ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ನರೇಂದ್ರ ಮೋದಿ ಸರ್ಕಾರ ಪಂಜಾಬ್‌ ಜನರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ ಮತ್ತು ರಾಜ್ಯದ ಪ್ರವಾಹ ಪೀಡಿತ ಜನರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್‌ ಶಾ ಹೇಳಿದ್ದಾರೆ


ಪಂಜಾಬ್‌ ಮುಖ್ಯಮಂತ್ರಿ ಅವರು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿದರು ಮತ್ತು ಇತ್ತೀಚಿನ ಪ್ರವಾಹದ ನಂತರ ರಾಜ್ಯದಲ್ಲಿ ಆಗಿರುವ ಹಾನಿಯ ಬಗ್ಗೆ ವಿವರಿಸಿದರು

ರಾಜ್ಯ ವಿಪತ್ತು ಸ್ಪಂದನಾ ನಿಧಿಯಲ್ಲಿ(ಎಸ್‌ಡಿಆರ್‌ಎಫ್‌) ರಾಜ್ಯವು 12,589.59 ಕೋಟಿ ರೂ.ಗಳಷ್ಟು ನಿಧಿಯನ್ನು ಹೊಂದಿದೆ, ಇದನ್ನು ಸಂತ್ರಸ್ತರಿಗೆ ಪರಿಹಾರ ಮತ್ತು ತಕ್ಷಣದ  ಪುನರ್‌ಸ್ಥಾಪನೆ  ಬಳಸಬಹುದು ಎಂದು ಮುಖ್ಯಮಂತ್ರಿಗಳಿಗೆ ತಿಳಿಸಲಾಯಿತು

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ 1,600 ಕೋಟಿ ರೂ.ಗಳ ಆರ್ಥಿಕ ನೆರವಿನಲ್ಲಿ805 ಕೋಟಿ ರೂ.ಗಳನ್ನು ಈಗಾಗಲೇ ವಿವಿಧ ಯೋಜನೆಗಳ ಅಡಿಯಲ್ಲಿ ರಾಜ್ಯ ಸರ್ಕಾರ / ಉದ್ದೇಶಿತ ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿದೆ

ಪಂಜಾಬ್‌ ರಾಜ್ಯದಿಂದ ಜ್ಞಾಪಕ ಪತ್ರದ ಸ್ವೀಕೃತಿಗೆ ಕಾಯದೆ 2025ರ ಸೆಪ್ಟೆಂಬರ್‌ 1ರಂದು ಅಂತರ-ಸಚಿವಾಲಯ ಕೇಂದ್ರ ತಂಡವನ್ನು (ಐಎಂಸಿಟಿ) ರಚಿಸಲಾಯಿತು

ಕೇಂದ್ರ ತಂಡವು 2025ರ ಸೆಪ್ಟೆಂಬರ್‌ 3ರಿಂದ 6 ರವರೆಗೆ ರಾಜ್ಯದಲ್ಲಿನ ಹಾನಿಗಳ ಸ್ಥಳದಲ್ಲೇ ಮೌಲ್ಯಮಾಪನಕ್ಕಾಗಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿತು, ಆದಾಗ್ಯೂ, ರಾಜ್ಯ ಸರ್ಕಾರವು ಇನ್ನೂ ವಿವರವಾದ ಜ್ಞಾಪಕ ಪತ್ರವನ್ನು ಸಲ್ಲಿಸಿಲ್ಲ

Posted On: 30 SEP 2025 8:03PM by PIB Bengaluru

ನರೇಂದ್ರ ಮೋದಿ ಸರ್ಕಾರವು ಪಂಜಾಬ್‌ ಜನರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ ಮತ್ತು ರಾಜ್ಯದ ಪ್ರವಾಹ ಪೀಡಿತ ಜನರಿಗೆ ಸಾಧ್ಯವಿರುವ ಎಲ್ಲಸಹಾಯವನ್ನು ಒದಗಿಸಲು ಬದ್ಧವಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಹೇಳಿದ್ದಾರೆ.

ಪಂಜಾಬ್‌ ಮುಖ್ಯಮಂತ್ರಿ ಶ್ರೀ ಭಗವಂತ್‌ ಮಾನ್‌ ಅವರು ಇಂದು ಸಂಜೆ ನವದೆಹಲಿಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರನ್ನು ಭೇಟಿಯಾದರು ಮತ್ತು ಮುಂಗಾರು ಋುತುವಿನಲ್ಲಿ ಪ್ರವಾಹದಿಂದ ರಾಜ್ಯದಲ್ಲಿಉಂಟಾದ ಹಾನಿಯ ಬಗ್ಗೆ ವಿವರಿಸಿದರು. ವಿಪತ್ತು ಪರಿಹಾರ ಮತ್ತು ಪುನರ್‌ಸ್ಥಾಪನೆ ರಾಜ್ಯಕ್ಕೆ ಹೆಚ್ಚುವರಿ ಹಣವನ್ನು ಮಂಜೂರು ಮಾಡುವಂತೆ ಅವರು ಒತ್ತಾಯಿಸಿದರು.

ರಾಜ್ಯ ವಿಪತ್ತು ಸ್ಪಂದನಾ ನಿಧಿಯಲ್ಲಿ (ಎಸ್‌ಡಿಆರ್‌ಎಫ್‌) ರಾಜ್ಯವು 12,589.59 ಕೋಟಿ ರೂ.ಗಳ ಸಾಕಷ್ಟು ನಿಧಿಯನ್ನು ಹೊಂದಿದೆ. ಇದನ್ನು ಭಾರತ ಸರ್ಕಾರದ ಮಾನದಂಡಗಳ ಪ್ರಕಾರ ಸಂತ್ರಸ್ತರಿಗೆ ಪರಿಹಾರ ಮತ್ತು ತಕ್ಷಣದ  ಪುನರ್‌ಸ್ಥಾಪನೆ  ಬಳಸಬಹುದು ಎಂದು ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ತಿಳಿಸಲಾಯಿತು.

ರಾಜ್ಯದಲ್ಲಿಇತ್ತೀಚೆಗೆ ಉಂಟಾದ ಪ್ರವಾಹದ ಸಂದರ್ಭದಲ್ಲಿ ಶೋಧ, ರಕ್ಷಣಾ ಮತ್ತು ತಕ್ಷಣದ ಪುನಃಸ್ಥಾಪನೆಗಾಗಿ ಕೇಂದ್ರ ಸರ್ಕಾರವು ಕೇಂದ್ರ ಸಂಸ್ಥೆಗಳಿಂದ ರಾಜ್ಯ ಆಡಳಿತಕ್ಕೆ ಸಾಧ್ಯವಿರುವ ಎಲ್ಲಸಹಾಯವನ್ನು ಒದಗಿಸಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಸೆಪ್ಟೆಂಬರ್‌ 9ರಂದು ಪಂಜಾಬ್‌ಗೆ ಭೇಟಿ ನೀಡಿದ್ದರು ಮತ್ತು ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಮತ್ತು ಉಂಟಾದ ಹಾನಿಯನ್ನು ಪರಿಶೀಲಿಸಿದ್ದರು. ಪ್ರಧಾನಮಂತ್ರಿ ಅವರು ಘೋಷಿಸಿದ 1,600 ಕೋಟಿ ರೂ.ಗಳ ಆರ್ಥಿಕ ನೆರವಿನಲ್ಲಿ 805 ಕೋಟಿ ರೂ.ಗಳನ್ನು (ಎನ್‌ಎಚ್‌ಎಐ ಮಂಜೂರಾತಿ ಅಡಿಯಲ್ಲಿ170 ಕೋಟಿ ರೂ.ಗಳು ಸೇರಿದಂತೆ) ಈಗಾಗಲೇ ರಾಜ್ಯ ಸರ್ಕಾರ/ ಉದ್ದೇಶಿತ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ ಮತ್ತು ಉಳಿದ ಹಣವನ್ನು ರಾಜ್ಯದಿಂದ ಸೂಕ್ತ ಮಾಹಿತಿಯನ್ನು ಸ್ವೀಕರಿಸಿದ ನಂತರ ಬಿಡುಗಡೆ ಮಾಡಲಾಗುವುದು.

ಇದಲ್ಲದೆ, ಪಂಜಾಬ್‌ ರಾಜ್ಯದಿಂದ ಜ್ಞಾಪಕ ಪತ್ರದ ಸ್ವೀಕೃತಿಗೆ ಕಾಯದೆ 2025ರ ಸೆಪ್ಟೆಂಬರ್‌ 1ರಂದು ಅಂತರ-ಸಚಿವಾಲಯ ಕೇಂದ್ರ ತಂಡವನ್ನು (ಐಎಂಸಿಟಿ) ರಚಿಸಲಾಯಿತು. ಕೇಂದ್ರ ತಂಡವು 2025ರ ಸೆಪ್ಟೆಂಬರ್‌ 3ರಿಂದ 6 ರವರೆಗೆ ರಾಜ್ಯದಲ್ಲಿನ ಹಾನಿಗಳ ಸ್ಥಳದಲ್ಲೇ ಮೌಲ್ಯಮಾಪನಕ್ಕಾಗಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿತು. ಆದಾಗ್ಯೂ, ರಾಜ್ಯ ಸರ್ಕಾರ ಇನ್ನೂ ವಿವರವಾದ ಜ್ಞಾಪಕ ಪತ್ರವನ್ನು ಸಲ್ಲಿಸಿಲ್ಲ. ಜ್ಞಾಪಕ ಪತ್ರವನ್ನು ಸ್ವೀಕರಿಸಿದ ತರುವಾಯ, ಭಾರತ ಸರ್ಕಾರ ಅನುಮೋದಿಸಿದ ಮಾನದಂಡಗಳ ರೀತ್ಯ ಇದನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತದೆ.

ಇದಲ್ಲದೆ, ಜೀವನೋಪಾಯ ಮತ್ತು ಹಾನಿಗೊಳಗಾದ ಮೂಲಸೌಕರ್ಯಗಳ ಪುನರ್‌ ಸ್ಥಾಪನೆಗಾಗಿ ರಾಜ್ಯವು ಚೇತರಿಕೆ ಮತ್ತು ಪುನರ್‌ ನಿರ್ಮಾಣ ಯೋಜನೆಯನ್ನು ಸಿದ್ಧಪಡಿಸಬಹುದು. ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಈಗಾಗಲೇ 14.08.2024ರಂದು ಎಸ್‌ಡಿಆರ್‌ಎಫ್‌ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (ಎನ್‌ಡಿಆರ್‌ಎಫ್‌) ಅಡಿಯಲ್ಲಿ ಚೇತರಿಕೆ ಮತ್ತು ಪುನರ್‌ ನಿರ್ಮಾಣ (ಆರ್‌ಆರ್‌) ಧನಸಹಾಯ ಅವಕಾಶಗಳಿಗಾಗಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮಾರ್ಗಸೂಚಿಗಳಲ್ಲಿ ವಿವರಿಸಿದಂತೆ, ತೀವ್ರ ವಿಪತ್ತಿನ ನಂತರ, ರಾಜ್ಯ ಸರ್ಕಾರವು ಚೇತರಿಕೆ ಮತ್ತು ಪುನರ್‌ನಿರ್ಮಾಣ ಅಗತ್ಯಗಳ ಮೌಲ್ಯಮಾಪನಕ್ಕಾಗಿ ಎಸ್‌ಡಿಎಂಎ/ಎನ್‌ಡಿಎಂಎ (ಅಗತ್ಯವಿದ್ದರೆ) ಜೊತೆ ಸಮಾಲೋಚಿಸಿ ವಿಪತ್ತು ನಂತರದ ಅಗತ್ಯಗಳ ಮೌಲ್ಯಮಾಪನ (ಪಿಡಿಎನ್‌ಎ) ನಡೆಸಬೇಕಾಗಿದೆ.

 

*****
 


(Release ID: 2173383) Visitor Counter : 6