ಪಂಚಾಯತ್ ರಾಜ್ ಸಚಿವಾಲಯ
azadi ka amrit mahotsav

ಪಂಚಾಯತ್ ರಾಜ್ ಸಚಿವಾಲಯವು ಅಕ್ಟೋಬರ್ 2, 2025 ರಂದು ದೇಶಾದ್ಯಂತ "ಸಬ್ಕಿ ಯೋಜನಾ, ಸಬ್ಕಾ ವಿಕಾಸ್" ಅಭಿಯಾನವನ್ನು ಪ್ರಾರಂಭಿಸಲಿದೆ


2026–27ರ ಹಣಕಾಸು ವರ್ಷಕ್ಕೆ ಪಂಚಾಯತ್ ಅಭಿವೃದ್ಧಿ ಯೋಜನೆಗಳ ರಚನೆಗೆ ಚಾಲನೆ ನೀಡಲು ಜನತಾ ಯೋಜನಾ ಅಭಿಯಾನ

Posted On: 27 SEP 2025 11:07AM by PIB Bengaluru

ಪಂಚಾಯತ್ ರಾಜ್ ಸಚಿವಾಲಯವು ಅಕ್ಟೋಬರ್ 2, 2025 ರಿಂದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನತಾ ಯೋಜನಾ ಅಭಿಯಾನ (ಪಿ.ಪಿ.ಸಿ.) 2025-26: "ಸಬ್ಕಿ ಯೋಜನಾ, ಸಬ್ಕಾ ವಿಕಾಸ್" (ಎಲ್ಲರ ಯೋಜನೆ, ಎಲ್ಲರ ವಿಕಾಸ) ಅಭಿಯಾನವನ್ನು ಪ್ರಾರಂಭಿಸಲಿದೆ, ಇದು 2026-27ರ ಹಣಕಾಸು ವರ್ಷಕ್ಕೆ ಪಂಚಾಯತ್ ಅಭಿವೃದ್ಧಿ ಯೋಜನೆಗಳನ್ನು (ಪಿಡಿಪಿ) ಸಿದ್ಧಪಡಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. 2018 ರಲ್ಲಿ ಪ್ರಾರಂಭವಾದಾಗಿನಿಂದ, ಜನತಾ ಯೋಜನಾ ಅಭಿಯಾನವು ಪಂಚಾಯತ್ ಗಳು ಸ್ಥಳೀಯ ಆದ್ಯತೆಗಳನ್ನು ಪ್ರತಿಬಿಂಬಿಸುವ ಮತ್ತು ವಿಶೇಷ ಗ್ರಾಮ ಸಭೆ ಸಭೆಗಳ ಮೂಲಕ ರಾಷ್ಟ್ರೀಯ ಗುರಿಗಳೊಂದಿಗೆ ಹೊಂದಿಕೆಯಾಗುವ ಪುರಾವೆ ಆಧಾರಿತ, ಒಂದೆಡೆ ಸೇರಿದ ಮತ್ತು ಎಲ್ಲವನ್ನೂ ಒಳಗೊಂಡ ಪಿಡಿಪಿ ಗಳನ್ನು ತಯಾರಿಸಲು ಅನುವು ಮಾಡಿಕೊಟ್ಟಿದೆ. ಈ ಕಾರ್ಯವು ಭಾಗವಹಿಸುವಿಕೆಯ ಯೋಜನೆಯನ್ನು ಹೆಚ್ಚಿಸುತ್ತದೆ  ಮತ್ತು ದೇಶಾದ್ಯಂತದ ತಳಮಟ್ಟದ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡುತ್ತದೆ. eGramSwaraj ಪೋರ್ಟಲ್ ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 2019–20 ರಿಂದ ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆಗಳು (ಜಿಡಿಪಿಡಿಗಳು), ಬ್ಲಾಕ್ ಪಂಚಾಯತ್ ಅಭಿವೃದ್ಧಿ ಯೋಜನೆಗಳು (ಬಿಪಿಡಿಪಿಗಳು) ಮತ್ತು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಯೋಜನೆಗಳು (ಡಿ ಪಿ ಡಿ ಪಿ ಗಳು) ಒಳಗೊಂಡಿರುವ 18.13 ಲಕ್ಷಕ್ಕೂ ಹೆಚ್ಚು ಪಂಚಾಯತ್ ಅಭಿವೃದ್ಧಿ ಯೋಜನೆಗಳನ್ನು ಅಪ್ ಲೋಡ್ ಮಾಡಲಾಗಿದೆ, ಅವುಗಳಲ್ಲಿ 2.52 ಲಕ್ಷಕ್ಕೂ ಹೆಚ್ಚು ಯೋಜನೆಗಳು 2025–26ಕ್ಕೆ ನಡೆಯುತ್ತಿರುವ ಕಾರ್ಯಯೋಜನೆಗೆ ಸಂಬಂಧಿಸಿವೆ.

2025–26 ರ ʻಪೀಪಲ್ಸ್ ಪ್ಲಾನ್ ಅಭಿಯಾನʻಕ್ಕೆ ತಯಾರಿ ನಡೆಸಲು ಪಂಚಾಯತ್ ರಾಜ್ ಸಚಿವಾಲಯವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಇಲಾಖೆಗಳು ಮತ್ತು ಪಾಲುದಾರರೊಂದಿಗೆ ವರ್ಚುವಲ್ ಸಂವಾದಗಳನ್ನು ಪ್ರಾರಂಭಿಸಿದೆ. ಸೆಪ್ಟೆಂಬರ್ 26, 2025 ರಂದು,  ಸಚಿವಾಲಯದ  ಹೆಚ್ಚುವರಿ ಕಾರ್ಯದರ್ಶಿ ಶ್ರೀ ಸುಶೀಲ್ ಕುಮಾರ್ ಲೋಹಾನಿ ಅವರು ಸಿದ್ಧತೆಗಳನ್ನು ಪರಿಶೀಲಿಸಲು ಮತ್ತು ರೋಲ್-ಔಟ್ ಕಾರ್ಯತಂತ್ರವನ್ನು ಹಂಚಿಕೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳು (ಎಸ್.ಐ.ಆರ್.ಡಿ.&ಪಿ.ಆರ್.ಗಳು)  ಜೊತೆ ವರ್ಚುವಲ್ ಸಭೆ ನಡೆಸಿದರು. ಒಂದೆಡೆ ಸೇರಿಸಿದ ಮತ್ತು ತಳಮಟ್ಟದ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು, ಸಚಿವಾಲಯವು 20 ಲೈನ್ ಸಚಿವಾಲಯಗಳು,ಇಲಾಖೆಗಳನ್ನು ವಿಶೇಷ ಗ್ರಾಮ ಸಭಾ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ತಮ್ಮ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಇಲಾಖೆಗಳಿಗೆ ನಿರ್ದೇಶನ ನೀಡುವಂತೆ ವಿನಂತಿಸಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೆಪ್ಟೆಂಬರ್ ಅಂತ್ಯದೊಳಗೆ ಮೇಲ್ವಿಚಾರಣಾ ವೇದಿಕೆಗಳನ್ನು ಸಕ್ರಿಯಗೊಳಿಸಲು, ನೋಡಲ್ ಅಧಿಕಾರಿಗಳನ್ನು, ರೈಲು ವ್ವವಸ್ಥೆ ಮಾಡುವವರನ್ನು ನೇಮಿಸಲು, ಗ್ರಾಮ ಸಭಾ ವೇಳಾಪಟ್ಟಿಗಳನ್ನು ಅಂತಿಮಗೊಳಿಸಲು ಮತ್ತು ಸಾರ್ವಜನಿಕ ಮಾಹಿತಿ ಮಂಡಳಿಗಳನ್ನು ಪ್ರದರ್ಶಿಸಲು ಕೇಳಲಾಗಿದೆ. ಅಕ್ಟೋಬರ್ 2, 2025 ರಂದು ಕರೆಯಲಾಗುವ ವಿಶೇಷ ಗ್ರಾಮ ಸಭೆಗಳು 2025-26ರ ಪೀಪಲ್ಸ್ ಪ್ಲಾನ್ ಅಭಿಯಾನ (ಪಿಪಿಸಿ) ಔಪಚಾರಿಕ ಆರಂಭವನ್ನು ಬಿಂಬಿಸುತ್ತವೆ.

ಪೀಪಲ್ಸ್ ಪ್ಲಾನ್ ಅಭಿಯಾನ 2025–26: ಸಬ್ಕಿ ಯೋಜನೆ, ಸಬ್ಕಾ ವಿಕಾಸ್ (ಎಲ್ಲರ ಯೋಜನೆ, ಎಲ್ಲರ ವಿಕಾಸ)

ಪೀಪಲ್ಸ್ ಪ್ಲಾನ್ ಅಭಿಯಾನ 2025–26 ಭಾಗವಹಿಸುವ, ಪಾರದರ್ಶಕ ಮತ್ತು ಜವಾಬ್ದಾರಿಯುತ ಸ್ಥಳೀಯ ಆಡಳಿತವನ್ನು ಬಲಪಡಿಸಲು ಪ್ರಯತ್ನಿಸುತ್ತದೆ. ಗ್ರಾಮ ಸಭೆಗಳು ಡಿಜಿಟಲ್ ಪ್ಲಾಟ್ಫಾರ್ಮ್ಗಳನ್ನು (eGramSwaraj, Meri Panchayat App, Panchayat NIRNAY) ಬಳಸಿಕೊಂಡು ಹಿಂದಿನ ಜಿಪಿಡಿಪಿ ಗಳನ್ನು ಪರಿಶೀಲಿಸುತ್ತವೆ, ಪ್ರಗತಿಯನ್ನು ನಿರ್ಣಯಿಸುತ್ತವೆ, ವಿಳಂಬಗಳನ್ನು ಪರಿಹರಿಸುತ್ತವೆ ಮತ್ತು ಖರ್ಚು ಮಾಡದ ಕೇಂದ್ರ ಹಣಕಾಸು ಆಯೋಗದ ಅನುದಾನಗಳೊಂದಿಗೆ ಅಪೂರ್ಣ ಕೆಲಸಗಳಿಗೆ ಆದ್ಯತೆ ನೀಡುತ್ತವೆ. ಯೋಜನೆಗೆ ಪಂಚಾಯತ್ ಅಡ್ವಾನ್ಸ್ಮೆಂಟ್ ಇಂಡೆಕ್ಸ್ (ಪಿಎಐ) ನಿಂದ ಮಾರ್ಗ ದರ್ಶನವಿರುತ್ತದೆ, ಸಭಾಸಾರ್ ನ ಪರಿಣಾಮಕಾರಿ ಬಳಕೆಯನ್ನು ಖಚಿತಪಡಿಸುತ್ತದೆ, ಸ್ವಂತ ಮೂಲ ಆದಾಯವನ್ನು (ಒ ಎಸ್ ಆರ್) ಹೆಚ್ಚಿಸುತ್ತದೆ ಮತ್ತು ವ್ಯಾಪಕ ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ. ʻಆದಿ ಕರ್ಮಯೋಗಿ ಅಭಿಯಾನʼದ ಅಡಿಯಲ್ಲಿ ಬುಡಕಟ್ಟು ಸಬಲೀಕರಣದ ಮೇಲೆ ವಿಶೇಷ ಗಮನ ಹರಿಸಲಾಗುತ್ತದೆ, ಇದು ರಾಷ್ಟ್ರೀಯ ಗುರಿಗಳ ಪ್ರಕಾರ  ಸಮಗ್ರ ಅಭಿವೃದ್ಧಿಗಾಗಿ ಗ್ರಾಮ ಸಭೆಗಳನ್ನು ನಿರ್ಣಾಯಕ ವೇದಿಕೆಗಳನ್ನಾಗಿ ಮಾಡುತ್ತದೆ. ಪಂಚಾಯತ್ ಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆಗಳು, ಸಮುದಾಯ ಸದಸ್ಯರು ಮತ್ತು ಮುಂಚೂಣಿ ಸಿಬ್ಬಂದಿಯ ಸಕ್ರಿಯ ಒಳಗೊಳ್ಳುವಿಕೆಯೊಂದಿಗೆ, ಅಭಿಯಾನವು ಯೋಜನಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಒಮ್ಮುಖ ಮತ್ತು ಹೊಣೆಗಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ, ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಸೇವಾ ವಿತರಣೆ ಮತ್ತು ಸುಧಾರಿತ ಫಲಿತಾಂಶಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ನಿರೀಕ್ಷಿಸಲಾಗಿದೆ.

 

*****


(Release ID: 2172306) Visitor Counter : 7