ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ದಕ್ಷಿಣ ಆಫ್ರಿಕಾ ಗಣರಾಜ್ಯಕ್ಕೆ ಭೇಟಿ ನೀಡುವ ಮುನ್ನ ಪ್ರಧಾನಮಂತ್ರಿ ಅವರ ನಿರ್ಗಮನ ಹೇಳಿಕೆ

Posted On: 21 NOV 2025 6:45AM by PIB Bengaluru

ದಕ್ಷಿಣ ಆಫ್ರಿಕಾದ ಅಧ್ಯಕ್ಷತೆಯಲ್ಲಿ ಜೋಹಾನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ 20ನೇ ಜಿ20 ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲು ಘನತೆವೆತ್ತ ಶ್ರೀ ಹೆಚ್.ಇ. ಸಿರಿಲ್ ರಾಮಫೋಸಾ ಅವರ ಆಹ್ವಾನದ ಮೇರೆಗೆ ನಾನು 2025ರ ನವೆಂಬರ್ 21-23 ರವರೆಗೆ ದಕ್ಷಿಣ ಆಫ್ರಿಕಾ ಗಣರಾಜ್ಯಕ್ಕೆ ಭೇಟಿ ನೀಡುತ್ತಿದ್ದೇನೆ.

ಇದು ಆಫ್ರಿಕಾದಲ್ಲಿ ನಡೆಯುತ್ತಿರುವ ಮೊದಲ ಜಿ20 ಶೃಂಗಸಭೆಯಾಗಿರುವುದರಿಂದ ಇದು ನಿರ್ದಿಷ್ಟವಾಗಿ ವಿಶೇಷ ಶೃಂಗಸಭೆಯಾಗಿದೆ. 2023ರಲ್ಲಿ ಜಿ20ರ ಭಾರತದ ಅಧ್ಯಕ್ಷತೆಯ ಸಮಯದಲ್ಲಿ, ಆಫ್ರಿಕನ್ ಯೂನಿಯನ್ ಜಿ20ರ ಸದಸ್ಯತ್ವವನ್ನು ಪಡೆದಿತ್ತು.

ಈ ಶೃಂಗಸಭೆಯು ಪ್ರಮುಖ ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಲು ಒಂದು ಅವಕಾಶವಾಗಿದೆ. ಈ ವರ್ಷದ ಜಿ20ರ ಧ್ಯೇಯವಾಕ್ಯ 'ಒಗ್ಗಟ್ಟು, ಸಮಾನತೆ ಮತ್ತು ಸುಸ್ಥಿರತೆ' ಆಗಿದ್ದು, ಈ ಮೂಲಕ ದಕ್ಷಿಣ ಆಫ್ರಿಕಾವು ಭಾರತದ ನವದೆಹಲಿ ಮತ್ತು ಬ್ರೆಜಿಲ್ ನ ರಿಯೊ ಡಿ ಜನೈರೊದಲ್ಲಿ ನಡೆದ ಹಿಂದಿನ ಶೃಂಗಸಭೆಗಳ ಫಲಿತಾಂಶಗಳನ್ನು ಮುಂದಕ್ಕೆ ಕೊಂಡೊಯ್ದಿದೆ. 'ವಸುಧೈವ ಕುಟುಂಬಕಂ' ಮತ್ತು 'ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ'ದ ನಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿ ನಾನು ಶೃಂಗಸಭೆಯಲ್ಲಿ ಭಾರತದ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತೇನೆ.

ಪಾಲುದಾರ ರಾಷ್ಟ್ರಗಳ ನಾಯಕರೊಂದಿಗಿನ ನನ್ನ ಸಂವಾದಗಳನ್ನು ಮತ್ತು ಶೃಂಗಸಭೆಯ ನೇಪಥ್ಯದಲ್ಲಿ ನಿಗದಿಯಾಗಿರುವ 6ನೇ ಐ.ಬಿ.ಎಸ್.ಎ ಶೃಂಗಸಭೆಯಲ್ಲಿ ಭಾಗವಹಿಸಲು ನಾನು ಎದುರು ನೋಡುತ್ತಿದ್ದೇನೆ.

ಈ ಭೇಟಿಯ ವೇಳೆ, ನಾನು ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯ ವಲಸಿಗರೊಂದಿಗಿನ ಸಂವಾದವನ್ನು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.

 

****


(Release ID: 2192386) Visitor Counter : 12