iffi banner

ತಾಷ್ಕೆಂಟ್ ಪರ್ವತ ಶ್ರೇಣಿಗಳಿಂದ ಸ್ಲೋವಾಕಿಯಾದ ದೂರದ ದನಿಮುನಿ ರಹಿತ ಹಳ್ಳಿಗಳವರೆಗೆ, ಆಕರ್ಷಕ ಮಾನವ ಕಥೆಗಳು ಐ.ಎಫ್.ಎಫ್.ಐ. 56 ರಲ್ಲಿ ಬೆಳ್ಳಿ ಪರದೆಯಲ್ಲಿ ರಾರಾಜಿಸಿದವು


ಉಜ್ಬೆಕ್ ಮತ್ತು ಸ್ಲೋವಾಕ್ ಸಿನೆಮಾಗಳು ಹಳೆನೆನಪು ಮತ್ತು ಮಾನವ ವಸಾಹತುಗಳ ಸ್ಥಳಾಂತರದಲ್ಲಿ ಬೇರೂರಿರುವ ಮಾನವ ಸಹಜ ಕಥೆಗಳನ್ನು ಉಲ್ಲೇಖಿಸಲಾಗಿದೆ

56ನೇ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ.) ಜಾಗತಿಕ ಸಿನೆಮಾದ ವೈವಿಧ್ಯಮಯ ಚಲನಚಿತ್ರಗಳನ್ನು ಪ್ರಸ್ತುತಪಡಿಸುವುದನ್ನು ಇಂದು ಕೂಡಾ ಮುಂದುವರೆಸಿದೆ. ಪ್ರಪಂಚದಾದ್ಯಂತದ ಆಯ್ದ ಪ್ರಬಲ ನಿರೂಪಣೆಗಳನ್ನು ಇಂದು ಪ್ರದರ್ಶಿಸಿದೆ. ಗಮನ ಸೆಳೆಯುವ ಅಂತರರಾಷ್ಟ್ರೀಯ ಚಲನಚಿತ್ರಗಳಲ್ಲಿ ಉಜ್ಬೆಕ್ ಚಲನಚಿತ್ರ “ಇನ್ ಪರ್ಸ್ಯೂಟ್ ಆಫ್ ಸ್ಪ್ರಿಂಗ್” ಮತ್ತು ಸ್ಲೋವಾಕ್ ಚಲನಚಿತ್ರ “ಫ್ಲಡ್” ಸೇರಿವೆ.

ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ಎರಡು ಚಲನಚಿತ್ರಗಳ ನಿರ್ದೇಶಕರು, ನಿರ್ಮಾಪಕರು ಮತ್ತು ನಟ-ನಟಿಯರು ತಮ್ಮ ಚಲನಚಿತ್ರ ನಿರ್ಮಾಣ ಪ್ರಯಾಣದ ಒಳನೋಟಗಳನ್ನು ಪ್ರೇಕ್ಷಕರ ಜೊತೆ ಹಂಚಿಕೊಂಡರು.

ಸ್ಲೋವಾಕ್ ಚಲನಚಿತ್ರ "ಫ್ಲಡ್" ನ ನಿರ್ಮಾಪಕಿ ಕಟಾರಿನಾ ಕ್ರನಾಕೋವಾ, ಈ ಚಿತ್ರವು ನೀರಿನ ಜಲಾಶಯದ ನಿರ್ಮಾಣಕ್ಕಾಗಿ ಹಳ್ಳಿಯ ಸ್ಥಳಾಂತರವನ್ನು ಆಧರಿಸಿದೆ ಎಂದು ಹೇಳಿದರು. ಸ್ಲೋವಾಕಿಯಾದ ಮಜೋವಾ ಪ್ರದೇಶದಲ್ಲಿ ಚಿತ್ರೀಕರಿಸಲಾದ ಸುಮಾರು 80% ಪಾತ್ರವರ್ಗವು ರುಥೇನಿಯನ್ ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನು ಒಳಗೊಂಡಿದೆ. "ಈ ಚಿತ್ರವು ರುಥೇನಿಯನ್ ಸಮುದಾಯಕ್ಕೆ ಬೆಳ್ಳಿ ಪರದೆಯ ಮೇಲೆ ತಮ್ಮದೇ ಭಾಷೆಯಲ್ಲಿ ಪ್ರದರ್ಶನ ನೀಡುವ ಅಪರೂಪದ ಅವಕಾಶವನ್ನು ನೀಡಿತು" ಎಂದು ಅವರು ಹೇಳಿದರು.

ಅರ್ಜೆಂಟೀನಾದಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡ ನಂತರ, “ಪ್ರವಾಹ (ಫ್ಲಡ್)” ತನ್ನ ಎರಡನೇ ವಿಶ್ವಾದ್ಯಂತ ತೆರೆಕಾಣಲು ಐ.ಎಫ್.ಎಫ್.ಐ. ಗೋವಾದಲ್ಲಿ ಪ್ರಥಮವಾಗಿ ಪ್ರದರ್ಶನಗೊಂಡಿತು. ಚಿತ್ರ ಜೀವನ ಆಧಾರಿತ ಕಥೆಯಾಗಿದೆ, ನೈಜ-ಜೀವನದ ಯೋಜನೆಯಿಂದ ಪ್ರಭಾವಿತರಾದ ಸಮುದಾಯಗಳಿಗಾಗಿ ತಂಡವು ವಿಶೇಷ ಪ್ರದರ್ಶನವನ್ನು ಕೂಡಾ ಯೋಜಿಸಿದೆ.

ಉಜ್ಬೆಕ್ ಚಲನಚಿತ್ರ "ಇನ್ ಪರ್ಸ್ಯೂಟ್ ಆಫ್ ಸ್ಪ್ರಿಂಗ್" ಅನ್ನು ನಿರ್ದೇಶಕ ಅಯೂಬ್ ಶಖೋಬಿದ್ದಿನೋವ್ ಮತ್ತು ಚಲನಚಿತ್ರದ ಪ್ರಮುಖ ನಟಿ ಫರೀನಾ ಜುಮಾವಿಯಾ ಪತ್ರಿಕಾಗೋಷ್ಠಿಯಲ್ಲಿ ಪ್ರತಿನಿಧಿಸಿದರು. ಚಿತ್ರವನ್ನು ಪರಿಚಯಿಸುತ್ತಾ, ನೋವಿನ ನೆನಪುಗಳು ಮತ್ತು ದೀರ್ಘಕಾಲದಿಂದ ಸಮಾಧಿ ಮಾಡಲಾದ ರಹಸ್ಯಗಳನ್ನು ಎದುರಿಸುವ ಅದರ ನಾಯಕಿ ರಾಹತ್ ಶುಕುರೋವಾ ಅವರ ಪ್ರಯಾಣವನ್ನು ಇದು ಅನುಸರಿಸುತ್ತದೆ ಎಂದು ನಿರ್ದೇಶಕರು ಹೇಳಿದರು. "ಭೂತಕಾಲವು ಮತ್ತೆ ಹೊರಹೊಮ್ಮುತ್ತಿದ್ದಂತೆ, ರಾಹತ್ ಶುಕುರೋವಾ ತನ್ನೊಂದಿಗೆ ಸಮನ್ವಯವನ್ನು ಪಡೆಯಲು ಹಳೆಯ ಗಾಯಗಳು ಮತ್ತು ಗುಪ್ತ ಸತ್ಯಗಳ ಮೂಲಕ ಸಾಗುತ್ತಾಳೆ" ಎಂದು ಅವರು ವಿವರಿಸಿದರು.

ಸೋವಿಯತ್ ಯುಗದ ಅಂತಿಮ ವರ್ಷಗಳಲ್ಲಿ ಉಜ್ಬೇಕಿಸ್ತಾನ್ ನಲ್ಲಿ ಈ ಘಟನೆ ನಡೆದರೂ ಕೂಡಾ, ಚಿತ್ರದ ವಿಷಯಗಳು ಮತ್ತು ಭಾವನಾತ್ಮಕ ಹೋರಾಟಗಳು ಇಂದಿಗೂ ಪ್ರಸ್ತುತವಾಗಿವೆ. ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ, ಚಲನಚಿತ್ರ ನಿರ್ಮಾಪಕರಿಗೆ ತಮ್ಮ ಕೆಲಸವನ್ನು ಪ್ರದರ್ಶಿಸಲು ಮತ್ತು ಜಾಗತಿಕ ನೆಟ್ವರ್ಕ್ ಗಳನ್ನು ನಿರ್ಮಿಸಲು ಅಮೂಲ್ಯವಾದ ಅಂತಾರಾಷ್ಟ್ರೀಯ ವೇದಿಕೆಯನ್ನು ಐ.ಎಫ್.ಎಫ್.ಐ. ವೇದಿಕೆ ಒದಗಿಸುತ್ತದೆ ಎಂದು ನಿರ್ದೇಶಕರು ಹೇಳಿದರು. "ಐಎಫ್ಎಫ್ಐ - ಇದರ ಭಾಗವಾಗಲು ನಮಗೆ ಸಂತೋಷವಾಗಿದೆ" ಎಂದು ಅವರು ಹೇಳಿದರು.

ಸಾರಾಂಶ: ವಸಂತಕಾಲದ ಅನ್ವೇಷಣೆಯಲ್ಲಿ

ತಾಷ್ಕೆಂಟ್ ನಿವಾಸಿಯಾದ ರಾಹತ್ ಶುಕುರೋವಾ, ತನ್ನ ಹಿಂದಿನ ಕಾಲದ ಒಬ್ಬ ವ್ಯಕ್ತಿಯ ಸಾವಿನ ಬಗ್ಗೆ ತಿಳಿದುಕೊಂಡು, ತಾನು ಒಮ್ಮೆ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ದೂರದ ಪರ್ವತ ಹಳ್ಳಿಯಾದ ಆರ್ಚಲಿಗೆ ಹಿಂತಿರುಗುತ್ತಾಳೆ. ದಶಕಗಳ ಹಿಂದೆ, ಸೋವಿಯತ್ ಯುಗದಲ್ಲಿ, ಅವಮಾನ ಮತ್ತು ಗಡಿಪಾರುಗಳಿಗೆ ಕಾರಣವಾದ ಹಗರಣದಿಂದ ಅವಳ ಜೀವನವು ಛಿದ್ರವಾಯಿತು. ಈಗ, ಆರ್ಚಲಿಯಲ್ಲಿ ಹಿಂತಿರುಗಿ, ಅವಳು ನೋವಿನ ನೆನಪುಗಳು ಮತ್ತು ದೀರ್ಘಕಾಲದಿಂದ ಸಮಾಧಿ ಮಾಡಲಾದ ರಹಸ್ಯಗಳನ್ನು ಎದುರಿಸಲು ಒತ್ತಾಯಿಸಲ್ಪಡುತ್ತಾಳೆ. ಭೂತಕಾಲವು ಮತ್ತೆ ಹೊರಹೊಮ್ಮುತ್ತಿದ್ದಂತೆ, ರಾಹತ್ ಶುಕುರೋವಾ ತನ್ನ ಹಳೆಯ ಗಾಯಗಳು ಮತ್ತು ಗುಪ್ತ ಸತ್ಯಗಳ ಮೂಲಕ ತನ್ನೊಂದಿಗೆ ಸಮನ್ವಯವನ್ನು ಬಯಸುತ್ತಾ ತನ್ನ ದಾರಿಯಲ್ಲಿ ಸಾಗುತ್ತಾಳೆ.

ಸಾರಾಂಶ: ಪ್ರವಾಹ (ಫ್ಲಡ್)

ಮಾರಳ ತವರೂರುನ ಕಣಿವೆಯಲ್ಲಿರುವ ಹಳ್ಳಿಗಳ ಭವಿಷ್ಯವು ಹೊಸ ನೀರಿನ ಜಲಾಶಯದ ಯೋಜನೆಯಿಂದ ಮುಚ್ಚಲ್ಪಟ್ಟಿದೆ ಮತ್ತು ಗ್ರಾಮಸ್ಥರು ಕ್ರಮೇಣ ತಮ್ಮ ಮನೆಗಳನ್ನು ತೊರೆಯುವಂತೆ ಒತ್ತಾಯಿಸಲಾಗುತ್ತದೆ. ಮಾರಾ ಗ್ರಾಮಾಂತರವನ್ನು ತೊರೆದು ಪಟ್ಟಣದಲ್ಲಿ ಅಧ್ಯಯನ ಮಾಡಲು ಹಂಬಲಿಸುತ್ತಾಳೆ, ಆದಾಗ್ಯೂ, ಅವಳ ತಂದೆ, ರುಥೇನಿಯನ್ ರೈತ, ಅವಳನ್ನು ಕುಟುಂಬದ ಭೂಮಿಗೆ ಕಟ್ಟಿಹಾಕುತ್ತಾನೆ, ಅಂತ್ಯ ಸಮೀಪಿಸುತ್ತಿದ್ದರೂ ಅದನ್ನು ಅವನು ಬಿಡಲು ನಿರಾಕರಿಸುತ್ತಾನೆ. ವಿಫಲವಾದ ಮೂಲಸೌಕರ್ಯ, ಅಧಿಕಾರಿಗಳ ಗುಪ್ತ ಭೀತಿ ಮತ್ತು ಬರುತ್ತಿರುವ ಪ್ರವಾಹದ ವಿರುದ್ಧ ಹೋರಾಡುವ ಹಳ್ಳಿ ಸಮುದಾಯದ ಹೃದಯಭಾಗದಲ್ಲಿ ಮಾರಾ ಕಾಣಿಸಿಕೊಳ್ಳುತ್ತಾಳೆ.

ಪಿಸಿ ಲಿಂಕ್:

ಐ.ಎಫ್.ಎಫ್.ಐ. ಬಗ್ಗೆ

1952ರಲ್ಲಿ ಪ್ರಾರಂಭವಾದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ.) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಆಚರಣೆಯಾಗಿ ಅತ್ಯಂತ ಗೌರವದಿಂದ ಹೆಮ್ಮೆಯಾಗಿ ನಿಂತಿದೆ. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ , ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ ಮತ್ತು ಗೋವಾ ರಾಜ್ಯ ಸರ್ಕಾರ, ಗೋವಾ ಮನರಂಜನಾ ಸೊಸೈಟಿ  ಜಂಟಿಯಾಗಿ ಆಯೋಜಿಸಿರುವ ಈ ಚಲನಚಿತ್ರ ಉತ್ಸವವು ಜಾಗತಿಕ ಸಿನಿಮೀಯ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್ ಗಳು ದಿಟ್ಟ ಪ್ರಯೋಗಗಳನ್ನು ಎದುರಿಸುತ್ತವೆ ಮತ್ತು ಪೌರಾಣಿಕ ಕಲಾವಿದರು ನಿರ್ಭೀತ ಮೊದಲ ಬಾರಿಗೆ ಬರುವವರೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐ.ಎಫ್.ಎಫ್.ಐ. ಅನ್ನು ನಿಜವಾಗಿಯೂ ಹೊಳೆಯುವಂತೆ ಮಾಡುವುದು ಅದರ ಸೃಜನಶೀಲ ಮಿಶ್ರಣ - ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್ ಗಳು, ಗೌರವಗಳು ಮತ್ತು ಕಲ್ಪನೆಗಳು, ಒಪ್ಪಂದಗಳು ಮತ್ತು ಸಹಯೋಗಗಳು ಹಾರುವ ಉನ್ನತ-ಶಕ್ತಿಯ ವೇವ್ಸ್ ಫಿಲ್ಮ್ ಬಜಾರ್.  ನವೆಂಬರ್ 20 ರಿಂದ 28, 2025 ರವರೆಗೆ ಗೋವಾದ ಬೆರಗುಗೊಳಿಸುವ ಅತ್ಯಾಕರ್ಷಕ ಕರಾವಳಿ ಹಿನ್ನೆಲೆಯಲ್ಲಿ ಪ್ರದರ್ಶಿಸಲಾಗುವ 56ನೇ ಆವೃತ್ತಿಯು ಭಾಷೆಗಳು, ಪ್ರಕಾರಗಳು, ನಾವೀನ್ಯತೆಗಳು ಮತ್ತು ಧ್ವನಿಗಳ ಅದ್ಭುತ ವರ್ಣಪಟಲವನ್ನು ಭರವಸೆ ನೀಡುತ್ತದೆ - ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ತಲ್ಲೀನಗೊಳಿಸುವ ವಿಶೇಷ ಆಚರಣೆಯಾಗಿದೆ.

ಹೆಚ್ಚಿನ ಮಾಹಿತಿಗಾಗಿ,ಕ್ಲಿಕ್ ಮಾಡಿ:

IFFI Website: https://www.iffigoa.org/

PIB’s IFFI Microsite: https://www.pib.gov.in/iffi/56/

PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F

X Handles: @IFFIGoa, @PIB_India, @PIB_Panaji

 

*****


Great films resonate through passionate voices. Share your love for cinema with #IFFI2025, #AnythingForFilms and #FilmsKeLiyeKuchBhi. Tag us @pib_goa on Instagram, and we'll help spread your passion! For journalists, bloggers, and vloggers wanting to connect with filmmakers for interviews/interactions, reach out to us at iffi.mediadesk@pib.gov.in with the subject line: Take One with PIB.


Release ID: 2193628   |   Visitor Counter: 6