ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಜಾಗತಿಕ ಆಹಾರ ನಿಯಂತ್ರಕರ ಶೃಂಗಸಭೆ 2025 ರ ಲಾಂಛನ ಮತ್ತು ಕರಪತ್ರಗಳನ್ನು ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ ಪಿ ನಡ್ಡಾ ಅವರು ಅನಾವರಣಗೊಳಿಸಿದರು
ಭಾರತ ಮಂಟಪದಲ್ಲಿ ಸೆಪ್ಟೆಂಬರ್ 26 ರಿಂದ 27 , 2025 ರವರೆಗೆ ನಡೆಯಲಿರುವ ವಿಶ್ವ ಆಹಾರ ನಿಯಂತ್ರಕರ ಶೃಂಗಸಭೆ 2025ರ ಜೊತೆಗೆ ಜಿ.ಎಫ್.ಆರ್.ಎಸ್. 2025 ಅನ್ನು ಎಫ್.ಎಸ್.ಎಸ್.ಎ.ಐ. ಆಯೋಜಿಸಲಿದೆ
प्रविष्टि तिथि:
23 SEP 2025 12:40PM by PIB Bengaluru
ಜಾಗತಿಕ ಆಹಾರ ನಿಯಂತ್ರಕರ ಶೃಂಗಸಭೆ (ಜಿ.ಎಫ್.ಆರ್.ಎಸ್.) 2025ರ ಲಾಂಛನ ಮತ್ತು ಕರಪತ್ರವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ಇಂದು ನಿರ್ಮಾಣ ಭವನದಲ್ಲಿ ಅನಾವರಣಗೊಳಿಸಿದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಶ್ರಯದಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್.ಎಸ್.ಎಸ್.ಎ.ಐ.) ಸೆಪ್ಟೆಂಬರ್ 26 ರಿಂದ 27, 2025 ರವರೆಗೆ ನವದೆಹಲಿಯ ಭಾರತ ಮಂಟಪದಲ್ಲಿ ಶೃಂಗಸಭೆಯನ್ನು ಆಯೋಜಿಸುತ್ತಿದೆ, ಜೊತೆಗೆ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ ಆಯೋಜಿಸುತ್ತಿರುವ ವಿಶ್ವ ಆಹಾರ ಭಾರತ 2025 ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.


ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ತಮ್ಮ ಮುಖ್ಯ ಭಾಷಣದಲ್ಲಿ, “ಈ ವರ್ಷದ ಜಿ.ಎಫ್.ಆರ್.ಎಸ್. ನ ಧ್ಯೇಯವಾಕ್ಯವಾದ "ವಿಕಸನಗೊಳ್ಳುತ್ತಿರುವ ಆಹಾರ ವ್ಯವಸ್ಥೆಗಳು- ಯಥಾ ಅನ್ನಮ್ ತಥಾ ಮನಃ" ಆಹಾರದ ಗುಣಮಟ್ಟ ಮತ್ತು ಮನಸ್ಸು ಮತ್ತು ಸಮಾಜದ ಆರೋಗ್ಯದ ನಡುವಿನ ಆಳವಾದ ಸಂಪರ್ಕವನ್ನು ಸುಂದರವಾಗಿ ಪ್ರತಿಬಿಂಬಿಸುತ್ತದೆ. ಆಹಾರವು ಕೇವಲ ಪೋಷಣೆಯಲ್ಲ, ಅದು ದೈಹಿಕ ಯೋಗಕ್ಷೇಮ, ಮಾನಸಿಕ ಆರೋಗ್ಯ, ಭಾವನಾತ್ಮಕ ಸಮತೋಲನ ಮತ್ತು ಸಾಮಾಜಿಕ ಸಾಮರಸ್ಯವನ್ನು ರೂಪಿಸುವ ಶಕ್ತಿಯಾಗಿದೆ" ಎಂದು ಹೇಳಿದರು.
"ನಾವು ಸೇವಿಸುವ ಆಹಾರವು ಸುರಕ್ಷಿತ ಮತ್ತು ಆರೋಗ್ಯಕರವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಬಹು ಆಯಾಮದ ವಿಧಾನವನ್ನು ತೆಗೆದುಕೊಳ್ಳಬೇಕು. ಬದಲಾಗುತ್ತಿರುವ ಆಹಾರ ಪದ್ಧತಿ ಮತ್ತು ಮಾರುಕಟ್ಟೆಯ ಬಗ್ಗೆ ಆಹಾರ ನಿಯಂತ್ರಕರು ಜಾಗರೂಕರಾಗಿರಬೇಕು. ಆಹಾರ ಸುರಕ್ಷತಾ ಮಾನದಂಡಗಳು, ನಿಯಮಗಳು ಮತ್ತು ನಿಬಂಧನೆಗಳನ್ನು ಅದಕ್ಕೆ ಅನುಗುಣವಾಗಿ ನವೀಕರಿಸಬೇಕು." ಎಂದು ಹೇಳುತ್ತಾ, ಭಾರತದಲ್ಲಿ ಆಹಾರ ಸುರಕ್ಷತಾ ಮಾನದಂಡಗಳನ್ನು ಮುನ್ನಡೆಸುವಲ್ಲಿ ಮತ್ತು ಈ ನಿರ್ಣಾಯಕ ಕ್ಷೇತ್ರದಲ್ಲಿ ಜಾಗತಿಕ ಪ್ರಗತಿಗೆ ಗಮನಾರ್ಹವಾಗಿ ಕೊಡುಗೆ ನೀಡುವಲ್ಲಿ ಎಫ್.ಎಸ್.ಎಸ್.ಎ.ಐ. ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಮುಖ ಪಾತ್ರವನ್ನು ಶ್ರೀ ನಡ್ಡಾ ಅವರು ವಿವರಿಸಿದರು.

ಜಿ.ಎಫ್.ಆರ್.ಎಸ್. 2025ರ ದೃಷ್ಟಿಕೋನದ ಕುರಿತು ಮಾತನಾಡಿದ ಶ್ರೀ ನಡ್ಡಾ ಅವರು, “ಈ ಶೃಂಗಸಭೆಯು ಜಾಗತಿಕ ನಿಯಂತ್ರಕರಿಗೆ ದೃಷ್ಟಿಕೋನಗಳನ್ನು ಹಂಚಿಕೊಳ್ಳಲು, ಮಾನದಂಡಗಳನ್ನು ಸಮನ್ವಯಗೊಳಿಸಲು, ಅಪಾಯ ಮೌಲ್ಯಮಾಪನ ಸಾಮರ್ಥ್ಯಗಳನ್ನು ಬಲಪಡಿಸಲು ಮತ್ತು ಆಹಾರ ಸುರಕ್ಷತೆಯಲ್ಲಿ ತಾಂತ್ರಿಕ ಪ್ರಗತಿಯ ಹೊಸ ಕ್ಷೇತ್ರಗಳನ್ನು ಅನ್ವೇಷಿಸಲು ಒಂದು ವಿಶಿಷ್ಟ ವೇದಿಕೆಯನ್ನು ಒದಗಿಸುತ್ತದೆ. ಗ್ರಾಹಕರ ಆರೋಗ್ಯವನ್ನು ರಕ್ಷಿಸುವುದು ಮತ್ತು ಎಲ್ಲರಿಗೂ ಪ್ರಯೋಜನವಾಗುವ ನ್ಯಾಯಯುತ ವ್ಯಾಪಾರ, ನಾವೀನ್ಯತೆ ಮತ್ತು ಸುಸ್ಥಿರ ಆಹಾರ ವ್ಯವಸ್ಥೆಗಳನ್ನು ಬೆಳೆಸುವುದು ಇದರ ಉದ್ದೇಶವಾಗಿದೆ. " ಎಂದು ಹೇಳಿದರು.
ಎಫ್.ಎಸ್.ಎಸ್.ಎ.ಐ. ಯಶಸ್ವಿ ಮತ್ತು ಫಲಪ್ರದ ಶೃಂಗಸಭೆಗೆ ಶುಭ ಹಾರೈಸುವ ಮೂಲಕ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಶೃಂಗಸಭೆಯು ಭಾರತದ ವೈವಿಧ್ಯಮಯ ಪಾಕಶಾಲೆಯ ಪರಂಪರೆ ಮತ್ತು ಸಮತೋಲಿತ ಆಹಾರಕ್ರಮಗಳನ್ನು ಆಚರಿಸುವ ಎಫ್.ಎಸ್.ಎಸ್.ಎ.ಐ. ನ ಮಹತ್ವದ ಉಪಕ್ರಮವಾದ 'ಈಟ್ ರೈಟ್ ಥಾಲಿ' ಪುಸ್ತಕದ ಅನಾವರಣವನ್ನು ಸಹ ನೋಡಲಿದೆ. ಈ ಪುಸ್ತಕವು ಎಲ್ಲಾ ರಾಜ್ಯಗಳ ಸಾಂಪ್ರದಾಯಿಕ ಊಟ(ಥಾಲಿ)ಗಳನ್ನು ಪ್ರದರ್ಶಿಸುತ್ತದೆ, ಪ್ರತಿಯೊಂದು ಊಟ(ಥಾಲಿ)ವೂ ಸ್ಥಳೀಯ ಪದಾರ್ಥಗಳು, ಅಡುಗೆ ಪದ್ಧತಿಗಳು ಮತ್ತು ಪ್ರಾಚೀನ ಆಹಾರ ಬುದ್ಧಿವಂತಿಕೆಯನ್ನು ಪ್ರತಿಬಿಂಬಿಸುತ್ತದೆ, ಸಮತೋಲನ ಮತ್ತು ವೈವಿಧ್ಯತೆಯನ್ನು ನೀಡುತ್ತದೆ. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕರೆಗೆ ಅನುಗುಣವಾಗಿ, ಇದು ಬೊಜ್ಜು ಮತ್ತು ಜೀವನಶೈಲಿ ಕಾಯಿಲೆಗಳ ವಿರುದ್ಧ ಸಾಧನವಾಗಿ ಸಾಂಪ್ರದಾಯಿಕ ಆಹಾರಕ್ರಮಗಳನ್ನು ಎತ್ತಿ ತೋರಿಸುತ್ತದೆ. ಈ ಸಂಕಲನವು ಸಾಂಸ್ಕೃತಿಕ ಗೌರವ ಮತ್ತು ಬುದ್ದಿವಂತ, ಸ್ಥಳೀಯ ಆಹಾರ ಪದ್ಧತಿಯ ಮೂಲಕ ತಡೆಗಟ್ಟುವ ಆರೋಗ್ಯಕ್ಕೆ ಮಾರ್ಗದರ್ಶಿಯಾಗಿದೆ.
ಜಾಗತಿಕ ಆಹಾರ ನಿಯಂತ್ರಕರ ಶೃಂಗಸಭೆ 2025 ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ವಿಜ್ಞಾನಿಗಳ ಪ್ರಮುಖ ಭಾಷಣಗಳು, ಆಹಾರ ನಿಯಂತ್ರಕರೊಂದಿಗೆ ತಾಂತ್ರಿಕ ಮತ್ತು ಸಮಗ್ರ ಅಧಿವೇಶನಗಳು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ಸಂವಾದಾತ್ಮಕ ಅಧಿವೇಶನಗಳು ಮತ್ತು ಪ್ರಸ್ತುತ ಮತ್ತು ಉದಯೋನ್ಮುಖ ಸವಾಲುಗಳನ್ನು ಎದುರಿಸಲು ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಭೆಗಳು ಸೇರಿದಂತೆ ವೈವಿಧ್ಯಮಯ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಶೃಂಗಸಭೆಯು ಜ್ಞಾನ ವಿನಿಮಯ ಮತ್ತು ಆಹಾರ ಸುರಕ್ಷತೆಗೆ ಸಾಮರಸ್ಯದ ವಿಧಾನಗಳ ಅಭಿವೃದ್ಧಿಗಾಗಿ ಅವಕಾಶಗಳನ್ನು ಒದಗಿಸುತ್ತದೆ. ಶೃಂಗಸಭೆಯ ವಾಸ್ತುಶಿಲ್ಪವು ಎಂಟು ಅಂತರ್-ಸಂಪರ್ಕಿತ ಸಮಗ್ರ ಅಧಿವೇಶನಗಳ ಸುತ್ತಲೂ ರಚನೆಯಾಗಿದ್ದು, ಉನ್ನತ ಮಟ್ಟದ ಸಮಾನಾಂತರ ಸಮಾವೇಶಗಳಿಂದ ಪೂರಕವಾಗಿದೆ, ಇದು ಆಹಾರ ಸುರಕ್ಷತಾ ನಿಯಂತ್ರಣದ ಭವಿಷ್ಯದ ಅಂಶಗಳನ್ನು ಪ್ರತಿಬಿಂಬಿಸುತ್ತದೆ.
ಜಾಗತಿಕ ಆಹಾರ ನಿಯಂತ್ರಕರ ಶೃಂಗಸಭೆ 2025 ಎಫ್.ಎಸ್.ಎಸ್.ಎ.ಐ. ಆಯೋಜಿಸಿರುವ ಕಾರ್ಯಕ್ರಮದ ಸತತ ಮೂರನೇ ಆವೃತ್ತಿಯಾಗಿದೆ. ಕಳೆದ ಎರಡು ಶೃಂಗಸಭೆಗಳ ಯಶಸ್ಸಿನ ಮೇಲೆ, ಎಫ್.ಎಸ್.ಎಸ್.ಎ.ಐ. ಭಾರತವನ್ನು ಜಾಗತಿಕ ಆಹಾರ ಸುರಕ್ಷತಾ ಉಪಕ್ರಮಗಳು ಮತ್ತು ನಿಯಂತ್ರಕ ಸಂವಾದದ ಕೇಂದ್ರವಾಗಿ ದೃಢವಾಗಿ ಇರಿಸಿದೆ. ಶೃಂಗಸಭೆಯು ವಿಶ್ವ ಆರೋಗ್ಯ ಸಂಸ್ಥೆ, ಕೋಡೆಕ್ಸ್, ಎಫ್.ಎ.ಒ ಮತ್ತು ಇ.ಎಫ್. ಎಸ್.ಎ ಸೇರಿದಂತೆ ಅಂತಾರಾಷ್ಟ್ರೀಯ ಸಂಸ್ಥೆಗಳ ಸಾಮೂಹಿಕ ಪ್ರಯತ್ನಗಳನ್ನು ರಾಷ್ಟ್ರೀಯ ಪಾಲುದಾರರು ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಒಟ್ಟುಗೂಡಿಸಿ ನಡೆಸುತ್ತಿದೆ. ಇದರಿಂದಾಗಿ ಆಹಾರ ಸುರಕ್ಷತೆಯಲ್ಲಿ ನಾವೀನ್ಯತೆ, ನಿಯಂತ್ರಕ ಸಮನ್ವಯತೆ ಮತ್ತು ಸಾಮರ್ಥ್ಯ ವೃದ್ಧಿಗಾಗಿ ದೃಢವಾದ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಅಂತಾರಾಷ್ಟ್ರೀಯ ತಜ್ಞರು ಮತ್ತು ಸಂಸ್ಥೆಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ, ಜಿ.ಎಫ್.ಆರ್.ಎಸ್. ತನ್ನನ್ನು ತಾನು ಒಂದು ವಿಶಿಷ್ಟ ಜಾಗತಿಕ ವೇದಿಕೆಯಾಗಿ ಸ್ಥಾಪಿಸಿಕೊಂಡಿದೆ, ಅಲ್ಲಿ ನಿಯಂತ್ರಕರು, ವಿಜ್ಞಾನಿಗಳು, ನೀತಿ ನಿರೂಪಕರು ಮತ್ತು ಪಾಲುದಾರರು ವಿಶ್ವಾದ್ಯಂತ ಸುರಕ್ಷಿತ, ಹೆಚ್ಚು ಸ್ಥಿತಿಸ್ಥಾಪಕ ಮತ್ತು ಎಲ್ಲರನ್ನೂ ಒಳಗೊಂಡ ಆಹಾರ ವ್ಯವಸ್ಥೆಗಳಿಗಾಗಿ ಮಾರ್ಗಗಳನ್ನು ರೂಪಿಸಲು ಒಗ್ಗೂಡಿಸುತ್ತಿದೆ.

ಎಫ್.ಎಸ್.ಎಸ್.ಎ.ಐ. ಸಂಸ್ಥೆಯ ಸಿಇಒ ಶ್ರೀ ರಜಿತ್ ಪುನ್ಹಾನಿ; ಎಫ್.ಎಸ್.ಎಸ್.ಎ.ಐ. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಉಮಾ ಶಂಕರ್ ಧ್ಯಾನಿ; ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ನಿಖಿಲ್ ಗಜರಾಜ್ ಮತ್ತು ಎಫ್.ಎಸ್.ಎಸ್.ಎ.ಐ. ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹಿರಿಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
(रिलीज़ आईडी: 2170181)
आगंतुक पटल : 40