ಗೃಹ ವ್ಯವಹಾರಗಳ ಸಚಿವಾಲಯ
ಮಹಿಳಾ ಕಬಡ್ಡಿ ವಿಶ್ವಕಪ್ 2025 ಗೆದ್ದ ಭಾರತೀಯ ಮಹಿಳಾ ಕಬ್ಬಡಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಕೋರಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
"ನಮ್ಮ ಮಹಿಳಾ ಕಬ್ಬಡಿ ತಂಡ ವಿಶ್ವ ವಿಜೇತರಾಗಿ ಇನ್ನೊಮ್ಮೆ ಇತಿಹಾಸ ಸೃಷ್ಟಿಸುತ್ತಿರುವುದರಿಂದ ಅಪಾರ ಹೆಮ್ಮೆಯ ಕ್ಷಣ ಅನುಭವವಾಗುತ್ತಿದೆ
ನಿಮ್ಮ ಅದ್ಭುತ ಗೆಲುವು ಭಾರತದ ಕ್ರೀಡಾ ಪ್ರತಿಭೆ ಏಕಮೇವಾದ್ವಿತೀಯ ಎಂಬುದನ್ನು ಪುನರುಚ್ಚರಿಸುತ್ತದೆ. ನಿಮ್ಮ ಭವಿಷ್ಯದ ಕ್ರೀಡಾ ಪ್ರಯತ್ನಗಳಿಗೆಲ್ಲಾ ನನ್ನ ಶುಭಾಶಯಗಳನ್ನು ಕೋರುತ್ತೇನೆ
प्रविष्टि तिथि:
24 NOV 2025 9:41PM by PIB Bengaluru
ಮಹಿಳಾ ಕಬಡ್ಡಿ ವಿಶ್ವಕಪ್ 2025 ಗೆದ್ದ ಭಾರತೀಯ ಮಹಿಳಾ ಕಬ್ಬಡಿ ತಂಡಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಕೋರಿದ್ದಾರೆ.
‘ಎಕ್ಸ್’ ತಾಣದಲ್ಲಿ, ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು “ನಮ್ಮ ಮಹಿಳಾ ಕಬ್ಬಡಿ ತಂಡ ಇತಿಹಾಸ ಬರೆಯುತ್ತಿರುವುದರಿಂದ ಅಪಾರ ಹೆಮ್ಮೆಯ ಕ್ಷಣ ಸೃಷ್ಟಿಯಾಗಿದೆ. ಮಹಿಳಾ ಕಬಡ್ಡಿ ವಿಶ್ವಕಪ್ 2025 ಅನ್ನು ಗೆದ್ದಿರುವುದಕ್ಕಾಗಿ ಇಡೀ ತಂಡಕ್ಕೆ ಅಭಿನಂದನೆಗಳು. ನಿಮ್ಮ ಅದ್ಭುತ ಗೆಲುವು ಭಾರತದ ಕ್ರೀಡಾ ಪ್ರತಿಭೆ ಏಕಮೇವಾದ್ವಿತೀಯವಾಗಿದೆ ಎಂಬುದನ್ನು ಪುನರುಚ್ಚರಿಸುತ್ತದೆ. ನಿಮ್ಮ ಭವಿಷ್ಯದ ಪ್ರಯತ್ನಗಳಿಗೆಲ್ಲಾ ನನ್ನ ಶುಭಾಶಯಗಳು.”
*****
(रिलीज़ आईडी: 2193879)
आगंतुक पटल : 40