ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

2 ಕೋಟಿ ನೋಂದಣಿಗಳನ್ನು ದಾಟಿದ ಮೈ ಭಾರತ್


"ಮೈ ಭಾರತ್ ಯುವ ಭಾರತದ ಹೃದಯದ ಬಡಿತವಾಗಿದ್ದು, ರಾಷ್ಟ್ರ ನಿರ್ಮಾಣದಲ್ಲಿ ಕೊಡುಗೆ ನೀಡಲು ಯುವಕರನ್ನು ಪ್ರೇರೇಪಿಸುತ್ತದೆ" ಎಂದು ಹೇಳಿದ ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ

ಮೈ ಭಾರತ್ 16,000ಕ್ಕೂ ಹೆಚ್ಚು ಯುವ ಸ೦ಘ ಸದಸ್ಯರು ಮತ್ತು 60,000ಕ್ಕೂ ಹೆಚ್ಚು ಸಾಂಸ್ಥಿಕ ಪಾಲುದಾರರನ್ನು ಹೊಂದಿದೆ

ಮೈ ಭಾರತ್ ಮೂಲಕ 14.5 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕ ಅವಕಾಶಗಳನ್ನು ಸೃಷ್ಟಿಸಲಾಗಿದೆ

Posted On: 28 OCT 2025 5:06PM by PIB Bengaluru

ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು, ಪ್ರಮುಖವಾಗಿ ಯುವಕರ ತೊಡಗಿಸಿಕೊಳ್ಳುವಿಕೆಯ ಉಪಕ್ರಮವಾದ ಮೇರಾ ಯುವ ಭಾರತ್ (ಮೈ ಭಾರತ್) ಅಡಿಯಲ್ಲಿ, ಒಂದು ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ.  ಈ ವೇದಿಕೆಯು 2 ಕೋಟಿಗೂ ಹೆಚ್ಚು ನೋಂದಣಿಗಳನ್ನು ದಾಟಿ ದಾಖಲೆ ಸೃಷ್ಟಿಸಿದೆ. ಈ ಮೈಲಿಗಲ್ಲು 2047ರ ಹೊತ್ತಿಗೆ ವಿಕಸಿತ ಭಾರತದೆಡೆಗೆ ದೇಶದ ಸಾಮೂಹಿಕ ಪ್ರಯಾಣದಲ್ಲಿ ಭಾರತದ ಯುವಕರ ಹೆಚ್ಚುತ್ತಿರುವ ಉತ್ಸಾಹ ಮತ್ತು ಭಾಗವಹಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ.

ರಾಷ್ಟ್ರೀಯ ಏಕತಾ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2023ರ ಅಕ್ಟೋಬರ್ 31 ರಂದು ಉದ್ಘಾಟಿಸಿದ ಮೈ ಭಾರತ್, ಭಾರತದ ಅತಿದೊಡ್ಡ ಯುವ-ಕೇಂದ್ರಿತ ಡಿಜಿಟಲ್ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿ ವೇಗವಾಗಿ ವಿಕಸನಗೊಂಡಿದೆ. 15 ರಿಂದ 29 ವರ್ಷ ವಯಸ್ಸಿನ ಯುವಕರಿಗೆ ತಂತ್ರಜ್ಞಾನ-ಚಾಲಿತ, ಒಂದು-ನಿಲುಗಡೆ ಪರಿಹಾರವಾಗಿ ವಿನ್ಯಾಸಗೊಳಿಸಲಾದ ಈ ವೇದಿಕೆಯು ಗ್ರಾಮೀಣ ಮತ್ತು ನಗರದ ಯುವ ನಾಗರಿಕರನ್ನು ಸಂಪರ್ಕಿಸಿ, ರಾಷ್ಟ್ರ ನಿರ್ಮಾಣದಲ್ಲಿ ವೈವಿಧ್ಯಮಯ ಅವಕಾಶಗಳ ಮೂಲಕ ತಾವು ಕಲಿತು, ಸೇವೆ ಸಲ್ಲಿಸಲು ಮತ್ತು ದೇಶವನ್ನು ಮುನ್ನಡೆಸಲು ಯುವ ನಾಗರಿಕರನ್ನು ಪ್ರೇರೇಪಿಸುತ್ತದೆ.

"2 ಕೋಟಿ ನೋಂದಣಿಗಳನ್ನು ದಾಟಿರುವುದು ರಾಷ್ಟ್ರಕ್ಕೆ ಹೆಮ್ಮೆ ತಂದಿದೆ. ಇದು ರಾಷ್ಟ್ರ ನಿರ್ಮಾಣದಲ್ಲಿ ಭಾರತದ ಯುವಕರ ಭಾಗವಹಿಸುವಿಕೆಯ ಉತ್ಸಾಹ, ಶಕ್ತಿ ಮತ್ತು ದೃಢಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ಮೈ ಭಾರತ್ ಯುವ ಭಾರತದ ಹೃದಯದ ಬಡಿತವಾಗಿದೆ. ಮೈ ಭಾರತ್ ಕಲ್ಪನೆಯ ಉತ್ಸಾಹವು ಅವರಿಗೆ ಅವಕಾಶವನ್ನು ಕಲ್ಪಿಸಿ, ಸೇವೆಯ ಉದ್ದೇಶವನ್ನು ಪೂರೈಸುತ್ತದೆ" ಎಂದು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾರವರು ಹೇಳಿದ್ದಾರೆ.

"ಮೈ ಭಾರತ್ ನಮ್ಮ ಯುವಕರಿಗೆ ಆಕಾಂಕ್ಷೆಗಳನ್ನು ಕಾರ್ಯರೂಪಕ್ಕೆ ತರಲು ಸಹಾಯ ಮಾಡುತ್ತಿದ್ದು, ಪ್ರತಿಯೊಂದು ಹೊಸ ನೋಂದಣಿಯೂ ಬಲವಾದ, ಆತ್ಮವಿಶ್ವಾಸ ಮತ್ತು ಸ್ವಾವಲಂಬಿ ರಾಷ್ಟ್ರವನ್ನು ನಿರ್ಮಿಸಲು ಮುನ್ನಡೆಯುತ್ತಿರುವ ಯುವ ಭಾರತೀಯನನ್ನು ಪ್ರತಿನಿಧಿಸುತ್ತದೆ" ಎಂದು ಯುವ ವ್ಯವಹಾರ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವೆಯಾದ ಶ್ರೀಮತಿ ರಕ್ಷಾ ನಿಖಿಲ್ ಖಾಡ್ಸೆಯವರು ಹೇಳಿದ್ದಾರೆ.

ಪ್ರಾರಂಭದಿಂದಲೂ, ಮೈ ಭಾರತ್ ಯುವ ಭಾಗವಹಿಸುವಿಕೆಯ ರೋಮಾಂಚಕ ಪರಿಸರ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಭಾರತಕ್ಕಾಗಿ ಸ್ವಯಂಸೇವಕ ಮತ್ತು ಅನುಭವಿ ಕಲಿಕಾ ಕಾರ್ಯಕ್ರಮದಂತಹ (ELP) ಉಪಕ್ರಮಗಳು ಯುವಜನರು ನಾಯಕತ್ವ ಮತ್ತು ಉದ್ಯೋಗ ಕೌಶಲ್ಯಗಳನ್ನು ಬೆಳೆಸುತ್ತಾ ತಮ್ಮ ಸಮುದಾಯಗಳಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಅನುವು ಮಾಡಿಕೊಟ್ಟಿವೆ.

ಸಾರ್ವಜನಿಕ ಪ್ರೊಫೈಲ್ ಮತ್ತು ಸಿವಿ ಬಿಲ್ಡರ್ ಸೇರಿದಂತೆ ಈ ವೇದಿಕೆಯ ನವೀನ ವೈಶಿಷ್ಟ್ಯಗಳು, ಸಾಧನೆಗಳನ್ನು ಪ್ರದರ್ಶಿಸಲು, ಸಮಾನ ಮನಸ್ಕರೊಂದಿಗೆ ಸಂಪರ್ಕ ಸಾಧಿಸಲು ಹಾಗೂ ಅಭಿವೃದ್ದಿಯ ಅವಕಾಶಗಳನ್ನು ಅನ್ವೇಷಿಸಲು ಯುವಕರಿಗೆ ಅವಕಾಶ ನೀಡುತ್ತವೆ. ಇತ್ತೀಚೆಗೆ ಪರಿಚಯಿಸಲಾದ ರಸಪ್ರಶ್ನೆ ಮತ್ತು ಪ್ರಬಂಧದ ವಿನ್ಯಾಸಗಳು ಪಾಲುದಾರ ಸಂಸ್ಥೆಗಳು ಆಯೋಜಿಸುವ ಜ್ಞಾನಾಧಾರಿತ ಮತ್ತು ಸೃಜನಶೀಲ ಚಟುವಟಿಕೆಗಳನ್ನು ಸಕ್ರಿಯಗೊಳಿಸುವ ಮೂಲಕ ಯುವಕರು ತಮ್ಮನ್ನು ತೊಡಗಿಸಿಕೊಳ್ಳುವಿಕೆಯ ಅವಕಾಶಗಳನ್ನು ಮತ್ತಷ್ಟು ಹೆಚ್ಚಿಸಿವೆ.

ಮೈ ಭಾರತ್ ರಾಷ್ಟ್ರೀಯ ಯುವ ಕಾರ್ಯಕ್ರಮಗಳಾದ ವಿಕಸಿತ ಭಾರತ ಯುವ ನಾಯಕರ ಸಂವಾದ, ವಿಕಸಿತ ಭಾರತ ಯುವ ಸಂಪರ್ಕ, ವಿಕಸಿತ ಭಾರತ ಪಾದಯಾತ್ರೆ ಮತ್ತು ವಿಕಸಿತ ಭಾರತಕ್ಕಾಗಿ ನಶಾ ಮುಕ್ತಿ ಯುವ ಕಾರ್ಯಕ್ರಮಗಳ ಕೇಂದ್ರವಾಗಿದೆ. ಇವೆಲ್ಲವೂ ಲಕ್ಷಾಂತರ ಯುವ ಭಾರತೀಯರ ಉತ್ಸಾಹಭರಿತ ಭಾಗವಹಿಸುವಿಕೆಯ ಸಾಕ್ಷಿಯಾಗಿದೆ.

14.5 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕ ಅವಕಾಶಗಳನ್ನು ಸೃಷ್ಟಿಸುವುದರೊಂದಿಗೆ, ಮೈ ಭಾರತ್ 16,000+ ಯುವ ಸಂಘ ಸದಸ್ಯರು ಮತ್ತು ಸರ್ಕಾರಿ ಇಲಾಖೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಎನ್‌ಜಿಒಗಳು ಸೇರಿದಂತೆ 60,000+ ಸಾಂಸ್ಥಿಕ ಪಾಲುದಾರರ ವಿಶಾಲ ಜಾಲವನ್ನು ಹೊಂದಿದೆ. ರಿಲಯನ್ಸ್ ಮತ್ತು ಇತರ ಕಾರ್ಪೊರೇಟ್ ಪಾಲುದಾರರಂತಹ ಪ್ರಮುಖ ಸಂಸ್ಥೆಗಳೊಂದಿಗಿನ ಸಹಯೋಗವು ಯುವ ಶಕ್ತಿಯನ್ನು ನಾಗರಿಕ ಮತ್ತು ಸಮುದಾಯ ಕ್ರಿಯೆಗೆ ಬೇಕಾಗುವ ಅವಶ್ಯಕ ಪ್ರಭಾವಶಾಲಿ ಕಾರ್ಯಕ್ರಮಗಳು ಮತ್ತು ಬೂಟ್‌ಕ್ಯಾಂಪ್‌ಗಳನ್ನು ರಚಿಸಲು ಸಹಾಯ ಮಾಡಿದೆ.

ಫಿಜಿಟಲ್ (ಭೌತಿಕ + ಡಿಜಿಟಲ್) ವೇದಿಕೆಯಾಗಿ, ಮೈ ಭಾರತ್ ವೇದಿಕೆಯು ಆನ್‌ಲೈನ್ ಸಂಪರ್ಕದ ಮೇಲೆ ಪರಿಣಾಮ ಬೀರುವ ಪ್ರಮುಖ ಸೇತುವೆಯಾಗಿದೆ. ನಾಗರಿಕ ಅರಿವು, ಪ್ರಾಯೋಗಿಕ ಕಲಿಕೆ ಮತ್ತು ನಾಯಕತ್ವ ಅಭಿವೃದ್ಧಿಯನ್ನು ಬೆಳೆಸುವ ರಚನಾತ್ಮಕ ಕಾರ್ಯಕ್ರಮಗಳನ್ನು ನೀಡಲು ಹೆಚ್ಚಿನ ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಅಭಿವೃದ್ಧಿ ಪಾಲುದಾರ ಸೇರಿಕೆಯೊಂದಿಗೆ ಮೈ ಭಾರತ್ ವೇದಿಕೆಯು ವಿಸ್ತರಿಸುತ್ತಲೇ ಇದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದ ಮಾರ್ಗದರ್ಶಿಸಲ್ಪಟ್ಟ 'ಮೈ ಭಾರತ್', 2047 ರ ವೇಳೆಗೆ ಆತ್ಮನಿರ್ಭರ ಮತ್ತು ವಿಕಸಿತ ಭಾರತವನ್ನು ನಿರ್ಮಿಸುವ ಅಮೃತ ಪೀಠದ ಧ್ಯೇಯವಾಗಿ ಯುವಕರನ್ನು ಒಗ್ಗೂಡಿಸಿ, ಸಬಲೀಕರಣಗೊಳಿಸುವ ಮತ್ತು ಸೇವೆ ಮಾಡುವ ಕ್ರಿಯಾತ್ಮಕ ಚಳುವಳಿಯಾಗಿ ಬೆಳೆಯುತ್ತಲೇ ಇದೆ. ನಿರಂತರ ನಾವೀನ್ಯತೆ, ಸಹಯೋಗ ಮತ್ತು ಯುವ-ನೇತೃತ್ವದ ಪ್ರಕ್ರಿಯೆಯೊಂದಿಗೆ, 'ಮೈ ಭಾರತ್' ಸೇವಾ ಭಾವ (ಸೇವೆ) ಮತ್ತು ಕರ್ತವ್ಯ ಬೋಧನೆಯ (ಕರ್ತವ್ಯ ಪ್ರಜ್ಞೆ) ದಾರಿದೀಪವಾಗಿ ನಿಂತು - ಭಾರತದ ಯುವಕರನ್ನು ರಾಷ್ಟ್ರದ ಭವಿಷ್ಯದ ವಾಸ್ತುಶಿಲ್ಪಿಗಳಾಗಿ ಸಬಲೀಕರಣಗೊಳಿಸುತ್ತಿದೆ.

 

*****


(Release ID: 2183572) Visitor Counter : 4