ಗೃಹ ವ್ಯವಹಾರಗಳ ಸಚಿವಾಲಯ
ವಿಶ್ವಕಪ್ ಬಾಕ್ಸಿಂಗ್ ಫೈನಲ್‌ನಲ್ಲಿ 9 ಚಿನ್ನ, 6 ಬೆಳ್ಳಿ ಮತ್ತು 5 ಕಂಚಿನ ಪದಕ ಸೇರಿ 20 ಪದಕಗಳನ್ನು ಗೆದ್ದ ಭಾರತೀಯ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ
ನಮ್ಮ ದೇಶದ ಹೆಮ್ಮೆಯನ್ನು ಹೊಸ ಎತ್ತರಕ್ಕೆ ಏರಿಸಿದ ಭಾರತೀಯ ತಂಡ
ನಿಮ್ಮ ಕಠಿಣ ಪರಿಶ್ರಮ , ಬದ್ಧತೆ ಮತ್ತು ಕೌಶಲ್ಯಗಳು ಉದಯೋನ್ಮುಖ ಕ್ರೀಡಾಪಟುಗಳಿಗೆ ಸ್ಪೂರ್ತಿದಾಯಕ ಸುವರ್ಣ ಮಾರ್ಗವನ್ನು ಸುಗಮಗೊಳಿಸಿವೆ
Posted On:
24 NOV 2025 2:40PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ವಿಶ್ವಕಪ್ ಬಾಕ್ಸಿಂಗ್ ಫೈನಲ್‌ನಲ್ಲಿ 9 ಚಿನ್ನ, 6 ಬೆಳ್ಳಿ ಮತ್ತು 5 ಕಂಚು ಸೇರಿದಂತೆ 20 ಪದಕಗಳನ್ನು ಗೆದ್ದ ಭಾರತೀಯ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಶ್ರೀ ಅಮಿತ್ ಶಾ ಅವರು ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ
”ನಮ್ಮ ಬಾಕ್ಸರ್‌ಗಳ ಅದ್ಭುತ ಪ್ರದರ್ಶನ! ವಿಶ್ವ ಬಾಕ್ಸಿಂಗ್ ಕಪ್ ಫೈನಲ್‌ನಲ್ಲಿ 9 ಚಿನ್ನ, 6 ಬೆಳ್ಳಿ ಮತ್ತು 5 ಕಂಚು ಸೇರಿದಂತೆ 20 ಪದಕಗಳನ್ನು ಗೆದ್ದ ನಮ್ಮ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು, ತಂಡ ನಮ್ಮ ರಾಷ್ಟ್ರದ ಹೆಮ್ಮೆಯನ್ನು ಹೊಸ ಎತ್ತರಕ್ಕೆ ಏರಿಸಿದೆ. ನಿಮ್ಮ ಕಠಿಣ ಪರಿಶ್ರಮ, ಬದ್ಧತೆ ಮತ್ತು ಕೌಶಲ್ಯಗಳು ಉದಯೋನ್ಮುಖ ಕ್ರೀಡಾಪಟುಗಳಿಗೆ ಸ್ಪೂರ್ತಿದಾಯಕ ಸುವರ್ಣ ಮಾರ್ಗವನ್ನು ಸುಗಮಗೊಳಿಸಿವೆ. ನಿಮ್ಮ ಹಾದಿಯಲ್ಲಿ ಸದಾ ಯಶಸ್ಸು ಬೆಳಗಲಿ.’’
*****
(Release ID: 2193589)
Visitor Counter : 6