ಪ್ರಧಾನ ಮಂತ್ರಿಯವರ ಕಛೇರಿ
ಹರಿಯಾಣ ದಿನದಂದು ಶುಭ ಕೋರಿದ ಪ್ರಧಾನಮಂತ್ರಿ
प्रविष्टि तिथि:
01 NOV 2025 9:20AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹರಿಯಾಣ ದಿನದ ಸಂದರ್ಭದಲ್ಲಿ ಹರಿಯಾಣದ ನಿವಾಸಿಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಹರಿಯಾಣವು ತನ್ನ ರೈತರ ದಣಿವರಿಯದ ಕಠಿಣ ಪರಿಶ್ರಮ, ಸೈನಿಕರ ಸಾಟಿಯಿಲ್ಲದ ಶೌರ್ಯ ಮತ್ತು ಯುವಕರ ಗಮನಾರ್ಹ ಸಾಧನೆಗಳ ಮೂಲಕ ರಾಷ್ಟ್ರಕ್ಕೆ ಯಾವಾಗಲೂ ಸ್ಫೂರ್ತಿಯಾಗಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ಅಭಿವೃದ್ಧಿಯ ಪಥದಲ್ಲಿ ವೇಗವಾಗಿ ಪ್ರಗತಿ ಸಾಧಿಸುತ್ತಿರುವ ರಾಜ್ಯದ ಎಲ್ಲ ನಾಗರಿಕರ ಸಂತೋಷ ಮತ್ತು ಉಜ್ವಲ ಭವಿಷ್ಯಕ್ಕಾಗಿ ಅವರು ಶುಭ ಹಾರೈಸಿದರು.
ಪ್ರಧಾನಮಂತ್ರಿ aವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;
"ಹರಿಯಾಣ ದಿನದ ಸಂದರ್ಭದಲ್ಲಿ ಹರಿಯಾಣದ ಎಲ್ಲ ನಿವಾಸಿಗಳಿಗೆ ಶುಭಾಶಯಗಳು. ಈ ಚಾರಿತ್ರಿಕ ಭೂಮಿ ನಮ್ಮ ರೈತ ಸಹೋದರರು ಮತ್ತು ಸಹೋದರಿಯರ ದಣಿವರಿಯದ ಕಠಿಣ ಪರಿಶ್ರಮ, ಸೈನಿಕರ ಸಾಟಿಯಿಲ್ಲದ ಶೌರ್ಯ ಮತ್ತು ಯುವಜನತೆಯ ಅದ್ಭುತ ಕಾರ್ಯಕ್ಷಮತೆಯಿಂದಾಗಿ ದೇಶಕ್ಕೆ ಮಾದರಿಯಾಗಿದೆ. ಪ್ರಗತಿಯ ಪಥದಲ್ಲಿ ವೇಗವಾಗಿ ಸಾಗುತ್ತಿರುವ ಈ ರಾಜ್ಯದ ವಿಶೇಷ ಸಂದರ್ಭದಲ್ಲಿ, ನಾನು ಎಲ್ಲರಿಗೂ ಸಂತೋಷ ಮತ್ತು ಉಜ್ವಲ ಭವಿಷ್ಯವನ್ನು ಹಾರೈಸುತ್ತೇನೆ”.
****
(रिलीज़ आईडी: 2185037)
आगंतुक पटल : 29
इस विज्ञप्ति को इन भाषाओं में पढ़ें:
Odia
,
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Tamil
,
Telugu
,
Malayalam