ಪ್ರಧಾನ ಮಂತ್ರಿಯವರ ಕಛೇರಿ
ಛಠ್ ಪೂಜೆಯ ಸಂಧ್ಯಾ ಅರ್ಘ್ಯ ಧಾರ್ಮಿಕ ಆಚರಣೆಗೆ ಶುಭ ಕೋರಿದ ಪ್ರಧಾನಮಂತ್ರಿ
Posted On:
27 OCT 2025 2:02PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಧ್ಯಾ ಅರ್ಘ್ಯದ ಪವಿತ್ರ ಧಾರ್ಮಿಕ ಆಚರಣೆಗಾಗಿ ದೇಶಾದ್ಯಂತದ ನಾಗರಿಕರಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.
ಛಠ್ ಪೂಜೆಯ ಈ ಸಂದರ್ಭದ ಸ್ಮರಣಾರ್ಥ ಛಠೀ ಮಾಯ್ಯರಿಗೆ ಸಮರ್ಪಿತವಾದ ಭಕ್ತಿ ಗೀತೆಗಳನ್ನು ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಬರೆದಿದ್ದಾರೆ:
"ಛಠ್ ಹಬ್ಬದ ಸಂದರ್ಭದಲ್ಲಿ ದೇಶಾದ್ಯಂತದ ನನ್ನ ಕುಟುಂಬ ಸದಸ್ಯರಿಗೆ ಶುಭಾಶಯಗಳು. ಈ ಪವಿತ್ರ ಸಂದರ್ಭದಲ್ಲಿ ಮುಳುಗುವ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವ ನಮ್ಮ ಸಂಪ್ರದಾಯ ಬಹಳ ವಿಶೇಷವಾದುದು. ಪ್ರತಿಯೊಬ್ಬರೂ ಆಶೀರ್ವದಿಸಲ್ಪಡಲಿ, ಸೂರ್ಯ ದೇವರ ಕೃಪೆಯಿಂದ ಪ್ರತಿಯೊಬ್ಬರೂ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ಪಡೆಯಲಿ. ಛಠೀ ಮಾಯ್ಯಕ್ಕೆ ಜಯವಾಗಲಿ!
https://m.youtube.com/watch?v=er0EO-Zp904
https://m.youtube.com/watch?v=OrlnX9zM5-k&pp=0gcJCR4Bo7VqN5tD”
*****
(Release ID: 2182932)
Visitor Counter : 3
Read this release in:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam