56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ರಜನಿಕಾಂತ್ ಅವರಿಗೆ ಸನ್ಮಾನ
ಚಿತ್ರರಂಗದಲ್ಲಿ 50 ವರ್ಷಗಳ ಗಮನಾರ್ಹ ಸೇವೆಗಾಗಿ ಹಿರಿಯ ನಟ, ದಿಗ್ಗಜ ರಜನಿಕಾಂತ್ ಅವರನ್ನು 56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐ ಎಫ್ ಎಫ್ ಐ) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಅತ್ಯುತ್ತಮ ಚಿತ್ರಗಳಿಗೆ ಪ್ರತಿಷ್ಠಿತ ಗೋಲ್ಡನ್ ಮತ್ತು ಸಿಲ್ವರ್ ಪೀಕಾಕ್ ಪ್ರಶಸ್ತಿಗಳನ್ನು ಮತ್ತು ಅತ್ಯುತ್ತಮ ಚಿತ್ರಗಳಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಲಾಯಿತು. ಸಮಾರೋಪ ಸಮಾರಂಭವು ಚಲನಚಿತ್ರೋದ್ಯಮದ ಪ್ರಮುಖ ವ್ಯಕ್ತಿಗಳ ಕೊಡುಗೆಗಳಿಗೆ ಗೌರವ ಸಲ್ಲಿಸುತ್ತಾ ಸಿನಿಮೀಯ ಶ್ರೇಷ್ಠತೆಯನ್ನು ಆಚರಿಸಿತು.

ಸಿನಿಮಾ ಕ್ಷೇತ್ರದಲ್ಲಿ 50 ವರ್ಷಗಳ ಮೈಲಿಗಲ್ಲು ಪೂರೈಸಿದ ರಜನಿಕಾಂತ್ ಅವರನ್ನು ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್ ಮತ್ತು ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಸನ್ಮಾನಿಸಿದರು.

ಭಾರತೀಯ ಚಿತ್ರರಂಗಕ್ಕೆ ಅದ್ಭುತ ಕೊಡುಗೆ ನೀಡಿದ್ದಕ್ಕಾಗಿ ಮತ್ತು ಭಾರತೀಯ ಚಿತ್ರರಂಗದಲ್ಲಿ 50 ಸುವರ್ಣ ಮಹೋತ್ಸವ ವರ್ಷಗಳನ್ನು ಪೂರೈಸಿದ್ದಕ್ಕಾಗಿ ದಿಗ್ಗಜ ನಟ ಶ್ರೀ ರಜನಿಕಾಂತ್ ಅವರನ್ನು ಸನ್ಮಾನಿಸಲಾಯಿತು. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ, ಶ್ರೀ ಎಲ್. ಮುರುಗನ್, ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್, ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಮತ್ತು ನಟ ರಣವೀರ್ ಸಿಂಗ್ ಅವರು ಸನ್ಮಾನಿಸಿದರು

ರಿಷಬ್ ಶೆಟ್ಟಿ ಅವರಿಗೆ ಖ್ಯಾತ ಯಕ್ಷಗಾನ ಕಲಾವಿದೆ ವಿದ್ಯಾ ಕೊಳ್ಯೂರು ಯಕ್ಷಗಾನದಲ್ಲಿ ತೊಡುವ ಕಿರೀಟವನ್ನು ತೊಡಿಸಿ ಸನ್ಮಾನಿಸಿದರು.

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಮತ್ತು ವಾರ್ತಾ ಮತ್ತು ಪ್ರಸಾರ ಖಾತೆ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು ಅತ್ಯುತ್ತಮ ಚೊಚ್ಚಲ ನಿರ್ದೇಶಕ ಮತ್ತು ಅತ್ಯುತ್ತಮ ವೆಬ್ ಸರಣಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

"ಕೇಸರಿ ಅಧ್ಯಾಯ 2" ಗಾಗಿ ಕರಣ್ ಸಿಂಗ್ ತ್ಯಾಗಿಗೆ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿಯನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಪ್ರದಾನ ಮಾಡಿದರು.

"ಬಂದೀಶ್ ಬ್ಯಾಂಡಿಟ್ಸ್ ಸೀಸನ್ 2" ಗಾಗಿ ಆನಂದ್ ತಿವಾರಿ ಅವರಿಗೆ ಅತ್ಯುತ್ತಮ ವೆಬ್ ಸರಣಿ ಪ್ರಶಸ್ತಿಯನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಶ್ರೀ ಎಲ್. ಮುರುಗನ್ ಮತ್ತು ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಪ್ರದಾನ ಮಾಡಿದರು.

ಐಎಫ್‌ಎಫ್‌ಐ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್, ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್, ಮಾಹಿತಿ ಮತ್ತು ಪ್ರಸಾರ ಖಾತೆ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು, ಉತ್ಸವ ನಿರ್ದೇಶಕ ಶೇಖರ್ ಕಪೂರ್ ಮತ್ತು ಐಸಿ ಜ್ಯೂರಿ ಅಧ್ಯಕ್ಷ ಓಂಪ್ರಕಾಶ್ ಮೆಹ್ರಾ ಅವರು ನಿರ್ದೇಶಕ ಆಶ್ ಮೇಫೇರ್ ಮತ್ತು ನಟಿ ಟ್ರಾನ್ ಕ್ವಾನ್ ಅವರಿಗೆ "ಸ್ಕಿನ್ ಆಫ್ ಯೂತ್" ಚಿತ್ರಕ್ಕಾಗಿ ಅತ್ಯುತ್ತಮ ಚಿತ್ರಕ್ಕಾಗಿ ಗೋಲ್ಡನ್ ಪೀಕಾಕ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಐ ಎಫ್ ಎಫ್ ಐ ಸಮಾರೋಪ ಸಮಾರಂಭದಲ್ಲಿ "ಸೇಫ್ ಹೌಸ್" ಚಿತ್ರಕ್ಕಾಗಿ ಐರಿಕ್ ಸ್ವೆನ್ಸನ್ ಅವರಿಗೆ ಎನ್ ಎಫ್ ಡಿ ಸಿ ಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರಕಾಶ್ ಮಗ್ಡಮ್ ಅವರು ಐ ಸಿ ಎಫ್ ಟಿ-ಯುನೆಸ್ಕೋ ಗಾಂಧಿ ಪದಕವನ್ನು ಪ್ರದಾನ ಮಾಡಿದರು.

ಐಎಫ್‌ಎಫ್‌ಐ ಸಮಾರೋಪ ಸಮಾರಂಭದಲ್ಲಿ "ಎ ಪೊಯೆಟ್" ಚಿತ್ರಕ್ಕಾಗಿ ಉಬೇಮರ್ ರಿಯೋಸ್‌ಗೆ "ಅತ್ಯುತ್ತಮ ನಟ" ಪ್ರಶಸ್ತಿಯನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್, ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್, ವಾರ್ತಾ ಮತ್ತು ಪ್ರಸಾರ ಖಾತೆ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಮತ್ತು ಉತ್ಸವ ನಿರ್ದೇಶಕ ಶೇಖರ್ ಕಪೂರ್ ಮತ್ತು ಐಸಿ ಜ್ಯೂರಿ ಅಧ್ಯಕ್ಷ ಓಂಪ್ರಕಾಶ್ ಮೆಹ್ರಾ ಅವರು ಪ್ರದಾನ ಮಾಡಿದರು.

ಎಫ್‌ಎಫ್‌ಐ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್, ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್, ಮಾಹಿತಿ ಮತ್ತು ಪ್ರಸಾರ ಖಾತೆ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು, ಉತ್ಸವ ನಿರ್ದೇಶಕ ಶೇಖರ್ ಕಪೂರ್ ಮತ್ತು ಐಸಿ ಜ್ಯೂರಿ ಅಧ್ಯಕ್ಷ ಓಂಪ್ರಕಾಶ್ ಮೆಹ್ರಾ ಅವರು "ಮೈ ಡಾಟರ್ಸ್ ಹೇರ್" ಚಿತ್ರಕ್ಕಾಗಿ ಹೆಸಮ್ ಫರಾಹ್ಮಂಡ್ ಮತ್ತು "ಫ್ರಾಂಕ್" ಚಿತ್ರಕ್ಕಾಗಿ ಟೋನಿಸ್ ಪಿಲ್ ಅವರಿಗೆ ಜಂಟಿಯಾಗಿ ಅತ್ಯುತ್ತಮ ಚೊಚ್ಚಲ ಚಲನಚಿತ್ರ ನಿರ್ದೇಶಕ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಐಎಫ್‌ಎಫ್‌ಐ ಸಮಾರೋಪ ಸಮಾರಂಭದಲ್ಲಿ "ಗೊಂಧಲ್" ಚಿತ್ರಕ್ಕಾಗಿ ಸಂತೋಷ್ ದವಾಖರ್ ಅವರಿಗೆ "ಗೋಂಧಲ್" ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್, ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್, ವಾರ್ತಾ ಮತ್ತು ಪ್ರಸಾರ ಖಾತೆ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಮತ್ತು ಉತ್ಸವ ನಿರ್ದೇಶಕ ಶೇಖರ್ ಕಪೂರ್ ಮತ್ತು ಐಸಿ ಜ್ಯೂರಿ ಅಧ್ಯಕ್ಷ ಓಂಪ್ರಕಾಶ್ ಮೆಹ್ರಾ ಪ್ರದಾನ ಮಾಡಿದರು.

ಐಎಫ್‌ಎಫ್‌ಐ ಸಮಾರೋಪ ಸಮಾರಂಭದಲ್ಲಿ "ಮೈ ಫಾದರ್ಸ್ ಶ್ಯಾಡೋ" ಚಿತ್ರಕ್ಕಾಗಿ ಅಕಿನೋಲಾ ಡೇವಿಸ್ ಜೂನಿಯರ್ ಅವರಿಗೆ ವಿಶೇಷ ಜ್ಯೂರಿ ಪ್ರಶಸ್ತಿಯನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್, ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್, ವಾರ್ತಾ ಮತ್ತು ಪ್ರಸಾರ ಖಾತೆ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಮತ್ತು ಉತ್ಸವ ನಿರ್ದೇಶಕ ಶೇಖರ್ ಕಪೂರ್ ಮತ್ತು ಓಂಪ್ರಕಾಶ್ ಮೆಹ್ರಾ ಪ್ರದಾನ ಮಾಡಿದರು.
*****
रिलीज़ आईडी:
2196834
| Visitor Counter:
2