ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಮೃತ ತಲೆಮಾರು ಪರಿಕಲ್ಪನೆಯ ದೂರದೃಷ್ಟಿಯ ವಿಕಸಿತ ಭಾರತ ಯುವ ನಾಯಕರ ಸಂವಾದ (ವಿ.ಬಿ.ವೈ.ಎಲ್.ಡಿ),  2026 ಕಾರ್ಯಕ್ರಮವು ದಾಖಲೆಯ ಭಾಗವಹಿಸುವಿಕೆಯನ್ನು ಸಾಧಿಸಿದೆ


ವಿಕಸಿತ ಭಾರತ ಯುವ ನಾಯಕರ ಸಂವಾದ (ವಿ.ಬಿ.ವೈ.ಎಲ್.ಡಿ), 2026 ರಸಪ್ರಶ್ನೆಯಲ್ಲಿ ಭಾರತದಾದ್ಯಂತ 50 ಲಕ್ಷಕ್ಕೂ ಹೆಚ್ಚು ಯುವಕರು ಈಗಾಗಲೇ ಭಾಗವಹಿಸಿದ್ದಾರೆ

ವಿಕಸಿತ ಭಾರತ ಯುವ ನಾಯಕರ ಸಂವಾದ (ವಿ.ಬಿ.ವೈ.ಎಲ್.ಡಿ), 2026ರ ಹಂತ–2ರಲ್ಲಿ ಪ್ರಬಂಧ ಸುತ್ತಿನಲ್ಲಿ ಭಾಗವಹಿಸಲು 2.5 ಲಕ್ಷಕ್ಕೂ ಹೆಚ್ಚು ಯುವಕರನ್ನು ಆಯ್ಕೆ ಮಾಡಲಾಗಿದೆ

2047ರಲ್ಲಿ ವಿಕಸಿತ ಭಾರತ ಎಂಬ ದೃಷ್ಟಿಕೋನವನ್ನು ರೂಪಿಸುವ ಹತ್ತು ಪ್ರಮುಖ ರಾಷ್ಟ್ರೀಯ ವಿಷಯಗಳಲ್ಲಿ ಒಂದರ ಕುರಿತು ಪ್ರಬಂಧಗಳನ್ನು ಬರೆಯಲು ಯುವಕರು ಆಯ್ಕೆಯಾಗಿದ್ದಾರೆ

Posted On: 10 NOV 2025 3:29PM by PIB Bengaluru

ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ ಮೇರಾ ಯುವ ಭಾರತ್ (ಮೈ ಭಾರತ್) ಮೂಲಕ ಪ್ರಮುಖ ಉಪಕ್ರಮವಾದ ವಿಕಸಿತ ಭಾರತ ಯುವ ನಾಯಕರ ಸಂವಾದ (ವಿ.ಬಿ.ವೈ.ಎಲ್.ಡಿ)ವನ್ನು ಸಾದರಗೊಳಿಸಲಾಗುತ್ತಿದೆ. ಇದು ಭಾರತದ ಯುವಕರನ್ನು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಕೊಡುಗೆದಾರರಾಗಲು ಪ್ರೇರೇಪಿಸುತ್ತಿದೆ. ಈ ವರ್ಷದ ಆರಂಭದಲ್ಲಿ 2026ರ ಆವೃತ್ತಿಯ ಯಶಸ್ವಿ ಆರಂಭದ ನಂತರ,  ಈ ಕಾರ್ಯಕ್ರಮದ ಹಂತ–1 ದೇಶಾದ್ಯಂತ ಅಗಾಧ ಪ್ರತಿಕ್ರಿಯೆ ಹಾಗೂ ಸ್ಪಂದನೆಯನ್ನು ಕಂಡಿದೆ.

ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 31, 2025 ರವರೆಗೆ ಮೇರಾ ಯುವ ಭಾರತ್ (ಮೈ ಭಾರತ್) ಮತ್ತು ಮೈಗೌ ವೇದಿಕೆಗಳಲ್ಲಿ ಜಂಟಿಯಾಗಿ ಆಯೋಜಿಸಲಾದ ವಿಕಸಿತ ಭಾರತ ಯುವ ನಾಯಕರ ಸಂವಾದ (ವಿ.ಬಿ.ವೈ.ಎಲ್.ಡಿ), 2026 ರಸಪ್ರಶ್ನೆಯಲ್ಲಿ 50.42 ಲಕ್ಷಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು, ಇದು ಹಿಂದಿನ ಆವೃತ್ತಿಯ 30 ಲಕ್ಷ ಭಾಗವಹಿಸುವವರ ದಾಖಲೆಯನ್ನು ಮೀರಿ ಅತ್ಯಂತ ಯಶಸ್ವೀ ರೂಪದಲ್ಲಿ ಸಾಗಿದೆ. ಎಲ್ಲಾ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಯುವಕರು ಈ ಉಪಕ್ರಮಕ್ಕೆ ಉತ್ಸಾಹಭರಿತರಾಗಿ ಸೇರಿಕೊಂಡರು, ಹಾಗೂ 2047ರ ವಿಕಸಿತ ಭಾರತದ ಪರಿಕ್ಪನೆಯ ದೃಷ್ಟಿಕೋನಕ್ಕಾಗಿ ತಮ್ಮ ಉತ್ಸಾಹವನ್ನು ಪುನರುಚ್ಚರಿಸಿದರು.

ಈ ಉಪಕ್ರಮವು ಯುವಕರು ಮತ್ತು ಮಹಿಳೆಯರಿಂದ ಬಹುತೇಕ ಸಮಾನ ಭಾಗವಹಿಸುವಿಕೆಯನ್ನು ಕಂಡಿತು. ಇದರಲ್ಲಿ 51% ಪುರುಷರು ಮತ್ತು 49% ಮಹಿಳಾ ಪ್ರಾತಿನಿಧ್ಯವಿತ್ತು. ತಮಿಳುನಾಡು, ಉತ್ತರ ಪ್ರದೇಶ, ಮಹಾರಾಷ್ಟ್ರ, ಹರಿಯಾಣ ಮತ್ತು ಪಶ್ಚಿಮ ಬಂಗಾಳಗಳು ಅತಿ ಹೆಚ್ಚು ಭಾಗವಹಿಸುವವರನ್ನು ಹೊಂದಿರುವ ಅಗ್ರ ಐದು ರಾಜ್ಯಗಳಾಗಿ ಹೊರಹೊಮ್ಮಿದವು. ಈ ಗಮನಾರ್ಹವಾದ ತೊಡಗಿಸಿಕೊಳ್ಳುವಿಕೆಯು ಭಾರತದ ಯುವ ಜನಸಂಖ್ಯೆಯು ಆಡಳಿತ, ನೀತಿ ವಿನ್ಯಾಸ ಮತ್ತು ವಿಕಸಿತ ಭಾರತ ಆಗುವತ್ತ ಭಾರತದ ಅಭಿವೃದ್ಧಿ ಪ್ರಯಾಣಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡುವ ಆಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ.

ಮುಂದುವರಿಯುತ್ತಾ, ವಿಕಸಿತ ಭಾರತ ಯುವ ನಾಯಕರ ಸಂವಾದ (ವಿ.ಬಿ.ವೈ.ಎಲ್.ಡಿ), 2026ರ ಹಂತ-2 ಸುಮಾರು 2.56 ಲಕ್ಷ ಆಯ್ಕೆಯಾದವರ ಕಿರುಪಟ್ಟಿ (ಶಾರ್ಟ್‌ಲಿಸ್ಟ್) ತಯಾರು ಮಾಡಿ, ಆ ಆಯ್ದ ಯುವಕರನ್ನು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ರೂಪಿಸುವ ಹತ್ತು ಪ್ರಮುಖ ರಾಷ್ಟ್ರೀಯ ವಿಷಯಗಳ ಕುರಿತು ಪ್ರಬಂಧ ಸುತ್ತಿನ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಆಹ್ವಾನಿಸಲಾಗುತ್ತದೆ:

1. ಪ್ರಜಾಪ್ರಭುತ್ವದಲ್ಲಿ ಯುವಕರು ಮತ್ತು ವಿಕಸಿತ ಭಾರತಕ್ಕಾಗಿ ಸರ್ಕಾರ

2. ಮಹಿಳಾ ನೇತೃತ್ವದ ಅಭಿವೃದ್ಧಿ: ವಿಕಸಿತ ಭಾರತ ಕ್ಕೆ ಕೀಲಿಕೈ

3. ಫಿಟ್ ಭಾರತ್, ಹಿಟ್ ಭಾರತ್

4. ಭಾರತವನ್ನು ವಿಶ್ವದ ನವೋದ್ಯಮ(ಸ್ಟಾರ್ಟ್-ಅಪ್) ರಾಜಧಾನಿಯನ್ನಾಗಿ ಮಾಡುವುದು

5. ಭಾರತದ ಮೃದು ಶಕ್ತಿ: ವಿಕಸಿತ ಭಾರತಕ್ಕಾಗಿ ಸಾಂಸ್ಕೃತಿಕ ರಾಜತಾಂತ್ರಿಕತೆ ಮತ್ತು ಜಾಗತಿಕ ಪ್ರಭಾವ

6. ಸಂಪ್ರದಾಯದೊಂದಿಗೆ ನಾವೀನ್ಯತೆ: ಆಧುನಿಕ ಭಾರತವನ್ನು ನಿರ್ಮಿಸುವುದು

7. ಆತ್ಮನಿರ್ಭರ ಭಾರತ: ಭಾರತದಲ್ಲಿ ಉತ್ಪಾದಿಸುವುದು, ಜಗತ್ತಿಗಾಗಿ ಉತ್ಪಾದಿಸುವುದು (ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್)

8. ಚುರುಕು(ಸ್ಮಾರ್ಟ್) ಮತ್ತು ಸುಸ್ಥಿರ ಕೃಷಿಯ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸುವುದು

9. ಸುಸ್ಥಿರ ಮತ್ತು ಹಸಿರು ವಿಕಸಿತ ಭಾರತವನ್ನು ನಿರ್ಮಿಸುವುದು

10. ವಿಕಸಿತ ಭಾರತಕ್ಕಾಗಿ ಭವಿಷ್ಯಕ್ಕೆ ಸಿದ್ಧವಾದ ಕಾರ್ಯಪಡೆಯನ್ನು ನಿರ್ಮಿಸುವುದು

ಭಾರತೀಯ 22 ಭಾಷೆಗಳಲ್ಲಿ ಯಾವುದಾದರೂ ಒಂದು ಭಾಷೆಯಲ್ಲಿ ಬರೆಯಬೇಕಾದ ಪ್ರಬಂಧಗಳನ್ನು ನವೆಂಬರ್ 20, 2025 ರವರೆಗೆ ಸ್ವೀಕರಿಸಲಾಗುತ್ತದೆ. ನ್ಯಾಯಯುತ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯಗಳಲ್ಲಿ ಮೌಲ್ಯಮಾಪನ, ಮೌಲ್ಯಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ ಸಲ್ಲಿಕೆಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಅತ್ಯಂತ ಭರವಸೆಯ ಯುವ ಕೊಡುಗೆದಾರರನ್ನು ರಾಜ್ಯ ಮಟ್ಟದ ಸುತ್ತುಗಳಿಗೆ ಆಯ್ಕೆ ಮಾಡಲಾಗುತ್ತದೆ, ಅಲ್ಲಿ ಅವರು ಪ್ರಸ್ತುತಿಗಳ ಮೂಲಕ ವಿಕಸಿತ ಭಾರತಕ್ಕಾಗಿ ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳುತ್ತಾರೆ.

ಈ ಸುತ್ತುಗಳ ಫಲಿತಾಂಶವು ಭಾರತದಾದ್ಯಂತ ಯುವ ಚಿಂತನೆಯ ವೈವಿಧ್ಯತೆಯನ್ನು ಎತ್ತಿ ತೋರಿಸುವುದಲ್ಲದೆ, 2023ರಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೆಂಪು ಕೋಟೆಯಿಂದ ನೀಡಿದ ಸ್ಪಷ್ಟ ಕರೆಯನ್ನು ಸಾಕ್ಷಾತ್ಕಾರ ಮಾಡುವ ನಿಟ್ಟಿನಲ್ಲಿ ಮುನ್ನಡೆಸುತ್ತದೆ. ರಾಜಕೀಯ ಹಿನ್ನೆಲೆಯಿಲ್ಲದ 1 ಲಕ್ಷ ಯುವಕರನ್ನು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಲು ಪೋಷಿಸುತ್ತದೆ. ವಿಕಸಿತ ಭಾರತ ಯುವ ನಾಯಕರ ಸಂವಾದ (ವಿ.ಬಿ.ವೈ.ಎಲ್.ಡಿ), ಇಂದು ಯುವ ಬದಲಾವಣೆ ತರುವವರ ರಾಷ್ಟ್ರವ್ಯಾಪಿ ಚಳುವಳಿಯಾಗಿ ವಿಕಸನಗೊಂಡಿದೆ. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜನ ಭಾಗವಹಿಸುವಿಕೆ(ಭಾಗೀದಾರಿ) ಮತ್ತು ಯುವ ಶಕ್ತಿಯ ದೃಷ್ಟಿಕೋನದಲ್ಲಿ ನೆಲೆಗೊಂಡಿರುವ ಈ ಉಪಕ್ರಮವು, ಭಾರತದ ಯುವಕರು ಆಡಳಿತದಲ್ಲಿ ತೊಡಗಿಸಿಕೊಳ್ಳಲು, ನವೀನ ವಿಚಾರಗಳನ್ನು ಹಂಚಿಕೊಳ್ಳಲು ಮತ್ತು ದೇಶದ ಅಭಿವೃದ್ಧಿ ಕಾರ್ಯಸೂಚಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಒಂದು ಕ್ರಿಯಾತ್ಮಕ ವೇದಿಕೆಯಾಗಿ ಹೊರಹೊಮ್ಮಿದೆ.

 

*****


(Release ID: 2188532) Visitor Counter : 6