ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ವಿಕಸಿತ ಭಾರತ ಬಿಲ್ಡಥಾನ್ (Buildathon) 2025ಕ್ಕೆ ವಿದ್ಯಾರ್ಥಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ


ಆತ್ಮನಿರ್ಭರ ಭಾರತಕ್ಕಾಗಿ ಬಿಲ್ಡಥಾನ್ ಗೆ ಸೇರುವಂತೆ ಯುವ ನಾವಿನ್ಯಕಾರರಿಗೆ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಪ್ರೇರೇಪಣೆ

Posted On: 07 OCT 2025 8:11PM by PIB Bengaluru

ವಿಕಸಿತ ಭಾರತ ಬಿಲ್ಡಥಾನ್ 2025 ಅನ್ನು ಅಟಲ್ ನಾವಿನ್ಯತಾ ಮಿಷನ್, ನೀತಿ ಆಯೋಗದ ಸಹಯೋಗದೊಂದಿಗೆ ಶಿಕ್ಷಣ ಸಚಿವಾಲಯ, ಪ್ರಾರಂಭಿಸಿದ್ದು, ದೇಶಾದ್ಯಂತ ಸುಮಾರು 2.5 ಲಕ್ಷ ಶಾಲೆಗಳ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯೊಂದಿಗೆ ಈ ಉಪಕ್ರಮಕ್ಕೆ (ಕಾಲಮಿತಿಯಲ್ಲಿ ಪರಿಹಾರೋಪಾಯ ಒದಗಿಸುವ ನಾವಿನ್ಯತೆ, ಸೃಜನಶೀಲತೆ ಉತ್ತೇಜಿಸುವ ಸಮಗ್ರ ಕಾರ್ಯಕ್ರಮ) ವಿದ್ಯಾರ್ಥಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಭಾರತದ ಈವರೆಗಿನ ಅತಿದೊಡ್ಡ ವಿದ್ಯಾರ್ಥಿ ನಾವಿನ್ಯತಾ ಉಪಕ್ರಮವಾಗಿದ್ದು ವಿಕಸಿತ ಭಾರತದ ದೃಷ್ಟಿಕೋನದ ಸಾಕಾರದತ್ತ ಒಂದು ಐತಿಹಾಸಿಕ ಹೆಜ್ಜೆಯಾಗಿದೆ.

ಈ ಉಪಕ್ರಮದಡಿ ಸೇರುವಂತೆ ಮತ್ತು ಸ್ವಾವಲಂಬಿ ಭಾರತಕ್ಕೆ ಕೊಡುಗೆ ನೀಡುವಂತೆ ಇಸ್ರೋದ ಗಗನಯಾತ್ರಿ ಆಗಿರುವ ಭಾರತೀಯ ವಾಯುಪಡೆಯ ಪರೀಕ್ಷಾರ್ಥ ಪೈಲಟ್  ಮತ್ತು ವಿಕಸಿತ ಭಾರತ ಬಿಲ್ಡಥಾನ್ ಬ್ರಾಂಡ್ ರಾಯಭಾರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ವಿಡಿಯೊ ಸಂದೇಶದ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದ್ದಾರೆ.  ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, 6-12 ನೇ ತರಗತಿಯ ಮಕ್ಕಳು ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಬಿಲ್ಡಥಾನ್ ಒಂದು ವಿಶಿಷ್ಟ ವೇದಿಕೆಯಾಗಿದೆ ಎಂದು ವಿವರಿಸಿದರು. ಚಿಂತನೆ ಅಥವಾ ಆಲೋಚನೆ ಯಾವುದೇ ಇರಲಿ, ಅದು ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ, ಪ್ರತಿಯೊಂದು ಕೂಡ ವಿಕಸಿತ ಭಾರತ 2047 ಅನ್ನು ರೂಪಿಸಲು ಪೂರಕವಾಗಲಿದೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ನವೀನವಾಗಿ ಯೋಚಿಸಬೇಕು ಹಾಗೂ ವೋಕಲ್ ಫಾರ್ ಲೋಕಲ್
(ಸ್ಥಳೀಯ ಉತ್ಪನ್ನಗಳನ್ನು ಬೆಂಬಲಿಸುವುದು) ಮತ್ತು ಸ್ವದೇಶಿಯ ಸಾಮರ್ಥ್ಯವನ್ನು ಬಳಸಿಕೊಳ್ಳುವುದು ಸೇರಿದಂತೆ ಜೀವನದ ನೈಜ ಸವಾಲುಗಳನ್ನು ಎದುರಿಸುವ ಮೂಲಮಾದರಿಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ಕಳುಹಿಸುವ ಮೂಲಕ ಶಾಲೆಗಳು ತಮ್ಮ ಪಾಲ್ಗೊಳ್ಳುವಿಕೆಯ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಇವುಗಳನ್ನು ತಜ್ಞರ ಸಮಿತಿಯು ಮೌಲ್ಯಮಾಪನ ಮಾಡಲಿದೆ. ಒಟ್ಟು 1 ಕೋಟಿ ರೂ. ನಿಧಿಯಡಿ ಅಗ್ರ ತಂಡಗಳಿಗೆ ಬಹುಮಾನಗಳು ಸಿಗಲಿದೆ.

ಈಗಲೇ ನೋಂದಾಯಿಸಿ: http://vbb.mic.gov.in

****


(Release ID: 2176062) Visitor Counter : 5