ಗೋವಾದಲ್ಲಿ ದೃಢವಾದ ಜಾಗತಿಕ ಸಹ-ನಿರ್ಮಾಣ ಮಾರುಕಟ್ಟೆಯನ್ನು ಪ್ರಸ್ತುತಪಡಿಸಲಿರುವ 'ವೇವ್ಸ್ ಫಿಲ್ಮ್ ಬಜಾರ್'ನ 19ನೇ ಆವೃತ್ತಿ
ಅಂತಾರಾಷ್ಟ್ರೀಯ ಹಣಕಾಸು ಮತ್ತು ಸಿನಿ ಉತ್ಸವಕ್ಕಾಗಿ 22 ಚಲನಚಿತ್ರಗಳು ಮತ್ತು ಐದು ಸಾಕ್ಷ್ಯಚಿತ್ರಗಳನ್ನು ಅಂತಿಮಗೊಳಿಸಲಾಗಿದೆ
ಈ ಹಿಂದೆ 'ಫಿಲ್ಮ್ ಬಜಾರ್' ಎಂದು ಕರೆಯಲ್ಪಡುತ್ತಿದ್ದ ಮತ್ತು ಈಗ 'ವೇವ್ಸ್ ಫಿಲ್ಮ್ ಬಜಾರ್' ಎಂದು ಮರುರೂಪಿಸಲ್ಪಟ್ಟಿರುವ ಭಾರತದ ಮಹತ್ವಾಕಾಂಕ್ಷೆಯ ಚಲನಚಿತ್ರ ಮಾರುಕಟ್ಟೆಯು 19ನೇ ಆವೃತ್ತಿಯ ರೂಪದಲ್ಲಿ ಮತ್ತೆ ಬಂದಿದೆ. ಅಂತರರಾಷ್ಟ್ರೀಯ ಹಣಕಾಸು ಮತ್ತು ಸಿನಿ ಉತ್ಸವಕ್ಕಾಗಿ ಅಂತಿಮಗೊಳಿಸಲಾದ ಆಯ್ದ ಯೋಜನೆಗಳು ಸೇರಿದಂತೆ ಚಲನಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳಿಗಾಗಿ ಸದೃಢ ಸಹ-ನಿರ್ಮಾಣ ಮಾರುಕಟ್ಟೆಯೊಂದಿಗೆ 'ವೇವ್ಸ್ ಫಿಲ್ಮ್ ಬಜಾರ್' ಮರಳುತ್ತಿದೆ. 56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) ನೇಪಥ್ಯದಲ್ಲಿ, ವೇವ್ಸ್ ಫಿಲ್ಮ್ ಬಜಾರ್ 2025ರ ನವೆಂಬರ್ 20 ರಿಂದ 24 ರವರೆಗೆ ಗೋವಾದ ಮ್ಯಾರಿಯಟ್ ರೆಸಾರ್ಟ್‌ನಲ್ಲಿ ನಡೆಯಲಿದೆ.
ಮುಂಬರುವ 19ನೇ ಆವೃತ್ತಿಯಲ್ಲಿ, 'ವೇವ್ಸ್ ಫಿಲ್ಮ್ ಬಜಾರ್' ಪ್ಯಾನ್-ಗ್ಲೋಬಲ್ ನಿರೂಪಣೆಯನ್ನು ಸಾಕಾರಗೊಳಿಸುವ 22 ಚಲನಚಿತ್ರಗಳನ್ನು ಪ್ರಸ್ತುತಪಡಿಸಲಿದೆ. ಸಹ-ನಿರ್ಮಾಣ ಮಾರುಕಟ್ಟೆಯು ಭಾರತ, ಫ್ರಾನ್ಸ್, ಬ್ರಿಟನ್, ಕೆನಡಾ, ಅಮೆರಿಕಾ, ರಷ್ಯಾ, ಫಿಲಿಪೈನ್ಸ್ ಮತ್ತು ಸಿಂಗಾಪುರದ ಯೋಜನೆಗಳ ಸದೃ ಆಯ್ಕೆಯನ್ನು ಒಳಗೊಂಡಿದೆ. ಈ ವೈವಿಧ್ಯಮಯ ಸಾಲಿನಲ್ಲಿ ಹಿಂದಿ, ಉರ್ದು, ಬಂಗಾಳಿ, ಮಣಿಪುರಿ, ತಂಗ್‌ಖುಲ್, ನೇಪಾಳಿ, ಮಲಯಾಳಂ, ಹರಿಯಾನ್ವಿ, ಇಂಗ್ಲಿಷ್, ಗುಜರಾತಿ, ಲಡಾಖಿ, ಕೊಂಕಣಿ, ಕನ್ನಡ, ಮರಾಠಿ, ಪಂಜಾಬಿ, ಕಾಶ್ಮೀರಿ, ರಷ್ಯನ್, ಸಂಸ್ಕೃತ ಮತ್ತು ಒಡಿಯಾ ಮುಂತಾದ ಭಾಷೆಗಳ ಕಥೆಗಳು ಸೇರಿವೆ. ಆಯ್ದ ಚಲನಚಿತ್ರ ನಿರ್ಮಾಪಕರು ತಮ್ಮ ಯೋಜನೆಗಳನ್ನು ಅಂತರರಾಷ್ಟ್ರೀಯ ಮತ್ತು ಭಾರತೀಯ ನಿರ್ಮಾಪಕರು, ವಿತರಕರು, ಉತ್ಸವದ ಯೋಜಕರು, ಹಣಕಾಸು ತಜ್ಞರು ಮತ್ತು ಮಾರಾಟ ಏಜೆಂಟರ ಮುಂದೆ ತೆರೆದಿಡಲು ಇಲ್ಲಿ ವೇದಿಕೆ ದೊರೆಯಲಿದೆ. ಇದು ಇವರ ನಡುವೆ ವೈಯಕ್ತಿಕ ಸಭೆಗಳಿಗೆ ಅಡಿಪಾಯ ಹಾಕುತ್ತದೆ ಮತ್ತು ಭವಿಷ್ಯದ ಸಂಭಾವ್ಯ ಸಹಯೋಗಗಳಿಗೆ ಅನುವು ಮಾಡಿಕೊಡುತ್ತದೆ.
ಇದಲ್ಲದೆ, ಈ ಆವೃತ್ತಿಯಲ್ಲಿ ಸಹ-ನಿರ್ಮಾಣ ಮಾರುಕಟ್ಟೆ ಸರಣಿಯು 5 ಸಾಕ್ಷ್ಯಚಿತ್ರಗಳನ್ನು ಸಹ ಹೊಂದಿರುತ್ತದೆ. ಐದು ಗಮನಾರ್ಹ ಸಾಕ್ಷ್ಯಚಿತ್ರ ಯೋಜನೆಗಳು ಕಲೆ, ಸಂಗೀತ ಮತ್ತು ಸಂಸ್ಕೃತಿ, ಪರಿಸರ, ಸುಸ್ಥಿರತೆ, ಶಿಕ್ಷಣ, ಮಹಿಳಾ ಚಳವಳಿ, ಲಿಂಗ ಮತ್ತು ಲೈಂಗಿಕತೆ, ಮಾನವಶಾಸ್ತ್ರ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ವ್ಯಾಪಿಸಿವೆ.
ಈ ವರ್ಷದ ಸಹ-ನಿರ್ಮಾಣ ಮಾರುಕಟ್ಟೆ ಶ್ರೇಣಿಯು ಉದಯೋನ್ಮುಖ ಧ್ವನಿಗಳು ಮತ್ತು ಅನುಭವಿ ಉದ್ಯಮದ ಅನುಭವಿಗಳ ನಡುವೆ ಚಿಂತನಶೀಲ ಸಮತೋಲನವನ್ನು ಪ್ರಸ್ತುತಪಡಿಸುತ್ತದೆ. ಇದರಲ್ಲಿ ಖ್ಯಾತ ಚಲನಚಿತ್ರ ನಿರ್ಮಾಪಕರು ಮತ್ತು ಕಂಟೆಂಟ್ ಸೃಷ್ಟಿಕರ್ತರಾದ ಕಿರಣ್ ರಾವ್, ವಿಕ್ರಮಾದಿತ್ಯ ಮೋಟ್ವಾನೆ, ಶಕುನ್ ಬಾತ್ರಾ, ದೇವಶಿಶ್ ಮಖೀಜಾ, ಇರಾ ದುಬೆ, ಸರಿತಾ ಪಾಟೀಲ್, ಶೌನಕ್ ಸೇನ್ ಮತ್ತು ಬಾಫ್ಟಾ ಪ್ರಶಸ್ತಿ ವಿಜೇತ ನಿರ್ದೇಶಕ ಬೆನ್ ಕ್ರಿಕ್ಟನ್ ಇತರರು ಇದ್ದಾರೆ.
'ಏಷ್ಯಾ ಟಿವಿ ಫೋರಂ ಮತ್ತು ಮಾರ್ಕೆಟ್' (ಎಟಿಎಫ್) ಜೊತೆ 'ವೇವ್ಸ್ ಫಿಲ್ಮ್ ಬಜಾರ್' ತನ್ನ ಪಾಲುದಾರಿಕೆಯನ್ನು ಘೋಷಿಸಿದೆ. ಸಹ-ಉತ್ಪಾದನಾ ಮಾರುಕಟ್ಟೆ ಉಪಕ್ರಮವು ಯೋಜನೆ ಅಂತರ-ವಿನಿಮಯದ ಉಪಕ್ರಮದ ಭಾಗವಾಗಿ "ಗ್ಲೋರಿಯಾ" ಎಂಬ ಯೋಜನೆಯನ್ನು ಸಹ ಒಳಗೊಂಡಿರುತ್ತದೆ.
'ಎನ್ಎಫ್‌ಡಿಸಿ'ಯ 'ಹ್ಯಾಂಡ್‌ಪಿಕ್ಡ್ ಫೋಕಸ್ಡ್ ಪ್ರಾಜೆಕ್ಟ್'ಗಳ ಅಡಿಯಲ್ಲಿ ಸಹ-ನಿರ್ಮಾಣ ಮಾರುಕಟ್ಟೆ ಉಪಕ್ರಮದ ಭಾಗವಾಗಿ ಮೂರು ಯೋಜನೆಗಳನ್ನು ಸೇರ್ಪಡೆಗೊಳಿಸಲಾಗಿದೆ. ಈ ವಿಭಾಗದಲ್ಲಿ ಕಾಣಿಸಿಕೊಂಡಿರುವ ಯೋಜನೆಗಳೆಂದರೆ "ಶೇಮ್ಡ್", "ಸ್ಮ್ಯಾಶ್" ಮತ್ತು "ಟೈಗರ್ ಇನ್ ದಿ ಲಯನ್ ಡೆನ್".
ಸಹ-ನಿರ್ಮಾಣ ಮಾರುಕಟ್ಟೆ ಉಪಕ್ರಮ ಯೋಜನೆಗಳು
1. ಉಲ್ಟಾ (ಮೇಡಂ) | ಭಾರತ, ಫ್ರಾನ್ಸ್, ಕೆನಡಾ | ಹಿಂದಿ
ನಿರ್ದೇಶಕ: ಪರೋಮಿತಾ ಧಾರ್, ನಿರ್ಮಾಪಕ- ಹಶ್ ತನ್ಮಯ್
2. ದೋಸ್ ಹೂ ಫ್ಲಿವ್ | ಭಾರತ | ಹಿಂದಿ, ಉರ್ದು, ಬೆಂಗಾಲಿ
ನಿರ್ದೇಶಕ: ಸೌಮ್ಯಕ್ ಕಾಂತಿ ಡಿ ಬಿಸ್ವಾಸ್, ನಿರ್ಮಾಪಕ- ಇರಾ ದುಬೆ
3. ಖೈ-ಹಿ (ರಾತ್ರಿ ಮತ್ತು ಹಗಲು) ಭಾರತ | ಪೌಲಾ/ಮಣಿಪುರಿ/ನೇಪಾಳಿ/ಇಂಗ್ಲೀಷ್
ನಿರ್ದೇಶಕರು- ಅಶೋಕ್ ವೀಲೌ, ನಿರ್ಮಾಪಕರು- ಶೌನಕ್ ಸುರ್ ಮತ್ತು ಪ್ರತೀಕ್ ಬಾಗಿ ಮತ್ತು ಅಲೆಕ್ಸಾಂಡರ್ ಲಿಯೋ ಪೌ
4. ದಿ ಮ್ಯಾನೇಜರ್ | ಭಾರತ | ಮಲಯಾಳಂ
ನಿರ್ದೇಶಕರು- ಸಂದೀಪ್ ಶ್ರೀಲೇಖಾ, ನಿರ್ಮಾಪಕರು- ಅನುಜ್ ತ್ಯಾಗಿ ಮತ್ತು ವಿಪಿನ್ ರಾಧಾಕೃಷ್ಣನ್.
5. ವಾಟ್ ರಿಮೇನ್ಸ್ ಉನ್‌ಸೆಡ್ | ಭಾರತ | ಹರಿಯಾನ್ವಿ, ಹಿಂದಿ, ಇಂಗ್ಲೀಷ್
ನಿರ್ದೇಶಕರು: ಕಲ್ಲೋಲ್ ಮುಖರ್ಜಿ, ನಿರ್ಮಾಪಕರು: ದೇವಶಿಶ್ ಮಖೀಜಾ, ಹರ್ಷ ಗ್ರೋವರ್ ಮತ್ತು ಆದಿತ್ಯ ಗ್ರೋವರ್
6. ಕಾಂಡ (ಈರುಳ್ಳಿ ರಹಿತ ) | ಭಾರತ | ಗುಜರಾತಿ, ಹಿಂದಿ
ನಿರ್ದೇಶಕ - ಆರತಿ ನೆಹರ್ಶ್, ನಿರ್ಮಾಪಕರು - ಶಕುನ್ ಬಾತ್ರಾ ಮತ್ತು ಡಿಂಪಿ ಅಗರ್ವಾಲ್
7. ಕಾಕ್ತೆಟ್ (ಮೂರ್ಖ) | ಭಾರತ, ಫ್ರಾನ್ಸ್ | ಲಡಾಖಿ
ನಿರ್ದೇಶಕ - ಸ್ಟೆನ್ಜಿನ್ ಟ್ಯಾಂಕಾಂಗ್, ನಿರ್ಮಾಪಕ - ರಿತು ಸರಿನ್
8. ಎ ಡೆತ್ ಫೋರ್‌ಟೋಲ್ಡ್ | ಭಾರತ | ಹಿಂದಿ
ನಿರ್ದೇಶಕರು: ಕಿಸ್ಲೆ ಕಿಸ್ಲೆ, ನಿರ್ಮಾಪಕರು: ತ್ರಿಬೆನಿ ರೈ, ಹಿಮಾಂಶು ಕೊಹ್ಲಿ ಮತ್ತು ನೇಹಾ ಮಲಿಕ್
9. ಟೈರ್ಸ್ ವಿಲ್ ಬಿ ಡಿಫ್ಲೇಟೆಡ್ | ಭಾರತ | ಹಿಂದಿ
ನಿರ್ದೇಶಕ - ರೋಹನ್ ರಂಗನಾಥನ್, ನಿರ್ಮಾಪಕ - ಶೌನಕ್ ಸೇನ್, ಅಮನ್ ಮನ್
10. ಮಾಯಾಪುರಿ (ಊಹೆಯ ನಗರ) | ಭಾರತ | ಹಿಂದಿ
ನಿರ್ದೇಶಕಿ - ಅರಣ್ಯ ಸಹಾಯ್, ನಿರ್ಮಾಪಕ - ಮಥಿವಾನನ್ ರಾಜೇಂದ್ರನ್
11. ಪುಥೆಂಕಚೇರಿ (ಸಚಿವಾಲಯ) | ಭಾರತ, ಕೆನಡಾ | ಮಲಯಾಳಂ
ನಿರ್ದೇಶಕ - ರಾಜೇಶ್ ಕೆ, ನಿರ್ಮಾಪಕ- ಜೇಮ್ಸ್ ಜೋಸೆಫ್ ವಲಿಯಕುಲತಿಲ್, ವೇದ್ ಪ್ರಕಾಶ್ ಕಟಾರಿಯಾ
12. ಸಜ್ದಾ | ಭಾರತ | ಹಿಂದಿ
ನಿರ್ದೇಶಕ - ಮೊಹಮ್ಮದ್ ಗನಿ, ನಿರ್ಮಾಪಕ - ಸಂಜಯ್ ಗುಲಾಟಿ
13. ಟೀಚರ್ಸ್ ಪೆಟ್ | ಭಾರತ, ಅಮೆರಿಕ | ಆಂಗ್ಲ
ನಿರ್ದೇಶಕರು: ಸಿಂಧು ಶ್ರೀನಿವಾಸ ಮೂರ್ತಿ, ನಿರ್ಮಾಪಕರು- ಐಶ್ವರ್ಯಾ ಸೋನಾರ್, ಶುಚಿ ದ್ವಿವೇದಿ, ವಿಕ್ರಮಾದಿತ್ಯ ಮೋಟ್ವಾನೆ.
14. 7 ಟು 7 | ಭಾರತ | ಗುಜರಾತಿ, ಹಿಂದಿ
ನಿರ್ದೇಶಕ - ನೆಮಿಲ್ ಶಾ, ನಿರ್ಮಾಪಕ - ನೆಮಿಲ್ ಶಾ ಮತ್ತು ರಾಜೇಶ್ ಶಾ
15. ಕಚುವಾ (ದಿ ಕ್ವಿಲ್) | ಭಾರತ | ಬೆಂಗಾಲಿ, ಹಿಂದಿ
ನಿರ್ದೇಶಕ - ಶಂಖಜಿತ್ ಬಿಸ್ವಾಸ್, ನಿರ್ಮಾಪಕ - ಸ್ವರಾಲಿಪಿ ಲಿಪಿ
16. ಶ್ಯಾಡೋ ಹಿಲ್ : ಆಫ್ ಸ್ಪಿರಿಟ್ಸ್ ಅಂಡ್ ಮೆನ್ | ಭಾರತ | ಕೊಂಕಣಿ, ಇಂಗ್ಲೀಷ್ , ಹಿಂದಿ
ನಿರ್ದೇಶಕ - ಬಾಸ್ಕೊ ಭಂಡಾರ್ಕರ್, ನಿರ್ಮಾಪಕ - ಕಿರಣ್ ರಾವ್ ಮತ್ತು ತಾನಾಜಿ ದಾಸ್ ಗುಪ್ತಾ
17. ಪುಷ್ಪವತಿ (ಹೂಗಾತಿ) | ಭಾರತ | ಕನ್ನಡ
ನಿರ್ದೇಶಕ - ಮನೋಜ್ ಕುಮಾರ್ ವಿ, ನಿರ್ಮಾಪಕ - ನಿತಿನ್ ಕೃಷ್ಣಮೂರ್ತಿ
18. ಸ್ವರ್ಣಪುಛೆರಿ| ಭಾರತ | ಹಿಂದಿ, ಮರಾಠಿ, ಕಾಶ್ಮೀರಿ
ನಿರ್ದೇಶಕ - ರಿತ್ವಿಕ್ ಗೋಸ್ವಾಮಿ, ನಿರ್ಮಾಪಕ - ನಿಧಿ ಸಾಲಿಯಾನ್
'ಎನ್ಎಫ್‌ಡಿಸಿ' ಹ್ಯಾಂಡ್‌ಪಿಕ್ಡ್ ಫೋಕಸ್ಡ್ ಚಿತ್ರಗಳು
19. ಶೇಮ್ಡ್ | ಭಾರತ | ಹಿಂದಿ, ಪಂಜಾಬಿ, ಇಂಗ್ಲೀಷ್
ನಿರ್ದೇಶಕಿ - ದೀಕ್ಷಾ ಜ್ಯೋತಿ ರೌತ್ರೇ, ನಿರ್ಮಾಪಕಿ - ಸರಿತಾ ಪಾಟೀಲ್
20. ಸ್ಮ್ಯಾಶ್ | ರಷ್ಯಾ, ಭಾರತ | ರಷ್ಯನ್, ಇಂಗ್ಲಿಷ್, ಹಿಂದಿ
ನಿರ್ದೇಶಕ - ಮ್ಯಾಕ್ಸಿಮ್ ಕುಜ್ನೆಟ್ಸೊವ್, ನಿರ್ಮಾಪಕ - ಎಕತ್ರಿನಾ ಗೊಲುಬೆವಾ-ಪೋಲ್ಡಿ
21. ಟೈಗರ್ ಇನ್ ದಿ ಲಯನ್ ಡೆನ್ (ಫ್ರೀಡಂ ಫ್ರೆಂಡ್ಸ್) - ಭಾರತ, ಬ್ರಿಟನ್ | ಇಂಗ್ಲಿಷ್
ನಿರ್ದೇಶಕ - ಆರ್ ಶರತ್, ನಿರ್ಮಾಪಕ - ಜಾಲಿ ಲೋನಪ್ಪನ್
ಏಷ್ಯಾ ಟಿವಿ ಫೋರಂ ಮತ್ತು ಮಾರುಕಟ್ಟೆ (ಎಟಿಎಫ್) ಜೊತೆ ಪಾಲುದಾರಿಕೆ ಯೋಜನೆ
22. ಗ್ಲೋರಿಯಾ - ಫಿಲಿಪೈನ್ಸ್, ಸಿಂಗಾಪುರ | ಇಂಗ್ಲಿಷ್
ನಿರ್ದೇಶಕ - ಅಲಾರಿಕ್ ಟೇ, ನಿರ್ಮಾಪಕ - ಡೆರೆಕ್ ಜಡ್ಜ್, ರೆಕ್ಸ್ ಲೋಪೆಜ್ ಮತ್ತು ಅಲಾರಿಕ್ ಟೇ
ಸಹ-ನಿರ್ಮಾಣ ಮಾರುಕಟ್ಟೆ ಸಾಕ್ಷ್ಯಚಿತ್ರ ಯೋಜನೆಗಳು
1. ಕಲರ್ಸ್ ಆಫ್ ಸೀ | ಭಾರತ | ಮಲಯಾಳಂ
ನಿರ್ದೇಶಕ: ಜೆಫಿನ್ ಥಾಮಸ್, ನಿರ್ಮಾಪಕರು: ಸಂಜು ಸುರೇಂದ್ರನ್
2. ದೇವಿ (ಗಾಡೆಸೆಸ್) | ಭಾರತ | ಒಡಿಯಾ
ನಿರ್ದೇಶಕ ಮತ್ತು ನಿರ್ಮಾಪಕ - ಪ್ರಣಬ್ ಕುಮಾರ್ ಐಚ್
3. ನುಪಿ ಕೀಥೆಲ್ (ವುಮೆನ್ ಮಾರ್ಕೆಟ್) | ಭಾರತ | ಮಣಿಪುರಿ
ನಿರ್ದೇಶಕ: ಹೌಬಮ್ ಪವನ್ ಕುಮಾರ್, ನಿರ್ಮಾಪಕರು: ಹೌಬಮ್ ಪವನ್ ಕುಮಾರ್, ಅಜಿತ್ ಯುಮನಂ ಮತ್ತು ರಾಜೇಶ್ ಪುಥನ್ ಪುರೈಲ್
4. ಸಿಂಹಸ್ಥ ಕುಂಭ (ಎ ಡ್ರಾಪ್ ಆಫ್ ನೆಕ್ಟರ್) | ಭಾರತ | ಹಿಂದಿ, ಸಂಸ್ಕೃತ
ನಿರ್ದೇಶಕ ಮತ್ತು ನಿರ್ಮಾಪಕರು- ಅಮಿತಾಭಾ ಸಿಂಗ್
5. ಮಹಾರಾಜ ಆಂಡ್ ಮೀ | ಭಾರತ, ಯುನೈಟೆಡ್ ಕಿಂಗ್ಡಮ್| ಇಂಗ್ಲಿಷ್, ಹಿಂದಿ
ನಿರ್ದೇಶಕ - ಬೆನ್ ಕ್ರಿಕ್ಟನ್, ನಿರ್ಮಾಪಕರು - ಕಾರ್ಲ್ ಹಿಲ್ಬ್ರಿಕ್ ಮತ್ತು ಸ್ಯೂ ಗ್ರಹಾಂ
19ನೇ ವೇವ್ಸ್ ಫಿಲ್ಮ್ ಬಜಾರ್ ಸಹ-ನಿರ್ಮಾಣ ಮಾರುಕಟ್ಟೆಗೆ ಆಯ್ಕೆ ಮಾಡಲಾದ 22 ಚಿತ್ರಗಳು ಮತ್ತು 5 ಸಾಕ್ಷ್ಯಚಿತ್ರಗಳ ಬಗ್ಗೆ ವಿವರವಾದ ಸಂಕ್ಷಿಪ್ತ ವಿವರವನ್ನು ಇಲ್ಲಿ ನೋಡಬಹುದು.
ಐಎಫ್ಎಫ್ಐ ಜೊತೆಗೆ ವಾರ್ಷಿಕವಾಗಿ ನಡೆಯುವ ಇದು ಭಾರತೀಯ ಕಥೆಗಾರರು, ಜಾಗತಿಕ ನಿರ್ಮಾಪಕರು, ಉತ್ಸವದ ಕ್ಯುರೇಟರ್‌ಗಳು, ತಂತ್ರಜ್ಞಾನ ಪಾಲುದಾರರು ಮತ್ತು ಹೂಡಿಕೆದಾರರು ನಾಳಿನ ಚಲನಚಿತ್ರಗಳನ್ನು ರೂಪಿಸಲು ಒಗ್ಗೂಡುವ ಸ್ಥಳವಾಗಿದೆ. ಈ ವರ್ಷದ ಬಜಾರ್ ಗಮನಾರ್ಹವಾಗಿ ವಿಸ್ತರಿಸಿದ ಮತ್ತು ಹೆಚ್ಚು ಕ್ರಿಯಾತ್ಮಕ ಮಾರುಕಟ್ಟೆಯೊಂದಿಗೆ ತನ್ನ ಜಾಗತಿಕ ಹೆಜ್ಜೆಗುರುತನ್ನು ಬಲಪಡಿಸಲಿದೆ.
ವೇವ್ಸ್ ಫಿಲ್ಮ್ ಬಜಾರ್ ಬಗ್ಗೆ
ಈ ಹಿಂದೆ ಫಿಲ್ಮ್ ಬಜಾರ್ ಎಂದು ಕರೆಯಲ್ಪಡುತ್ತಿದ್ದ 'ವೇವ್ಸ್ ಫಿಲ್ಮ್ ಬಜಾರ್'(ಡಬ್ಲ್ಯುಎಫ್‌ಬಿ) ಗೋವಾದಲ್ಲಿ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಜೊತೆಗೆ ವಾರ್ಷಿಕವಾಗಿ ನಡೆಯುತ್ತದೆ. 2007ರಲ್ಲಿ ಪ್ರಾರಂಭವಾದಾಗಿನಿಂದ, ಇದು ದಕ್ಷಿಣ ಏಷ್ಯಾದ ಚಲನಚಿತ್ರಗಳು ಮತ್ತು ಚಲನಚಿತ್ರ ನಿರ್ಮಾಣ, ನಿರ್ಮಾಣ ಮತ್ತು ವಿತರಣೆಯಲ್ಲಿ ಪ್ರತಿಭೆಗಳನ್ನು ಕಂಡುಹಿಡಿಯುವ, ಬೆಂಬಲಿಸುವುದು ಮತ್ತು ಪ್ರದರ್ಶಿಸುವತ್ತ ಗಮನ ಹರಿಸಿದೆ; ದಕ್ಷಿಣ ಏಷ್ಯಾ ಪ್ರದೇಶದಲ್ಲಿ ವಿಶ್ವ ಸಿನೆಮಾದ ಮಾರಾಟಕ್ಕೂ ಬಜಾರ್ ಅನುಕೂಲ ಮಾಡಿಕೊಡುತ್ತದೆ. ಈ ಪ್ರದೇಶದಲ್ಲಿ ವಿಶ್ವ ಸಿನೆಮಾದ ಮಾರಾಟವನ್ನು ಸುಗಮಗೊಳಿಸುವ ಗುರಿಯನ್ನು ಇದು ಹೊಂದಿದೆ. ಸಂಭಾವ್ಯ ಸೃಜನಶೀಲ ಮತ್ತು ಆರ್ಥಿಕ ಸಹಯೋಗಕ್ಕಾಗಿ ದಕ್ಷಿಣ ಏಷ್ಯಾ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರ ನಿರ್ದೇಶಕರು ಮತ್ತು ಚಲನಚಿತ್ರ ನಿರ್ಮಾಪಕರು, ಮಾರಾಟ ಏಜೆಂಟರು ಮತ್ತು ಉತ್ಸವ ಯೋಜಕರಿಗೆ ಮಾರುಕಟ್ಟೆಯು ಏಕೀಕೃತ ಕೇಂದ್ರವಾಗಿದೆ. 5 ದಿನಗಳ ಅವಧಿಯಲ್ಲಿ, ಚಲನಚಿತ್ರ ಮಾರುಕಟ್ಟೆಯು ದಕ್ಷಿಣ ಏಷ್ಯಾದ ವಿಷಯ ಮತ್ತು ಚಲನಚಿತ್ರ ನಿರ್ದೇಶನ, ನಿರ್ಮಾಣ ಮತ್ತು ವಿತರಣೆಯಲ್ಲಿ ಪ್ರತಿಭೆಯನ್ನು ಕಂಡುಹಿಡಿಯುವ, ಬೆಂಬಲಿಸುವ ಮತ್ತು ಪ್ರದರ್ಶಿಸುವತ್ತ ಗಮನ ಹರಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ, https://films.wavesbazaar.com/ ಗೆ ಭೇಟಿ ನೀಡಿ.
*****
Release ID:
2190515
| Visitor Counter:
8