ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ‘ಕೇಂದ್ರೀಯ ಗೃಹ ದಕ್ಷ ತಾ ಪದಕ್ 2025’ ಪುರಸ್ಕೃತರಾದ ಎಲ್ಲಾ ಪೊಲೀಸ್ ಸಿಬ್ಬಂದಿಯನ್ನು ಅಭಿನಂದಿಸಿದರು
ವಿಶೇಷ ಕಾರ್ಯಾಚರಣೆಗಳು, ತನಿಖೆ, ಗುಪ್ತಚರ ಮತ್ತು ವಿಧಿ ವಿಜ್ಞಾನದಲ್ಲಿ ಅನುಕರಣೀಯ ಮಾನದಂಡಗಳನ್ನು ನಿಗದಿಪಡಿಸುವ ಮೂಲಕ, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಸಿಎಪಿಎಫ್‌ಗಳು ಮತ್ತು ಸಿಪಿಒಗಳ ಸಿಬ್ಬಂದಿ ನಮ್ಮ ರಾಷ್ಟ್ರವನ್ನು ಹೆಚ್ಚು ದೃಢ ನಿಶ್ಚಯ ಮತ್ತು ಸುರಕ್ಷಿತವಾಗಿಸಲು ಕೊಡುಗೆ ನೀಡಿದ್ದಾರೆ
ಧೈರ್ಯ, ಬದ್ಧತೆ ಮತ್ತು ಸಮರ್ಪಿತ ಸೇವೆಯನ್ನು ಗೌರವಿಸಲು ಗೃಹ ಸಚಿವಾಲಯವು 2024ರಲ್ಲಿ ಸ್ಥಾಪಿಸಿದ ಪ್ರಶಸ್ತಿಯು ರಾಷ್ಟ್ರದ ಸೇವೆಯ ಮಾರ್ಗವನ್ನು ಅನುಸರಿಸಲು ಹೆಚ್ಚಿನ ಜನರನ್ನು ಪ್ರೇರೇಪಿಸುತ್ತದೆ
Posted On:
31 OCT 2025 7:39PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ‘ಕೇಂದ್ರೀಯ ಗೃಹ ದಕ್ಷ ತಾ ಪದಕ್ 2025’ ಪುರಸ್ಕೃತರಾದ ಎಲ್ಲಾ ಪೊಲೀಸ್ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಎಕ್ಸ್ ವೇದಿಕೆಯಲ್ಲಿಪೋಸ್ಟ್ ಮಾಡಿದ್ದು, ಕೇಂದ್ರೀಯ ಗೃಹ ದಕ್ಷ ತಾ ಪದಕ್ 2025 ಪುರಸ್ಕೃತ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ. ವಿಶೇಷ ಕಾರ್ಯಾಚರಣೆಗಳು, ತನಿಖೆ, ಗುಪ್ತಚರ ಮತ್ತು ವಿಧಿ ವಿಜ್ಞಾನದಲ್ಲಿ ಅನುಕರಣೀಯ ಮಾನದಂಡಗಳನ್ನು ನಿಗದಿಪಡಿಸುವ ಮೂಲಕ, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಸಿಎಪಿಎಫ್‌ಗಳು ಮತ್ತು ಸಿಪಿಒಗಳ ಸಿಬ್ಬಂದಿ ನಮ್ಮ ರಾಷ್ಟ್ರವನ್ನು ಹೆಚ್ಚು ದೃಢ ನಿಶ್ಚಯ ಮತ್ತು ಸುರಕ್ಷಿತವಾಗಿಸಲು ಕೊಡುಗೆ ನೀಡಿದ್ದಾರೆ. ಧೈರ್ಯ, ಬದ್ಧತೆ ಮತ್ತು ಸಮರ್ಪಿತ ಸೇವೆಯನ್ನು ಗೌರವಿಸಲು ಗೃಹ ಸಚಿವಾಲಯವು 2024ರಲ್ಲಿ ಸ್ಥಾಪಿಸಿದ ಪ್ರಶಸ್ತಿಯು ರಾಷ್ಟ್ರದ ಸೇವೆಯ ಮಾರ್ಗವನ್ನು ಅನುಸರಿಸಲು ಹೆಚ್ಚಿನ ಜನರನ್ನು ಪ್ರೇರೇಪಿಸುತ್ತದೆ.
*****
(Release ID: 2184961)
Visitor Counter : 7