ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಹಸಿರು ಹೈಡ್ರೋಜನ್ ಮಿಷನ್ ಲಾಂಛನವನ್ನು ವಿನ್ಯಾಸಗೊಳಿಸಲು ಭಾರತದ ಸೃಜನಶೀಲ ಮನಸ್ಸುಗಳನ್ನು ಎಂಎನ್ಆರ್ ಇ ಆಹ್ವಾನಿಸುತ್ತದೆ - ವಿಜೇತರಿಗೆ 1 ಲಕ್ಷ ರೂ


ಭಾರತದ ಹಸಿರು ಹೈಡ್ರೋಜನ್ ಮಹತ್ವಾಕಾಂಕ್ಷೆ, ಸ್ವಾವಲಂಬನೆ ಮತ್ತು ಬಹು-ವಲಯದ ಸಾಮರ್ಥ್ಯವನ್ನು ಪ್ರದರ್ಶಿಸುವ ಲಾಂಛನ ನಮೂದುಗಳು 2025ರ ನವೆಂಬರ್ 5ರವರೆಗೆ ತೆರೆದಿರುತ್ತವೆ

Posted On: 23 OCT 2025 3:09PM by PIB Bengaluru

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ (ಎಂಎನ್ಆರ್ ಇ) ಅಡಿಯಲ್ಲಿ ಬರುವ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ (ಎನ್ ಎಚ್ ಎಂ) ಹಸಿರು ಹೈಡ್ರೋಜನ್ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ಮತ್ತು ಈ ಉದಯೋನ್ಮುಖ ವಲಯದ ಅವಕಾಶಗಳು ಮತ್ತು ಸವಾಲುಗಳಿಗೆ ವ್ಯವಸ್ಥಿತ ಪ್ರತಿಕ್ರಿಯೆಯನ್ನು ವೇಗಗೊಳಿಸಲು ಸಮಗ್ರ ಕ್ರಿಯಾ ಯೋಜನೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಮಿಷನ್ ಆರ್ಥಿಕತೆಯ ಗಮನಾರ್ಹ ಡಿ-ಕಾರ್ಬನೈಸೇಶನ್ ಗೆ ಕಾರಣವಾಗುತ್ತದೆ. ಪಳೆಯುಳಿಕೆ ಇಂಧನ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಹಸಿರು ಹೈಡ್ರೋಜನ್ ನಲ್ಲಿ ತಂತ್ರಜ್ಞಾನ ಮತ್ತು ಮಾರುಕಟ್ಟೆ ನಾಯಕತ್ವವನ್ನು ವಹಿಸಿಕೊಳ್ಳಲು ಭಾರತಕ್ಕೆ ಅನುವು ಮಾಡಿಕೊಡುತ್ತದೆ.

ಈ ಗುರಿಯೊಂದಿಗೆ ಮತ್ತು ಭಾರತೀಯ ಮತ್ತು ಜಾಗತಿಕ ದೃಷ್ಟಿಕೋನದಲ್ಲಿ ಮಿಷನ್ ನ ಮಹತ್ವವನ್ನು ಸರಿಯಾಗಿ ಅಂಗೀಕರಿಸಿ, ಎಂಎನ್ಆರ್ ಇ ಭಾರತೀಯ ನಾಗರಿಕರನ್ನು ಅವರ ವಯಸ್ಸನ್ನು ಲೆಕ್ಕಿಸದೆ "ಭಾರತವನ್ನು ಹಸಿರು ಹೈಡ್ರೋಜನ್ ಮತ್ತು ಅದರ ಉತ್ಪನ್ನಗಳ ಉತ್ಪಾದನೆ, ಬಳಕೆ ಮತ್ತು ರಫ್ತಿಗೆ ಜಾಗತಿಕ ಕೇಂದ್ರವನ್ನಾಗಿ ಮಾಡಲು" ಮಿಷನ್ ಉದ್ದೇಶಗಳೊಂದಿಗೆ ಅವರ ಆಕಾಂಕ್ಷೆಗಳನ್ನು ಹೊಂದಿಸಲು ಅಂತರ್ಗತ ವಿಧಾನವನ್ನು ತೆಗೆದುಕೊಂಡಿದೆ. ವಿನ್ಯಾಸವು ಮಿಷನ್ ನ ಸಾರವನ್ನು ಸೆರೆಹಿಡಿಯಬೇಕು, ಇದು ಹಸಿರು ಹೈಡ್ರೋಜನ್ ಉತ್ಪಾದನೆ, ಬಳಕೆ ಮತ್ತು ರಫ್ತಿಗೆ ಜಾಗತಿಕ ಕೇಂದ್ರವಾಗುವ ನಮ್ಮ ಆಕಾಂಕ್ಷೆಯಾಗಿದೆ ಮತ್ತು ಉಕ್ಕು, ಸಾರಿಗೆ, ರಸಗೊಬ್ಬರ, ಹಡಗು, ಪೆಟ್ರೋಕೆಮಿಕಲ್ಸ್ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವಲಯದ ಉದಯೋನ್ಮುಖ ಸ್ವರೂಪ, ಸ್ವಾವಲಂಬನೆ, ಹೂಡಿಕೆ ಅವಕಾಶಗಳು ಮತ್ತು ಹಸಿರು ಹೈಡ್ರೋಜನ್ ಉಪಯುಕ್ತತೆಯನ್ನು ಸೆರೆಹಿಡಿಯಬೇಕಿದೆ.

ಸ್ಪರ್ಧಿಗಳು ಲೋಗೋ(ಲಾಂಛನ)ವನ್ನು ಜೆಪಿಇಜಿ ಅಥವಾ ಪಿಎನ್ ಜಿ ಅಥವಾ ಪಿಡಿಎಫ್ ಸ್ವರೂಪದಲ್ಲಿ ಮಾತ್ರ ಅಪ್ಲೋಡ್ ಮಾಡಬೇಕು. ಲೋಗೋ ಕನಿಷ್ಠ 300 ಡಿಪಿಐನೊಂದಿಗೆ ಹೆಚ್ಚಿನ ರೆಸಲ್ಯೂಶನ್ ನಲ್ಲಿರಬೇಕು. ಲೋಗೋದ ಗಾತ್ರವು 15cm X 20cm ಆಗಿರಬೇಕು. ಸೃಜನಶೀಲತೆ, ಸ್ವಂತಿಕೆ, ಸಂಯೋಜನೆ, ತಾಂತ್ರಿಕ ಶ್ರೇಷ್ಠತೆ, ಸರಳತೆ, ಕಲಾತ್ಮಕ ಅರ್ಹತೆ, ದೃಶ್ಯ ಪ್ರಭಾವ ಮತ್ತು ಎನ್ ಎಚ್ ಎಂಗೆ ಅದರ ಪ್ರಸ್ತುತತೆಯ ಅಂಶಗಳ ಆಧಾರದ ಮೇಲೆ ಎಂಎನ್ ಆರ್ ಇಯ ಆಂತರಿಕ ಸಮಿತಿಯು ನಮೂದುಗಳನ್ನು ನಿರ್ಣಯಿಸುತ್ತದೆ. ವಿಜೇತ ಪ್ರವೇಶಕ್ಕೆ ರೂ. 1,00,000/- ನಗದು ಬಹುಮಾನ ಮತ್ತು ಮಿಷನ್ ನಿರ್ದೇಶಕರು, ಎನ್ ಎಚ್ ಎಂ ಅವರು ಮಾನ್ಯತೆಯ ಪ್ರಮಾಣಪತ್ರವನ್ನು ನೀಡುತ್ತಾರೆ. 10 ರನ್ನರ್ಸ್ ಅಪ್ ಅಭ್ಯರ್ಥಿಗಳಿಗೆ ತಲಾ 5000 ರೂ. ವಿಜೇತರಿಗೆ (01) ನವದೆಹಲಿಗೆ ರೌಂಡ್-ಟ್ರಿಪ್ ದೇಶೀಯ ಎಕಾನಮಿ ಕ್ಲಾಸ್ ವಿಮಾನ ಶುಲ್ಕವನ್ನು ಮರುಪಾವತಿಸಲಾಗುತ್ತದೆ.

ನಮೂದು ಸಲ್ಲಿಸಲು ಕೊನೆಯ ದಿನಾಂಕ 05-11-2025. ಸ್ಪರ್ಧಿಗಳು ತಮ್ಮ ನಮೂದುಗಳ ನೋಂದಣಿ ಮತ್ತು ಸಲ್ಲಿಕೆಗಾಗಿ ನೇರವಾಗಿ https://www.mygov.in/task/logo-design-contest-national-green-hydrogen-mission/ ಗೆ ಲಾಗಿನ್ ಆಗಬಹುದು.

 

*****


(Release ID: 2181845) Visitor Counter : 3