ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ದೇಶಾದ್ಯಂತ ಹೊಸ ಕಾರ್ಮಿಕ ಸಂಹಿತೆಗಳ ಜಾರಿಯ ಸಂದರ್ಭದಲ್ಲಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ದೇಶದ ಎಲ್ಲಾ ಕಾರ್ಮಿಕರಿಗೆ ತಮ್ಮ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಜಾರಿಗೆ ತರಲಾದ ಈ ಸಂಹಿತೆಗಳು, ಕಾರ್ಮಿಕ ಕಾನೂನುಗಳ ಇತಿಹಾಸದಲ್ಲಿಯೇ ಅತಿದೊಡ್ಡ ಸುಧಾರಣೆಯನ್ನು ಪ್ರತಿನಿಧಿಸುತ್ತವೆ

ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಮಹಿಳಾ ಕಾರ್ಮಿಕರಿಗೆ ಸಮಾನ ಅವಕಾಶಗಳು ಮತ್ತು ಗಿಗ್ (Gig) ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ಕಾನೂನು ಮಾನ್ಯತೆಯನ್ನು ಖಾತ್ರಿಪಡಿಸುವ ಈ ಸಂಹಿತೆಗಳು, ಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸಲಿವೆ

ಪ್ರಪಂಚದಾದ್ಯಂತದ ಕಾರ್ಮಿಕ ಕಾನೂನುಗಳಿಗೆ ಮಾದರಿಯಾಗಲು, ಇವು 'ವಿಕಸಿತ' ಮತ್ತು 'ಆತ್ಮನಿರ್ಭರ ಭಾರತ'ದ ನಿರ್ಮಾಣವನ್ನು ವೇಗಗೊಳಿಸಲಿವೆ

ಈ ಐತಿಹಾಸಿಕ ಸಂಹಿತೆಗಳಿಗಾಗಿ ಮೋದಿ ಅವರಿಗೆ ಧನ್ಯವಾದಗಳು

Posted On: 21 NOV 2025 8:37PM by PIB Bengaluru

ದೇಶಾದ್ಯಂತ ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿರುವ ಸಂದರ್ಭದಲ್ಲಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ದೇಶದ ಎಲ್ಲಾ ಕಾರ್ಮಿಕರಿಗೆ ತಮ್ಮ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.

'ಎಕ್ಸ್‌' ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಶ್ರೀ ಅಮಿತ್ ಶಾ ಅವರು, "ದೇಶಾದ್ಯಂತ ಹೊಸ ಕಾರ್ಮಿಕ ಸಂಹಿತೆಗಳ ಅನುಷ್ಠಾನದ ಸಂದರ್ಭದಲ್ಲಿ ಸಮಸ್ತ ಕಾರ್ಮಿಕರಿಗೆ ಶುಭಾಶಯಗಳು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಜಾರಿಗೆ ತರಲಾದ ಈ ಸಂಹಿತೆಗಳು ಕಾರ್ಮಿಕ ಕಾನೂನುಗಳ ಇತಿಹಾಸದಲ್ಲಿಯೇ ಅತಿದೊಡ್ಡ ಸುಧಾರಣೆಯನ್ನು ಪ್ರತಿನಿಧಿಸುತ್ತವೆ," ಎಂದು ಹೇಳಿದ್ದಾರೆ.

ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಮಹಿಳಾ ಕಾರ್ಮಿಕರಿಗೆ ಸಮಾನ ಅವಕಾಶಗಳು ಮತ್ತು ಗಿಗ್ (Gig) ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ಕಾನೂನು ಮಾನ್ಯತೆಯನ್ನು ಖಾತ್ರಿಪಡಿಸುವ ಈ ಸಂಹಿತೆಗಳು, ಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸಲಿವೆ ಎಂದು ಶ್ರೀ ಅಮಿತ್ ಶಾ ತಿಳಿಸಿದರು. ಜೊತೆಗೆ, ಪ್ರಪಂಚದಾದ್ಯಂತದ ಕಾರ್ಮಿಕ ಕಾನೂನುಗಳಿಗೆ ಮಾದರಿಯಾಗಲು, 'ವಿಕಸಿತ' ಮತ್ತು 'ಆತ್ಮನಿರ್ಭರ ಭಾರತ'ದ ನಿರ್ಮಾಣವನ್ನು ಇವು ವೇಗಗೊಳಿಸಲಿವೆ. ಈ ಐತಿಹಾಸಿಕ ಸಂಹಿತೆಗಳಿಗಾಗಿ ಮೋದಿಜಿಯವರಿಗೆ ಧನ್ಯವಾದಗಳು ಎಂದು ಅವರು ಬರೆದುಕೊಂಡಿದ್ದಾರೆ.

****


(Release ID: 2192744) Visitor Counter : 6