ಬಲ್ಗೇರಿಯಾದ 'ಆಕ್ಸಿಸ್ ಆಫ್ ಲೈಫ್' ಚಲನಚಿತ್ರವು ಐ.ಎಫ್.ಎಫ್.ಐ. ವೇದಿಕೆಗೆ ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕತೆಯನ್ನು ಹೊತ್ತು ತಂದಿದೆ
ಶ್ರೀ ಮ್ಯಾಕ್ಸಿಮ್ ಡೊಬ್ರೊಮಿಸ್ಲೋವ್ ಅವರ ಚಲನಚಿತ್ರವು ಐ.ಎಫ್.ಎಫ್.ಐ. ನಲ್ಲಿ ರಷ್ಯಾದ ವಿಕಸನಗೊಳ್ಳುತ್ತಿರುವ ಸಿನಿಮಾ ವ್ಯವಸ್ಥೆಗಳ ಚೌಕಟ್ಟನ್ನು ಪ್ರದರ್ಶಿಸಿತು
ಅಂತಾರಾಷ್ಟ್ರೀಯ ಸಹ-ನಿರ್ಮಾಣ ಚಲನಚಿತ್ರವಾದ 'ದೋಸ್ ಹೂ ವಿಸ್ಲ್ ಆಫ್ಟರ್ ಡಾರ್ಕ್', ಈ ಮೂಲಕ ಏಕತೆಯನ್ನು ಉಲ್ಲೇಖಿಸುವ
ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ(ಐ.ಎಫ್.ಎಫ್.ಐ.) ಇಂದು, ನಡೆದ ಆಕರ್ಷಕ ಹಾಗೂ ವೈವಿದ್ಯಮಯ ಪತ್ರಿಕಾಗೋಷ್ಠಿಯಲ್ಲಿ, ವಿಶ್ವದ ವಿವಿಧ ಪ್ರದೇಶಗಳ ಚಲನಚಿತ್ರ ನಿರ್ಮಾಪಕರು ಜಾಗತಿಕ ಕಥೆ, ಅನುಭವ ಮತ್ತು ಸಿನಿಮಾದ ಏಕೀಕರಣ ಶಕ್ತಿಯನ್ನು ಪರಸ್ಪರ ವಿನಿಮಯ ಮಾಡಲು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿದರು.
ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐ.ಎಫ್.ಎಫ್.ಐ.) ಈ ವಿಶೇಷ ಕಾರ್ಯಕ್ರಮದಲ್ಲಿ, ಕಾರ್ಯನಿರ್ವಾಹಕ ನಿರ್ಮಾಪಕ ಶ್ರೀ ಮ್ಯಾಕ್ಸಿಮ್ ಡೊಬ್ರೊಮಿಸ್ಲೋವ್ ಪ್ರಸ್ತುತಪಡಿಸಿದ ರಷ್ಯಾದಿಂದ ಟ್ರಾನ್ಸ್ಪರೆಂಟ್ ಲ್ಯಾಂಡ್ಸ್; ನಿರ್ದೇಶಕ ಶ್ರೀ ಅಟಾನಾಸ್ ಯೋರ್ಡಾನೋವ್ ಪ್ರಸ್ತುತಪಡಿಸಿದ ಬಲ್ಗೇರಿಯಾದ ಆಕ್ಸಿಸ್ ಆಫ್ ಲೈಫ್; ಮತ್ತು ನಿರ್ದೇಶಕಿ ಪಿನಾರ್ ಯೋರ್ಗಾನ್ಸಿಯೋಗ್ಲು ಪ್ರಸ್ತುತಪಡಿಸಿದ ಟರ್ಕಿಶ್-ಜರ್ಮನ್-ಬಲ್ಗೇರಿಯನ್ ಸಹ-ನಿರ್ಮಾಣ 'ದೋಸ್ ಹೂ ವಿಸ್ಲ್ ಆಫ್ಟರ್ ಡಾರ್ಕ್' ಚಲನಚಿತ್ರಗಳು ಸೇರಿವೆ.

ಪತ್ರಿಕಾಗೋಷ್ಠಿಯ ಸಮಯದಲ್ಲಿ ನಿರ್ದೇಶಕ ಶ್ರೀ ಅಟಾನಾಸ್ ಯೋರ್ಡಾನೋವ್ ಅವರು ಆಕ್ಸಿಸ್ ಆಫ್ ಲೈಫ್ ಚಲನಚಿತ್ರ ನಿರ್ಮಾಣದ ಹಿಂದಿನ ಕಲಾತ್ಮಕ ಪ್ರಯಾಣ ಮತ್ತು ತಾತ್ವಿಕ ಅಡಿಪಾಯದ ಒಳನೋಟಗಳನ್ನು ಹಂಚಿಕೊಂಡರು. ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ದೇಶದ ಆಳವಾಗಿ ಬೇರೂರಿರುವ ಆಧ್ಯಾತ್ಮಿಕತೆ ಮತ್ತು ತತ್ತ್ವಶಾಸ್ತ್ರದ ಸಂಪ್ರದಾಯಗಳು ನಮ್ಮ ಈ ಚಿತ್ರಕ್ಕೆ ಗಮನಾರ್ಹ ಸ್ಫೂರ್ತಿಯಾಗಿದೆ ಎಂದು ಹೇಳಿದರು. ಚಿತ್ರದ ವಿಷಯಗಳು ಕಿರಿಯ ಪ್ರೇಕ್ಷಕರೊಂದಿಗೆ ಬಲವಾಗಿ ಪ್ರತಿಧ್ವನಿಸಿವೆ ಎಂದು ಅವರು ತಿಳಿಸಿದರು. ಕೃತಕ ಬುದ್ಧಿಮತ್ತೆಯನ್ನು ಪ್ರತಿಬಿಂಬಿಸುತ್ತಾ, ಅಟಾನಾಸ್ ಅವರು ಕೃತಕ ಬುದ್ಧಿಮತ್ತೆ(ಎಐ) ವೇಗವಾಗಿ ಮುನ್ನಡೆಯಬಹುದಾದರೂ, ಅದು ಎಂದಿಗೂ ನಿಜವಾದ ಮಾನವನ ಸ್ವಭಾವ ಹಾಗೂ ಭಾವನೆಗಳನ್ನು ಅಥವಾ ಸೃಜನಶೀಲತೆಯ ಆಳವನ್ನು ಪುನರಾವರ್ತಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಪರಿತ್ಯಾಗದ ನಡುವೆ ಆಕಾಂಕ್ಷೆಗಳು
ಕಾರ್ಯನಿರ್ವಾಹಕ ನಿರ್ಮಾಪಕ ಶ್ರೀ ಮ್ಯಾಕ್ಸಿಮ್ ಡೊಬ್ರೊಮಿಸ್ಲೋವ್ ಅವರು ಪಾರದರ್ಶಕ ಭೂಮಿಯಲ್ಲಿ ಅನ್ವೇಷಿಸಲಾದ ಆಕಾಂಕ್ಷೆ ಮತ್ತು ವಲಸೆಯ ವಿಷಯಗಳನ್ನು ಉದ್ದೇಶಿಸಿ ಮಾತನಾಡಿದರು. ಅವಕಾಶಗಳನ್ನು ಹುಡುಕುತ್ತಾ ಜನರು ಸಣ್ಣ ಪಟ್ಟಣಗಳಿಂದ ದೊಡ್ಡ ನಗರದತ್ತ, ಹಾಗೂ ಪ್ರಮುಖ ಮಹಾನಗರಗಳಿಗೆ ಸ್ಥಳಾಂತರಗೊಂಡಿರುವುದನ್ನು ಉಲ್ಲೇಖಿಸಿದರು. ಅವರು ಭಾರತ ಮತ್ತು ರಷ್ಯಾದ ನಡುವಿನ ಸಮಾನಾಂತರಗಳನ್ನು ಸಹ ಈ ಸಂದರ್ಭದಲ್ಲಿ ವಿವರವಾಗಿ ಬಣ್ಣಿಸಿದರು ಮತ್ತು ಜಾಗತಿಕ ಸಿನೆಮಾದಲ್ಲಿ ರಷ್ಯಾದ ಬೆಳೆಯುತ್ತಿರುವ ಪ್ರಾಮುಖ್ಯತೆಯನ್ನುತಿಲಿಸಿದರು, ಸಮಕಾಲೀನ ರಷ್ಯಾದ ಚಲನಚಿತ್ರ ನಿರ್ಮಾಣದೊಂದಿಗೆ ಹೆಚ್ಚು ಆಳವಾಗಿ ತೊಡಗಿಸಿಕೊಳ್ಳಲು ವಿಶ್ವಾದ್ಯಂತ ಪ್ರೇಕ್ಷಕರನ್ನು ಅವರು ಆಹ್ವಾನಿಸಿದರು ಹಾಗೂ ಒತ್ತಾಯಿಸಿದರು.

ಚೊಚ್ಚಲ ಮತ್ತು ಜಾಗತಿಕ ಸಿನೆಮಾದಲ್ಲಿ ಯೋರ್ಗಾನ್ಸಿಯೋಗ್ಲು
ನಿರ್ದೇಶಕಿ ಪಿನಾರ್ ಯೋರ್ಗಾನ್ಸಿಯೋಗ್ಲು ಅವರ ಚೊಚ್ಚಲ ಚಿತ್ರವಾದ 'ದೋಸ್ ಹೂ ವಿಸ್ಲ್ ಆಫ್ಟರ್ ಡಾರ್ಕ್' ಅನ್ನು ಅಂತಾರಾಷ್ಟ್ರೀಯ ಸಹಯೋಗದ ಗಮನಾರ್ಹ ನಿರ್ಮಾಣವೆಂದು ವಿವರಿಸಲಾಗಿದೆ. ಈ ಚಿತ್ರವು ದುಃಖಿತ ವಸ್ತುಸಂಗ್ರಹಾಲಯ ವ್ಯವಸ್ಥಾಪಕರ ಜೀವನಕಥೆಯನ್ನು ಅನುಸರಿಸುತ್ತದೆ, ಅವರ ಜೀವನವು ಅಲೌಕಿಕ ಮುಖಾಮುಖಿಯ ನಂತರ ಅಸ್ತಿತ್ವವಾದದ ಬಿಕ್ಕಟ್ಟಿನಲ್ಲಿ ತೆರೆದುಕೊಳ್ಳುತ್ತದೆ. ವ್ಯಕ್ತಿ ಜೀವನದ ಅರ್ಥವನ್ನು ಹುಡುಕುತ್ತಿರುವಾಗ, ಅವನ ಹೆಂಡತಿ ಮತ್ತು ಮಗಳು ತಮ್ಮದೇ ಆದ ಗುಪ್ತ ಹೋರಾಟಗಳೊಂದಿಗೆ ಹೋರಾಡುತ್ತಾ ಇರುತ್ತಾರೆ, ಮತ್ತು ಕುಟುಂಬವು ಶೀಘ್ರದಲ್ಲೇ ತಮ್ಮ ಕೈಬಿಟ್ಟ ಕನಸುಗಳ ಅಕ್ಷರಶಃ ದೆವ್ವಸ್ವರೂಪದ ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿಯಲ್ಲಿರುತ್ತದೆ.

ಸಿನೆಮಾವು ಗಡಿಗಳನ್ನು ಮೀರಿ ಜನರನ್ನು ಒಂದುಗೂಡಿಸುವ ಶಕ್ತಿಯನ್ನು ಹೊಂದಿದೆ ಎಂದು ಅವರು ಹೇಳಿದರು. ಮಾಧ್ಯಮದ ಪ್ರಶ್ನೆಗೆ ಉತ್ತರಿಸುತ್ತಾ, ಅವರು ಭವಿಷ್ಯದಲ್ಲಿ ಭಾರತದಲ್ಲಿ ಚಿತ್ರೀಕರಣದಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದರು, ದೇಶವನ್ನು ಆಕರ್ಷಕ ಸೃಜನಶೀಲ ವ್ಯವಸ್ಥೆಗಳ ಚೌಕಟ್ಟನ್ನು ಹೊಂದಿದೆ ಎಂದು ಅವರು ತಮ್ಮ ಅನುಭವಗಳನ್ನು ವಿವರಿಸಿದರು. ಒಂದೇ ಚಿತ್ರದೊಳಗೆ ಬಹು ಪ್ರಕಾರಗಳನ್ನು ಮಿಶ್ರಣ ಮಾಡುವುದನ್ನು ಅವರು ಆನಂದಿಸುತ್ತಾರೆ ಎಂದು ಅವರು ತಮ್ಮ ಆಸಕ್ತಿಯನ್ನು ಹಂಚಿಕೊಂಡರು.
ವಿಭಿನ್ನ ಸಂಸ್ಕೃತಿಗಳನ್ನು ಪ್ರತಿನಿಧಿಸುತ್ತಿದ್ದರೂ, ಸಮಾನ ಮನಸ್ಕ ಜನರನ್ನು ಒಟ್ಟುಗೂಡಿಸಲು ಮತ್ತು ಜಾಗತಿಕ ಸಂಪರ್ಕಗಳನ್ನು ಬೆಳೆಸಲು ಸಿನೆಮಾ ಪ್ರಬಲ ಮಾಧ್ಯಮಗಳಲ್ಲಿ ಒಂದಾಗಿದೆ ಎಂದು ಭಾಗವಹಿಸಿದ ಎಲ್ಲಾ ಚಲನಚಿತ್ರ ನಿರ್ಮಾಪಕರು ಒಪ್ಪಿಕೊಂಡರು.

ಪತ್ರಿಕಾಗೋಷ್ಠಿಯ ಲಿಂಕ್
ಐ.ಎಫ್.ಎಫ್.ಐ. ಬಗ್ಗೆ
1952ರಲ್ಲಿ ಪ್ರಾರಂಭವಾದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ.) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಆಚರಣೆಯಾಗಿ ಅತ್ಯಂತ ಗೌರವದಿಂದ ಹೆಮ್ಮೆಯಾಗಿ ನಿಂತಿದೆ. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ ಮತ್ತು ಗೋವಾ ರಾಜ್ಯ ಸರ್ಕಾರ, ಗೋವಾ ಮನರಂಜನಾ ಸೊಸೈಟಿ ಜಂಟಿಯಾಗಿ ಆಯೋಜಿಸಿರುವ ಈ ಚಲನಚಿತ್ರ ಉತ್ಸವವು ಜಾಗತಿಕ ಸಿನಿಮೀಯ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್ ಗಳು ದಿಟ್ಟ ಪ್ರಯೋಗಗಳನ್ನು ಎದುರಿಸುತ್ತವೆ ಮತ್ತು ಪೌರಾಣಿಕ ಕಲಾವಿದರು ನಿರ್ಭೀತ ಮೊದಲ ಬಾರಿಗೆ ಬರುವವರೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐ.ಎಫ್.ಎಫ್.ಐ. ಅನ್ನು ನಿಜವಾಗಿಯೂ ಹೊಳೆಯುವಂತೆ ಮಾಡುವುದು ಅದರ ಸೃಜನಶೀಲ ಮಿಶ್ರಣ - ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್ ಗಳು, ಗೌರವಗಳು ಮತ್ತು ಕಲ್ಪನೆಗಳು, ಒಪ್ಪಂದಗಳು ಮತ್ತು ಸಹಯೋಗಗಳು ಹಾರುವ ಉನ್ನತ-ಶಕ್ತಿಯ ವೇವ್ಸ್ ಫಿಲ್ಮ್ ಬಜಾರ್. ನವೆಂಬರ್ 20 ರಿಂದ 28, 2025 ರವರೆಗೆ ಗೋವಾದ ಬೆರಗುಗೊಳಿಸುವ ಅತ್ಯಾಕರ್ಷಕ ಕರಾವಳಿ ಹಿನ್ನೆಲೆಯಲ್ಲಿ ಪ್ರದರ್ಶಿಸಲಾಗುವ 56ನೇ ಆವೃತ್ತಿಯು ಭಾಷೆಗಳು, ಪ್ರಕಾರಗಳು, ನಾವೀನ್ಯತೆಗಳು ಮತ್ತು ಧ್ವನಿಗಳ ಅದ್ಭುತ ವರ್ಣಪಟಲವನ್ನು ಭರವಸೆ ನೀಡುತ್ತದೆ - ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ತಲ್ಲೀನಗೊಳಿಸುವ ವಿಶೇಷ ಆಚರಣೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ, ಕ್ಲಿಕ್ ಮಾಡಿ:
https://www.pib.gov.in/PressReleasePage.aspx?PRID=2191742
https://www.pib.gov.in/PressReleasePage.aspx?PRID=2190381
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Handles: @IFFIGoa, @PIB_India, @PIB_Panaji
*****
Release ID:
2195079
| Visitor Counter:
2