ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
8ನೇ ರಾಷ್ಟ್ರೀಯ ಪೋಷಣ ಮಾಸ 2025 ಡೆಹ್ರಾಡೂನ್ನಲ್ಲಿ ಮುಕ್ತಾಯ: ರಾಷ್ಟ್ರವು ಪೌಷ್ಟಿಕಾಂಶ ಮತ್ತು ಸಬಲೀಕರಣವನ್ನು ಆಚರಿಸಿತು
ಪುರುಷರ ಪಾಲ್ಗೊಳ್ಳುವಿಕೆ, ಸ್ಥಳೀಯ ಆಹಾರಗಳು, ಡಿಜಿಟಲ್ ನಾವೀನ್ಯತೆ: ಪೌಷ್ಟಿಕಾಂಶದ ಅರಿವು, ತಂತ್ರಜ್ಞಾನ ಮತ್ತು ಒಟ್ಟಾಗುವ ಮೂಲಕ ಸಮುದಾಯಗಳನ್ನು ಸಬಲೀಕರಣಗೊಳಿಸುವುದನ್ನು ಪೋಷಣ ಮಾಸ 2025 ಪ್ರಮುಖವಾಗಿ ಬಿಂಬಿಸುತ್ತದೆ.
ಪೌಷ್ಠಿಕಾಂಶವು ಒಂದು ದಿನದ ಅಭಿಯಾನವಲ್ಲ, ಅದು ಆರೋಗ್ಯಕರ ಜೀವನ ಮತ್ತು ಸಮೃದ್ಧ ಸಮಾಜವನ್ನು ನಿರ್ಮಿಸುವ ನಿರಂತರ ಪ್ರಯಾಣವಾಗಿದೆ. ಅಲ್ಲಿ ಪ್ರತಿ ಮಗುವೂ ಆರೋಗ್ಯಕರವಾಗಿರುತ್ತದೆ, ಪ್ರತಿ ತಾಯಿಯೂ ಸಬಲೀಕರಣಗೊಳ್ಳುತ್ತಾರೆ ಮತ್ತು ಪ್ರತಿ ಕುಟುಂಬವೂ ಉತ್ತಮ ಪೋಷಣೆಯನ್ನು ಪಡೆಯುತ್ತದೆ: ಶ್ರೀಮತಿ ಅನ್ನಪೂರ್ಣ ದೇವಿ
2018 ರಲ್ಲಿ ಪ್ರಾರಂಭವಾದಾಗಿನಿಂದ, ಈ ಅಭಿಯಾನವು 140 ಕೋಟಿಗೂ ಹೆಚ್ಚು ಸಮುದಾಯ ಆಧಾರಿತ ಚಟುವಟಿಕೆಗಳನ್ನು ಸಜ್ಜುಗೊಳಿಸಿದೆ, "ಪ್ರತಿಯೊಂದು ಮಗುವೂ ಪೋಷಿಸಲ್ಪಡುತ್ತದೆ, ಪ್ರತಿ ತಾಯಿಯೂ ಸಬಲೀಕರಣಗೊಳ್ಳುತ್ತಾರೆ ಮತ್ತು ಪ್ರತಿ ಸಮುದಾಯವೂ ಬಲಗೊಳ್ಳುತ್ತದೆ" ಎನ್ನುವ ದೃಷ್ಟಿಕೋನವನ್ನು ಬಲಪಡಿಸುತ್ತದೆ: ಶ್ರೀಮತಿ ಸಾವಿತ್ರಿ ಠಾಕೂರ್
Posted On:
17 OCT 2025 7:59PM by PIB Bengaluru
ಉತ್ತಮ ಪೌಷ್ಠಿಕಾಂಶವು ಬೆಳವಣಿಗೆ, ಅವಕಾಶ ಮತ್ತು ಚೇತರಿಕೆಗೆ ಬಲ ನೀಡುತ್ತಾದೆ. ಲಕ್ಷಾಂತರ ಅಂಗನವಾಡಿ ಕಾರ್ಯಕರ್ತರು, ಸಮುದಾಯ ಸದಸ್ಯರು ಮತ್ತು ಕುಟುಂಬಗಳು ಸಕ್ರಿಯವಾಗಿ ಭಾಗವಹಿಸಿದ್ದ 8ನೇ ರಾಷ್ಟ್ರೀಯ ಪೋಷಣ ಮಾಸ 2025 ಅಭಿಯಾನವು, ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಮತ್ತು ಸಬಲೀಕರಣಕ್ಕೆ ಭಾರತದ ಸಾಮೂಹಿಕ ಬದ್ಧತೆಯನ್ನು ಪ್ರದರ್ಶಿಸಿತು.
ಪೌಷ್ಠಿಕಾಂಶ ಜಾಗೃತಿ ಮತ್ತು ಕಾರ್ಯಗಳಿಗೆ ಮೀಸಲಾಗಿರುವ ಒಂದು ತಿಂಗಳ ಕಾಲ ನಡೆದ ರಾಷ್ಟ್ರವ್ಯಾಪಿ ಜನಾಂದೋಲನದ ಮುಕ್ತಾಯವನ್ನು ಗುರುತಿಸುವ 8ನೇ ರಾಷ್ಟ್ರೀಯ ಪೋಷಣ ಮಾಸ 2025ರ ಸಮಾರೋಪ ಸಮಾರಂಭವು ಇಂದು ಉತ್ತರಾಖಂಡದ ಡೆಹ್ರಾಡೂನಿನ ಹಿಮಾಲಯನ್ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆಯಿತು.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ವಿಡಿಯೋ ಸಂದೇಶದ ಮೂಲಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ʻಪೋಷಣ್ ಮಾಹ್ʼ ಸಮಯದಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾಡಿದ ಪೂರ್ವಭಾವಿ ಪ್ರಯತ್ನಗಳನ್ನು ಅಭಿನಂದಿಸಿದರು. ಪೌಷ್ಠಿಕಾಂಶವು ಒಂದು ದಿನದ ಅಭಿಯಾನವಲ್ಲ, ಅದು ಆರೋಗ್ಯಕರ ಜೀವನ ಮತ್ತು ಸಮೃದ್ಧ ಸಮಾಜವನ್ನು ನಿರ್ಮಿಸುವ ನಿರಂತರ ಪ್ರಯಾಣವಾಗಿದೆ. ಅಲ್ಲಿ ಪ್ರತಿ ಮಗುವೂ ಆರೋಗ್ಯಕರವಾಗಿರುತ್ತದೆ, ಪ್ರತಿ ತಾಯಿಯೂ ಸಬಲೀಕರಣಗೊಳ್ಳುತ್ತಾರೆ ಮತ್ತು ಪ್ರತಿ ಕುಟುಂಬವೂ ಉತ್ತಮ ಪೋಷಣೆ ಪಡೆಯುತ್ತದೆ ಎಂದು ಅವರು ಒತ್ತಿ ಹೇಳಿದರು.
"ಪ್ರತಿಯೊಬ್ಬ ಆರೋಗ್ಯವಂತ ಮಹಿಳೆ, ಪ್ರತಿಯೊಂದು ಸಬಲೀಕೃತ ಕುಟುಂಬ ಹಾಗು ಪ್ರತಿಯೊಂದು ಪೋಷಿತ ಬಾಲ್ಯವು ವಿಕಸಿತ ಭಾರತದ ಅಡಿಪಾಯ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪೋಷಣ ಅಭಿಯಾನ ಉದ್ಘಾಟಿಸಿದ ಸಂದರ್ಭದಲ್ಲಿ ನೀಡಿದ ಸ್ಪೂರ್ತಿದಾಯಕ ಮಾತುಗಳನ್ನು ಸಚಿವರು ಪುನರುಚ್ಚರಿಸಿದರು. ಇಂದು ಸಾಧಿಸಿರುವ ಗಮನಾರ್ಹ ಪ್ರಗತಿಯು ಲಕ್ಷಾಂತರ ಅಂಗನವಾಡಿ ಕಾರ್ಯಕರ್ತರ ಸಮರ್ಪಣೆ, ತಾಯಂದಿರ ಅರಿವು ಮತ್ತು ದೇಶಾದ್ಯಂತ ಸಮುದಾಯಗಳ ಸಕ್ರಿಯ ಭಾಗವಹಿಸುವಿಕೆಯ ಫಲಿತಾಂಶವಾಗಿದೆ ಎಂದು ಅವರು ಒತ್ತಿ ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್ ಭಾಗವಹಿಸಿದ್ದರು. ಉತ್ತರಾಖಂಡ ಸರ್ಕಾರದ ಮಹಿಳಾ ಸಬಲೀಕರಣ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ರೇಖಾ ಆರ್ಯ ಮತ್ತು ಉತ್ತರಾಖಂಡ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ, ಸೈನಿಕ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಗಣೇಶ್ ಜೋಶಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್ ತಮ್ಮ ಭಾಷಣದಲ್ಲಿ,ʻ ಪೋಷಣ್ ಅಭಿಯಾನʼವನ್ನು ಒಂದು ಯೋಜನೆಯಿಂದ ರಾಷ್ಟ್ರವ್ಯಾಪಿ ಆಂದೋಲನವನ್ನಾಗಿ ಪರಿವರ್ತಿಸಿದ ಅಂಗನವಾಡಿ ಕಾರ್ಯಕರ್ತರು ಮತ್ತು ಮುಂಚೂಣಿ ತಂಡಗಳ ಕಾರ್ಯಗಳನ್ನು ಶ್ಲಾಘಿಸಿದರು. 2018ರಲ್ಲಿ ಪ್ರಾರಂಭವಾದಾಗಿನಿಂದ, ಅಭಿಯಾನವು 1.4 ಶತಕೋಟಿಗೂ ಹೆಚ್ಚು ಸಮುದಾಯ ಆಧಾರಿತ ಚಟುವಟಿಕೆಗಳನ್ನು ಸಜ್ಜುಗೊಳಿಸಿದೆ, "ಪ್ರತಿಯೊಂದು ಮಗುವನ್ನು ಪೋಷಿಸುವುದು, ಪ್ರತಿ ತಾಯಿಯನ್ನು ಸಬಲೀಕರಣಗೊಳಿಸುವುದು ಮತ್ತು ಪ್ರತಿ ಸಮುದಾಯವನ್ನು ಬಲಪಡಿಸುವುದು"ಎನ್ನುವ ದೃಷ್ಟಿಕೋನವನ್ನು ಬಲಪಡಿಸುತ್ತದೆ ಎಂದು ಅವರು ಒತ್ತಿ ಹೇಳಿದರು. "ಪೋಷಣ್ ಕೇವಲ ಒಂದು ಯೋಜನೆಯಲ್ಲ - ಇದು ರಾಷ್ಟ್ರದ ಜವಾಬ್ದಾರಿಯಾಗಿದೆ” ಎಂದು ಅವರು ಹೇಳಿದರು.
ಪೌಷ್ಟಿಕತೆಯು ಕೇವಲ ಒಂದು ಕಾರ್ಯಕ್ರಮವಲ್ಲ, ಆದರೆ ಒಂದು ಸಂಸ್ಕೃತಿಯಾಗಿದೆ; ಒಂದು ಕಾರ್ಯಕ್ರಮವಲ್ಲ, ಆದರೆ ಒಂದು ಆಂದೊಲನವಾಗಿದೆ; ಮತ್ತು ಒಂದು ತಿಂಗಳು ಅಲ್ಲ, ಆದರೆ ಒಂದು ಜೀವನ ವಿಧಾನವಾಗಿದೆ" ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಉತ್ತರಾಖಂಡದ ಮಹಿಳಾ ಸಬಲೀಕರಣ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ರೇಖಾ ಆರ್ಯ, 'ಲೋಕಲ್ ಫಾರ್ ವೋಕಲ್ ' ಎಂಬ ಮನೋಭಾವವನ್ನು ಪ್ರತಿಬಿಂಬಿಸುವ ಸ್ಥಳೀಯ ಆಹಾರಗಳು, ಸಿರಿಧಾನ್ಯಗಳ ಸೇರ್ಪಡೆ ಮತ್ತು ಗುಡ್ಡಗಾಡು ಮತ್ತು ಬುಡಕಟ್ಟು ಸಮುದಾಯಗಳಲ್ಲಿ ಪೌಷ್ಟಿಕಾಂಶ ಜಾಗೃತಿಯ ಮಹತ್ವವನ್ನು ಎತ್ತಿ ತೋರಿಸಿದರು. ಐ.ಸಿ.ಟಿ ಆಡಳಿತ ಸಾಧನ ʻಪೋಷಣ್ ಟ್ರ್ಯಾಕರ್ʼ ಅನ್ನು ಅಂಗನವಾಡಿಗಳಲ್ಲಿ ಸೇವಾ ವಿತರಣೆ ಮತ್ತು ಟ್ರ್ಯಾಕಿಂಗ್ ನಲ್ಲಿ ಪಾರದರ್ಶಕತೆಯನ್ನು ತಂದ ಕ್ರಾಂತಿಕಾರಿ ಮೊಬೈಲ್ ಆ್ಯಪ್ ಎಂದು ಸಚಿವರು ಶ್ಲಾಘಿಸಿದರು. ಇದು ಅಂಗನವಾಡಿ ಕಾರ್ಯಕರ್ತರು ಗಳಿಗೆ (AWW) ಡಿಜಿಟಲ್ ಉದ್ಯೋಗಕ್ಕೆ ಸಹಾಯವಾಗಿಯೂ ಕೆಲಸ ಮಾಡಿದೆ.
ಉತ್ತರಾಖಂಡ್ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಗಣೇಶ್ ಜೋಶಿ, ಸ್ಥಳೀಯವಾಗಿ ಉತ್ಪಾದಿಸುವ ಆಹಾರಗಳನ್ನು, ವಿಶೇಷವಾಗಿ ಉತ್ತರಾಖಂಡದ ಸಾಂಪ್ರದಾಯಿಕ ಆಹಾರದಲ್ಲಿ ಆಳವಾಗಿ ಬೇರೂರಿರುವ ಸ್ಥಳೀಯ ಸಿರಿಧಾನ್ಯ ಮತ್ತು ಬೇಳೆಕಾಳುಗಳನ್ನು ಉತ್ತೇಜಿಸುವ ಮಹತ್ವವನ್ನು ಒತ್ತಿ ಹೇಳಿದರು. ಮಂಡುವಾ (ರಾಗಿ) ಮತ್ತು ಜಂಗೋರಾ (ಊದಲು ಸಿರಿಧಾನ್ಯ) ನಂತಹ ಸಿರಿಧಾನ್ಯಗಳು ಸ್ಥಳೀಯವಾಗಿ ಬೆಳೆಯುವ ಬೇಳೇಕಾಳುಗಳೊಂದಿಗೆ ಪೌಷ್ಟಿಕಾಂಶದಲ್ಲಿ ಸಮೃದ್ಧವಾಗಿವೆ ಮಾತ್ರವಲ್ಲದೆ ಬೆಟ್ಟದ ರಾಜ್ಯದ ಹವಾಮಾನ ಪರಿಸ್ಥಿತಿಗಳಿಗೆ ಸಹ ಸೂಕ್ತವಾಗಿದೆ ಹೊಂದಿವೆ ಎಂದು ಅವರು ಹೇಳಿದರು. "ಸ್ಥಳೀಯವು ಆರೋಗ್ಯಕ್ಕೆ ನಿಜವಾದ ಬದಲಾವಣೆ ತರುತ್ತದೆ" ಎಂದು ಅವರು ಎತ್ತಿ ತೋರಿಸಿದರು. ಫಾಸ್ಟ್-ಫುಡ್ ಸೇವನೆಯ ಹೆಚ್ಚುತ್ತಿರುವ ಪ್ರವೃತ್ತಿಯ ಬಗ್ಗೆ ಅವರು ಎಚ್ಚರಿಕೆ ನೀಡಿದರು ಮತ್ತು ಆರೋಗ್ಯಕರ ಹಾಗು ಸ್ವಾವಲಂಬನೆ ಎರಡನ್ನೂ ಉತ್ತೇಜಿಸುವ ಆರೋಗ್ಯಕರ, ಮನೆಯಲ್ಲಿ ಬೆಳೆದ ಆಹಾರಕ್ರಮಗಳಿಗೆ ಮರಳಲು ಕರೆ ನೀಡಿದರು. ಸ್ಥಳೀಯ ಆಹಾರ ಬ್ರಾಂಡ್ಗಳ ವ್ಯಾಪಕ ಪ್ರಚಾರದ ಮೂಲಕ ಪೌಷ್ಟಿಕಾಂಶ, ಜೀವನೋಪಾಯ ಮತ್ತು ಸುಸ್ಥಿರ ಕೃಷಿಯನ್ನು ಸಂಪರ್ಕಿಸುವಲ್ಲಿ ಉತ್ತರಾಖಂಡವು ಉದಾಹರಣೆಯಾಗಿ ಮುನ್ನಡೆಸಬಹುದು ಎಂದು ಅವರು ಪುನರುಚ್ಚರಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಲವ್ ಅಗರ್ವಾಲ್, 1975 ರಲ್ಲಿ ಪ್ರಾರಂಭವಾದಾಗಿನಿಂದ, ಅಂಗನವಾಡಿ ಸೇವೆಗಳು ವಿಶ್ವದ ಅತಿದೊಡ್ಡ ಬಾಲ್ಯದ ಆರೈಕೆ ಮತ್ತು ಅಭಿವೃದ್ಧಿಯಾಗಿ ವಿಕಸನಗೊಂಡಿವೆ ಎಂದು ಎತ್ತಿ ತೋರಿಸಿದರು. 14 ಲಕ್ಷ ಅಂಗನವಾಡಿ ಕೇಂದ್ರಗಳ ಮೂಲಕ 9 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಸೇವೆ ಸಲ್ಲಿಸುವ ಕಾರ್ಯಕ್ರಮ. ʻಪೋಶಣ್ ಟ್ರ್ಯಾಕರ್ʼ ಮೂಲಕ 99.55% ಆಧಾರ್ ದೃಢೀಕರಣ ಮತ್ತು ಡಿಜಿಟಲ್ ಏಕೀಕರಣವು ಪಾರದರ್ಶಕತೆ ಮತ್ತು ದಕ್ಷತೆಯನ್ನು ಖಚಿತಪಡಿಸಿದೆ, ಜೊತೆಗೆ 2 ಲಕ್ಷ ಅಂಗನವಾಡಿ ಕೇಂದ್ರಗಳನ್ನು ಸ್ಮಾರ್ಟ್ ಸಾಧನಗಳು ಮತ್ತು ಬೆಳವಣಿಗೆಯ ಮೇಲ್ವಿಚಾರಣಾ ಸಾಧನಗಳೊಂದಿಗೆ ಸುಸಜ್ಜಿತವಾದ ಆಧುನಿಕ, ಮಕ್ಕಳ ಸ್ನೇಹಿ "ಸಕ್ಷಮ್" ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಪೋಶಣ್ ಚಾಂಪಿಯನ್ಸ್ ಮತ್ತು ಮಿಷನ್ ಶಕ್ತಿ ಚಾಂಪಿಯನ್ಸ್ ಪ್ರಶಸ್ತಿ ಪ್ರದಾನ, ಹದಿಹರೆಯದ ಬಾಲಕಿಯರಿಗೆ ಮಹಾಲಕ್ಷ್ಮಿ ಕಿಟ್ಗಳು ಮತ್ತು ಪೋಶನ್ ಕಿಟ್ಗಳ ವಿತರಣೆ ಮತ್ತು ಕೋವಿಡ್ ಪೀಡಿತ ಕುಟುಂಬಗಳ ಮಕ್ಕಳಿಗೆ 'ವಾತ್ಸಲ್ಯ' ಕಂತನ್ನು ಆನ್ ಲೈನ್ ಮೂಲಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ಗಣ್ಯರು ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರೊಂದಿಗೆ ಮಾತನಾಡಿದರು ಮತ್ತು ಅವರ ತಳಮಟ್ಟದ ಸೇವೆಯನ್ನು ಶ್ಲಾಘಿಸಿದರು.
ಈ ವರ್ಷದ ಪೋಷಣ ಮಾಸ 2025 ಆರು ವಿಷಯಾಧಾರಿತ ಸ್ತಂಭಗಳಲ್ಲಿ 14 ಕೋಟಿಗೂ ಹೆಚ್ಚು ಈ ಈ ರೀತಿಯ ಚಟುವಟಿಕೆಗಳಿಗೆ ಸಾಕ್ಷಿಯಾಯಿತು: ಮಕ್ಕಳಲ್ಲಿ ಬೊಜ್ಜು ನಿವಾರಣೆ, ಪೋಷನೆಯೂ ಕಲಿಕೆಯೂ (ಪೋಷಣ್ ಭಿ ಪಡಾಯಿ ಭಿ) ಮೂಲಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ECCE), ಶಿಶು ಮತ್ತು ಚಿಕ್ಕ ಮಕ್ಕಳ ಆಹಾರ (IYCF) ಅಭ್ಯಾಸಗಳನ್ನು ಬಲಪಡಿಸುವುದು, ಪುರುಷರನ್ನು ಪೌಷ್ಟಿಕಾಂಶದಲ್ಲಿ ತೊಡಗಿಸಿಕೊಳ್ಳುವುದು [ ಮೆನ್-ಸ್ಟ್ರೀಮಿಂಗ್ (Men-streaming) ], ಸ್ಥಳೀಯ ಆಹಾರಗಳನ್ನು ಉತ್ತೇಜಿಸುವುದು (ಲೋಕಲ್ ಫಾರ್ ವೋಕಲ್) , ಮತ್ತು ಸುಧಾರಿತ ಸೇವಾ ವಿತರಣೆಗಾಗಿ ಕ್ರೋಡೀಕರಣ ಮತ್ತು ಡಿಜಿಟಲೀಕರಣವನ್ನು ಹೆಚ್ಚಿಸುವುದು.
ಕುಟುಂಬ ಮತ್ತು ಮಕ್ಕಳ ಪೋಷಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಪುರುಷರ ಪ್ರಮುಖ ಪಾತ್ರವನ್ನು ಗುರುತಿಸುವ ಮೂಲಕ, "ಮೆನ್ -ಸ್ಟ್ರೀಮಿಂಗ್" ಅನ್ನು ಮೊದಲ ಬಾರಿಗೆ ಪೋಷಣ ಮಾಸದ ಪ್ರಮುಖ ವಿಷಯವಾಗಿ ಪರಿಚಯಿಸಲಾಯಿತು. ದೇಶಾದ್ಯಂತ, ಈ ವಿಷಯದ ಅಡಿಯಲ್ಲಿ 1.5 ಕೋಟಿಗೂ ಹೆಚ್ಚು ಚಟುವಟಿಕೆಗಳನ್ನು ನಡೆಸಲಾಯಿತು, ಇದರಲ್ಲಿ ತಂದೆ, ಪುರುಷ ಆರೈಕೆದಾರರು ಮತ್ತು ಸಮುದಾಯ ನಾಯಕರು ಹಂಚಿಕೆಯ ಜವಾಬ್ದಾರಿ ಮತ್ತು ಎಲ್ಲ ಲಿಂಗದವರು ಪೌಷ್ಟಿಕಾಂಶ ಅಭ್ಯಾಸಗಳನ್ನು ಉತ್ತೇಜಿಸಲು ಭಾಗವಹಿಸಿದರು.
ಇತರ ಕೇಂದ್ರೀಕೃತ ಕ್ಷೇತ್ರಗಳ ಅಡಿಯಲ್ಲಿ ವಿಷಯಾಧಾರಿತ ಚಟುವಟಿಕೆಗಳನ್ನು ಸಹ ಬೃಹತ್ ಪ್ರಮಾಣದಲ್ಲಿ ನಡೆಸಲಾಯಿತು. ಉಳಿದ ಐದು ವಿಷಯಗಳಲ್ಲಿ ದೇಶಾದ್ಯಂತ 14 ಕೋಟಿಗೂ ಹೆಚ್ಚು ಚಟುವಟಿಕೆಗಳು ವರದಿಯಾಗಿವೆ, ಅವುಗಳಲ್ಲಿ ಬಾಲ್ಯದ ಬೊಜ್ಜು ನಿವಾರಣೆಗೆ 2.55 ಕೋಟಿ, ಒಮ್ಮುಖ ಮತ್ತು ಡಿಜಿಟಲೀಕರಣಕ್ಕೆ 3.2 ಕೋಟಿ, ಐ.ವೈ.ಸಿ.ಎಫ್ ಅಭ್ಯಾಸಗಳಿಗೆ 2.26 ಕೋಟಿ, ಇ.ಸಿ.ಸಿ.ಇ ಮತ್ತು ʻಪೋಶಣ್ ಭಿ ಪಡಾಯಿ ಭಿʼಗೆ 2.19 ಕೋಟಿ, ಮತ್ತು ಸಾಂಪ್ರದಾಯಿಕ ಮತ್ತು ಸ್ಥಳೀಯವಾಗಿ ಉತ್ಪಾದಿಸುವ ಪೌಷ್ಟಿಕ ಆಹಾರಗಳ ಬಳಕೆಯನ್ನು ಪ್ರೋತ್ಸಾಹಿಸುವ ವೋಕಲ್ ಫಾರ್ ಲೋಕಲ್ ಉಪಕ್ರಮಗಳಿಗೆ 1.2 ಕೋಟಿ ಸೇರಿವೆ. ಈ ವ್ಯಾಪಕ ಚಟುವಟಿಕೆಗಳು ಪೋಶಣ್ ಜನ ಆಂದೋಲನದ ಸಮಗ್ರ, ಸಮುದಾಯ-ಚಾಲಿತ ಮನೋಭಾವವನ್ನು ಬಲಪಡಿಸಿದವು.
ಈ ಸಾಮೂಹಿಕ ಪ್ರಯತ್ನಗಳ ಮೂಲಕ, ಪೋಶಣ್ ಮಾಸ 2025 ಇಂದಿನ ಪೌಷ್ಟಿಕಾಂಶದ ಸವಾಲುಗಳನ್ನು ಪರಿಹರಿಸಿದ್ದಲ್ಲದೆ, ಆರೋಗ್ಯಕರ ಭವಿಷ್ಯಕ್ಕಾಗಿ ಬಲವಾದ ಅಡಿಪಾಯವನ್ನು ಹಾಕಿತು. ಇಂದು ಅಂಗನವಾಡಿ ಸೇವೆಗಳಿಂದ ಪ್ರಯೋಜನ ಪಡೆಯುತ್ತಿರುವ ಮಕ್ಕಳು 2047 ರ ವೇಳೆಗೆ ಭಾರತದ ಬೆಳವಣಿಗೆಯ ಯಶೋಗಾಥೆಯನ್ನು ಮುನ್ನಡೆಸುವ ಆರೋಗ್ಯವಂತ, ಸಮರ್ಥ ಯುವಕರಾಗುತ್ತಾರೆ ಎಂದು ಸಚಿವಾಲಯ ಒತ್ತಿ ಹೇಳಿತು. ಮಿಷನ್ ಸಕ್ಷಮ್ ಅಂಗನವಾಡಿ ಮತ್ತು ಪೋಶನ್ 2.0 ಅನ್ನು ಬಲಪಡಿಸುವ ಮತ್ತು ಪೌಷ್ಟಿಕ ಮತ್ತು ವಿಕಸಿತ ಭಾರತದ ಕಡೆಗೆ ಸಾಮೂಹಿಕ ಸಂಕಲ್ಪವನ್ನು ಸಾಕಾರಗೊಳಿಸುವ ಬದ್ಧತೆಯನ್ನು ಸಚಿವಾಲಯ ಪುನರುಚ್ಚರಿಸಿತು.
'ಸ್ವಸ್ಥ ನಾರಿ, ಸಶಕ್ತ ಪರಿವಾರ್' (ಆರೋಗ್ಯಕರ ನಾರಿ ಸಶಕ್ತವಾದ ಪರಿವಾರ) ಎನ್ನುವ ಪ್ರಮುಖ ಧ್ಯೇಯದಡಿಯಲ್ಲಿ 2025 ರ ಸೆಪ್ಟೆಂಬರ್ 17 ರಂದು ಮಧ್ಯಪ್ರದೇಶದ ಧಾರ್ನಲ್ಲಿ 8 ನೇ ರಾಷ್ಟ್ರೀಯ ಪೋಷಣ ಮಾಸವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು. ಇದು ಮಹಿಳೆಯರ ಆರೋಗ್ಯ ಮತ್ತು ಕುಟುಂಬ ಸಬಲೀಕರಣವನ್ನು ಭಾರತದ ಪೌಷ್ಟಿಕಾಂಶ ಕಾರ್ಯತಂತ್ರದ ಕೇಂದ್ರದಲ್ಲಿ ಇರಿಸಿದೆ.



****
(Release ID: 2180615)
Visitor Counter : 7