ಪ್ರಧಾನ ಮಂತ್ರಿಯವರ ಕಛೇರಿ
ತಿರುಪ್ಪೂರು ಕುಮರನ್ ಮತ್ತು ಸುಬ್ರಮಣಿಯ ಶಿವ ಅವರ ಸಂಸ್ಮರಣಾರ್ಥ ದಿನದಂದು ಪ್ರಧಾನಮಂತ್ರಿ ಗೌರವ ನಮನ
Posted On:
04 OCT 2025 4:51PM by PIB Bengaluru
ಭಾರತ ಸ್ವಾತಂತ್ರ್ಯ ಹೋರಾಟದ ಇಬ್ಬರು ಅತ್ಯುನ್ನತ ವ್ಯಕ್ತಿಗಳಾದ ತಿರುಪ್ಪೂರು ಕುಮರನ್ ಮತ್ತು ಸುಬ್ರಮಣಿಯ ಶಿವ ಅವರ ಸಂಸ್ಮರಣಾರ್ಥ ದಿನದ ಅಂಗವಾಗಿ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.
ಎಕ್ಸ್ ನಲ್ಲಿ ಪ್ರತ್ಯೇಕ ಪೋಸ್ಟ್ ಗಳಲ್ಲಿ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:
"ಭಾರತ ಮಾತೆಯ ಇಬ್ಬರು ಮಹಾನ್ ಪುತ್ರರಾದ ತಿರುಪ್ಪೂರು ಕುಮರನ್ ಮತ್ತು ಸುಬ್ರಮಣಿಯ ಶಿವ ಅವರನ್ನು ಈ ದಿನದಂದು ನಾವು ಸ್ಮರಿಸುತ್ತಾ ಅವರಿಗೆ ಗೌರವ ನಮನ ಸಲ್ಲಿಸುತ್ತೇವೆ. ತಮಿಳುನಾಡು ರಾಜ್ಯದವರಾದ ಇಬ್ಬರೂ ಭಾರತದ ಸ್ವಾತಂತ್ರ್ಯಕ್ಕಾಗಿ ಮತ್ತು ರಾಷ್ಟ್ರೀಯತೆಯ ಮನೋಭಾವವನ್ನು ಜಾಗೃತಗೊಳಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು.
ತಿರುಪ್ಪೂರು ಕುಮಾರನ್ ಅವರು ನಮ್ಮ ರಾಷ್ಟ್ರಧ್ವಜವನ್ನು ಹಿಡಿದಿರುವಾಗ ಹುತಾತ್ಮರಾದರು ಮತ್ತು ಈ ಮೂಲಕ ಅಚಲ ಸ್ಥೈರ್ಯ ಮತ್ತು ನಿಸ್ವಾರ್ಥ ತ್ಯಾಗ ಏನೆಂಬುದನ್ನು ತೋರಿಸಿದರು. ಸುಬ್ರಮಣಿಯ ಶಿವ ಅವರು ತಮ್ಮ ನಿರ್ಭೀತ ಬರಹಗಳು ಮತ್ತು ಉತ್ಕಟ ಭಾಷಣಗಳ ಮೂಲಕ ಅಸಂಖ್ಯಾತ ಯುವಕರಲ್ಲಿ ಸಾಂಸ್ಕೃತಿಕ ಗರಿಮೆ ಮತ್ತು ದೇಶಭಕ್ತಿಯನ್ನು ತುಂಬಿದರು.
ಈ ಇಬ್ಬರೂ ಮಹಾನ್ ವ್ಯಕ್ತಿಗಳ ಪ್ರಯತ್ನಗಳು ನಮ್ಮೆಲ್ಲರ ಸ್ಮೃತಿಯಲ್ಲಿ ಅಚ್ಚೊತ್ತಿದ್ದು ವಸಾಹತುಶಾಹಿ ಆಳ್ವಿಕೆಯಿಂದ ನಮಗೆ ಸ್ವಾತಂತ್ರ್ಯವನ್ನು ಖಾತರಿಪಡಿಸಿದ ಅಸಂಖ್ಯಾತ ಜನರ ಹೋರಾಟಗಳು ಮತ್ತು ನೋವುಗಳನ್ನು ನೆನಪಿಸುತ್ತವೆ. ರಾಷ್ಟ್ರದ ಅಭಿವೃದ್ಧಿ ಮತ್ತು ಏಕತೆಯ ಕಡೆಗೆ ಕೆಲಸ ಮಾಡಲು ಅವರ ಕೊಡುಗೆಗಳು ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತಲಿರಲಿ”.
“இன்று நாம், பாரத மாதாவின் இரு தவப் புதல்வர்களான திருப்பூர் குமரன் மற்றும் சுப்பிரமணிய சிவா ஆகியோரை நினைவு கூர்ந்து வணங்குவோம். உன்னதமான தமிழ்நாட்டைச் சேர்ந்த இருவரும், இந்தியாவின் விடுதலைக்காகவும், தேசப்பற்று உணர்வை விதைப்பதற்காகவும் தங்கள் வாழ்வையே அர்ப்பணித்தவர்களாவர்.
திருப்பூர் குமரன், தன் இறுதி மூச்சுவரை நமது தேசியக் கொடியை ஏந்தி உயிர் தியாகம் செய்தார், இதன் மூலம் அசாத்திய துணிச்சலையும் தன்னலமற்ற தியாகத்தையும் அவர் வெளிப்படுத்தினார். சுப்ரமணிய சிவா, தமது தைரியமான எழுத்து மற்றும் அனல் பறக்கும் உரை வீச்சின் மூலம் எண்ணற்ற இளைஞர்களிடையே கலாச்சார பெருமிதத்தையும், தேசப்பற்றையும் விதைத்தார்.
இவ்விரு மாமனிதர்களின் முயற்சிகள், நம் அனைவரின் நினைவிலும் நீக்கமற நிறைந்திருப்பதுடன், காலனித்துவ ஆட்சியிலிருந்து நமது விடுதலையை உறுதி செய்த ஏராளமான மக்களின் போராட்டங்களையும் இன்னல்களையும் நமக்கு நினைவூட்டுகின்றன. தேச ஒற்றுமை மற்றும் வளர்ச்சியை நோக்கி நாம் அனைவரும் முன்னேற, இவர்களது பங்களிப்புகள் நமக்குத் தொடர்ந்து ஊக்கமளிக்கட்டும்.”
*****
(Release ID: 2174852)
Visitor Counter : 7