ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಡೀಪ್ ಫೇಕ್ ಪತ್ತೆ, ಪಕ್ಷಪಾತ ತಗ್ಗಿಸುವಿಕೆ ಮತ್ತು ಎಐ ಲಭ್ಯತೆ ಪರೀಕ್ಷೆಗಾಗಿ ಅತ್ಯಾಧುನಿಕ ಪರಿಹಾರಗಳೊಂದಿಗೆ ಇಂಡಿಯಾಎಐ ಸುರಕ್ಷಿತ ಎಐ ಪ್ರಯತ್ನಗಳನ್ನು ಮುಂದುವರಿಸುತ್ತಿದೆ
ಭಾರತದಲ್ಲಿ ಸುರಕ್ಷಿತ ಮತ್ತು ವಿಶ್ವಾಸಾರ್ಹ ಎಐ ಪೂರಕ ವ್ಯವಸ್ಥೆಯನ್ನು ಮುನ್ನಡೆಸಲು ಐದು ಪ್ರಮುಖ ಪ್ರಸ್ತಾಪಗಳನ್ನು ಆಯ್ಕೆ ಮಾಡಲಾಗಿದೆ
'ಸಾಕ್ಷ್ಯ', 'ಎಐ ವಿಶ್ಲೇಷಕ್' ಮತ್ತು ಐಐಟಿ ಖರಗಪುರದ ಧ್ವನಿ ಪತ್ತೆ ವ್ಯವಸ್ಥೆಯು ಭಾರತದ ಎಐ ವಿಧಿವಿಜ್ಞಾನ ಮತ್ತು ಭದ್ರತೆಯನ್ನು ಬಲಪಡಿಸುತ್ತದೆ
ಡಿಜಿಟಲ್ ಫ್ಯೂಚರ್ಸ್ ಲ್ಯಾಬ್ & ಕಾರ್ಯ ಕೃಷಿ ಎಐನಲ್ಲಿ ಲಿಂಗ ಪಕ್ಷಪಾತವನ್ನು ನಿಭಾಯಿಸುತ್ತದೆ; ಗ್ಲೋಬಲ್ಸ್ ಐಟಿಇಎಸ್ ಮತ್ತು ಐಐಐಟಿ ಧಾರವಾಡ ಜನರೇಟಿವ್ ಎಐ ಭದ್ರತೆಗಾಗಿ ಪರಿಕರಗಳನ್ನು ಅಭಿವೃದ್ಧಿಪಡಿಸುತ್ತವೆ
Posted On:
07 OCT 2025 1:06PM by PIB Bengaluru
ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನಗಳು ಅಭೂತಪೂರ್ವ ವೇಗದಲ್ಲಿ ವಿಕಸನಗೊಳ್ಳುತ್ತಿದ್ದಂತೆ, ಅವುಗಳ ಸುರಕ್ಷಿತ, ಪಾರದರ್ಶಕ ಮತ್ತು ವಿಶ್ವಾಸಾರ್ಹ ಬಳಕೆಯನ್ನು ಖಚಿತಪಡಿಸಿಕೊಳ್ಳುವುದು ರಾಷ್ಟ್ರೀಯ ಅಗತ್ಯವಾಗಿದೆ. ದೇಶದ ವಿಶಿಷ್ಟ ಸಾಮಾಜಿಕ-ತಾಂತ್ರಿಕ ಸಂದರ್ಭವನ್ನು ಪ್ರತಿಬಿಂಬಿಸುವ ಸ್ಥಳೀಯ ಆಡಳಿತ ಪರಿಕರಗಳು, ಚೌಕಟ್ಟುಗಳು ಮತ್ತು ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಲು ಚುರುಕಾದ ಮತ್ತು ದೃಢವಾದ ಕಾರ್ಯವಿಧಾನಗಳನ್ನು ಉತ್ತೇಜಿಸಲು ಭಾರತ ಬದ್ಧವಾಗಿದೆ.
ಈ ದೃಷ್ಟಿಕೋನವನ್ನು ಮುನ್ನಡೆಸಲು, ಇಂಡಿಯಾಎಐ ಡಿಸೆಂಬರ್ 10, 2024 ರಂದು 'ಸುರಕ್ಷಿತ ಮತ್ತು ವಿಶ್ವಾಸಾರ್ಹ ಎಐ' ಎಂಬ ಸ್ತಂಭದ ಅಡಿಯಲ್ಲಿ ಹಲವಾರು ಪ್ರಮುಖ ವಿಷಯಗಳ ಕುರಿತು ಎರಡನೇ ಸುತ್ತಿನ ಆಸಕ್ತಿ ವ್ಯಕ್ತಪಡಿಸುವಿಕೆ (ಇಒಐ) ಯನ್ನು ಪ್ರಾರಂಭಿಸಿತು.
ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳು, ನವೋದ್ಯಮಗಳು, ಸಂಶೋಧನಾ ಸಂಸ್ಥೆಗಳು ಮತ್ತು ನಾಗರಿಕ ಸಮಾಜದಿಂದ 400 ಕ್ಕೂ ಹೆಚ್ಚು ಪ್ರಸ್ತಾವನೆಗಳನ್ನು ಸ್ವೀಕರಿಸಲಾಯಿತು. ಪ್ರಸ್ತಾವನೆಗಳನ್ನು ಮೌಲ್ಯಮಾಪನ ಮಾಡಲು ತಾಂತ್ರಿಕ ಪರಿಣತಿಯನ್ನು ಒದಗಿಸಲು ಬಹು-ಪಾಲುದಾರರ ಸಮಿತಿಯನ್ನು ರಚಿಸಲಾಯಿತು, ಇದರ ಪರಿಣಾಮವಾಗಿ ವಿವಿಧ ವಿಷಯಗಳಲ್ಲಿ ಐದು ಯೋಜನೆಗಳನ್ನು ಆಯ್ಕೆ ಮಾಡಲಾಯಿತು. ಒಟ್ಟಾರೆಯಾಗಿ, ಈ ಯೋಜನೆಗಳು ಸ್ಥಿತಿಸ್ಥಾಪಕತ್ವ ಪರೀಕ್ಷೆ ಮತ್ತು ಪಕ್ಷಪಾತ ಲೆಕ್ಕಪರಿಶೋಧನೆಗಳನ್ನು ಸಂಯೋಜಿಸುವ ಮೂಲಕ "ಸುರಕ್ಷಿತ ಮತ್ತು ವಿಶ್ವಾಸಾರ್ಹ ಎಐ"ಯನ್ನು ಜಾರಿಗೆ ತರಲು ಎಐನ ಜವಾಬ್ದಾರಿಯುತ ಅಭಿವೃದ್ಧಿ ಮತ್ತು ನಿಯೋಜನೆಯನ್ನು ಬೆಂಬಲಿಸುತ್ತವೆ.
ಇಂಡಿಯಾಎಐ ಮಿಷನ್ ನ ಸುರಕ್ಷಿತ ಮತ್ತು ವಿಶ್ವಾಸಾರ್ಹ ಕೃತಕ ಬುದ್ಧಿಮತ್ತೆ (ಎಐ) ಸ್ತಂಭದಲ್ಲಿ ಎರಡನೇ ಇಒಐ ಅಡಿಯಲ್ಲಿ ಆಯ್ಕೆಯಾದ ಯೋಜನೆಗಳ ಪಟ್ಟಿ
|
ವಿಷಯ
|
ಯೋಜನೆಯ ಶೀರ್ಷಿಕೆ
|
ಆಯ್ಕೆಯಾದ ಅರ್ಜಿದಾರರು
|
|
ಡೀಪ್ ಫೇಕ್ ಪತ್ತೆ ಸಾಧನ
|
ಸಾಕ್ಷ್ಯ: ಡೀಪ್ ಫೇಕ್ ಪತ್ತೆ ಮತ್ತು ಆಡಳಿತಕ್ಕಾಗಿ ಬಹು-ಏಜೆಂಟ್, ಆರ್ ಎ ಜಿ -ವರ್ಧಿತ ಚೌಕಟ್ಟು
|
ಐಐಟಿ ಜೋಧಪುರ (ಸಿಐ) ಮತ್ತು ಐಐಟಿ ಮದ್ರಾಸ್
|
|
ಎಐ ವಿಶ್ಲೇಷಕ್: ವಿರೋಧಿ ದೃಢತೆ, ವ್ಯಾಖ್ಯಾನ ಮತ್ತು ಡೊಮೇನ್ ಸಾಮಾನ್ಯೀಕರಣದೊಂದಿಗೆ ಆಡಿಯೋ-ವಿಶುವಲ್ ಡೀಪ್ ಫೇಕ್ ಪತ್ತೆ ಮತ್ತು ಕೈಬರಹದ ಸಹಿ ನಕಲಿ ಪತ್ತೆಯನ್ನು ಸುಧಾರಿಸುವುದು
|
ಐಐಟಿ ಮಂಡಿ ಮತ್ತು ವಿಧಿವಿಜ್ಞಾನ ಸೇವೆಗಳ ನಿರ್ದೇಶನಾಲಯ, ಹಿಮಾಚಲ ಪ್ರದೇಶ
|
|
ನೈಜ ಸಮಯದ ಧ್ವನಿ ಡೀಪ್ ಫೇಕ್ ಪತ್ತೆ ವ್ಯವಸ್ಥೆ
|
ಐಐಟಿ ಖರಗಪುರ
|
|
ಪಕ್ಷಪಾತ ತಗ್ಗಿಸುವಿಕೆ
|
ಕೃಷಿ ಎಲ್ ಎಲ್ ಎಮ್ ಗಳಲ್ಲಿ ಲಿಂಗ ಪಕ್ಷಪಾತವನ್ನು ಮೌಲ್ಯಮಾಪನ ಮಾಡುವುದು- ಮಾನದಂಡ ಮತ್ತು ನ್ಯಾಯಯುತ ದತ್ತಾಂಶ ಕೆಲಸಕ್ಕಾಗಿ ಡಿಜಿಟಲ್ ಸಾರ್ವಜನಿಕ ಸರಕುಗಳನ್ನು (ಡಿಪಿಜಿ) ರಚಿಸುವುದು
|
ಡಿಜಿಟಲ್ ಫ್ಯೂಚರ್ಸ್ ಲ್ಯಾಬ್ & ಕಾರ್ಯ
|
|
ಲಭ್ಯತೆ ಪರೀಕ್ಷೆ ಮತ್ತು ಮೌಲ್ಯಮಾಪನ
|
ಅನ್ವಿಲ್: ಎಲ್ ಎಲ್ ಎಮ್ ಮತ್ತು ಜನರೇಟಿವ್ ಎಐ ಗಾಗಿ ಲಭ್ಯತೆ ಪರೀಕ್ಷೆ ಮತ್ತು ಮೌಲ್ಯಮಾಪನ ಸಾಧನ
|
ಗ್ಲೋಬಲ್ಸ್ ಐಟಿಇಎಸ್ ಪ್ರೈವೇಟ್ ಲಿಮಿಟೆಡ್ & ಐಐಐಟಿ ಧಾರವಾಡ
|
ಎರಡನೇ ಆಸಕ್ತಿ ವ್ಯಕ್ತಪಡಿಸುವಿಕೆ (ಇಒಐ) ಅಡಿಯಲ್ಲಿ ಆಯ್ಕೆ ಮಾಡಲಾದ ಐದು ಯೋಜನೆಗಳು ಸುರಕ್ಷಿತ ಮತ್ತು ವಿಶ್ವಾಸಾರ್ಹ ಎಐನ ದೃಷ್ಟಿಕೋನವನ್ನು ದೃಢವಾದ ಪರಿಹಾರಗಳಾಗಿ ಜಾರಿ ಮಾಡುವ ಇಂಡಿಯಾಎಐನ ಬದ್ಧತೆಯನ್ನು ಪ್ರದರ್ಶಿಸುತ್ತವೆ. ಈ ಉಪಕ್ರಮಗಳು ನೈಜ-ಸಮಯದ ಡೀಪ್‌ಪೇಕ್ ಪತ್ತೆಹಚ್ಚುವಿಕೆಯನ್ನು ಮುನ್ನಡೆಸುತ್ತವೆ, ವಿಧಿವಿಜ್ಞಾನ ವಿಶ್ಲೇಷಣೆಯನ್ನು ಬಲಪಡಿಸುತ್ತವೆ, ಎಐ ಮಾದರಿಗಳಲ್ಲಿ ಪಕ್ಷಪಾತವನ್ನು ಪರಿಹರಿಸುತ್ತವೆ ಮತ್ತು ಜನರೇಟಿವ್ ಎಐಗಾಗಿ ದೃಢವಾದ ಮೌಲ್ಯಮಾಪನ ಸಾಧನಗಳನ್ನು ನಿರ್ಮಿಸುತ್ತವೆ, ಭಾರತದಲ್ಲಿ ನಿಯೋಜಿಸಲಾದ ಎಐ ವ್ಯವಸ್ಥೆಗಳು ವಿಶ್ವಾಸಾರ್ಹ, ಸುರಕ್ಷಿತ ಮತ್ತು ಅಂತರ್ಗತವಾಗಿವೆ ಎಂದು ಖಚಿತಪಡಿಸುತ್ತವೆ. ಪ್ರಮುಖ ಶೈಕ್ಷಣಿಕ ಸಂಸ್ಥೆಗಳು, ಉದ್ಯಮ ಪಾಲುದಾರರು ಮತ್ತು ನಾಗರಿಕ ಸಮಾಜವನ್ನು ಒಟ್ಟುಗೂಡಿಸುವ ಮೂಲಕ, ಇಂಡಿಯಾಎಐ ಮಿಷನ್ ರಾಷ್ಟ್ರದ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುವ ನಾವೀನ್ಯತೆ, ನೈತಿಕ ಅಭ್ಯಾಸಗಳು ಮತ್ತು ಸ್ಥಿತಿಸ್ಥಾಪಕ ಎಐ ಪೂರಕ ವ್ಯವಸ್ಥೆಯನ್ನು ಉತ್ತೇಜಿಸುವುದನ್ನು ಮುಂದುವರೆಸಿದೆ.
ಇಂಡಿಯಾಎಐ ಬಗ್ಗೆ
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಸ್ವತಂತ್ರ ವಾಣಿಜ್ಯ ವಿಭಾಗವಾದ ಇಂಡಿಯಾಎಐ, ಇಂಡಿಯಾಎಐ ಮಿಷನ್ ನ ಅನುಷ್ಠಾನ ಸಂಸ್ಥೆಯಾಗಿದೆ. ಇದು ಸಮಾಜದ ಎಲ್ಲಾ ವರ್ಗಗಳಿಗೆ ಎಐನ ಪ್ರಯೋಜನಗಳನ್ನು ಪ್ರಜಾಪ್ರಭುತ್ವಗೊಳಿಸಲು, ಎಐನಲ್ಲಿ ಭಾರತದ ನಾಯಕತ್ವವನ್ನು ಬಲಪಡಿಸಲು, ತಾಂತ್ರಿಕ ಸ್ವಾವಲಂಬನೆಯನ್ನು ಉತ್ತೇಜಿಸಲು ಮತ್ತು ಎಐನ ನೈತಿಕ ಮತ್ತು ಜವಾಬ್ದಾರಿಯುತ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಶ್ರಮಿಸುತ್ತದೆ.
*****
(Release ID: 2175766)
Visitor Counter : 29