ಜವಳಿ ಸಚಿವಾಲಯ
ಎಂ.ಎಂ.ಎಫ್. ಮತ್ತು ತಾಂತ್ರಿಕ ಜವಳಿ ವಲಯಗಳನ್ನು ಉತ್ತೇಜಿಸಲು ಜವಳಿಗಳಿಗಾಗಿ ಪಿ.ಎಲ್.ಐ. ಯೋಜನೆಯಲ್ಲಿ ಪ್ರಮುಖ ತಿದ್ದುಪಡಿಗಳನ್ನು ಕೇಂದ್ರ ಜವಳಿ ಸಚಿವಾಲಯವು ಪ್ರಕಟಿಸಿದೆ
ಉದ್ಯೋಗವನ್ನು ಹೆಚ್ಚಿಸಿ ಬೆಳೆಸುವ ಮತ್ತು ಜಾಗತಿಕ ಜವಳಿ ಮಾರುಕಟ್ಟೆಯಲ್ಲಿ ಭಾರತದ ನಾಯಕತ್ವವನ್ನು ಮುನ್ನಡೆಸುವತ್ತ ಕೇಂದ್ರ ಸರ್ಕಾರದ ಕಾಳಜಿಯನ್ನು ಈ ತಿದ್ದುಪಡಿಗಳು ಒತ್ತಿಹೇಳುತ್ತವೆ
ಪಿ.ಎಲ್.ಐ. ಯೋಜನೆಯ ಅರ್ಜಿ ಪೋರ್ಟಲ್ ನಲ್ಲಿ ಡಿಸೆಂಬರ್ 31, 2025 ರವರೆಗೆ ತೆರೆದಿರುತ್ತದೆ
प्रविष्टि तिथि:
09 OCT 2025 4:10PM by PIB Bengaluru
ಕೇಂದ್ರ ಜವಳಿ ಸಚಿವಾಲಯವು ಎಂ.ಎಂ.ಎಫ್. ಉಡುಪು, ಎಂ.ಎಂ.ಎಫ್. ಬಟ್ಟೆಗಳು ಮತ್ತು ತಾಂತ್ರಿಕ ಜವಳಿ ಉತ್ಪನ್ನಗಳ ಉತ್ಪಾದನೆಗೆ ಸಂಬಂಧಿಸಿದ ಪ್ರೋತ್ಸಾಹಕ (ಪಿ.ಎಲ್.ಐ.) ಯೋಜನೆಗೆ ಪ್ರಮುಖ ಪರಿಷ್ಕರಣೆಗಳನ್ನುಮಾಡಿದೆ. ಈ ಮಹತ್ವದ ತಿದ್ದುಪಡಿಗಳನ್ನು ಉದ್ಯಮದ ಸವಾಲುಗಳನ್ನು ಪರಿಹರಿಸಲು, ವ್ಯವಹಾರ ಮಾಡುವ ಸುಲಭತೆಯನ್ನು ಹೆಚ್ಚಿಸಲು, ವಲಯದಲ್ಲಿ ಹೊಸ ಹೂಡಿಕೆಗಳನ್ನು ಪ್ರೋತ್ಸಾಹಿಸಲು ಮತ್ತು ಬೆಳವಣಿಗೆಯನ್ನು ವೇಗಗೊಳಿಸಲು ವಿನ್ಯಾಸಗೊಳಿಸಲಾಗಿದೆ, ಉದ್ಯೋಗವನ್ನು ಬೆಳೆಸುವ ಮತ್ತು ಜಾಗತಿಕ ಜವಳಿ ಮಾರುಕಟ್ಟೆಯಲ್ಲಿ ಭಾರತದ ನಾಯಕತ್ವವನ್ನು ಮುನ್ನಡೆಸುವತ್ತ ಕೇಂದ್ರ ಸರ್ಕಾರದ ಗಮನವನ್ನು ಒತ್ತಿಹೇಳುತ್ತದೆ. ಯೋಜನೆಯ ತಿದ್ದುಪಡಿ ಮಾರ್ಗಸೂಚಿಗಳನ್ನು ಸಹ ಹೊರಡಿಸಲಾಗುತ್ತಿದೆ.
ಪಿ.ಎಲ್.ಐ. ಯೋಜನೆಯ ಪ್ರಮುಖ ಪರಿಷ್ಕರಣೆಗಳು:
ಅರ್ಹ ಉತ್ಪನ್ನಗಳ ವಿಸ್ತರಣೆ: ಎಂ.ಎಂ.ಎಫ್. ಉಡುಪುಗಳಿಗೆ 8 ಹೊಸ ಹೆಚ್.ಎಸ್.ಎನ್. ಕೋಡ್ಗಳು ಮತ್ತು ಎಂ.ಎಂ.ಎಫ್. ಬಟ್ಟೆಗಳಿಗೆ 9 ಹೊಸ ಹೆಚ್.ಎಸ್.ಎನ್. ಕೋಡ್ಗಳ ಸೇರ್ಪಡೆ.
ಹೊಸ ಕಂಪನಿಗಳನ್ನು ಸ್ಥಾಪಿಸುವುದರಿಂದ ಸಡಿಲಿಕೆ: ಅರ್ಜಿದಾರರು ಈಗ ಅಸ್ತಿತ್ವದಲ್ಲಿರುವ ಕಂಪನಿಗಳಲ್ಲಿ ಯೋಜನಾ ಘಟಕಗಳನ್ನು ಸ್ಥಾಪಿಸಬಹುದು.
ಹೂಡಿಕೆಯ ಕನಿಷ್ಠ ಮಿತಿಯಲ್ಲಿ ಕಡಿತ: 01.08.2025 ರಿಂದ ಜಾರಿಗೆ ಬರುವಂತೆ, ಎಲ್ಲಾ ಹೊಸ ಅರ್ಜಿದಾರರಿಗೆ, ಯೋಜನೆಯ ಭಾಗ-1 ವರ್ಗದಲ್ಲಿ ಕನಿಷ್ಠ ಹೂಡಿಕೆಯನ್ನು ರೂ.300 ಕೋಟಿಯಿಂದ ರೂ.150 ಕೋಟಿಗೆ ಮತ್ತು ಭಾಗ-2 ವರ್ಗದಲ್ಲಿ ರೂ.100 ಕೋಟಿಯಿಂದ ರೂ.50 ಕೋಟಿಗೆ ಮೊತ್ತವನ್ನು ಇಳಿಸಲಾಗಿದೆ.
ಪ್ರೋತ್ಸಾಹಕಕ್ಕಾಗಿ ಮಾನದಂಡಗಳನ್ನು ಹಿಂದಿನ 25% ರಿಂದ 10% ಕ್ಕೆ ಹೆಚ್ಚಿಸಲಾಗಿದೆ: ಹಣಕಾಸು ವರ್ಷ 2025–26 ರಿಂದ ಪ್ರಾರಂಭಿಸಿ, ಅರ್ಜಿದಾರರು ಈಗ ಪ್ರೋತ್ಸಾಹಕಗಳಿಗೆ ಅರ್ಹತೆ ಪಡೆಯಲು ಹಿಂದಿನ ವರ್ಷಕ್ಕಿಂತ ಕನಿಷ್ಠ 10% ಹೆಚ್ಚಳದ ವಹಿವಾಟನ್ನು ಮಾಡಿ ತೋರಿಸಬೇಕು (ವರ್ಷ 2 ರಿಂದ).
ಮೇಲಿನ ಪರಿಷ್ಕರಣೆಗಳು ಈ ಕ್ಷೇತ್ರದಲ್ಲಿ ಪ್ರವೇಶ ಅಡೆತಡೆಗಳು ಮತ್ತು ಹಣಕಾಸಿನ ಮಿತಿಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತವೆ, ವೇಗವಾಗಿ ಕಾರ್ಯಗತಗೊಳಿಸಲು ಅನುವು ಮಾಡಿಕೊಡುತ್ತದೆ.
ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ:
ಕೈಗಾರಿಕೆಯಿಂದ ವ್ಯಾಪಕ ಭಾಗವಹಿಸುವಿಕೆಯನ್ನು ಉತ್ತೇಜಿಸಲು, ಕೇಂದ್ರ ಜವಳಿ ಸಚಿವಾಲಯವು ಡಿಸೆಂಬರ್ 31, 2025 ರವರೆಗೆ ಪಿ.ಎಲ್.ಐ. ಯೋಜನೆಯ ಅರ್ಜಿ ಸಲ್ಲಿಕೆಗಾಗಿ ಪೋರ್ಟಲ್ ಅನ್ನು ತೆರೆದಿರುತ್ತದೆ. ಆಸಕ್ತ ಕಂಪನಿಗಳು ಪರಿಷ್ಕೃತ ಚೌಕಟ್ಟು ಮತ್ತು ವಿಸ್ತೃತ ಕಾಲಮಿತಿಯ ಲಾಭವನ್ನು ಪಡೆದು ಅರ್ಜಿ ಸಲ್ಲಿಸಲು ಮತ್ತು ಜಾಗತಿಕ ಜವಳಿ ಉತ್ಪಾದನಾ ಕೇಂದ್ರವಾಗುವ ಭಾರತದ ದೃಷ್ಟಿಕೋನಕ್ಕೆ ಕೊಡುಗೆ ನೀಡಲು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಲು ಈ ಮೂಲಕ ಕೋರಲಾಗಿದೆ.
*****
(रिलीज़ आईडी: 2177108)
आगंतुक पटल : 37