ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

2024ರ ಪ್ರವಾಹದಿಂದ ಹಾನಿಗೊಳಗಾದ ಅಸ್ಸಾಂ ಮತ್ತು ಗುಜರಾತ್‌ಗೆ ಹೆಚ್ಚುವರಿಯಾಗಿ 707.97 ಕೋಟಿ ರೂ ಕೇಂದ್ರ ನೆರವು ಬಿಡುಗಡೆಗೆ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ಅನುಮೋದನೆ


ಅಗ್ನಿಶಾಮಕ ಸೇವೆಗಳ ವಿಸ್ತರಣೆ ಮತ್ತು ಆಧುನೀಕರಣಕ್ಕಾಗಿ ಎನ್ ಡಿ ಆರ್ ಎಫ್ ಅಡಿಯಲ್ಲಿ ಹರಿಯಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನಕ್ಕೆ 903.67 ಕೋಟಿ ರೂ. ಬಿಡುಗಡೆಗೆ ಉನ್ನತ ಮಟ್ಟದ ಸಮಿತಿಯು ಅನುಮೋದನೆ

ನೈಸರ್ಗಿಕ ವಿಕೋಪಗಳು ಮತ್ತು ವಿಪತ್ತುಗಳ ಸಮಯದಲ್ಲಿ ರಾಜ್ಯ ಸರ್ಕಾರಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತಿರುವ ಮತ್ತು ಅಗತ್ಯವಿರುವ ಎಲ್ಲಾ ಬೆಂಬಲವನ್ನು ಒದಗಿಸುತ್ತಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಭಾರತ ಸರ್ಕಾರ

2025-26ನೇ ಆರ್ಥಿಕ ವರ್ಷದಲ್ಲಿ, ಕೇಂದ್ರ ಸರ್ಕಾರವು ಎಸ್ ಡಿ ಆರ್ ಎಫ್ ಅಡಿಯಲ್ಲಿ 27 ರಾಜ್ಯಗಳಿಗೆ 13,603.20 ಕೋಟಿ ರೂ. ಮತ್ತು ಎನ್ ಡಿ ಆರ್ ಎಫ್ ಅಡಿಯಲ್ಲಿ 12 ರಾಜ್ಯಗಳಿಗೆ 2024.04 ಕೋಟಿ ರೂ. ಬಿಡುಗಡೆ

Posted On: 07 OCT 2025 2:31PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಉನ್ನತ ಮಟ್ಟದ ಸಮಿತಿ (ಎಚ್ ಎಲ್ ಸಿ) 2024ರ ಪ್ರವಾಹ, ಭೂಕುಸಿತದಿಂದ ಹಾನಿಗೊಳಗಾದ ಅಸ್ಸಾಂ ಮತ್ತು ಗುಜರಾತ್‌ಗೆ 707.97 ಕೋಟಿ ರೂಪಾಯಿ ಹೆಚ್ಚುವರಿ ಕೇಂದ್ರ ನೆರವು ಅನುಮೋದಿಸಿದೆ. ಕೇಂದ್ರದ ಈ ನೆರವನ್ನು  ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್ ಡಿ ಆರ್‌ ಎಫ್‌) ಒದಗಿಸಲಾಗಿದೆ, ಇದು ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಲ್ಲಿ (ಎಸ್ ಡಿ ಆರ್ ಎಫ್) ಲಭ್ಯವಿರುವ ವರ್ಷದ ಆರಂಭಿಕ ಬಾಕಿಯ ಶೇ.50 ರಷ್ಟು ಹೊಂದಾಣಿಕೆಗೆ ಒಳಪಟ್ಟಿರುತ್ತದೆ. ಒಟ್ಟು 707.97 ಕೋಟಿ ರೂ.ಗಳಲ್ಲಿ, ಅಸ್ಸಾಂಗೆ 313.69 ಕೋಟಿ ರೂಪಾಯಿಗಳನ್ನು ಮತ್ತು ಗುಜರಾತ್‌ಗೆ 394.28 ಕೋಟಿ ರೂ.ಗಳನ್ನು ಒದಗಿಸಲು  ಅನುಮೋದಿಸಲಾಗಿದೆ.

ಅಲ್ಲದೆ, ಉನ್ನತ ಮಟ್ಟದ ಸಮಿತಿಯು ಅಗ್ನಿಶಾಮಕ ಸೇವೆಗಳ ವಿಸ್ತರಣೆ ಮತ್ತು ಆಧುನೀಕರಣಕ್ಕಾಗಿ ಎನ್ ಡಿ ಅರ್ ಎಫ್ ಅಡಿಯಲ್ಲಿ ಹರಿಯಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನಕ್ಕೆ 903.67 ಕೋಟಿ ರೂ.ಗಳನ್ನು ಅನುಮೋದಿಸಿದೆ.

ಒಟ್ಟು ಅನುದಾನದಲ್ಲಿ 903.67 ಕೋಟಿ ರೂ.ಗಳಲ್ಲಿ 676.33 ಕೋಟಿ ರೂ.ಗಳನ್ನು ಕೇಂದ್ರ ನೆರವಿನ ರೂಪದಲ್ಲಿ ನೀಡಲಾಗುವುದು, ಒಟ್ಟು 903.67 ಮೊತ್ತದಲ್ಲಿ 117.19 ಕೋಟಿ ರೂ.ಗಳನ್ನು ಹರಿಯಾಣಕ್ಕೆ ಒದಗಿಸಲಾಗಿದೆ. ಮಧ್ಯಪ್ರದೇಶಕ್ಕೆ 397.54 ಕೋಟಿ ರೂಪಾಯಿ ಮತ್ತು ರಾಜಸ್ಥಾನಕ್ಕೆ 388.94 ಕೋಟಿ ರೂ. ಮಂಜೂರು ಮಾಡಲಾಗಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಭಾರತ ಸರ್ಕಾರವು ಪ್ರಕೃತಿ ವಿಕೋಪಗಳು ಮತ್ತು ವಿಪತ್ತುಗಳ ಸಮಯದಲ್ಲಿ ರಾಜ್ಯ ಸರ್ಕಾರಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತಿದೆ ಮತ್ತು ಅಗತ್ಯವಿರುವ ಎಲ್ಲ ರೀತಿಯ ಬೆಂಬಲವನ್ನು ಒದಗಿಸುತ್ತಿದೆ.

ಈ ಹೆಚ್ಚುವರಿ ನೆರವು, ಕೇಂದ್ರವು ರಾಜ್ಯಗಳಿಗೆ ಬಿಡುಗಡೆ ಮಾಡಿರುವ ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್ ಡಿ ಆರ್ ಎಫ್‌) ಗಿಂತ ಹೆಚ್ಚಾಗಿದ್ದು, ಈಗಾಗಲೇ ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರವು 2025-26ರ ಹಣಕಾಸು ವರ್ಷದಲ್ಲಿ ಎಸ್ ಡಿ ಅರ್ ಎಫ್ ಅಡಿಯಲ್ಲಿ 27 ರಾಜ್ಯಗಳಿಗೆ 13,603.20 ಕೋಟಿ ರೂ. ಮತ್ತು ಎನ್ ಡಿ ಅರ್ ಎಫ್ ಅಡಿಯಲ್ಲಿ 12 ರಾಜ್ಯಗಳಿಗೆ 2,024.04 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

ಅಲ್ಲದೆ ರಾಜ್ಯ ವಿಪತ್ತು ಉಪಶಮನ ನಿಧಿಯಿಂದ (ಎಸ್ ಡಿ ಎಂ ಎಫ್) 21 ರಾಜ್ಯಗಳಿಗೆ 4,571.30 ಕೋಟಿ ರೂಪಾಯಿ ಮತ್ತು ರಾಷ್ಟ್ರೀಯ ವಿಪತ್ತು ಉಪಶಮನ ನಿಧಿಯಿಂದ (ಎನ್ ಡಿ ಎಂ ಎಫ್) 09 ರಾಜ್ಯಗಳಿಗೆ 372.09 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

 

*****


(Release ID: 2175860) Visitor Counter : 12