ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಗ್ರಾಹಕ ವ್ಯವಹಾರಗಳ ಇಲಾಖೆಯು ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಕಡ್ಡಾಯವಾಗಿ ‘ಮೂಲ ದೇಶ’ ಫಿಲ್ಟರ್‌ (ಶೋಧಿಸು) ಅನ್ನು ಪ್ರಸ್ತಾಪಿಸಿದೆ

प्रविष्टि तिथि: 10 NOV 2025 4:16PM by PIB Bengaluru

ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು ಕರಡು ಕಾನೂನು ಮಾಪನಶಾಸ (ಪ್ಯಾಕೇಜ್ಡ್‌ ಸರಕುಗಳು) (ಎರಡನೆಯ) ತಿದ್ದುಪಡಿ ನಿಯಮಗಳು, 2025 ಅನ್ನು ಬಿಡುಗಡೆ ಮಾಡಿದೆ, ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಪ್ಯಾಕೇಜ್‌ ಮಾಡಿದ ಸರಕುಗಳಿಗೆ ‘ಮೂಲ ದೇಶ’ಆಧಾರದ ಮೇಲೆ ಹುಡುಕಬಹುದಾದ ಮತ್ತು ವಿಂಗಡಿಸಬಹುದಾದ ಫಿಲ್ಟರ್‌ಗಳನ್ನು ಒದಗಿಸಲು ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳಿಗೆ ಕಡ್ಡಾಯಗೊಳಿಸಲು ಪ್ರಸ್ತಾಪಿಸಿದೆ. ಇದು ಗ್ರಾಹಕರ ಸಬಲೀಕರಣ ಮತ್ತು ಆನ್‌ಲೈನ್‌ ಶಾಪಿಂಗ್‌ನಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ.

ಈ ತಿದ್ದುಪಡಿಯು ಆನ್‌ಲೈನ್‌ನಲ್ಲಿ ಶಾಪಿಂಗ್‌ ಮಾಡುವಾಗ ಉತ್ಪನ್ನಗಳ ಮೂಲವನ್ನು ಸುಲಭವಾಗಿ ಗುರುತಿಸಲು ಅನುವು ಮಾಡಿಕೊಡುವ ಮೂಲಕ ತಿಳುವಳಿಕೆಯುಳ್ಳ ಖರೀದಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಗ್ರಾಹಕರಿಗೆ ಅಧಿಕಾರ ನೀಡುತ್ತದೆ. ಉದ್ದೇಶಿತ ವೈಶಿಷ್ಟ್ಯವು ಗ್ರಾಹಕರಿಗೆ ತಮ್ಮ ಮೂಲ ದೇಶದ ಪ್ರಕಾರ ಉತ್ಪನ್ನಗಳನ್ನು ಹುಡುಕಲು ಮತ್ತು ವಿಂಗಡಿಸಲು ಅನುವು ಮಾಡಿಕೊಡುತ್ತದೆ. ಆ ಮೂಲಕ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಮತ್ತು ವಿಶಾಲವಾದ ಉತ್ಪನ್ನ ಪಟ್ಟಿಗಳಲ್ಲಿಅಂತಹ ಮಾಹಿತಿಯನ್ನು ಕಂಡುಹಿಡಿಯಲು ಅಗತ್ಯವಿರುವ ಸಮಯವನ್ನು ಕಡಿಮೆ ಮಾಡುತ್ತದೆ.

ಕಾನೂನು ಮಾಪನಶಾಸ (ಪ್ಯಾಕೇಜ್ಡ್‌ ಸರಕುಗಳು) ನಿಯಮಗಳು, 2011ರಲ್ಲಿ, ನಿಯಮ 6ರಲ್ಲಿ, ಉಪ-ನಿಯಮ (10)ರಲ್ಲಿ ಈ ಕೆಳಗಿನವುಗಳನ್ನು ಸೇರಿಸಬೇಕು, ಅವುಗಳೆಂದರೆ, ಆಮದು ಮಾಡಿದ ಉತ್ಪನ್ನಗಳನ್ನು ಮಾರಾಟ ಮಾಡುವ ಪ್ರತಿಯೊಂದು ಇ-ಕಾಮರ್ಸ್‌ ಘಟಕವು ತಮ್ಮ ಉತ್ಪನ್ನ ಪಟ್ಟಿಗಳೊಂದಿಗೆ ಮೂಲ ದೇಶಕ್ಕೆ ಹುಡುಕಬಹುದಾದ ಮತ್ತು ವಿಂಗಡಿಸಬಹುದಾದ ಫಿಲ್ಟರ್‌ಅನ್ನು ಒದಗಿಸಬೇಕು.

ಕರಡು ತಿದ್ದುಪಡಿ ನಿಯಮಗಳನ್ನು ಸಾರ್ವಜನಿಕ ಸಮಾಲೋಚನೆಗಾಗಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಮತ್ತು ಮಧ್ಯಸ್ಥಗಾರರಿಂದ 2025ರ ನವೆಂಬರ್‌ 22 ರವರೆಗೆ dirwm-ca[at]nic[dot]in, ashutosh.agarwal13[at]nic[dot]in, ಅಥವಾ mk.naik72[at]gov[dot]in ನಲ್ಲಿ ಪ್ರತಿಕ್ರಿಯೆಗಳನ್ನು ಆಹ್ವಾನಿಸಲಾಗಿದೆ. ಕರಡು ಅಧಿಸೂಚನೆಯನ್ನು ಸಚಿವಾಲಯದ ಈ ವೆಬ್‌ಸೈಟ್‌ನಲ್ಲಿ ನೋಡಬಹುದು.

ಈ ತಿದ್ದುಪಡಿಯು ‘ಮೇಡ್‌ ಇನ್‌ ಇಂಡಿಯಾ’ ಉತ್ಪನ್ನಗಳನ್ನು ಸುಲಭವಾಗಿ ಕಂಡುಹಿಡಿಯುವ ಮೂಲಕ ‘ಆತ್ಮನಿರ್ಭರ ಭಾರತ’ ಮತ್ತು ‘ಸ್ಥಳೀಯತೆಗೆ ಆದ್ಯತೆ’ ಉಪಕ್ರಮಗಳನ್ನು ನೇರವಾಗಿ ಬೆಂಬಲಿಸುತ್ತದೆ. ಇದು ಭಾರತೀಯ ತಯಾರಕರಿಗೆ ಸಮಾನ ಅವಕಾಶವನ್ನು ಖಾತ್ರಿಗೊಳಿಸುತ್ತದೆ, ಆಮದು ಮಾಡಿದ ಸರಕುಗಳ ಜೊತೆಗೆ ದೇಶೀಯ ಉತ್ಪನ್ನಗಳು ಸಮಾನ ಗೋಚರತೆಯನ್ನು ಪಡೆಯಲು ಸಹಾಯ ಮಾಡುತ್ತದೆ ಮತ್ತು ಸ್ಥಳೀಯವಾಗಿ ತಯಾರಿಸಿದ ಪರ್ಯಾಯಗಳನ್ನು ಆಯ್ಕೆ ಮಾಡಲು ಗ್ರಾಹಕರನ್ನು ಪ್ರೋತ್ಸಾಹಿಸುತ್ತದೆ. ಮೂಲದ ದೇಶದ ಫಿಲ್ಟರ್‌ಗಳ ಪರಿಚಯವು ಅನುಸರಣೆಯನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು, ಉತ್ಪನ್ನ ಮಾಹಿತಿಯನ್ನು ಪರಿಶೀಲಿಸಲು ಮತ್ತು ಪ್ರತಿ ಪಟ್ಟಿಯ ಹಸ್ತಚಾಲಿತ ಪರಿಶೀಲನೆಯ ಅಗತ್ಯವಿಲ್ಲದೆ ಉಲ್ಲಂಘನೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.

ಈ ಪ್ರಸ್ತಾವಿತ ತಿದ್ದುಪಡಿಯು ರಾಷ್ಟ್ರೀಯ ಆದ್ಯತೆಗಳೊಂದಿಗೆ ಹೊಂದಿಕೆಯಾಗುವ ಮತ್ತು ಡಿಜಿಟಲ್‌ ಮಾರುಕಟ್ಟೆಗಳಲ್ಲಿಗ್ರಾಹಕರ ನಂಬಿಕೆಯನ್ನು ಹೆಚ್ಚಿಸುವ ಪಾರದರ್ಶಕ, ಗ್ರಾಹಕ ಸ್ನೇಹಿ ಮತ್ತು ಸ್ಪರ್ಧಾತ್ಮಕ ಇ-ಕಾಮರ್ಸ್‌ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಮತ್ತೊಂದು ಪ್ರಮುಖ ಹೆಜ್ಜೆಯನ್ನು ಸೂಚಿಸುತ್ತದೆ.

****


(रिलीज़ आईडी: 2188499) आगंतुक पटल : 14
इस विज्ञप्ति को इन भाषाओं में पढ़ें: English , Urdu , हिन्दी , Bengali , Punjabi , Tamil , Malayalam