ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಶಿಕ್ಷಣ ಸಚಿವಾಲಯದಿಂದ 2025ರ ಡಿಸೆಂಬರ್ 2 ರಿಂದ ಕಾಶಿ ತಮಿಳ್‌ ಸಂಗಮಂ (ಕೆ.ಟಿ.ಎಸ್) 4.0 ಆಯೋಜನೆ


ಕೆ.ಟಿ.ಎಸ್‌ 4.0 ತಮಿಳುನಾಡು ಮತ್ತು ಕಾಶಿ ನಡುವ ಇನ ನಾಗರಿಕ ಬಾಂಧವ್ಯಗಳ ಆಚರಣೆ

Posted On: 22 NOV 2025 11:34AM by PIB Bengaluru

ಕೇಂದ್ರ ಶಿಕ್ಷಣ ಸಚಿವಾಲಯವು ತಮಿಳುನಾಡು ಮತ್ತು ಕಾಶಿ ನಡುವಿನ ಗಾಢವಾದ ನಾಗರಿಕ ಸಂಬಂಧಗಳನ್ನು ನೆನಪು ಮಾಡಿಕೊಂಡು ಸಂಭ್ರಮಿಸಲು 2025ರ ಡಿಸೆಂಬರ್ 2 ರಿಂದ ಕಾಶಿ ತಮಿಳು ಸಂಗಮಮ್ (ಕೆ.ಟಿ.ಎಸ್) 4.0ನ ನಾಲ್ಕನೇ ಆವೃತ್ತಿಯನ್ನು ಆಯೋಜಿಸುತ್ತಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಪ್ರೇರೇಪಣೆ ಪಡೆದಿರುವ ಈ ಉಪಕ್ರಮವು, ಎರಡೂ ಪ್ರದೇಶಗಳ ನಡುವಿನ ನಾಗರಿಕತೆ, ಸಾಂಸ್ಕೃತಿಕ, ಭಾಷಾಶಾಸ್ತ್ರ ಮತ್ತು  ಜನರ ನಡುವಿನ ಸಂಪರ್ಕವನ್ನು ಗೌರವಿಸುವುದನ್ನು ಮುಂದುವರೆಸುತ್ತದೆ ಮತ್ತು ಇದು ಏಕ ಭಾರತ ಶ್ರೇಷ್ಠ ಭಾರತದ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ.

ಈ ಕಾರ್ಯಕ್ರಮವನ್ನು ಐ.ಐ.ಟಿ ಮದ್ರಾಸ್ ಮತ್ತು ಬಿ.ಹೆಚ್‌.ಯು ವಾರಣಾಸಿ ಸಂಯೋಜಿಸುತ್ತಿವೆ ಮತ್ತು ಸಂಸ್ಕೃತಿ ಸಚಿವಾಲಯ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಪ್ರವಾಸೋದ್ಯಮ ಸಚಿವಾಲಯ, ಜವಳಿ ಸಚಿವಾಲಯ, ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ,  ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ, ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ, ಉತ್ತರ ಪ್ರದೇಶ ಸರ್ಕಾರ ಅದಕ್ಕೆ ಸಂಪೂರ್ಣ ಬೆಂಬಲ ನೀಡಿವೆ.

2022ರಲ್ಲಿ ಆರಂಭವಾದಾಗಿನಿಂದ ಕಾಶಿ ತಮಿಳು ಸಂಗಮವು ಅಗಾಧವಾದ ಸಾರ್ವಜನಿಕ ಭಾಗಿದಾರಿಕೆಗೆ ಸಾಕ್ಷಿಯಾಗಿದೆ ಮತ್ತು ಭಾರತದ ಎರಡು ಹಳೆಯ ಜ್ಞಾನ ಸಂಪ್ರದಾಯಗಳನ್ನು ಮತ್ತೆ ಬೆಸೆಯುವ ಮಹತ್ವದ ಸಾಂಸ್ಕೃತಿಕ ಸೇತುವೆಯಾಗಿ ಹೊರಹೊಮ್ಮಿದೆ. ಕೆ.ಟಿ.ಎಸ್‌ನ ಹಿಂದಿನ ಮೂರು ಆವೃತ್ತಿಗಳ ಯಶಸ್ಸಿನ ಮೇಲೆ ರೂಪಿಸಲಾಗುತ್ತಿರುವ 4 ನೇ ಆವೃತ್ತಿಯು, ವೇಗವರ್ಧಿತ ಕಲಿಕಾ ವಿನಿಮಯ, ಸಾಂಸ್ಕೃತಿಕ ತಲ್ಲೀನತೆ, ಶೈಕ್ಷಣಿಕ ಸಂವಹನಗಳು ಮತ್ತು ಹೆಚ್ಚಿನ ಯುವಜನತೆ ಭಾಗವಹಿಸುವಿಕೆಯ ಮೂಲಕ ತೊಡಗಿಸಿಕೊಳ್ಳುವಿಕೆಯನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಹೊಂದಿದೆ.

2025ನೇ ಘೋಷವಾಕ್ಯ- “ತಮಿಳು ಕಲಿಯಿರಿ- ತಮಿಳ್ ಕರಕಲಂ’’

ಭಾರತದಾದ್ಯಂತ ತಮಿಳು ಕಲಿಕೆಯನ್ನು ಉತ್ತೇಜಿಸುವ ಮತ್ತು ಭಾರತದ ಶಾಸ್ತ್ರೀಯ ಭಾಷಾ ಮತ್ತು ಸಾಹಿತ್ಯ ಪರಂಪರೆಯ ಬಗ್ಗೆ ವ್ಯಾಪಕ ಮೆಚ್ಚುಗೆಯನ್ನು ಬೆಳೆಸುವ ಗುರಿಯೊಂದಿಗೆ "ತಮಿಳು ಕಲಿಯಿರಿ - ತಮಿಳು ಕರಕಳಂ" ಎಂಬ ವಿಷಯದ ಸುತ್ತ ಕೆ.ಟಿ.ಎಸ್‌ 4.0 ಅನ್ನು ಆಯೋಜಿಸಲಾಗುತ್ತಿದೆ.

ಕೆ.ಟಿ.ಎಸ್‌ ನ ಈ ಆವೃತ್ತಿಯಲ್ಲಿ, ತಮಿಳುನಾಡಿನಿಂದ 1,400ಕ್ಕೂ ಅಧಿಕ ಪ್ರತಿನಿಧಿಗಳು ಈ ಕೆಳಗಿನ ಏಳು ವಿಭಾಗಗಳ ಅಡಿಯಲ್ಲಿ ಭಾಗವಹಿಸಲಿದ್ದಾರೆ.

1. ವಿದ್ಯಾರ್ಥಿಗಳು

2. ಶಿಕ್ಷಕರು

3. ಬರಹಗಾರರು & ಮಾಧ್ಯಮ ವೃತ್ತಿಪರರರು

4. ಕೃಷಿ & ಸಂಬಂಧಿತ ವಲಯಗಳು

5. ವೃತ್ತಿಪರರು & ಕಲಾಕಾರರು

6. ಮಹಿಳೆಯರು

7. ಆಧ್ಯಾತ್ಮಿಕ ವಿದ್ವಾಂಸರು ಮತ್ತು ಅಧಯನಕಾರರು

ಪ್ರತಿನಿಧಿಗಳು ವಾರಣಾಸಿ, ಪ್ರಯಾಗ್‌ರಾಜ್ ಮತ್ತು ಅಯೋಧ್ಯೆಗೆ ಭೇಟಿ ನೀಡುವುದರ ಜೊತೆಗೆ ಸಂವಾದಗಳು, ವಿಚಾರ ಸಂಕಿರಣಗಳು, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಸ್ಥಳೀಯ ಪಾಕಪದ್ಧತಿ, ಕರಕುಶಲ ವಸ್ತುಗಳು ಮತ್ತು ಪರಂಪರೆಗೆ ತೆರೆದುಕೊಳ್ಳುವುದು ಸೇರಿದಂತೆ 8 ದಿನಗಳ ಪ್ರವಾಸ ಅನುಭವವನ್ನು ಅನುಭವಿಸಲಿದ್ದಾರೆ.

ಸಮ್ಮೇಳನದ ಪ್ರತಿನಿಧಿಗಳನ್ನು ಮಹಾಕವಿ ಸುಬ್ರಹ್ಮಣ್ಯ ಭಾರತೀಯರ ಪೂರ್ವಜರ ಮನೆ, ಕೇದಾರ ಘಾಟ್,  “ಮಿನಿ ತಮಿಳುನಾಡು" ಪ್ರದೇಶದ ಕಾಶಿ ಮದಮ್, ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಮಾತಾ ಅನ್ನಪೂರ್ಣ ದೇವಸ್ಥಾನ ಸೇರಿದಂತೆ ವಾರಣಾಸಿಯ ಮಹತ್ವದ ತಮಿಳು ಪರಂಪರೆಯ ಸ್ಥಳಗಳಿಗೆ  ಕರೆದೊಯ್ಯಲಾಗುತ್ತದೆ. ಅವರು ಶೈಕ್ಷಣಿಕ ಮತ್ತು ಸಾಹಿತ್ಯಿಕ ಸಂವಾದಕ್ಕಾಗಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್ ಯು) ತಮಿಳು ವಿಭಾಗಕ್ಕೂ ಭೇಟಿ ನೀಡಲಿದ್ದಾರೆ.

ಕೆ.ಟಿ.ಎಸ್‌ 4.0 ಅಡಿಯಲ್ಲಿ ಪ್ರಮುಖ ಉಪಕ್ರಮಗಳು

  1. ತೆಂಕಾಶಿಯಿಂದ ಕಾಶಿಗೆ ಋಷಿ ಅಗಸ್ತ್ಯ ವಾಹನ ಯಾತ್ರೆ

ತಮಿಳುನಾಡು ಮತ್ತು ಕಾಶಿ ನಡುವಿನ ಪ್ರಾಚೀನ ಸಾಂಸ್ಕೃತಿಕ ಮಾರ್ಗಗಳನ್ನು ಪತ್ತೆ ಹಚ್ಚುವ "ಋಷಿ ಅಗಸ್ತ್ಯ ವಾಹನ ಯಾತ್ರೆ"ಯನ್ನು2025 ಡಿಸೆಂಬರ್ 2 ರಂದು ತೆಂಕಾಶಿಯಲ್ಲಿ ಆಯೋಜಿಸಲಾಗಿದ್ದು, ಅದು 2025ರ ಡಿಸೆಂಬರ್ 10 ರಂದು ಕಾಶಿಯಲ್ಲಿ ಮುಕ್ತಾಯಗೊಳ್ಳಲಿದೆ. ಈ ಯಾತ್ರೆಯು ಪಾಂಡ್ಯರ ದೊರೆ ಶ್ರೀ ಆದಿ ವೀರ ಪರಾಕ್ರಮ ಪಾಂಡ್ಯನ ಪ್ರಯತ್ನಗಳನ್ನು ಸೂಚಿಸುತ್ತದೆ, ಅವರು ತಮಿಳುನಾಡಿನಿಂದ ಕಾಶಿಗೆ ತಮ್ಮ ಪ್ರಯಾಣದ ಮೂಲಕ ಭಾರತೀಯ ಸಂಸ್ಕೃತಿಯಲ್ಲಿ ಏಕತೆಯ ಸಂದೇಶವನ್ನು ಹರಡಿದರು ಮತ್ತು ಶಿವನಿಗೆ ಮೀಸಲಾದ ದೇವಾಲಯವನ್ನು ನಿರ್ಮಿಸಿದರು. ಏಕತೆಯ ಮನೋಭಾವವನ್ನು ಒತ್ತಿಹೇಳಲು ಪಟ್ಟಣವನ್ನು ತೆಂಕಾಶಿ (ದಕ್ಷಿಣ ಕಾಶಿ) ಎಂದು ಮರುನಾಮಕರಣ ಮಾಡಿದರು.

ಈ ದಂಡಯಾತ್ರೆಯು ಚೇರ, ಚೋಳ, ಪಾಂಡ್ಯ, ಪಲ್ಲವ, ಚಾಲುಕ್ಯ ಮತ್ತು ವಿಜಯನಗರ ಕಾಲದ ನಾಗರಿಕ ಸಂಬಂಧಗಳ ಬೆಸುಗೆಯನ್ನು ಎತ್ತಿ ತೋರಿಸುತ್ತದೆಯಲ್ಲದೆ, ಶಾಸ್ತ್ರೀಯ ತಮಿಳು ಸಾಹಿತ್ಯ, ಸಿದ್ಧ ಔಷಧ ಮತ್ತು ಹಂಚಿಕೆಯ ಪರಂಪರೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ.

  1. ಉತ್ತರಪ್ರದೇಶ ವಾರಾಣಾಸಿ ಶಾಲೆಗಳಲ್ಲಿ ತಮಿಳು ಬೋಧನೆ

”ತಮಿಳು ಕರಕಳಂ’’ ಅಭಿಯಾನದಡಿಯಲ್ಲಿ 50 ಹಿಂದಿ ಬಲ್ಲ ತಮಿಳು ಶಿಕ್ಷಕರು ಕಾಶಿಯ ಶಾಲಾ ವಿದ್ಯಾರ್ಥಿಗಳಿಗೆ ತಮಿಳು ಕಲಿಸಲಿದ್ದಾರೆ.

3. ಉತ್ತರ ಪ್ರದೇಶದ ವಿದ್ಯಾರ್ಥಿಗಳಿಗಾಗಿ ತಮಿಳು ಕಲಿಕಾ ಅಧ್ಯಯನ ಪ್ರವಾಸಗಳು

15 ದಿನಗಳ ತಮಿಳು ಕಲಿಕಾ ಕಾರ್ಯಕ್ರಮಕ್ಕಾಗಿ ಕಾಶಿಯ ಒಟ್ಟು 300 ಕಾಲೇಜು ವಿದ್ಯಾರ್ಥಿಗಳು ತಮಿಳುನಾಡಿನ ನಿಯೋಜಿತ ಸಂಸ್ಥೆಗಳಿಗೆ ಪ್ರಯಾಣಿಸಲಿದ್ದಾರೆ. ಸಿಐಸಿಟಿ ಚೆನ್ನೈ ದೂರದೃಷ್ಟಿ ಮತ್ತು ಕಲಿಕಾ ಸಾಮಗ್ರಿಗಳನ್ನು ಒದಗಿಸಿದರೆ, ಆತಿಥೇಯ ಸಂಸ್ಥೆಗಳು ತಮಿಳುನಾಡಿನ ಪರಂಪರೆ, ಸಂಪ್ರದಾಯಗಳು ಮತ್ತು ಕಾಶಿಯೊಂದಿಗಿನ ಐತಿಹಾಸಿಕ ಸಂಬಂಧಗಳನ್ನು ಎತ್ತಿ ತೋರಿಸುವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರವಾಸಗಳನ್ನು ಆಯೋಜಿಸುತ್ತವೆ. ಈ ವಿದ್ಯಾರ್ಥಿಗಳನ್ನು ಚೆನ್ನೈನಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಗುವುದು.

ಸಾಂಸ್ಕೃತಿಕ ವಿನಿಮಯ, ಭಾಷಾ ಪುಷ್ಟೀಕರಣ ಮತ್ತು ಜ್ಞಾನ ಹಂಚಿಕೆಯ ಮೂಲಕ ರಾಷ್ಟ್ರೀಯ ಏಕತೆಯನ್ನು ಬಲಪಡಿಸುವ ಭಾರತ ಸರ್ಕಾರದ ಬದ್ಧತೆಯನ್ನು ಕಾಶಿ ತಮಿಳು ಸಂಗಮ 4.0 ಪುನರುಚ್ಚರಿಸುತ್ತದೆ. ವೈವಿಧ್ಯಮಯ ಸಮುದಾಯಗಳನ್ನು ಒಗೂಡಿಸುವ ಮೂಲಕ ಈ ಕಾರ್ಯಕ್ರಮವು ಭಾರತದ ನಾಗರಿಕತೆಯ ನಿರಂತರತೆ ಮತ್ತು ಸಾಂಸ್ಕೃತಿಕ ಏಕತೆಯ ಜೀವಂತ ಸಾರವನ್ನು ಸಾಕಾರಗೊಳಿಸುತ್ತದೆ.

ನೋಂದಣಿಗಾಗಿ ಸಂಪರ್ಕಿಸಿ:

ಕಾಶಿ ತಮಿಳು ಸಂಗಮ 4.0 ಗಾಗಿ ಎರಡು ನಿರ್ದಿಷ್ಟ ನೋಂದಣಿ ಪೋರ್ಟಲ್‌ಗಳನ್ನು ಆರಂಭಿಸಲಾಗಿದೆ.

ಇತರ ಎಲ್ಲಾ ವಿಭಾಗಗಳಲ್ಲಿ ಭಾಗವಹಿಸಲು, https://kashitamil.iitm.ac.in/ ಪೋರ್ಟಲ್, ಇತರ ಎಲ್ಲಾ ನೋಂದಣಿಗಳಿಗೆ ತೆರೆದಿರುತ್ತದೆ. ನೋಂದಣಿ 2025ರ ನವೆಂಬರ್ 21 ರಂದು ರಾತ್ರಿ 8:00 ಗಂಟೆಗೆ ಮುಚ್ಚಲ್ಪಡುತ್ತದೆ ಮತ್ತು ಆಯ್ಕೆ ರಸಪ್ರಶ್ನೆಯನ್ನು2025ರ ನವೆಂಬರ್ 23 ರಂದು ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ ನಡೆಸಲಾಗುವುದು.

ಎರಡನೇ ಪೋರ್ಟಲ್, https://kashitamil.bhu.edu.in/ 2025ರ ಡಿಸೆಂಬರ್  ಮೂರನೇ ವಾರದಲ್ಲಿ 15 ದಿನಗಳ ಶೈಕ್ಷಣಿಕ ಅಧ್ಯಯನಕ್ಕಾಗಿ ತಮಿಳುನಾಡಿಗೆ ಭೇಟಿ ನೀಡುವ 300 ವಿದ್ಯಾರ್ಥಿಗಳ ಆಯ್ಕೆಗೆ ಮಾತ್ರ ಸೀಮಿತಗೊಳಿಸಲಾಗಿದೆ.

 

*****


(Release ID: 2192831) Visitor Counter : 6