ಗ್ರಾಮೀಣಾಭಿವೃದ್ಧಿ ಸಚಿವಾಲಯ
azadi ka amrit mahotsav

ಪ್ರಮುಖ ಡಿಜಿಟಲ್ ಭೂ ಸುಧಾರಣಾ ಉಪಕ್ರಮಗಳ ಉದ್ಘಾಟನೆ: ನಗರ ಭೂ ಆಡಳಿತಕ್ಕಾಗಿ ನಕ್ಷಾ ಮತ್ತು ಲ್ಯಾಂಡ್‌ ಸ್ಟ್ಯಾಕ್ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಕೇಂದ್ರ  ಗ್ರಾಮೀಣಾಭಿವೃದ್ಧಿ ಸಚಿವಾಲಯದ ಭೂ ಸಂಪನ್ಮೂಲ ಇಲಾಖೆ (ಡಿ.ಒ.ಎಲ್.ಆರ್) ಆಯೋಜಿಸಲಿದೆ

प्रविष्टि तिथि: 02 DEC 2025 12:45PM by PIB Bengaluru

 

ನಕ್ಷ - ರಾಷ್ಟ್ರೀಯ ಭೂಗೋಳಿಕ ಜ್ಞಾನ ಆಧಾರಿತ ನಗರ ಜನವಸತಿ ಮತ್ತು  ಭೂ ಸಮೀಕ್ಷೆಯ (ಲ್ಯಾಂಡ್ ಸ್ಟ್ಯಾಕ್) ಕುರಿತು ಪ್ರಮುಖ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಭೂ ಸಂಪನ್ಮೂಲ ಇಲಾಖೆಯು (ಡಿ.ಒ.ಎಲ್.ಆರ್), ಡಿಸೆಂಬರ್ 3, 2025 ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಲಿದೆ. ಈ ವಿಚಾರ ಸಂಕಿರಣವು ಜಿಯೋಸ್ಮಾರ್ಟ್ ಇಂಡಿಯಾ 2025 ಸಮ್ಮೇಳನ ಮತ್ತು ಪ್ರದರ್ಶನದೊಳಗೆ ಒಂದು ಮೀಸಲಾದ ವೇದಿಕೆಯಾಗಿದ್ದು, ನಗರ ಭೂ ದಾಖಲೆಗಳನ್ನು ಪರಿವರ್ತಿಸಲು ಮತ್ತು ರಾಷ್ಟ್ರದಾದ್ಯಂತ ನಾಗರಿಕ ಸೇವೆಗಳನ್ನು ಹೆಚ್ಚಿಸಲು ಜಿಯೋಸ್ಪೇಷಿಯಲ್ ತಂತ್ರಜ್ಞಾನಗಳ ಅಳವಡಿಕೆಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿದೆ.

ರಾಷ್ಟ್ರೀಯ ವಿಚಾರ ಸಂಕಿರಣವು ಪ್ರಮುಖ ನೀತಿ ನಿರೂಪಕರು, ಸರ್ವೇ ಆಫ್ ಇಂಡಿಯಾದ ವಿಷಯ /ಕ್ಷೇತ್ರದ ತಜ್ಞರು, ರಾಜ್ಯ ಕಂದಾಯ/ಭೂ ದಾಖಲೆಗಳ ಅಧಿಕಾರಿಗಳು ಮತ್ತು ಉದ್ಯಮದ ನಾಯಕರನ್ನು ಆರು ವಿವಿಧ ನಿರ್ಣಾಯಕ ಅಧಿವೇಶನಗಳಲ್ಲಿ ತೀವ್ರ ಚರ್ಚೆ ಮೂಲಕ ಒಟ್ಟುಗೂಡಿಸಲಿದೆ.

ವಿಚಾರ ಸಂಕಿರಣದ ಪ್ರಮುಖ ಮುಖ್ಯಾಂಶಗಳು

1. ನಕ್ಷ ಕರಡು(ಪೈಲಟ್) ಯೋಜನೆಯ ವಿಮರ್ಶೆ ಮತ್ತು ಸ್ಕೇಲಿಂಗ್-ಅಪ್: 157ಕ್ಕೂ ಹೆಚ್ಚು ನಗರಗಳಲ್ಲಿ ನಿಖರವಾದ ಭೂ ನಕ್ಷೆಗಾಗಿ ಆಧುನಿಕ ವೈಮಾನಿಕ ಹಾರಾಟ ಮತ್ತು ವೈಶಿಷ್ಟ್ಯ ಹೊರತೆಗೆಯುವ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ನಕ್ಷ ಕರಡು/ಪೈಲಟ್ ಕಾರ್ಯಕ್ರಮದ ಸಮಗ್ರ ವಿಮರ್ಶೆಯನ್ನು ಕೈಗೊಳ್ಳಲಾಗುವುದು. ಚರ್ಚೆಗಳು ತಾಂತ್ರಿಕ ಸವಾಲುಗಳು, ದಟ್ಟವಾದ ನಗರ ಪರಿಸರಗಳಲ್ಲಿ ಡೇಟಾ ನಿಖರತೆಯನ್ನು ಖಚಿತಪಡಿಸುವುದು ಮತ್ತು ವೈಮಾನಿಕ ಸಮೀಕ್ಷೆಗಳನ್ನು ನೆಲದ ವಾಸ್ತವ ಮತ್ತು ಅಸ್ತಿತ್ವದಲ್ಲಿರುವ ಕ್ಯಾಡಾಸ್ಟ್ರಲ್ ನಕ್ಷೆಗಳೊಂದಿಗೆ ಜೋಡಿಸುವುದರ ಮೇಲೆ ಕೇಂದ್ರೀಕರಿಸಲಿದೆ.

2. ಲ್ಯಾಂಡ್ ಸ್ಟ್ಯಾಕ್ - ಭವಿಷ್ಯದ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು: ವಿಚಾರ ಸಂಕಿರಣವು ಭಾರತದ ಏಕೀಕೃತ ಡಿಜಿಟಲ್ ಭೂ ಪರಿಸರ ವ್ಯವಸ್ಥೆಯಾಗಿ ಕಲ್ಪಿಸಲಾದ ಲ್ಯಾಂಡ್ ಸ್ಟ್ಯಾಕ್ ಅನ್ನು ಅಭಿವೃದ್ಧಿಪಡಿಸುವ ಕುರಿತು ಮೀಸಲಾದ ಅವಧಿಗಳನ್ನು ಒಳಗೊಂಡಿರುತ್ತದೆ. ತಜ್ಞರು ಕೋರ್ ಬೇಸ್ ಲೇಯರ್ಗಳು, ಕ್ಯಾಡಾಸ್ಟ್ರಲ್ ನಕ್ಷೆಗಳನ್ನು ಸಂಯೋಜಿಸುವ ವಾಸ್ತುಶಿಲ್ಪದ ಸವಾಲುಗಳು, ಜಿಯೋಸ್ಪೇಷಿಯಲ್ ಡೇಟಾ ಮತ್ತು ಆಡಳಿತಾತ್ಮಕ ದಾಖಲೆಗಳು ಮತ್ತು ತಡೆರಹಿತ ದತ್ತಾಂಶ ವಿನಿಮಯವನ್ನು ಖಚಿತಪಡಿಸಿಕೊಳ್ಳಲು ಸಾಮಾನ್ಯ ರಾಷ್ಟ್ರೀಯ ಮಾನದಂಡಗಳ ಅಡಿಯಲ್ಲಿ ಫೆಡರೇಟೆಡ್ ಮಾದರಿಗಳ ಅಗತ್ಯತೆಯ ಬಗ್ಗೆ ಚರ್ಚಿಸಲಿದ್ದಾರೆ.

3. ಉರ್-ಪ್ರೊ ಕಾರ್ಡ್ ಮತ್ತು ಕಾನೂನು ಚೌಕಟ್ಟಿನ ಜೋಡಣೆ: ಪ್ರಸ್ತಾವಿತ ಏಕ, ವಿಶ್ವಾಸಾರ್ಹ ಡಿಜಿಟಲ್ ಆಸ್ತಿ ದಾಖಲೆಯಾದ ಉರ್-ಪ್ರೊ ಕಾರ್ಡ್ ಮೇಲೆ ಪ್ರಾಥಮಿಕ ಗಮನವಿರುತ್ತದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೋಂದಣಿ, ರೂಪಾಂತರ, ಆಸ್ತಿ ತೆರಿಗೆ ಮತ್ತು ಕಟ್ಟಡ ಅನುಮತಿ ವ್ಯವಸ್ಥೆಗಳಲ್ಲಿ ಉರ್-ಪ್ರೊ ಕಾರ್ಡ್ ಅನ್ನು ಯಶಸ್ವಿಯಾಗಿ ಸಂಯೋಜಿಸಲು ಅಗತ್ಯವಿರುವ ಕಾನೂನು ಮತ್ತು ಸಾಂಸ್ಥಿಕ ಹೊಂದಾಣಿಕೆಗಳನ್ನು ಚರ್ಚೆಗಳು ಕೂಡಾ ಒಳಗೊಂಡಿರುತ್ತವೆ, ಇದರಿಂದಾಗಿ ನಾಗರಿಕರಿಗೆ ಸುರಕ್ಷಿತ ಮತ್ತು ವರ್ಗಾಯಿಸಬಹುದಾದ ಡಿಜಿಟಲ್ ಆಸ್ತಿ ಹಕ್ಕುಗಳನ್ನು ಸುರಕ್ಷಿತಗೊಳಿಸಬಹುದು.

4. ತಂತ್ರಜ್ಞಾನ ಪ್ರದರ್ಶನ ಮತ್ತು ಪರಸ್ಪರ ಕಾರ್ಯಸಾಧ್ಯತೆ: ಈ ಕಾರ್ಯಕ್ರಮವು ಅತ್ಯಾಧುನಿಕ ವೆಬ್ಜಿಐಎಸ್ ಪ್ಲಾಟ್ಫಾರ್ಮ್ ಮತ್ತು ಕ್ಲೌಡ್ ಸೇವೆಗಳ ಅಂತ್ಯದಿಂದ ಕೊನೆಯವರೆಗೆ ಸಂಪೂರ್ಣ ಪ್ರದರ್ಶನವನ್ನು ಒಳಗೊಂಡಿದೆ. ನಗರ ಭೂ ಆಡಳಿತದಲ್ಲಿ ಪಾರದರ್ಶಕತೆ, ನಿಖರತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲು, ನಾಗರಿಕರಿಗೆ ಜೀವನ ಸುಲಭತೆಯನ್ನು ಸುಧಾರಿಸಲು ಎಐ/ಎಂ.ಎಲ್. ವಿಶ್ಲೇಷಣೆ, 3ಡಿ ಮ್ಯಾಪಿಂಗ್ ಮತ್ತು ಕ್ಲೌಡ್ ಜಿಯೋಸ್ಪೇಷಿಯಲ್ ಸೇವೆಗಳಂತಹ ಉದಯೋನ್ಮುಖ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದರ ಮೇಲೆ ಚರ್ಚೆಗಳು ಗಮನಹರಿಸುತ್ತವೆ.

ವಿಕಸಿತ ಭಾರತದ ಪರಿಕಲ್ಪನೆ ಹಾಗೂ ದೃಷ್ಟಿಕೋನವನ್ನು ಸಾಧಿಸಲು ನಿರ್ಣಾಯಕವಾದ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಕೇಂದ್ರ ಸರ್ಕಾರದ ಬದ್ಧತೆ ಮತ್ತು ವ್ಯವಸ್ಥೆಗಳನ್ನು ಪಾರದರ್ಶಕ, ನಾಗರಿಕ-ಕೇಂದ್ರಿತವಾಗೀ “ಡಿಜಿಟಲ್ ಭೂ ಆಡಳಿತ”ದೊಂದಿಗೆ ಬದಲಾಯಿಸಲು 'ಇಡೀ ಕೇಂದ್ರ ಸರ್ಕಾರದ' ವಿಧಾನವನ್ನು ವಿಚಾರ ಸಂಕಿರಣವು ಒತ್ತಿಹೇಳುತ್ತದೆ.

 

****
 


(रिलीज़ आईडी: 2197583) आगंतुक पटल : 5
इस विज्ञप्ति को इन भाषाओं में पढ़ें: English , Urdu , हिन्दी , Tamil