ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

56ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (IFFI) ಮಾಧ್ಯಮ ಮಾನ್ಯತೆ ಪ್ರಕ್ರಿಯೆ ಆರಂಭ


ಗೋವಾದ ಪಣಜಿಯಲ್ಲಿ 2025ರ ನವೆಂಬರ್ 18 ರಂದು ಎಫ್ ಟಿ ಐ ಐ ನಿಂದ ಒಂದು ದಿನದ ಪ್ರಮಾಣಪತ್ರ ಸಹಿತ ಫಿಲಂ ಅಪ್ರಿಸಿಯೇಷನ್ ಕೋರ್ಸ್ 

Posted On: 14 OCT 2025 6:25PM by PIB Bengaluru

ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) ನ 56ನೇ ಆವೃತ್ತಿಯು 2025 ರ ನವೆಂಬರ್ 20 ರಿಂದ 28 ರವರೆಗೆ ಗೋವಾದ ಪಣಜಿಯಲ್ಲಿ ನಡೆಯಲಿದೆ. ಮರೆಯಲಾಗದ ನೆನಪುಗಳನ್ನು ಸೃಜಿಸುವ, ಜಾಗತಿಕ ಸಿನಿಮಾ ಶ್ರೇಷ್ಠತೆ ಆಚರಿಸುವ, ಪ್ರತಿ ವರ್ಷ ಒಂಭತ್ತು ದಿನ ನಡೆಯುವ ಈ  ಮಹತ್ವದ ಸಿನಿಮಾ ಉತ್ಸವದಲ್ಲಿ, 45,000 ಕ್ಕೂ ಹೆಚ್ಚು ಚಲನಚಿತ್ರ ಉತ್ಸಾಹಿಗಳು ಮತ್ತು ವೃತ್ತಿಪರರು ಸಿನಿ ಮಾಂತ್ರಿಕತೆಯಲ್ಲಿ ತಲ್ಲೀನರಾಗುವರು. 

ನೀವು ಪತ್ರಕರ್ತರೇ? ಹಾಗಾದರೆ, IFFI ಕಾರ್ಯಕ್ರಮ ವರದಿ ಮಾಡಲು ಅಧಿಕೃತ ಪೋರ್ಟಲ್ https://accreditation.pib.gov.in/eventregistration/login.aspx ಮೂಲಕ ಮಾಧ್ಯಮ ಪ್ರತಿನಿಧಿಯಾಗಿ ನೋಂದಾಯಿಸಿ. ಮಾಧ್ಯಮ ಪ್ರತಿನಿಧಿ ಮಾನ್ಯತೆ ಪಡೆಯಲು ಈ ಪೋರ್ಟಲ್ ತೆರೆದಿದ್ದು, 2025ರ ನವೆಂಬರ್  5 ರವರೆಗೆ ನೋಂದಾಯಿಸಲು ಅವಕಾಶವಿದೆ.

ಮಾನ್ಯತೆ ಪಡೆದ ಮಾಧ್ಯಮ ವೃತ್ತಿಪರರು, ಚಲನಚಿತ್ರ ನಿರ್ಮಾತೃಗಳೊಂದಿಗೆ ಚಲನಚಿತ್ರ ಪ್ರದರ್ಶನಗಳು, ತಜ್ಞರ ಚರ್ಚೆಗಳು ಮತ್ತು ಸಂಪರ್ಕ ಜಾಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ವಿಶೇಷ ಅವಕಾಶ ಪಡೆಯಲಿದ್ದಾರೆ. ಅಲ್ಲದೇ, ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (FTII) ಮಾನ್ಯತೆ ಪಡೆದ ಪತ್ರಕರ್ತರಿಗಾಗಿ 2025ರ ನವೆಂಬರ್ 18 ರಂದು ಒಂದು ದಿನದ ಪ್ರಮಾಣಪತ್ರ ಸಹಿತ ಫಿಲಂ ಅಪ್ರಿಸಿಯೇಷನ್ ಕೋರ್ಸ್ ಅನ್ನು ಪ್ರತ್ಯೇಕವಾಗಿ ನಡೆಸಲಿದೆ, ಇದು ಸಿನಿಮಾದ ಬಗ್ಗೆ ಅವರ ಭಾವ ಮತ್ತು ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಲು ಒಂದು ಅನನ್ಯ ಅವಕಾಶವಾಗಿದೆ. ಹಿಂದಿನ ಆವೃತ್ತಿಗಳಲ್ಲಿ ಈ ಕೋರ್ಸ್‌ಗೆ ಹಾಜರಾಗಲು ಸಾಧ್ಯವಾಗದ ಪತ್ರಕರ್ತರಿಗೆ ಆದ್ಯತೆ ನೀಡಲಾಗುವುದು.

"ಐಎಫ್‌ಎಫ್‌ಐ ಪ್ರಪಂಚದಾದ್ಯಂತದ ವೈವಿಧ್ಯಮಯ ಸಿನಿಮಾ ಧ್ವನಿಗಳನ್ನು ಒಂದುಗೂಡಿಸುವ ಪ್ರಮುಖ ಕಾರ್ಯಕ್ರಮವಾಗಿದೆ. ಸುಗಮ ಮಾನ್ಯತೆ ಪ್ರಕ್ರಿಯೆಗಾಗಿ ಮತ್ತು ಈ ಪ್ರತಿಷ್ಠಿತ ಉತ್ಸವದ ಸಮಗ್ರ ವರದಿಗೆ ಪತ್ರಕರ್ತರನ್ನು ಬೆಂಬಲಿಸಲು ಪಿಐಬಿ ಬದ್ಧವಾಗಿದೆ" ಎಂದು ಭಾರತ ಸರ್ಕಾರದ ವಾರ್ತಾ ಶಾಖೆ (ಪಿಐಬಿ)ಯ ಪ್ರಧಾನ ಮಹಾನಿರ್ದೇಶಕರಾದ ಧೀರೇಂದ್ರ ಓಜಾ ಒತ್ತಿ ಹೇಳಿದ್ದಾರೆ. 

ಎಲ್ಲಾ ಸೂಚನೆಗಳನ್ನು ಎಚ್ಚರಿಕೆಯಿಂದ ಪಾಲಿಸುವಂತೆ ಹಾಗೂ ಗುರುತಿನ ಪುರಾವೆ, ವೃತ್ತಿಪರ ರುಜುವಾತುಗಳು ಸೇರಿದಂತೆ ತಮ್ಮ ಅರ್ಜಿಯೊಂದಿಗೆ ಎಲ್ಲಾ ಅಗತ್ಯ ಪೂರಕ ದಾಖಲೆಗಳನ್ನು ಸಲ್ಲಿಸುವಂತೆ ಮಾಧ್ಯಮ ಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ. ಅರ್ಹತೆ ಮತ್ತು ಅಗತ್ಯ ದಾಖಲೆಗಳ ವಿವರಗಳಿಗೆ, ಅರ್ಜಿದಾರರು ಅಕ್ರಿಡಿಟೇಷನ್ ಪೋರ್ಟಲ್‌ ನಲ್ಲಿನ ನೀತಿ ಮಾರ್ಗಸೂಚಿಗಳನ್ನು ನೋಡಬಹುದು.

ಅಕ್ರಿಡಿಟೇಷನ್ ಪಡೆಯುವ ಸಂಬಂಧ ಸಹಾಯ ಅಥವಾ ಪ್ರಶ್ನೆಗಳಿಗೆ, ಪತ್ರಕರ್ತರು http://iffi.mediadesk@pib.gov.in ನಲ್ಲಿ ಪ್ರತ್ಯೇಕವಾದ PIB ಸಹಾಯ ಕೇಂದ್ರವನ್ನು ಸಂಪರ್ಕಿಸಬಹುದು.

ಸುಂದರ ಪಣಜಿ ನಗರವು ಭಾರತದ ಶ್ರೀಮಂತ ಚಲನಚಿತ್ರ ಪರಂಪರೆಯನ್ನು ಉತ್ತೇಜಿಸುತ್ತಾ ಸಿನಿಮಾ ರಂಗದಲ್ಲಿ ಅಂತಾರಾಷ್ಟ್ರೀಯ ಸಹಯೋಗವನ್ನು ಪೋಷಿಸುತ್ತಾ ಐಎಫ್‌ಎಫ್‌ಐಗೆ ಸಾಂಸ್ಕೃತಿಕ ರೋಮಾಂಚಕ ಹಿನ್ನೆಲೆಯನ್ನು ಒದಗಿಸುತ್ತದೆ.

ಪ್ರಮುಖ ಮಾಹಿತಿ:

ಅಕ್ರಿಡಿಟೇಶನ್ ಪೋರ್ಟಲ್ ಮೂಲಕ ನೋಂದಣಿ:  2025ರ 15 ಅಕ್ಟೋಬರ್ ರಿಂದ ನವೆಂಬರ್ 5 ರವರೆಗೆ

ಚಲನಚಿತ್ರೋತ್ಸವದ ದಿನಾಂಕ: 20 ರಿಂದ 28 ನವೆಂಬರ್ 2025

ಫಿಲಂ ಅಪ್ರಿಸಿಯೇಷನ್ ಕೋರ್ಸ್ ದಿನಾಂಕ: 18 ನವೆಂಬರ್ 2025

ಸ್ಥಳ: ಪಣಜಿ, ಗೋವಾ

ಅಕ್ರಿಡಿಟೇಷನ್ ಪೋರ್ಟಲ್: https://accreditation.pib.gov.in/eventregistration/login.aspx

ಸಹಾಯಕ್ಕೆ ಇ-ಮೇಲ್: http://iffi.mediadesk@pib.gov.in

ವಿಶ್ವಾದ್ಯಂತ ಚಲನಚಿತ್ರ ನಿರ್ಮಾತೃಗಳು ಮತ್ತು ಪ್ರೇಕ್ಷಕರ ಕಲ್ಪನೆಯನ್ನು ಸೆರೆಹಿಡಿಯುವ ಏಷ್ಯಾದ ಪ್ರಮುಖ ಸಿನಿ ಉತ್ಸವದಲ್ಲಿ ನಿಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಲು, ಕ್ಯಾಮರಾದಲ್ಲಿ ಸೆರೆಯಾದ ಹೊಸ ಕಥೆಗಳನ್ನು ಕಣ್ತುಂಬಿಕೊಳ್ಳಲು ಮತ್ತು ಉತ್ಸವದ ಭಾಗವಾಗಲು ಕೂಡಲೇ ಅರ್ಜಿ ಸಲ್ಲಿಸಿ.

 

*****
 


(Release ID: 2179656) Visitor Counter : 12