸ್ ಆರ್ ಐ) ನಿಧಿಯನ್ನು ಎಂಎಸ್ ಎಂಇಗಳಲ್ಲಿ 50,000 ಕೋಟಿ ರೂ.ಗಳನ್ನು ಈಕ್ವಿಟಿ ನಿಧಿಯಾಗಿ ತುಂಬಲು ಸ್ಥಾಪಿಸಲಾಗಿದೆ. ಭಾರತ ಸರ್ಕಾರದಿಂದ 10,000 ಕೋಟಿ ರೂ.ಗಳು ಮತ್ತು ಖಾಸಗಿ ಷೇರು/ವೆಂಚರ್ ಕ್ಯಾಪಿಟಲ್ ಫಂಡ್‌ಗಳ ಮೂಲಕ 40,000 ಕೋಟಿ ರೂ.ಗಳು ಸೇರಿವೆ
ಅಲ್ಲದೆ ಎಂಎಸ್ ಎಂಇ ಗಳಿಗೆ ಮೇಲಾಧಾರ ರಹಿತ ಸಾಲ, ವ್ಯಾಪಾರ ಸ್ವೀಕಾರಾರ್ಹ ರಿಯಾಯಿತಿ ವ್ಯವಸ್ಥೆ (ಟಿ ಆರ್ ಇ ಡಿ ಎಸ್) ಅನುಷ್ಠಾನ, ಯಂತ್ರೋಪಕರಣಗಳು ಮತ್ತು ಸಾಧನಗಳನ್ನು ಖರೀದಿಸಲು 100 ಕೋಟಿ ರೂ.ಗಳವರೆಗೆ ಸಾಲ ಅಗತ್ಯವಿರುವ ಯೋಜನೆಗಳಿಗೆ ಮ್ಯೂಚುಯಲ್ ಕ್ರೆಡಿಟ್ ಗ್ಯಾರಂಟಿ ಯೋಜನೆ, ಬ್ಯಾಂಕ್‌ಗಳಿಂದ ಸಾಲ ನಿರ್ಧಾರಗಳಿಗೆ ಸಮಯ ಮಿತಿಯನ್ನು ಕಡಿಮೆ ಮಾಡುವುದು ಇತ್ಯಾದಿ ಸೇರಿದಂತೆ ಎಂಎಸ್ ಎಂಇ ಗಳಿಗೆ ಸಾಲದ ಲಭ್ಯತೆಯನ್ನು ಹೆಚ್ಚಿಸಲು ಸರ್ಕಾರವು ಹಲವಾರು ಇತರ ಕ್ರಮಗಳನ್ನು ತೆಗೆದುಕೊಂಡಿದೆ
ಈ ಮಾಹಿತಿಯನ್ನು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಖಾತೆ ರಾಜ್ಯ ಸಚಿವರಾದ (ಸುಶ್ರೀ ಶೋಭಾ ಕರಂದ್ಲಾಜೆ) ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
*****
(रिलीज़ आईडी: 2199321)
आगंतुक पटल : 5