ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರು ಬೇಗಂ ಖಾಲಿದಾ ಜಿಯಾ ಅವರಿಗೆ ಶೀಘ್ರ ಚೇತರಿಕೆಗಾಗಿ ಹಾರೈಸಿದ್ದಾರೆ

प्रविष्टि तिथि: 01 DEC 2025 10:30PM by PIB Bengaluru

ಹಲವು ವರ್ಷಗಳಿಂದ ಬಾಂಗ್ಲಾದೇಶದ ಸಾರ್ವಜನಿಕ ಜೀವನಕ್ಕೆ ಕೊಡುಗೆ ನೀಡಿರುವ ಬೇಗಂ ಖಲಿದಾ ಜಿಯಾ ಅವರ ಆರೋಗ್ಯದ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಆರೋಗ್ಯ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಅವರ ಆರೋಗ್ಯ ವಿಚಾರದಲ್ಲಿ ಭಾರತವು ಸಾಧ್ಯವಾದ ಎಲ್ಲಾ ಬೆಂಬಲವನ್ನು ನೀಡಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಪೋಸ್ಟ್ ಮಾಡಿದ್ದಾರೆ:

"ಹಲವು ವರ್ಷಗಳಿಂದ ಬಾಂಗ್ಲಾದೇಶದ ಸಾರ್ವಜನಿಕ ಜೀವನಕ್ಕೆ ಕೊಡುಗೆ ನೀಡಿರುವ ಬೇಗಂ ಖಲಿದಾ ಜಿಯಾ ಅವರ ಆರೋಗ್ಯದ ವಿಚಾರ ಕೇಳಿ ತೀವ್ರ ಕಳವಳವುಂಟಾಗಿದೆ. ಅವರ ಶೀಘ್ರ ಚೇತರಿಕೆಗಾಗಿ ನಾವು ಪ್ರಾರ್ಥಿಸುತ್ತೇವೆ. ಭಾರತವು ತಮಗೆ ಸಾಧ್ಯವಾದ ಎಲ್ಲಾ ಬೆಂಬಲವನ್ನು ನೀಡಲು ಸಿದ್ಧವಾಗಿದೆ" 

****

 


(रिलीज़ आईडी: 2197436) आगंतुक पटल : 6
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Punjabi , Gujarati , Tamil , Telugu , Malayalam