iffi banner

ಇಂದು 56ನೇ ಐ.ಎಫ್.ಎಫ್.ಐ ಕಾರ್ಯಕ್ರಮದ ಕೊನೆಯ ದಿನ ಚಿತ್ರಪ್ರೇಮಿಗಳು ಆಸ್ವಾದಿಸಿದ ಜಪಾನಿನ 'ಅ ಪೇಲ್ ವ್ಯೂ ಆಫ್ ಹಿಲ್ಸ್' ಚಿತ್ರ

 

#ಐ.ಎಫ್.ಎಫ್.ಐವುಡ್, 28 ನವೆಂಬರ್ 2025

 

ಜಪಾನ್ ನಿರ್ದೇಶಕ ಕೀ ಇಶಿಕಾವಾ ಅವರು ತಮ್ಮ ಎರಡನೇ ನಿರ್ದೇಶನದ ಚಿತ್ರ 'ಅ ಪೇಲ್ ವ್ಯೂ ಆಫ್ ಹಿಲ್ಸ್' ಚಿತ್ರದ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಇಂದು ಕೊನೆಯ ದಿನ ಸಂವಾದ ನಡೆಸಿದರು, ಇದನ್ನು ಈ ವರ್ಷ ಗೋವಾದ 56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ) ದಲ್ಲಿ 'ಕಂಟ್ರಿ ಫೋಕಸ್: ಜಪಾನ್' ನ ಭಾಗವಾಗಿ ಪ್ರದರ್ಶಿಸಲಾಗಿದೆ, ಇದು ಸಮಕಾಲೀನ ಜಪಾನ್ ಸಿನೆಮಾದ ವಿಹಂಗಮ ನೋಟವನ್ನು ನೀಡುತ್ತದೆ.

ನೆನಪು, ಗುರುತು ಮತ್ತು ಒಳಗೊಳ್ಳುವಿಕೆಯನ್ನು ಅನ್ವೇಷಿಸುವ ನಾಟಕಗಳಿಂದ ಹಿಡಿದು, ಐತಿಹಾಸಿಕ ಮಹಾಕಾವ್ಯಗಳು, ಮನಸ್ಸಿಗೆ ಮುದ ನೀಡುವ ಥ್ರಿಲ್ಲರ್‌ಗಳು, ಮಕ್ಕಳ ನಿರೂಪಣೆಗಳು ಮತ್ತು ಸಿನಿಮೀಯ ರೂಪದ ಗಡಿಗಳನ್ನು ಸವಾಲು ಮಾಡುವ ಮತ್ತು ವಿಸ್ತರಿಸುವ ಅಮೂರ್ತ, ರೇಖಾತ್ಮಕವಲ್ಲದ ಪ್ರಯೋಗಗಳವರೆಗೆ ಉದಯೋನ್ಮುಖ ಕಲಾವಿದರು ಮತ್ತು ರಾಷ್ಟ್ರದ ಸಿನಿಮೀಯ ಪರಂಪರೆಯನ್ನು ರೂಪಿಸುವುದನ್ನು ಮುಂದುವರೆಸುವ ಮೆಚ್ಚುಗೆ ಪಡೆದ ಹಿರಿಯ ಕಲಾವಿದರ ಸೃಜನಶೀಲ ಚೈತನ್ಯವನ್ನು ಆಚರಿಸುವ 'ಕಂಟ್ರಿ ಫೋಕಸ್: ಜಪಾನ್' ಅಸಾಧಾರಣ ಪ್ರಕಾರಗಳನ್ನು ವ್ಯಾಪಿಸಿದೆ. 

"ಇದು ಭಾರತ ದೇಶಕ್ಕೆ ನನ್ನ ಮೊದಲ ಭೇಟಿ, ಇಲ್ಲಿಗೆ ಬಂದಿದ್ದು ನನಗೆ ನಿಜಕ್ಕೂ ಆನಂದ ತಂದಿದೆ. ಈ ಚಿತ್ರವು ನೊಬೆಲ್ ಪ್ರಶಸ್ತಿ ವಿಜೇತ ಲೇಖಕ ಕಜುವೊ ಇಶಿಗುರೊ ಅವರ 1982ರ ಕಾದಂಬರಿಯನ್ನು ಆಧರಿಸಿದೆ. ಈ ವರ್ಷ, ಅನೇಕ ಜಪಾನ್ ಚಲನಚಿತ್ರಗಳು ಈ ವಿಷಯವನ್ನು ಅನ್ವೇಷಿಸುತ್ತಿವೆ, ಎರಡನೇ ಮಹಾಯುದ್ಧದ ಅಂತ್ಯದಿಂದ 80 ವರ್ಷಗಳನ್ನು ಗುರುತಿಸುತ್ತದೆ. ನಾನು ಕೂಡ ಯಾವಾಗಲೂ ಈ ವಿಷಯದ ಬಗ್ಗೆ ಮಾತನಾಡಲು ಬಯಸುತ್ತಿದ್ದೆ, ಆದರೆ ಆ ಅವಧಿಯನ್ನು ನಾನು ನೇರವಾಗಿ ಅನುಭವಿಸದ ಕಾರಣ ಸರಿಯಾದ ಭಾಷೆಯನ್ನು ಕಂಡುಹಿಡಿಯುವುದು ನನಗೆ ಸವಾಲಿನ ಸಂಗತಿಯಾಗಿದೆ. ನನಗೆ ಈ ಇದರ ವಿಷಯ ನನ್ನ ಮನಸ್ಸಿಗೆ ಬಹಳ ಹತ್ತಿರದಿಂದ ಹಿಡಿಸಿತು ಈ ಕಥೆಯನ್ನು ಹೇಳಲು ಇದು ನನಗೆ ಆತ್ಮವಿಶ್ವಾಸವನ್ನು ನೀಡಿತು."

ಈ ಚಿತ್ರದ ಕಥೆಯು ಜಪಾನ್-ಬ್ರಿಟಿಷ್ ಯುವ ಬರಹಗಾರ್ತಿಯೊಬ್ಬಳು ತನ್ನ ತಾಯಿ ಎಟ್ಸುಕೊಳ ಯುದ್ಧಾನಂತರದ ನಾಗಸಾಕಿಯಲ್ಲಿನ ಅನುಭವಗಳನ್ನು ಆಧರಿಸಿ ಪುಸ್ತಕ ರಚಿಸಲು ಹೊರಟಿದ್ದಾಳೆ. ತನ್ನ ಹಿರಿಯ ಮಗಳ ಆತ್ಮಹತ್ಯೆಯಿಂದ ಇನ್ನೂ ಕಾಡುತ್ತಿರುವ ಎಟ್ಸುಕೊ, 1952ರಲ್ಲಿ ತಾನು ಗರ್ಭಿಣಿಯಾಗಿದ್ದಾಗಿನ ನೆನಪುಗಳನ್ನು ಮಾಡಿಕೊಳ್ಳಲು ಪ್ರಾರಂಭಿಸುತ್ತಾಳೆ. ಅವಳ ನೆನಪುಗಳು ಸಚಿಕೊಳೊಂದಿಗಿನ ಅವಳ ಭೇಟಿಯ ಮೇಲೆ ಕೇಂದ್ರೀಕೃತವಾಗಿವೆ, ಅವಳು ತನ್ನ ಮಗಳು ಮಾರಿಕೊಳೊಂದಿಗೆ ವಿದೇಶದಲ್ಲಿ ಹೊಸ ಜೀವನವನ್ನು ಕಟ್ಟಲು ನಿರ್ಧರಿಸಿ, ಅವಳು ಸಾಂದರ್ಭಿಕವಾಗಿ ಭಯಾನಕ ಮಹಿಳೆಯನ್ನು ಭೇಟಿ ಮಾಡಿದ ಆತಂಕಕಾರಿ ನೆನಪುಗಳ ಬಗ್ಗೆ ಮಾತನಾಡುತ್ತಾಳೆ. ಬರಹಗಾರ ತನ್ನ ತಾಯಿಯ ನಾಗಾಸಾಕಿಯಲ್ಲಿನ ಬದುಕಿನ ವರ್ಷಗಳ ಕೆಲವು ಸಂದರ್ಭಗಳು ಮತ್ತು ಸ್ಮರಣಿಕೆಗಳನ್ನು ಒಟ್ಟುಗೂಡಿಸಿದಾಗ, ಎಟ್ಸುಕೊ ಹಂಚಿಕೊಳ್ಳುವ ನೆನಪುಗಳು ಮತ್ತು ಅವು ಸೂಚಿಸುವ ವಾಸ್ತವದ ನಡುವಿನ ಗೊಂದಲದ ಅಸಂಗತತೆಯನ್ನು ಅವಳು ಗಮನಿಸಲು ಪ್ರಾರಂಭಿಸುತ್ತಾಳೆ.

ಈ ಕಥೆಯು ಕೇವಲ ಪರಮಾಣು ಬಾಂಬ್ ಬಗ್ಗೆ ಮಾತ್ರವಲ್ಲ, ವಿವಿಧ ಯುಗಗಳ ಮಹಿಳೆಯರ ಬಗ್ಗೆಯೂ ಇದೆ ಎಂಬುದೇ ಅವರನ್ನು ಈ ಕಥೆಯತ್ತ ಆಕರ್ಷಿಸಿತು ಎಂದು ಕೀ ಇಶಿಕಾವಾ ಹೇಳಿಕೊಂಡರು. ಸಂಪಾದನೆಯನ್ನು ಬರವಣಿಗೆಯ ಪ್ರಕ್ರಿಯೆಯ ಅಂತಿಮ ಹಂತವೆಂದು ಅವರು ಪರಿಗಣಿಸುವುದರಿಂದ, ಅವರು ಸ್ವತಃ ಚಿತ್ರಕಥೆಯನ್ನು ಬರೆಯಲು ಮತ್ತು ಚಿತ್ರವನ್ನು ಸಂಪಾದಿಸಲು ಆಯ್ಕೆ ಮಾಡಿಕೊಂಡರು ಎಂದು ವಿವರಿಸಿದರು.

ಚಿತ್ರಕ್ಕೆ ಅತ್ಯಂತ ಸೂಕ್ತವಾದ ಅಂತ್ಯವನ್ನು ನಿರ್ಧರಿಸುವಾಗ, ತಂಡವು ಜಪಾನ್, ಇಂಗ್ಲೆಡ್ ಮತ್ತು ಪೋಲೆಂಡ್ ಎಂಬ ಮೂರು ದೇಶಗಳ ದೃಷ್ಟಿಕೋನಗಳನ್ನು ಸಮತೋಲನಗೊಳಿಸಬೇಕಾಗಿತ್ತು ಎಂದು ಅವರು ವಿವರಿಸಿದರು. ಪ್ರತಿಯೊಂದೂ ವಿಭಿನ್ನ ಸಂವೇದನೆಯನ್ನು ತಂದಿತು: ಬ್ರಿಟಿಷ್ ನಿರ್ಮಾಪಕರು ಹೆಚ್ಚು ಸ್ಪಷ್ಟವಾದ ತೀರ್ಮಾನವನ್ನು ಬಯಸಿದರು; ಆದರೆ ಪೋಲೆಂಡ್ ನಿರ್ಮಾಪಕರು ಹೆಚ್ಚಿನ ವಿವರಣೆಯು ಪರಿಣಾಮವನ್ನು ದುರ್ಬಲಗೊಳಿಸುತ್ತದೆ ಎಂದು ಭಾವಿಸಿದರು. ಜಪಾನಿನ ದೃಷ್ಟಿಕೋನವು ಇವುಗಳ ಮಧ್ಯೆ ಇತ್ತು. ಈ ಸಹಯೋಗದ ಪ್ರಕ್ರಿಯೆ ಮತ್ತು ಅಂತಿಮವಾಗಿ ಚಲನಚಿತ್ರವನ್ನು ಸರಿಯಾದ ಅಂತ್ಯಕ್ಕೆ ಕೊಂಡೊಯ್ಯುವ ವ್ಯಾಪಕ ಚರ್ಚೆಗಳನ್ನು ತಾನು ಆನಂದಿಸಿದ್ದೇನೆ ಎಂದು ಹಂಚಿಕೊಂಡರು. 

ಪೂರ್ಣ ಪತ್ರಿಕಾಗೋಷ್ಠಿಯನ್ನು ಇಲ್ಲಿ ವೀಕ್ಷಿಸಿ:

ಟ್ರೇಲರ್ ಇಲ್ಲಿ ವೀಕ್ಷಿಸಿ:

 

ಐ.ಎಫ್.ಎಫ್.ಐ ಬಗ್ಗೆ: 

1952ರಲ್ಲಿ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಆಚರಣೆಯಾಗಿ ಆರಂಭಗೊಂಡು ನೆಲೆನಿಂತಿದೆ. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (NFDC), ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಗೋವಾ ರಾಜ್ಯ ಸರ್ಕಾರ, ಗೋವಾ ಮನರಂಜನಾ ಸೊಸೈಟಿ (ESG) ಜಂಟಿಯಾಗಿ ಆಯೋಜಿಸಿರುವ ಈ ಉತ್ಸವವು ಜಾಗತಿಕ ಸಿನಿಮಾ ಶಕ್ತಿ ಕೇಂದ್ರವಾಗಿ ಇಂದು ಬೆಳೆದಿದೆ. ಅಲ್ಲಿ ಪುನಃಸ್ಥಾಪಿಸಲಾದ ಉತ್ಕೃಷ್ಟ ದರ್ಜೆಯ ಸಿನಿಮಾಗಳು ದಿಟ್ಟ ಪ್ರಯೋಗಗಳಿಗೆ ಒಡ್ಡುತ್ತವೆ. ದಿಗ್ಗಜ ಕಲಾವಿದರು ನಿರ್ಭೀತರಾಗಿ ಯುವ ಕಲಾವಿದರೊಂದಿಗೆ ಇಲ್ಲಿ ವೇದಿಕೆ ಹಂಚಿಕೊಂಡು ತಮ್ಮ ಅಭಿಪ್ರಾಯ ತಿಳಿಸುತ್ತಾರೆ.
ಐ.ಎಫ್.ಎಫ್.ಐ ನಿಜವಾಗಿಯೂ ಮಿಂಚುವಂತೆ ಮಾಡುವುದು ಕಾರ್ಯಕ್ರಮಗಳಾದ ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್‌ಗಳು, ಗೌರವಗಳು ಮತ್ತು ಹೆಚ್ಚಿನ ಶಕ್ತಿಯ ವೇವ್ಸ್ ಫಿಲ್ಮ್ ಬಜಾರ್, ಅಲ್ಲಿನ ಕಲ್ಪನೆಗಳು, ಅಲ್ಲಿ ನಡೆಯುವ ಒಪ್ಪಂದಗಳು ಮತ್ತು ಸಹಯೋಗಗಳಿಂದ. ನವೆಂಬರ್ 20 ರಿಂದ ಇಂದು 28 ರವರೆಗೆ ಗೋವಾದ ಬೆರಗುಗೊಳಿಸುವ ಕರಾವಳಿ ಹಿನ್ನೆಲೆಯಲ್ಲಿ ಪ್ರದರ್ಶನಗೊಳ್ಳುವ 56 ನೇ ಆವೃತ್ತಿಯು ಭಾಷೆಗಳು, ಪ್ರಕಾರಗಳು, ನಾವೀನ್ಯತೆಗಳು ಮತ್ತು ಧ್ವನಿಗಳ ಬೆರಗುಗೊಳಿಸುವ ವರ್ಣಪಟಲವನ್ನು ನೀಡುತ್ತದೆ. ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ತಲ್ಲೀನಗೊಳಿಸುವ ಆಚರಣೆ ಇದು.

 

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ:

ಐ.ಎಫ್.ಎಫ್.ಐ ವೆಬ್‌ಸೈಟ್: https://www.iffigoa.org/

ಪಿಐಬಿಯ ಐ.ಎಫ್.ಎಫ್.ಐ ಮೈಕ್ರೋಸೈಟ್: https://www.pib.gov.in/iffi/56/

ಪಿಐಬಿ ಐ.ಎಫ್.ಎಫ್.ಐ ಪ್ರಸಾರ ಚಾನೆಲ್: https://whatsapp.com/channel/0029VaEiBaML2AU6gnzWOm3F

ಎಕ್ಸ್ ಖಾತೆಗಳು: @IFFIGoa, @PIB_India, @PIB_Panaji

 

****


Great films resonate through passionate voices. Share your love for cinema with #IFFI2025, #AnythingForFilms and #FilmsKeLiyeKuchBhi. Tag us @pib_goa on Instagram, and we'll help spread your passion! For journalists, bloggers, and vloggers wanting to connect with filmmakers for interviews/interactions, reach out to us at iffi.mediadesk@pib.gov.in with the subject line: Take One with PIB.


रिलीज़ आईडी: 2196225   |   Visitor Counter: 5