ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಪ್ಯಾರಾ ಗೇಮ್ಸ್ 2022ರ ಪುರುಷರ 200 ಮೀ. ಟಿ37 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಶ್ರೇಯಾಂಶ ತ್ರಿವೇದಿಯವರನ್ನು ಪ್ರಧಾನಮಂತ್ರಿ ಅಭಿನಂದಿಸಿದರು

प्रविष्टि तिथि: 25 OCT 2023 1:32PM by PIB Bengaluru

ಹ್ಯಾಂಗ್‌ಝೌ, ಚೀನಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ 2022ರಲ್ಲಿ ಪುರುಷರ 200 ಮೀಟರ್ ಟಿ37 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಶ್ರೇಯಾಂಶ ತ್ರಿವೇದಿಯವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ಅವರು 'ಎಕ್ಸ್' (X) ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

"ಏಷ್ಯನ್ ಪ್ಯಾರಾ ಗೇಮ್ಸ್‌ನ ಟಿ-37 200-ಮೀಟರ್ ಸ್ಪರ್ಧೆಯಲ್ಲಿ ಶ್ರೇಯಾಂಶ ತ್ರಿವೇದಿಯವರಿಗೆ ಎಂತಹ ಅದ್ಭುತ ಕಂಚಿನ ಪದಕ!

ಶ್ರೇಯಾಂಶ ಅವರ ವೇಗ ಮತ್ತು ಅಚಲವಾದ ದೃಢಸಂಕಲ್ಪವು ರಾಷ್ಟ್ರವನ್ನು ಸಂತೋಷಪಡಿಸಿದೆ. ನಿಜಕ್ಕೂ ಗಮನಾರ್ಹ ಸಾಧನೆ."

 

*****

 


(रिलीज़ आईडी: 2189260) आगंतुक पटल : 27
इस विज्ञप्ति को इन भाषाओं में पढ़ें: Malayalam , English , Urdu , Marathi , हिन्दी , Bengali , Manipuri , Punjabi , Gujarati , Odia , Tamil , Telugu