ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ನಶ ಮುಕ್ತ ಭಾರತ ಅಭಿಯಾನ (ಎಂ ಎನ್ ಬಿ ಎ)ದ ಐದು ವರ್ಷಗಳನ್ನು ಪೂರೈಸಿದ ಆಚರಣೆಯ ಭಾಗವಾಗಿ 2025ರ ನವೆಂಬರ್ 18 ರಂದು ಅಮೃತಸರದಲ್ಲಿ ರಾಷ್ಟ್ರೀಯ ಕಾರ್ಯಕ್ರಮ
ಐದು ವರ್ಷಗಳ ಹಿಂದೆ ನಶ ಮುಕ್ತ ಭಾರತ ಅಭಿಯಾನ (ಎನ್ ಎಂ ಬಿ ಎ) ಆರಂಭವಾದಾಗಿನಿಂದ 23 ಕೋಟಿಗೂ ಅಧಿಕ ಜನರಿಗೆ ಮಾದಕ ದ್ರವ್ಯ ಸೇವನೆಯ ಬಗ್ಗೆ ಜಾಗೃತಿ
ಎನ್ ಎಂ ಬಿ ಎ ಅಡಿಯಲ್ಲಿ ಮಾದಕ ದ್ರವ್ಯ ಮುಕ್ತವಾಗಲು ರಾಷ್ಟ್ರೀಯ ಆನ್‌ಲೈನ್ ಪ್ರತಿಜ್ಞೆಯಲ್ಲಿ 16.72 ಲಕ್ಷ ಶಿಕ್ಷಣ ಸಂಸ್ಥೆಗಳು ಭಾಗಿ
ಎನ್ ಎಂ ಬಿ ಎ 5 ವರ್ಷಾಚರಣೆ ಭಾಗವಾಗಿ ಕಳೆದ ಮೂರು ತಿಂಗಳಲ್ಲಿ 2.46 ಕೋಟಿ ಭಾಗವಹಿಸುವಿಕೆಯೊಂದಿಗೆ ದೇಶಾದ್ಯಂತ 97,000 ಕಾರ್ಯಕ್ರಮಗಳ ಆಯೋಜನೆ
ಎಮ್ ಎಂಬಿಎ ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ಸಾಮೂಹಿಕ ಪ್ರಯತ್ನಗಳಿಂದ ಕ್ರಮ
Posted On:
14 NOV 2025 12:21PM by PIB Bengaluru
ಮಾದಕ ವಸ್ತುಗಳ ಬಳಕೆಯಿಂದಾಗುವ ಅಸ್ವಸ್ಥತೆಗಳು ದೇಶದ ಸಾಮಾಜಿಕ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಮಸ್ಯೆಯಾಗಿದೆ. ಯಾವುದೇ ಮಾದಕ ವಸ್ತುಗಳ ಮೇಲಿನ ಅವಲಂಬನೆಯು ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ ಅವರ ಕುಟುಂಬಗಳು ಮತ್ತು ಇಡೀ ಸಮಾಜವನ್ನು ಅಸ್ತವ್ಯಸ್ತಗೊಳಿಸುತ್ತದೆ. ಮನಸ್ಸನ್ನು ಉದ್ದೀಪನಗೊಳಿಸುವಂತಹ ವಿವಿಧ ಮಾದಕ ವಸ್ತುಗಳ ನಿಯಮಿತ ಸೇವನೆಯು ವ್ಯಕ್ತಿಯ ಅವಲಂಬನೆಗೆ ಕಾರಣವಾಗುತ್ತದೆ. ಕೆಲವು ಮಾದಕ ವಸ್ತುಗಳ ಸಂಯುಕ್ತಗಳು ನರ-ಮನೋವೈದ್ಯಕೀಯ ಅಸ್ವಸ್ಥತೆಗಳು, ಹೃದಯ ರಕ್ತನಾಳದ ಕಾಯಿಲೆಗಳು, ಹಾಗೆಯೇ ಅಪಘಾತಗಳು, ಆತ್ಮಹತ್ಯೆಗಳು ಮತ್ತು ಹಿಂಸಾಚಾರಕ್ಕೆ ಕಾರಣವಾಗಬಹುದು. ಆದ್ದರಿಂದ ಮಾದಕ ವಸ್ತುಗಳ ಬಳಕೆ ಮತ್ತು ಅವಲಂಬನೆಯನ್ನು ನಾವು ಮಾನಸಿಕ-ಸಾಮಾಜಿಕ-ವೈದ್ಯಕೀಯ ಸಮಸ್ಯೆಯನ್ನಾಗಿ ನೋಡಬೇಕಾಗುತ್ತದೆ.
ದೇಶದಲ್ಲಿ ಮಾದಕ ವಸ್ತುಗಳ ಬೇಡಿಕೆ ತಗ್ಗಿಸಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ನೋಡಲ್ ಸಚಿವಾಲಯವಾಗಿದ್ದು, ಅದು ಮಾದಕ ವಸ್ತುಗಳ ದುರ್ಬಳಕೆ ತಡೆಗಟ್ಟುವಿಕೆ, ಸಮಸ್ಯೆಯ ತೀವ್ರತೆಯನ್ನು ಅರಿಯುವುದು, ತಡೆಗಟ್ಟುವ ವಿಧಾನ, ಬಳಕೆದಾರರ ಚಿಕಿತ್ಸೆ ಮತ್ತು ಪುನರ್ವಸತಿ ಮತ್ತು ಮಾಹಿತಿಯ ಪ್ರಸರಣದ ಎಲ್ಲಾ ಅಂಶಗಳನ್ನು ಸಂಘಟಿಸುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ.
ಈ ಸಚಿವಾಲಯವು ಮಹತ್ವಾಕಾಂಕ್ಷೆಯ ನಶ ಮುಕ್ತ ಭಾರತ ಅಭಿಯಾನ (ಎನ್ ಎಂಬಿಎ) ಅನ್ನು ಆರಂಭಿಸಿದೆ ಮತ್ತು ಪ್ರಸ್ತುತ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಯುವಜನರಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಉನ್ನತ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯ ಕ್ಯಾಂಪಸ್‌ಗಳು, ಶಾಲೆಗಳತ್ತ ವಿಶೇಷ ಗಮನ ಹರಿಸುವುದು ಮತ್ತು ಸಮುದಾಯವನ್ನು ತಲುಪುವುದು ಮತ್ತು ಅಭಿಯಾನದ ಸಮುದಾಯದ ಒಳಗೊಳ್ಳುವಿಕೆ ಮತ್ತು ಮಾಲೀಕತ್ವವನ್ನು ಪಡೆಯುವುದು ಕೂಡ ಇದರ ಉದ್ದೇಶವಾಗಿದೆ.
ಎನ್ ಎಂ ಬಿ ಎ ಸಾಧನೆಗಳು:
- ಈವರೆಗೆ ತಳಹಂತದಲ್ಲಿ ಕೈಗೊಂಡ ವಿವಿಧ ಚಟುವಟಿಕೆಗಳ ಮೂಲಕ 7.73 ಕೋಟಿಗೂ ಅಧಿಕ ಯುವಕರು ಮತ್ತು 5.18 ಕೋಟಿಗೂ ಅಧಿಕ ಮಹಿಳೆಯರು ಸೇರಿದಂತೆ 23.06 ಕೋಟಿಗೂ ಅಧಿಕ ಮಂದಿಗೆ ಮಾದಕ ವಸ್ತುಗಳ ಬಳಕೆಯ ಬಗ್ಗೆ ಅರಿವು ಮೂಡಿಸಲಾಗಿದೆ.
- 16.92+ ಲಕ್ಷ ಶಿಕ್ಷಣ ಸಂಸ್ಥೆಗಳ ಭಾಗವಹಿಸುವುದರೊಂದಿಗೆ ಅಭಿಯಾನದ ಸಂದೇಶವು ದೇಶದ ಮಕ್ಕಳು ಮತ್ತು ಯುವಕರನ್ನು ತಲುಪುವುದನ್ನು ಖಾತ್ರಿಪಡಿಸಿದೆ.
- 5.70+ ಲಕ್ಷಕ್ಕೂ ಅಧಿಕ ಚೇತರಿಸಿಕೊಂಡ ಮಾದಕ ವಸ್ತುಗಳ ಬಳಕೆದಾರರು ವೈವಿಧ್ಯಮಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಅಭಿಯಾನದ ಭಾಗವಾಗಿದ್ದಾರೆ.
- 20 ಸಾವಿರಕ್ಕೂ ಅಧಿಕ ಮಾಸ್ಟರ್ ಸ್ವಯಂಸೇವಕರ (ಎಂವಿಗಳ) ಬಲವಾದ ಪಡೆಯನ್ನು ಗುರುತಿಸಲಾಗಿದೆ ಮತ್ತು ತರಬೇತಿ ನೀಡಲಾಗಿದೆ.
- ಸರ್ಕಾರಿ ಆಸ್ಪತ್ರೆಗಳಲ್ಲಿ 154 ವ್ಯಸನ ಚಿಕಿತ್ಸಾ ಸೌಲಭ್ಯಗಳು ಸೇರಿದಂತೆ ವ್ಯಸನ ಮುಕ್ತ ಕೇಂದ್ರಗಳ ಸಂಖ್ಯೆ 490 (2020-21) ರಿಂದ 780+ (2025-2026) ಕ್ಕೆ ಏರಿಕೆಯಾಗಿದೆ.
- ಮಾದಕ ವಸ್ತುಗಳ ದುರುಪಯೋಗದ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ 26 ಅನ್ನು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರ್ಬಳಕೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತದೆ.
- ಯುಎನ್‌ಡಿಪಿ ಕೈಗೊಂಡ ಪರಿಣಾಮದ ಮೌಲ್ಯಮಾಪನದಲ್ಲಿ ಬಹಿರಂಗಪಡಿಸಿರುವಂತೆ, 2020ರಲ್ಲಿ ಅಭಿಯಾನ ಆರಂಭವಾದಾಗಿನಿಂದ ಪ್ರತಿಕ್ರಿಯಿಸಿದವರಲ್ಲಿ ಶೇ.64ರಷ್ಟು ಜನರು ಅದರ ಬಗ್ಗೆ ತಿಳಿದಿದ್ದಾರೆ. ಶೇ. 76ರಷ್ಟು ಜನರು ಅಭಿಯಾನದ ಅಗತ್ಯತೆಯನ್ನು ಪ್ರತಿಪಾದಿಸಿದ್ದಾರೆಂದು ವರದಿಯಾಗಿದ್ದರೆ, ಶೇ.23ರಷ್ಟು ಜನರು ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳಿಗೆ ಹಾಜರಾಗಿದ್ದಾರೆ ಮತ್ತು ಶೇ.50ರಷ್ಟು ಜನರು ಅದರ ಮೂಲಕ ಲಭ್ಯವಿರಬಹುದಾದ ವ್ಯಸನ ಮುಕ್ತ ಕೇಂದ್ರಗಳನ್ನು ತಿಳಿದಿದ್ದಾರೆಂಬುದು ಕಂಡುಬಂದಿದೆ.
- ಎನ್ ಎಂಬಿಎ ಚಟುವಟಿಕೆಗಳ ದತ್ತಾಂಶವನ್ನು ಸಂಗ್ರಹಿಸಲು ಮತ್ತು ಕ್ರೂಢೀಕರಿಸಲು ಮತ್ತು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಎನ್ ಎಂಬಿಎ ಡ್ಯಾಶ್‌ಬೋರ್ಡ್‌ನಲ್ಲಿ ಸೇರ್ಪಡೆ ಮಾಡಲು ಎನ್ ಎಂಬಿಎ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
- ಎನ್ ಎಂಬಿಎ ಪೋರ್ಟಲ್ (www.nmba.dojse.gov.in) ಈ ಪ್ರಯತ್ನಗಳಲ್ಲಿ ಕೇಂದ್ರ ಸ್ತಂಭವಾಗಿದ್ದು, ಮಾದಕ ವಸ್ತುಗಳ ಬಳಕೆಗೆ ಸಂಬಂಧಿಸಿದ ನಿರ್ಣಾಯಕ ವಿಷಯಗಳ ಕುರಿತ ಮಾಹಿತಿ, ಬೆಂಬಲ ಮತ್ತು ತೊಡಗಿಸಿಕೊಳ್ಳುವಿಕೆ ಒಳಗೊಂಡಿರುವ ಸಮಗ್ರ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ದೇಶಾದ್ಯಂತ ಜಿಯೋ-ಟ್ಯಾಗ್ ಮಾಡಲಾದ ವ್ಯಸನ ಮುಕ್ತ ಕೇಂದ್ರಗಳ ಪಟ್ಟಿಯ ಲಭ್ಯತೆಯು ಪೋರ್ಟಲ್‌ನ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಈ ವೈಶಿಷ್ಟ್ಯವು ಅಗತ್ಯವಿರುವವರು ಸಹಾಯ ಮತ್ತು ಬೆಂಬಲಕ್ಕಾಗಿ ಹತ್ತಿರದ ಸೌಲಭ್ಯವನ್ನು ಸುಲಭವಾಗಿ ಪಡೆಯಬಹುದು ಎಂದು ಖಾತ್ರಿಪಡಿಸುತ್ತದೆ.
- ಮಾದಕ ದ್ರವ್ಯ ಮುಕ್ತ ರಾಷ್ಟ್ರೀಯ ಆನ್‌ಲೈನ್ ಪ್ರತಿಜ್ಞೆಯಲ್ಲಿ 99,595 ಶಿಕ್ಷಣ ಸಂಸ್ಥೆಗಳ 1.67 ಕೋಟಿಗೂ ಅಧಿಕ ವಿದ್ಯಾರ್ಥಿಗಳು ಮಾದಕ ದ್ರವ್ಯ ಮುಕ್ತರಾಗುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
- ಎನ್ ಎಂಬಿಎ ಅನ್ನು ಬೆಂಬಲಿಸಲು ಮತ್ತು ಸಾಮೂಹಿಕ ಜಾಗೃತಿ ಚಟುವಟಿಕೆಗಳನ್ನು ನಡೆಸಲು ಆರ್ಟ್ ಆಫ್ ಲಿವಿಂಗ್, ಬ್ರಹ್ಮ ಕುಮಾರಿ ಸಂಸ್ಥೆಗಳು, ಸಂತ ನಿರಂಕಾರಿ ಮಿಷನ್, ಆಲ್ ವರ್ಲ್ಡ್ ಗಾಯತ್ರಿ ಪರಿವಾರ್, ಇಸ್ಕಾನ್ ಮತ್ತು ಶ್ರೀ ರಾಮ ಚಂದ್ರ ಮಿಷನ್‌ನಂತಹ ಆರು ಆಧ್ಯಾತ್ಮಿಕ/ಸಾಮಾಜಿಕ ಸೇವಾ ಸಂಸ್ಥೆಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಮತ್ತು ಆ ಮೂಲಕ ಈವರೆಗೆ 3.37 ಕೋಟಿಗೂ ಅಧಿಕ ಜನರನ್ನು ತಲುಪಲಾಗಿದೆ.
- ಈ ಸಹಾಯವಾಣಿಯ ಮೂಲಕ ಸಹಾಯವನ್ನು ಬಯಸುವ ವ್ಯಕ್ತಿಗಳಿಗೆ ಪ್ರಾಥಮಿಕ ಸಮಾಲೋಚನೆ ಮತ್ತು ತಕ್ಷಣದ ರೆಫರೆಲ್ ಸೇವೆಗಳನ್ನು ಒದಗಿಸಲು ವ್ಯಸನ ಮುಕ್ತರಿಗಾಗಿ ಟೋಲ್-ಫ್ರೀ ಸಹಾಯವಾಣಿ, 14446 ಅನ್ನು ಸ್ಥಾಪಿಸಲಾಗಿದೆ. ಸಹಾಯವಾಣಿ ಸಂಖ್ಯೆಗೆ ಈವರೆಗೆ 4.30 ಲಕ್ಷಕ್ಕೂ ಅಧಿಕ ಕರೆಗಳು ಬಂದಿವೆ.
- ಒಲಿಂಪಿಕ್ ಪದಕ ವಿಜೇತ ರವಿ ಕುಮಾರ್ ದಹಿಯಾ, ಸುರೇಶ್ ರೈನಾ, ಅಜಿಂಕ್ಯ ರಹಾನೆ, ಸಂದೀಪ್ ಸಿಂಗ್, ಸವಿತಾ ಪೂನಿಯಾ ಮತ್ತು ಅಮನ್ ಸೆಹ್ರಾವತ್ ಅವರಂತಹ ಕ್ರೀಡಾಪಟುಗಳು ಎನ್ ಎಂಬಿಎ ಅನ್ನು ಬೆಂಬಲಿಸಿ ಸಂದೇಶಗಳನ್ನು ಹಂಚಿಕೊಂಡಿದ್ದಾರೆ.
- ‘ನಶೇ ಸೆ ಆಜಾದಿ - ರಾಷ್ಟ್ರೀಯ ಯುವ ಮತ್ತು ವಿದ್ಯಾರ್ಥಿಗಳ ಸಂವಹನ ಕಾರ್ಯಕ್ರಮ’, ‘ನಯ ಭಾರತ, ನಶ ಮುಕ್ತ ಭಾರತ’ , ಎನ್ ಎಂಬಿಎ ಎನ್ ಸಿಸಿ ಕೆಡೆಟ್‌ಗಳ ಅಧಿಕಾರಿಗಳೊಂದಿಗೆ ಸಂವಾದ ನಡೆಯಿತು ಮತ್ತು 700 ಅಧಿಕಾರಿಗಳು ಖುದ್ದಾಗಿ ಹಾಜರಿದ್ದರು. ದೇಶಾದ್ಯಂತ ಸುಮಾರು 40,000 ಕೆಡೆಟ್‌ಗಳು ಆನ್‌ಲೈನ್‌ನಲ್ಲಿ ಹಾಜರಿದ್ದರು.
- ವಿಶೇಷ ಮಾದರಿಗಳೊಂದಿಗೆ ಗಡಿ ಕಾವಲು ಪಡೆಗಳಿಗೆ ತರಬೇತಿ ನೀಡುವ ಮೂಲಕ ಮತ್ತು ಈ ಪ್ರದೇಶಗಳಲ್ಲಿ ವ್ಯಸನ ಮುಕ್ತಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಗಡಿ ಪ್ರದೇಶಗಳಲ್ಲಿ ಎನ್ ಎಂಬಿಎ ಪರಿಣಾಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ.
- 2024ರ ಆಗಸ್ಟ್ 12 ರಂದು ಎನ್ ಎಂಬಿಎ ಕುರಿತು ಸಾಮೂಹಿಕ ಪ್ರತಿಜ್ಞೆ/ಪ್ರಮಾಣವಚನವನ್ನು ನಡೆಸಲಾಯಿತು ಮತ್ತು 2 ಲಕ್ಷಕ್ಕೂ ಅಧಿಕ ಸಂಸ್ಥೆಗಳಿಂದ ಒಟ್ಟು 3 ಕೋಟಿಗೂ ಅಧಿಕ ಜನರು ರಾಷ್ಟ್ರವ್ಯಾಪಿ ಪ್ರತಿಜ್ಞೆಯಲ್ಲಿ ಭಾಗವಹಿಸಿದ್ದರು.
- ನಶ ಮುಕ್ತ ಭಾರತ ಅಭಿಯಾನ (ಎನ್ ಎಂಬಿಎ) 5 ನೇ ವಾರ್ಷಿಕೋತ್ಸವದ ಅಂಗವಾಗಿ ದೆಹಲಿಯ ಎನ್ ಸಿಟಿ ಸರ್ಕಾರದ ಸಹಯೋಗದೊಂದಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು 2025ರ ಆಗಸ್ಟ್ 13 ರಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ದೆಹಲಿಯಿಂದ 1,000 ಕ್ಕೂ ಅಧಿಕ ವಿದ್ಯಾರ್ಥಿಗಳು ವೈಯಕ್ತಿಕವಾಗಿ ಭಾಗವಹಿಸಿದರು, ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಪ್ರತಿಜ್ಞೆಯಲ್ಲಿ ಸೇರ್ಪಡೆಯಾಗಿದ್ದರು.
- 2025ರ ಆಗಸ್ಟ್ 1 ರಿಂದ ನಡೆಯಲಿರುವ ಎನ್ ಎಂಬಿಎ 5 ನೇ ವಾರ್ಷಿಕೋತ್ಸವಕ್ಕಾಗಿ ರಾಷ್ಟ್ರೀಯ ಅಭಿಯಾನದಲ್ಲಿ ಭಾಗವಹಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ನಾಗರಿಕರನ್ನು ಸಜ್ಜುಗೊಳಿಸುವ ಉದ್ದೇಶದಿಂದ, ವ್ಯಾಪಕ ಜಾಗೃತಿ ಮೂಡಿಸಲು ಮತ್ತು ನಾಗರಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ದೇಶಾದ್ಯಂತ ಸ್ಪರ್ಧಾತ್ಮಕ ಪ್ರಚಾರ ಮತ್ತು ಪಾಲ್ಗೊಳ್ಳುವಿಕೆ ಚಟುವಟಿಕೆಗಳ ಸರಣಿಯನ್ನು ಕೈಗೊಳ್ಳಲಾಗಿದೆ.
- 2025ರ ನವೆಂಬರ್ 08 ರ ವೇಳೆಗೆ 1,12,202 ಯುವಕರು ಮತ್ತು ವಿದ್ಯಾರ್ಥಿಗಳು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಇದು ಮಾದಕವಸ್ತು ಮುಕ್ತ ಭಾರತವನ್ನು ಉತ್ತೇಜಿಸುವಲ್ಲಿ ಯುವಜನರ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ.
- ಭಾಗವಹಿಸುವಿಕೆಯ ಅಭಿಯಾನದ ಭಾಗವಾಗಿ ದೇಶಾದ್ಯಂತ ಒಟ್ಟು 97,336 ಕಾರ್ಯಕ್ರಮಗಳನ್ನು ನಡೆಸಲಾಯಿತು. ಇದು ಒಟ್ಟಾರೆಯಾಗಿ 2.42 ಕೋಟಿ (1.43 ಕೋಟಿ ಪುರುಷರು ಮತ್ತು 1 ಕೋಟಿ ಮಹಿಳೆಯರು) ವ್ಯಕ್ತಿಗಳನ್ನು ತಲುಪಿದೆ. ಇವುಗಳಲ್ಲಿ ಘೋಷಣೆ ಬರೆಯುವುದು, ರಂಗೋಲಿ ಬಿಡುಸುವ ಸ್ಪರ್ಧೆಗಳು, ಚಿತ್ರಕಲಾ ಸ್ಪರ್ಧೆಗಳು, ಪ್ರತಿಜ್ಞೆ ಸಮಾರಂಭಗಳು, rallies ಮತ್ತು ಶಾಲೆಗಳು, ಕಾಲೇಜುಗಳು ಮತ್ತು ಸ್ಥಳೀಯ ಸಮುದಾಯಗಳು ಸೇರಿವೆ.
- ಈ ಅಭಿಯಾನವು 16 ಲಕ್ಷ ಇ-ಪ್ರತಿಜ್ಞೆಗಳು ಮತ್ತು 1 ಕೋಟಿಗೂ ಅಧಿಕ ಆಫ್‌ಲೈನ್ ಪ್ರತಿಜ್ಞೆಗಳನ್ನು ದಾಖಲಿಸಿದ್ದು, ಇದು ಬಲವಾದ ಸಾರ್ವಜನಿಕ ಭಾಗವಹಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ
ನಶ ಮುಕ್ತ ಭಾರತ ಅಭಿಯಾನ (ಎನ್ ಎಂ ಬಿ ಎ )ವನ್ನು ಎಲ್ಲಾ ರಾಜ್ಯಗಳಲ್ಲಿ ಅತ್ಯುತ್ಸಾಹದಿಂದ ಸ್ವೀಕರಿಸಲಾಗಿದ್ದು, ಹಲವು ಬಗೆಯ ಜಾಗೃತಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ನಶ ಮುಕ್ತ ಭಾರತ ಅಭಿಯಾನದ ಐದು ವರ್ಷಗಳನ್ನು ಆಚರಿಸುವ ಬೃಹತ್ ಪ್ರಮಾಣದ ಸಮಾರೋಪ ಕಾರ್ಯಕ್ರಮವನ್ನು 2025ರ ನ.18 ರಂದು ಅಮೃತಸರದ ಗುರುನಾನಕ್ ದೇವ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಜಾಬ್‌ನ ಗೌರವಾನ್ವಿತ ರಾಜ್ಯಪಾಲರು ಮತ್ತು ಗೌರವಾನ್ವಿತ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರು ವಹಿಸಲಿದ್ದಾರೆ. ಸುಮಾರು 7000 ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಈ ಅಭಿಯಾನದ ಸಾಧನೆಗಳನ್ನು ಎತ್ತಿ ತೋರಿಸುವುದು, ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಸಜ್ಜುಗೊಳಿಸುವುದು ಮತ್ತು ಮಾದಕ ದ್ರವ್ಯ ಮುಕ್ತ ಸಮಾಜವನ್ನು ನಿರ್ಮಿಸುವತ್ತ ನಮ್ಮ ಸಾಮೂಹಿಕ ಪ್ರಯತ್ನಗಳನ್ನು ಬಲಪಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಕಾರ್ಯಕ್ರಮವು ಸಾಂಸ್ಕೃತಿಕ ಕಾರ್ಯಕ್ರಮಗಳು, ಮಾದಕ ದ್ರವ್ಯಗಳ ವಿರುದ್ಧ ಆನ್‌ಲೈನ್ ಮತ್ತು ಆಫ್‌ಲೈನ್ ಪ್ರಮಾಣವಚನ ಮತ್ತು ಶಾಲಾ ಮತ್ತು ಕಾಲೇಜು ಮಟ್ಟದಲ್ಲಿ ಸ್ಪರ್ಧೆಗಳು ಸೇರಿದಂತೆ ಹಲವಾರು ಚಟುವಟಿಕೆಗಳನ್ನು ಒಳಗೊಂಡಿರುತ್ತದೆ, ಜೊತೆಗೆ ಸಾಮೂಹಿಕ ರ‍್ಯಾಲಿಯನ್ನೂ ಸಹ ಆಯೋಜಿಸಲಾಗಿದೆ.
ಇಂತಹ ಕಾರ್ಯಕ್ರಮಗಳ ಕುರಿತು ಪ್ರಚಾರ ಮಾಡುವ ಮತ್ತು ಆಚರಿಸುವ ಮೂಲಕ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಯುವಜನರು ಮತ್ತು ನಾಗರಿಕರು ಮಾದಕ ದ್ರವ್ಯಗಳಿಂದ ದೂರವಿರಲು ಮತ್ತು ಆರೋಗ್ಯಕರ, ಮೌಲ್ಯಾಧಾರಿತ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಉತ್ತೇಜಿಸುವ ಗುರಿಯನ್ನು ಹೊಂದಿದೆ.
*****
(Release ID: 2190001)
Visitor Counter : 2