ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀಲಂಕಾದಲ್ಲಿ ದಿತ್ವಾ ಚಂಡಮಾರುತದಿಂದ ಉಂಟಾದ ಹಾನಿಗೆ ಸಂತಾಪ ಸೂಚಿಸಿದ ಪ್ರಧಾನಮಂತ್ರಿ

प्रविष्टि तिथि: 28 NOV 2025 3:47PM by PIB Bengaluru

ದಿತ್ವಾ ಚಂಡಮಾರುತದಿಂದ ಉಂಟಾದ ವಿನಾಶದಿಂದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಶ್ರೀಲಂಕಾದ ಜನರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ ಹೃತ್ಪೂರ್ವಕ ಸಂತಾಪ ಸೂಚಿಸಿದ್ದಾರೆ. ಎಲ್ಲಾ ದಿತ್ವಾ ಚಂಡಮಾರುತದಿಂದ ಪೀಡಿತ ಕುಟುಂಬಗಳ ಸುರಕ್ಷತೆ, ಸಾಂತ್ವನ ಮತ್ತು ತ್ವರಿತ ಚೇತರಿಕೆಗಾಗಿ ಅವರು ಪ್ರಾರ್ಥಿಸಿದ್ದಾರೆ.

ಭಾರತದ ಸನಿಹದ ಕಡಲ ನೆರೆಯ ರಾಷ್ಟ್ರದೊಂದಿಗೆ ಒಗ್ಗಟ್ಟಿನ ಬಲವಾದ ಸೂಚನೆಯಾಗಿ, ಭಾರತ ಸರ್ಕಾರವು ಆಪರೇಷನ್ ಸಾಗರ್ ಬಂಧು ಅಡಿಯಲ್ಲಿ ಪರಿಹಾರ ಸಾಮಗ್ರಿಗಳು ಮತ್ತು ಪ್ರಮುಖ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಹೆಚ್.ಎ.ಡಿ.ಆರ್.) ಬೆಂಬಲವನ್ನು ತುರ್ತಾಗಿ  ಈಗಾಗಲೇ ರವಾನಿಸಿದೆ. ಪರಿಸ್ಥಿತಿ ವಿಕಸನಗೊಳ್ಳುತ್ತಿದ್ದಂತೆ ಹೆಚ್ಚುವರಿ ನೆರವು ಮತ್ತು ಸಹಾಯವನ್ನು ಒದಗಿಸಲು ಭಾರತ ಸಿದ್ಧವಾಗಿದೆ.

ಭಾರತದ “ನೆರೆಹೊರೆಯವರು ಮೊದಲು ನೀತಿ” ಹಾಗೂ “ಮಹಾಸಾಗರ ಯೋಜನೆ”ಯ ಪರಿಕಲ್ಪನೆಯ ದೃಷ್ಟಿಕೋನ ಮತ್ತು ತತ್ವಗಳಿಂದ ಮಾರ್ಗದರ್ಶನ ಪಡೆದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, “ಶ್ರೀಲಂಕಾದ ಅತಿಅಗತ್ಯದ ಸಮಯದ ಸಂದರ್ಭದಲ್ಲಿ ಭಾರತವು ಜೊತೆಗೆ ದೃಢವಾಗಿ ನಿಲ್ಲುತ್ತದೆ” ಎಂದು ಪುನರುಚ್ಚರಿಸಿದರು.

ಎಕ್ಸ್ ತಾಣದ ಸಂದೇಶದಲ್ಲಿ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:

"ದಿತ್ವಾ ಚಂಡಮಾರುತದಿಂದಾಗಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಶ್ರೀಲಂಕಾದ ಜನರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಎಲ್ಲಾ ಪೀಡಿತ ಕುಟುಂಬಗಳ ಸುರಕ್ಷತೆ, ಸಾಂತ್ವನ ಮತ್ತು ತ್ವರಿತ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ.

ನಮ್ಮ ಹತ್ತಿರದ ಕಡಲ ನೆರೆಯವರೊಂದಿಗೆ ಒಗ್ಗಟ್ಟಿನಲ್ಲಿ, ಭಾರತವು “ಆಪರೇಷನ್ ಸಾಗರ್ ಬಂಧು ಯೋಜನೆ”ಯಡಿಯಲ್ಲಿ ಪರಿಹಾರ ಸಾಮಗ್ರಿಗಳು ಮತ್ತು ಪ್ರಮುಖ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಹೆಚ್.ಎ.ಡಿ.ಆರ್.) ಬೆಂಬಲವನ್ನು ತುರ್ತಾಗಿ ರವಾನಿಸಿದೆ. ಪರಿಸ್ಥಿತಿ ಅನುಸಾರವಾಗಿ, ಅವಕಾಶ ವಿಕಸನಗೊಳ್ಳುತ್ತಿದ್ದಂತೆ ಹೆಚ್ಚಿನ ನೆರವು ಮತ್ತು ಸಹಾಯವನ್ನು ಒದಗಿಸಲು ನಾವು ಸಿದ್ಧರಿದ್ದೇವೆ.

ಭಾರತದ “ನೆರೆಹೊರೆಯವರು ಮೊದಲು ನೀತಿ” ಹಾಗೂ “ಮಹಾಸಾಗರ ಯೋಜನೆ”ಯ ಪರಿಕಲ್ಪನೆಯ ದೃಷ್ಟಿಕೋನದಲ್ಲಿ ಭಾರತವು, ಶ್ರೀಲಂಕಾದ ಅಗತ್ಯದ ಸಂದಿಗ್ದ ಸಮಯದಲ್ಲಿ ಜೊತೆಯಲ್ಲಿ ದೃಢವಾಗಿ ನಿಲ್ಲುವುದನ್ನು ಮುಂದುವರೆಸುತ್ತದೆ.

@anuradisanayake”

“"டித்வா புயலில் தமது அன்புக்குரிய உறவுகளை இழந்த இலங்கை மக்களுக்கு எனது இதயபூர்வமான அனுதாபங்கள். பாதிக்கப்பட்ட குடும்பங்களின் பாதுகாப்பு, ஆறுதல் மற்றும் துரித மீட்சிக்காக நான் பிரார்த்திக்கின்றேன். கடல்மார்க்கமாக மிகவும் நெருங்கிய அயலுறவுடன் எமது கூட்டொருமைப்பாட்டினை காண்பிக்கும் முகமாக சாகர் பந்து நடவடிக்கையின் கீழ் முக்கிய HADR உதவி மற்றும் நிவாரணப் பொருட்களை இந்தியா உடனடி அவசர உதவியாக அனுப்பி வைத்துள்ளது. எவ்வாறான சூழலிலும் தேவையான மேலதிக ஆதரவு மற்றும் உதவிகளை வழங்க நாம் தயாராக உள்ளோம். இந்தியாவின் அயலுறவுக்கு முதலிடம் கொள்கை மற்றும் மஹாசாகர் தொலைநோக்கு ஆகியவற்றின் வழிகாட்டலுடன், உதவிகள் தேவைப்படும் எந்நேரத்திலும் இந்தியா இலங்கையுடன் தொடர்ந்து துணைநிற்கும். @anuradisanayake" “

“"දිට්වා සුළි කුණාටුව හේතුවෙන් තම ආදරණීයයන් අහිමි වූ ශ්‍රී ලංකාවේ ජනතාවට මාගේ හෘදයාංගම සංවේගය පළ කරමි. විපතට පත් සියලු පවුල්වල සුරක්ෂිතභාවය, සුව පහසුව සඳහා මෙන්ම ඔවුන් කඩිනමින් යථා තත්ත්වයට පත් වේවායි ප්‍රාර්ථනා කරමි. අපගේ සමීපතම සමුද්‍රීය අසල්වැසියා සමඟ රැඳී සිටිමින් ඉන්දියාව සාගර් බන්ධු මෙහෙයුම යටතේ වහාම සහනාධාර සහ අත්‍යාවශ්‍ය මානුෂීය සහය සහ ආපදා සහන ලබා දී ඇත. තත්ත්වය වර්ධනය වීම හමුවේ අපි තවත් උපකාර සහ සහය ලබා දීමට සූදානමින් සිටින්නෙමු. ඉන්දියාවේ අසල්වැසියා ප්‍රථමයෙන් යන ප්‍රතිපත්තිය සහ මහාසාගර් දැක්ම අනුව ඉන්දියාව ශ්‍රී ලංකාවට උදව් අවැසි ⁣මෙම මොහොතේ තවදුරටත් ශ්‍රී ලංකාව සමඟ ශක්තිමත්ව රැඳී සිටියි. @anuradisanayake" “

 

*****


(रिलीज़ आईडी: 2196447) आगंतुक पटल : 18
इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Manipuri , Bengali , Bengali-TR , Punjabi , Gujarati , Odia , Tamil , Telugu , Malayalam