ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ, ನವದೆಹಲಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಾದಕ ದ್ರವ್ಯ ನಿರೋಧಕ ಕಾರ್ಯಪಡೆ (ANTF) ಮುಖ್ಯಸ್ಥರ ಎರಡನೇ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು


ಕೇಂದ್ರ ಗೃಹ ಸಚಿವರು NCB ಯ ಮಾದಕ ದ್ರವ್ಯ ವಿಲೇವಾರಿ ಅಭಿಯಾನಕ್ಕೆ ಚಾಲನೆ ನೀಡಿದರು ಮತ್ತು 11 ಸ್ಥಳಗಳಲ್ಲಿ ರೂ.4,800 ಕೋಟಿ ಮೌಲ್ಯದ 1.37 ಲಕ್ಷ ಕಿಲೋಗ್ರಾಂಗಳಷ್ಟು ಮಾದಕ ದ್ರವ್ಯವನ್ನು ನಾಶಪಡಿಸಿದರು

ಮೋದಿಯವರ ಸರ್ಕಾರವು ಸಣ್ಣ ಪುಟ್ಟ ಮಾದಕ ದ್ರವ್ಯ ವ್ಯಾಪಾರಿಗಳ ವಿರುದ್ಧ ಮಾತ್ರವಲ್ಲದೆ ದೊಡ್ಡ ಮಾದಕ ದ್ರವ್ಯ ದಂಧೆಗಳ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಿದೆ

ಸರ್ಕಾರವು ಮಾದಕ ದ್ರವ್ಯ ಪೂರೈಕೆ ಸರಪಳಿಯ ವಿರುದ್ಧ ನಿರ್ದಾಕ್ಷಿಣ್ಯ ವಿಧಾನವನ್ನು, ಬೇಡಿಕೆ ಕಡಿತಕ್ಕೆ ಕಾರ್ಯತಂತ್ರ ರೂಪದ ವಿಧಾನವನ್ನು ಮತ್ತು ಹಾನಿ ಕಡಿತಕ್ಕೆ ಮಾನವೀಯ ವಿಧಾನವನ್ನು ಅಳವಡಿಸಿಕೊಳ್ಳುತ್ತಿದೆ

ನಾವು ಕ್ರಮ ಮತ್ತು ಅನುಷ್ಠಾನದ ವ್ಯಾಪ್ತಿಯನ್ನು ವಿಸ್ತರಿಸಬೇಕಾಗಿದೆ

ದೇಶದಲ್ಲಿನ ಪ್ರವೇಶ ಮೂಲಗಳು, ವಿತರಣಾ ಜಾಲಗಳು ಮತ್ತು ಮಾದಕ ದ್ರವ್ಯದ ಸ್ಥಳೀಯ ಮಾರಾಟದವರೆಗೆ ತೀವ್ರತರವಾದ ಕೃಮಕೈಗೊಳ್ಳಲಾಗುತ್ತಿದ್ದು ಮಾದಕ ವಸ್ತುಗಳ ಅಕ್ರಮ ವ್ಯವಹಾರದಲ್ಲಿ ತೊಡಗಿರುವ ಪ್ರಮುಖರಿಗೆ ದೇಶದಲ್ಲಿ ದೊಡ್ಡ ಹೊಡೆತಗಳು ಬೀಳುತ್ತಿವೆ

ಮಾದಕ ದ್ರವ್ಯಗಳ ವ್ಯಾಪಾರದಲ್ಲಿ ತೊಡಗಿರುವ ವಿದೇಶಿಗರನ್ನು  ಹಸ್ತಾಂತರ ಮತ್ತು ಗಡೀಪಾರು ವ್ಯವಸ್ಥೆಗಳ ಮೂಲಕ ಕಾನೂನಾತ್ಮಕವಾಗಿ ಶಿಕ್ಷಿಸಲಾಗುತ್ತದೆ

ಎಲ್ಲಾ ರಾಜ್ಯಗಳ ANTF ಮುಖ್ಯಾಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿಗೆ ಒಳಪಡುವ ಸಂಶ್ಲೇಷಿತ ಮಾದಕ ದ್ರವ್ಯಗಳನ್ನು ಗುರುತಿಸಿ ನಾಶಪಡಿಸುವ ಕಾರ್ಯಾಚರಣೆ

Posted On: 16 SEP 2025 6:39PM by PIB Bengaluru

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಾದಕ ದ್ರವ್ಯ ನಿರೋಧಕ ಕಾರ್ಯಪಡೆ (ANTF) ಮುಖ್ಯಸ್ಥರ ಎರಡನೇ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, ಶ್ರೀ ಅಮಿತ್ ಶಾ ಅವರು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (NCB) ವಾರ್ಷಿಕ ವರದಿ-2024 ಅನ್ನು ಬಿಡುಗಡೆ ಮಾಡಿದರು ಮತ್ತು ಮಾದಕ ದ್ರವ್ಯ ವಿಲೇವಾರಿ ಆನ್‌ಲೈನ್ ಅಭಿಯಾನವನ್ನು ಪ್ರಾರಂಭಿಸಿದರು. ಸೆಪ್ಟೆಂಬರ್ 16 ಮತ್ತು 17 ರಂದು ನಡೆದ ಸಮ್ಮೇಳನದಲ್ಲಿ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ANTF ಮುಖ್ಯಸ್ಥರು ಮತ್ತು ಇತರ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ, ಗುಪ್ತಚರ ಬ್ಯೂರೋದ ನಿರ್ದೇಶಕರು ಮತ್ತು NCB ಮಹಾನಿರ್ದೇಶಕರು ಸೇರಿದಂತೆ ಗಣ್ಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅಮಿತ್ ಶಾ ಅವರು, ಎನ್‌ಸಿಬಿ, ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ), ಭಾರತ ಸರ್ಕಾರದ ಎಲ್ಲಾ ಇಲಾಖೆಗಳು, ರಾಜ್ಯ ಸರ್ಕಾರಗಳು ಮತ್ತು ಎಎನ್‌ಟಿಎಫ್ ತಂಡಗಳು ತಮ್ಮದೇ ಆದ ಸಂಕಲ್ಪ ಕೈಗೊಂಡರೆ ಮಾತ್ರ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಮಾದಕ ದ್ರವ್ಯ ಮುಕ್ತ ಭಾರತದ ಸಂಕಲ್ಪ ಮತ್ತು ಮಾದಕ ದ್ರವ್ಯಗಳ ವಿರುದ್ಧದ ಹೋರಾಟ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು. 2047ರ ವೇಳೆಗೆ ಶ್ರೇಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕಲ್ಪನೆ ಪ್ರಧಾನಮಂತ್ರಿಯವರದ್ದಾಗಿದೆ. ಈ ದೃಷ್ಟಿಕೋನ ಸಾಧನೆಗೆ ಯುವಕರನ್ನು ಮಾದಕ ದ್ರವ್ಯಗಳಿಂದ ರಕ್ಷಿಸುವುದು ನಿರ್ಣಾಯಕವಾಗಿದೆ ಎಂದು ಅವರು ಒತ್ತಿ ಹೇಳಿದರು. ಯುವಕರು ರಾಷ್ಟ್ರದ ಬುನಾದಿಯಿದ್ದಂತೆ, ಮುಂಬರುವ ಪೀಳಿಗೆಯನ್ನು ದಾರಿ ತಪ್ಪಿ ಟೊಳ್ಳಾದರೆ , ದೇಶವೂ ತನ್ನ ಗುರಿಯನ್ನು ಕಳೆದುಕೊಳ್ಳುತ್ತದೆ ಎಂದು ಶ್ರೀ ಶಾ ಹೇಳಿದರು.

ಮೋದಿಯವರ ಸರ್ಕಾರವು ಸಣ್ಣ ಪುಟ್ಟ ಮಾದಕ ದ್ರವ್ಯ ವ್ಯಾಪಾರಿಗಳ ವಿರುದ್ಧ ಮಾತ್ರವಲ್ಲದೆ ದೊಡ್ಡ ಮಾದಕ ದ್ರವ್ಯ ದಂಧೆಗಳ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಮಾದಕ ವಸ್ತುಗಳ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಕಾಲ ಸನ್ನಿಹಿತವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ದೇಶದಲ್ಲಿನ ಮಾದಕ ದ್ರವ್ಯ ಪ್ರವೇಶ ಮೂಲಗಳು, ವಿತರಣಾ ಜಾಲಗಳು ಮತ್ತು ಮಾದಕ ದ್ರವ್ಯದ ಸ್ಥಳೀಯ ಮಾರಾಟದವರೆಗೆ ತೀವ್ರತರವಾದ ಕೃಮಕೈಗೊಳ್ಳಲಾಗುತ್ತಿದ್ದು ಮಾದಕ ವಸ್ತುಗಳ ಅಕ್ರಮ ವ್ಯವಹಾರದಲ್ಲಿ ತೊಡಗಿರುವ ಪ್ರಮುಖರನ್ನು ದಂಡಿಸಲು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಶ್ರೀ ಶಾ ಹೇಳಿದರು. ಈ ಯುದ್ಧವು ಇನ್ನು ಮುಂದೆ ಸಣ್ಣ ಪ್ರಮಾಣದ ಮಾದಕವಸ್ತು ಕಳ್ಳಸಾಗಣೆದಾರರನ್ನು ಹಿಡಿಯುವುದಲ್ಲ, ಹೊರತಾಗಿ ಮೂರು ರೀತಿಯ ಮಾದಕ ವಸ್ತು ಕಳ್ಳಸಾಗಣೆದಾರರನ್ನು ಅಂದರೆ ಪ್ರವೇಶ ಮೂಲಗಳಲ್ಲಿ ಕಾರ್ಯನಿರ್ವಹಿಸುವವರು, ಪ್ರವೇಶ ಮೂಲಗಳಿಂದ ರಾಜ್ಯಗಳಿಗೆ ವಿತರಿಸುವವರು ಮತ್ತು ರಾಜ್ಯಗಳೊಳಗಿನ ಸಣ್ಣ ಪುಟ್ಟ ಪ್ರದೇಶಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುವವರನ್ನು ಗುರಿಯಾಗಿಸಿಕೊಂಡಿದೆ ಎಂದು ಅವರು ತಿಳಿಸಿದರು. ಮೂರು ರೀತಿಯ ಕಳ್ಳಸಾಗಣೆದಾರರನ್ನು ಗುರಿಯಾಗಿಸಿಕೊಂಡು ರಾಜ್ಯ ಮತ್ತು ಜಿಲ್ಲಾ ಪೊಲೀಸರನ್ನು ಒಳಗೊಂಡ ಉನ್ನತ ಮಟ್ಟದ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸುವಂತೆ ಪ್ರತಿ ರಾಜ್ಯವನ್ನು ಅವರು ಒತ್ತಾಯಿಸಿದರು. ಡಾರ್ಕ್‌ನೆಟ್ ವಿಶ್ಲೇಷಣೆ, ಕ್ರಿಪ್ಟೋಕರೆನ್ಸಿ ಟ್ರ್ಯಾಕಿಂಗ್, ಸಂವಹನ ಮಾದರಿ ವಿಶ್ಲೇಷಣೆ, ಲಾಜಿಸ್ಟಿಕ್ಸ್, ಹಣಕಾಸು ಹರಿವಿನ ವಿಶ್ಲೇಷಣೆ, ಮೆಟಾಡೇಟಾ ವಿಶ್ಲೇಷಣೆ ಮತ್ತು ಯಂತ್ರ ಕಲಿಕೆ ಮಾದರಿಗಳಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯತೆಯ ಕುರಿತು ಅವರು ಒತ್ತಿ ಹೇಳಿದರು. ಅಭಿಯಾನದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಹೋರಾಟದ ನಾಯಕತ್ವವನ್ನು ವಹಿಸಿದಾಗ ಮಾತ್ರ ಇದು ಸಾಧ್ಯ ಎಂದು ಶ್ರೀ ಶಾ ಹೇಳಿದರು. ಸಹಭಾಗಿತ್ವ ವಹಿಸುವ ಎಲ್ಲರೂ ಈ ಹೋರಾಟಕ್ಕಾಗಿ ವರ್ಷದಲ್ಲಿ 12 ದಿನಗಳನ್ನು ಮೀಸಲಿಡಬೇಕೆಂದು ಅವರು ಆಗ್ರಹಿಸಿದ ಅವರು, ಅಂತಹ ಸಂಕಲ್ಪವಿಲ್ಲದೆ, ಈ ಪ್ರಯತ್ನದ ಸಾಫಲ್ಯವನ್ನು  ಊಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಪ್ರಸ್ತುತ ದೇಶಾದ್ಯಂತ 372 ಜಿಲ್ಲೆಗಳಲ್ಲಿ ಮಾದಕವಸ್ತು ಮುಕ್ತ ಭಾರತ ಅಭಿಯಾನವು ಸಕ್ರಿಯವಾಗಿದೆ. 10 ಕೋಟಿ ಜನರು ಮತ್ತು 3 ಲಕ್ಷ ಶಿಕ್ಷಣ ಸಂಸ್ಥೆಗಳು ಇದರಲ್ಲಿ ಭಾಗಿಯಾಗಿವೆ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಹೇಳಿದರು. ಈ ಪ್ರಯತ್ನ ಸಾಕಾಗುವುದಿಲ್ಲ, ಅಭಿಯಾನವು ಪ್ರತಿ ಜಿಲ್ಲೆ ಮತ್ತು ಪ್ರತಿ ಶಿಕ್ಷಣ ಸಂಸ್ಥೆಯನ್ನು ತಲುಪಬೇಕು ಎಂದು ಅವರು ಆಗ್ರಹಿಸಿದರು. ಇತ್ತೀಚಿನ ವರ್ಷಗಳಲ್ಲಿ, ಎನ್‌ಸಿಬಿ ಘಟಕಗಳು ಮಾದಕ ದ್ರವ್ಯ ಜಾಲದ ಚಾರ್ಟ್ ಅನ್ನು ಸಿದ್ಧಪಡಿಸಿದ್ದು ರಾಜ್ಯಗಳು ಅದನ್ನು ಬಳಸಿಕೊಳ್ಳಬಹುದು ಎಂದು ಶ್ರೀ ಶಾ ಅವರು ಹೇಳಿದರು. ಅಲ್ಲದೆ, ದೇಶಾದ್ಯಂತ ವಿಶ್ವವಿದ್ಯಾಲಯಗಳು ಮತ್ತು ವಿವಿಧ ಸಂಸ್ಥೆಗಳಲ್ಲಿ ಮಿಷನ್ ಡ್ರಗ್-ಫ್ರೀ ಕ್ಯಾಂಪಸ್ ಅಭಿಯಾನವು ನಡೆಯುತ್ತಿದೆ, ಜೊತೆಗೆ ಡಾರ್ಕ್‌ನೆಟ್ ಮತ್ತು ಕ್ರಿಪ್ಟೋಕರೆನ್ಸಿಯ ಕುರಿತು ತರಬೇತಿಯನ್ನು ತೀವ್ರಗೊಳಿಸುವ ಮತ್ತು ಮಾನಸ್ (ಮಾದಕ ಪದಾರ್ಥ ನಿಶೇಧ ಅಸೂಚನಾ ಕೇಂದ್ರ) ಸಹಾಯವಾಣಿಯ ಬಳಕೆಯನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ ಅಕ್ರಮ ಸಾಗಣೆ ತಡೆಗಟ್ಟುವಿಕೆ (ಪಿಐಟಿಎನ್‌ಡಿಪಿಎಸ್) ಕಾಯ್ದೆಯಡಿ 18 ಪ್ರಕರಣಗಳನ್ನು ದಾಖಲಿಸಿದೆ ಮತ್ತು 360 ಡಿಗ್ರಿ ತನಿಖೆಗಳನ್ನು ಪ್ರಾರಂಭಿಸಿದೆ ಎಂದು ಅವರು ಉಲ್ಲೇಖಿಸಿದರು. ಅದೇ ರೀತಿ, ರಾಜ್ಯಗಳಿಂದ ಸ್ವೀಕರಿಸಿದ 35 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಎನ್‌ಸಿಬಿ 360 ಡಿಗ್ರಿ ತನಿಖೆಯನ್ನು ಪ್ರಾರಂಭಿಸಿದೆ. ತರಬೇತಿ ಕಾರ್ಯಕ್ರಮಗಳ ಮೂಲಕ ಸಾವಿರಾರು ಜನರಿಗೆ ತರಬೇತಿ ನೀಡಲಾಗಿದೆ ಎಂದು ಕೂಡಾ ಅವರು ಹೇಳಿದರು.

ಮಾದಕ ದ್ರವ್ಯ ಮುಕ್ತ ಭಾರತ ಅಭಿಯಾನದಲ್ಲಿ ಎಎನ್‌ಟಿಎಫ್ ಮತ್ತು ರಾಷ್ಟ್ರೀಯ ಮಾದಕ ದ್ರವ್ಯ ಸಮನ್ವಯ ಪೋರ್ಟಲ್ (ಎನ್‌ಸಿಒಆರ್‌ಡಿ) ನಿರ್ಣಾಯಕ ಪಾತ್ರ ವಹಿಸಲಿದೆ. ಅದರ ಯಶಸ್ಸು ಪ್ರತಿಯೊಂದು ಜಿಲ್ಲೆಯ, ಅಲ್ಲಿಯ ಪೊಲೀಸ್ ಮತ್ತು ಶಿಕ್ಷಣ ಅಧಿಕಾರಿಗಳ ಸ್ಪಂದನೆಯನ್ನು ಅವಲಂಬಿಸಿರುತ್ತದೆ ಎಂದು ಶ್ರೀ ಅಮಿತ್ ಶಾ ಅವರು ಒತ್ತಿ ಹೇಳಿದರು. ಈ ಅಭಿಯಾನದಲ್ಲಿ ಧಾರ್ಮಿಕ ಮುಖಂಡರು ಮತ್ತು ಯುವ ಸಂಘಟನೆಗಳ ಒಳಗೊಳ್ಳುವಿಕೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು. ಜಿಲ್ಲಾ ಮಟ್ಟದ ಎನ್‌ಸಿಒಆರ್‌ಡಿ ಸಭೆಗಳ ಸಂಖ್ಯೆ ಹೆಚ್ಚಿದ್ದರೂ, ದೇಶದ 272 ಜಿಲ್ಲೆಗಳು ಇಲ್ಲಿವರೆಗೆ ಒಂದೇ ಒಂದು ಎನ್‌ಸಿಒಆರ್‌ಡಿ ಸಭೆಯನ್ನು ನಡೆಸಿಲ್ಲ ಎಂದು ಶ್ರೀ ಶಾ ಹೇಳಿದರು. ಎನ್‌ಸಿಒಆರ್‌ಡಿ ಸಭೆಗಳನ್ನು ಆಯೋಜನೆಯನ್ನು ಎಲ್ಲಾ ಎಎನ್‌ಟಿಎಫ್ ಮುಖ್ಯಸ್ಥರು ಜಿಲ್ಲಾಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಮತ್ತು ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಮನ್ವಯ ಸಾಧಿಸಿ ಇದನ್ನು ಪ್ರೋತ್ಸಾಹಿಸಬೇಕೆಂದು ಆಗ್ರಹಿಸಿದರು.

ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಪರಾರಿಯಾದವರನ್ನು ಗಡೀಪಾರು ಮಾಡುವ ಮತ್ತು ಹಸ್ತಾಂತರಿಸುವ ಮಹತ್ವದ ಕುರಿತು ಒತ್ತಿ ಹೇಳಿದರು. ವಿದೇಶಗಳಿಂದ ಮಾದಕವಸ್ತು ವ್ಯಾಪಾರವನ್ನು ನಡೆಸುತ್ತಿರುವವರನ್ನು ಭಾರತೀಯ ಕಾನೂನಿನ ವ್ಯಾಪ್ತಿಗೆ ತರುವ ಸಮಯ ಸನ್ನಿಹಿತವಾಗಿದೆ ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ ಕೇಂದ್ರ ತನಿಖಾ ದಳ (ಸಿಬಿಐ)ದ ಅಮೋಘ ಸಾಧನೆಯನ್ನು ಶ್ಲಾಘಿಸಿದ ಶ್ರೀ ಶಾ, ಮಾದಕವಸ್ತುಗಳಿಗೆ ಮಾತ್ರವಲ್ಲದೆ ಭಯೋತ್ಪಾದನೆ ಮತ್ತು ಗ್ಯಾಂಗ್-ಸಂಬಂಧಿತ ಅಪರಾಧಗಳಿಗೂ ಪರಿಣಾಮಕಾರಿಯಾದ ಹಸ್ತಾಂತರ ವ್ಯವಸ್ಥೆಯನ್ನು ರೂಪಿಸಲು ಸಿಬಿಐ ನಿರ್ದೇಶಕರೊಂದಿಗೆ ಸಹಯೋಗ ಹೊಂದುವಂತೆ ಎಎನ್‌ಟಿಎಫ್ ಮುಖ್ಯಸ್ಥರನ್ನು ಆಗ್ರಹಿಸಿದರು. ಅಪರಾಧಿ ಹಸ್ತಾಂತರವು ಎಷ್ಟು ನಿರ್ಣಾಯಕವಾಗಿದೆಯೋ, ಗಡೀಪಾರು ಮಾಡಲು ಪ್ರಾಯೋಗಿಕ ವಿಧಾನವು ಅಷ್ಟೇ ಮುಖ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು. ಅಪರಾಧಿಗಳನ್ನು ಹಸ್ತಾಂತರ ಮಾಡುವ ಪ್ರಕ್ರಿಯೆಯಲ್ಲಿ ಸುಗಮವಾದ ವಿಧಾನವನ್ನು ಅನುಸರಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು. ಮಾದಕ ವಸ್ತುಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿರುವ ವಿದೇಶಿ ಅಪರಾಧಿಗಳು ಹಾಗೂ ಪರಾರಿಯಾಗಿರುವವರನ್ನು ಹಿಂತಿರುಗಿಸಲು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB), ಸಿಬಿಐ ಹಾಗೂ ರಾಜ್ಯ ಪೊಲೀಸರ  ಸಂಯುಕ್ತ ವ್ಯವಸ್ಥೆಯ ಅಗತ್ಯತೆಯನ್ನು ಅವರು ಒತ್ತಿ ಹೇಳಿದರು.

ಮುಂಬರುವ ದಿನಗಳಲ್ಲಿ ಸಂಶ್ಲೇಷಿತ ಮಾದಕ ದ್ರವ್ಯಗಳು ಮತ್ತು ಅವುಗಳ ಪ್ರಯೋಗಾಲಯಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಗೃಹ ಸಚಿವರು ಎಚ್ಚರಿಸಿದರು. ಪ್ರತಿ ರಾಜ್ಯದ ಎಎನ್‌ಟಿಎಫ್ ಮುಖ್ಯಸ್ಥರು ಜಾಗರೂಕರಾಗಿರಬೇಕು, ಅಂತಹ ಪ್ರಯೋಗಾಲಯಗಳು ಅಥವಾ ಸಂಶ್ಲೇಷಿತ ಮಾದಕ ದ್ರವ್ಯಗಳನ್ನು ಗುರುತಿಸಬೇಕು ಮತ್ತು ನಾಶಪಡಿಸಬೇಕು ಎಂದು ಅವರು ಆಗ್ರಹಿಸಿದರು. ಕಳೆದ ವರ್ಷದಲ್ಲಿ ಈ ಕ್ಷೇತ್ರದಲ್ಲಾದ ಗಮನಾರ್ಹ ಪ್ರಗತಿಯನ್ನು ಪರಿಗಣಿಸಿದ ಶ್ರೀ ಶಾ ಅಂತಹ ಪ್ರಯೋಗಾಲಯಗಳು ಮತ್ತು ಮಾದಕ ದ್ರವ್ಯ ತಯಾರಿಯನ್ನು ಸಂಪೂರ್ಣವಾಗಿ ತಡೆಯುವ ಅಗತ್ಯತೆಯ ಕುರಿತು ಒತ್ತಿ ಹೇಳಿದರು. ಮಾದಕ ದ್ರವ್ಯ ಲಭ್ಯತೆಯನ್ನು ನಿರ್ಮೂಲನೆಗೊಳಿಸಿದಾಗ ಮಾತ್ರ ಮಾದಕವಸ್ತು ಬಳಕೆದಾರರು ವೈದ್ಯಕೀಯ ಚಿಕಿತ್ಸೆಗಾಗಿ ಮುಂದೆ ಬರುತ್ತಾರೆ ಎಂದು ಅವರು ಹೇಳಿದರು.

ದೇಶಾದ್ಯಂತ 11 ಸ್ಥಳಗಳಲ್ಲಿ ಸುಮಾರು ₹4,800 ಕೋಟಿ ಮೌಲ್ಯದ ಸುಮಾರು 1,37,917 ಕಿಲೋಗ್ರಾಂಗಳಷ್ಟು ಮಾದಕ ದ್ರವ್ಯ ನಾಶಪಡಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಮಾಹಿತಿ ನೀಡಿದರು. ಪೊಲೀಸ್ ವಶದಲ್ಲಿರುವ ಮಾದಕ ದ್ರವ್ಯ ಅಪಾಯಕ್ಕೆಡೆ ಮಾಡಿಕೊಡುವುದರಿಂದ, ಪ್ರತಿ ರಾಜ್ಯದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ವಶಪಡಿಸಿಕೊಂಡ ಮಾದಕ ದ್ರವ್ಯ ನಾಶಮಾಡುವ ವೈಜ್ಞಾನಿಕ ಪದ್ಧತಿಯನ್ನು ಜಾರಿಗೆ ತರುವಂತೆ ಅವರು ಪ್ರತಿಪಾದಿಸಿದರು. ಮಾದಕವಸ್ತು ಸಮಸ್ಯೆಯನ್ನು ಪರಿಹರಿಸಲು ಮೂಲದಿಂದ ಕೊನೆವರೆಗೆ ಮತ್ತು ಅಂತ್ಯದಿಂದ ಆರಂಭದವರೆಗೆ ಎರಡೂ ವಿಧಾನಗಳು ಅತ್ಯಗತ್ಯ ಎಂದು ಶ್ರೀ ಶಾ ಒತ್ತಿ ಹೇಳಿದರು. ಅಂಕಿಅಂಶಗಳನ್ನು ರಚಿಸುವುದು ಗುರಿಯಲ್ಲ, ಆದರೆ ಅಂತಹ ಅಂಕಿಅಂಶಗಳು ಅಗತ್ಯತೆಯಿಂದ ಮುಕ್ತವಾದ ಭಾರತವನ್ನು ನಿರ್ಮಿಸುವುದು ಗುರಿ ಎಂದು ಅವರು ಸ್ಪಷ್ಟಪಡಿಸಿದರು. ಮೂಲದಿಂದ ಕೊನೆವರೆಗೆ ಮತ್ತು ಅಂತ್ಯದಿಂದ ಆರಂಭದವರೆಗೆ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಮಾತ್ರ ಇದು ಸಾಧ್ಯ ಎಂದು ಅವರು ಹೇಳಿದರು.

ಸಾಮಾನ್ಯ ರೂಪುರೇಷೆ ಮತ್ತು ಕಾರ್ಯಾಚರಣೆಯ ಏಕರೂಪತೆ ಬಹಳ ಮುಖ್ಯ ಎಂದು ಶ್ರೀ ಅಮಿತ್ ಶಾ ಹೇಳಿದರು. ಉತ್ತಮ ಅಭ್ಯಾಸಗಳ ವಿನಿಮಯ ಮತ್ತು ಅವುಗಳ ಮುಕ್ತ ಸ್ವೀಕೃತಿಯ ಮೂಲಕ ಮಾತ್ರ  ಆಯಾ ರಾಜ್ಯಕ್ಕೆ ಸ್ಥಳೀಯ ಪರಿಸ್ಥಿತಿಗಳಿಗೆ ಸರಿಹೊಂದುವ -ನಿರ್ದಿಷ್ಟ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು (SOP ಗಳು) ಅಭಿವೃದ್ಧಿಪಡಿಸಬಹುದು - ರಾಷ್ಟ್ರೀಯ SOP ಯನ್ನು ಅವುಗಳ ಒಂದು ಭಾಗವಾಗಿರುತ್ತದೆ. ಅಂತಹ ಕಾರ್ಯವಿಧಾನವನ್ನು ಜಾರಿಗೆ ತರದೆ ಹೋದಲ್ಲಿ, ನಾವು ಈ ಹೋರಾಟದಲ್ಲಿ ಬಹಳ ಹಿನ್ನಡೆ ಅನುಭವಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಪ್ರತಿಯೊಂದು ಪ್ರಮುಖ ಮಾದಕವಸ್ತು ಪ್ರಕರಣದಲ್ಲಿ, ಕನಿಷ್ಠ ನಾವು ಸಂಪೂರ್ಣ ಜಾಲವನ್ನು ಗುರುತಿಸಲು ರಾಷ್ಟ್ರೀಯ ಗುಪ್ತಚರ ಗ್ರಿಡ್ (NATGRID) ಅನ್ನು ಬಳಸಲು ಪ್ರಯತ್ನಿಸಬೇಕು ಎಂದು ಶ್ರೀ ಶಾ ಹೇಳಿದರು; ಇದು ನಮ್ಮ ಪ್ರಕ್ರಿಯೆಗೆ ಬಲ ನೀಡುವುದಲ್ಲದೆ, ಇಡೀ ಜಾಲವನ್ನು ಯಶಸ್ವಿಯಾಗಿ ನಾಶ ಮಾಡಲು ನಮಗೆ ಅನುವು ಮಾಡಿಕೊಡುತ್ತದೆ. ಮಾದಕವಸ್ತುಗಳ ವಿರುದ್ಧದ ಹೋರಾಟದಲ್ಲಿ ರಾಜ್ಯಗಳಿಗೆ ಸಹಾಯ ಮಾಡಲು ಮೋದಿಯವರ  ಸರ್ಕಾರ ಪ್ರತಿ ಅವಕಾಶವನ್ನು ಬಳಸಿಕೊಳ್ಳುತ್ತಿದೆ ಎಂದು ಗೃಹ ಸಚಿವರು ಹೇಳಿದರು. ತನಿಖೆಯನ್ನು ಹೇಗೆ ನಡೆಸಲಾಯಿತು ಮತ್ತು ಪ್ರಕರಣವನ್ನು ಗುರುತಿಸಲು ಜಿಲ್ಲಾ ಪೊಲೀಸರು ಯಾವ ಪ್ರಯತ್ನಗಳನ್ನು ಮಾಡಿದರು ಎಂಬುದರ ಕುರಿತು ವಿವರಗಳನ್ನು ಒಳಗೊಂಡಿರುವ ಮಾದಕವಸ್ತು ವಿರೋಧಿ ಕ್ರಿಯಾ ಪರಿಶೀಲನಾ ಪಟ್ಟಿಯನ್ನು ಸಿದ್ಧಪಡಿಸುವಂತೆ ಅವರು ಎಲ್ಲಾ ANTF ಮುಖ್ಯಸ್ಥರನ್ನು ಆಗ್ರಹಿಸಿದರು. ಪ್ರತಿ ಮೂರು ತಿಂಗಳಿಗೊಮ್ಮೆ ಈ ಪರಿಶೀಲನಾಪಟ್ಟಿಯನ್ನು ಪರಿಶೀಲಿಸುವುದರಿಂದ ಹೋರಾಟವು ಮೂಲ ಹಂತಕ್ಕೆ ತಲುಪುತ್ತದೆ ಎಂದು ಅವರು ಹೇಳಿದರು.

ಪ್ರತಿ ರಾಜ್ಯವು ಹಣಕಾಸಿನ ಹರಿವನ್ನು ಅನುಸರಿಸಲು, ಹವಾಲಾ ಸಂಪರ್ಕಗಳನ್ನು ಪತ್ತೆಹಚ್ಚಲು, ಕ್ರಿಪ್ಟೋ ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಸೈಬರ್ ತಪಾಸಣೆಗಳನ್ನು ನಡೆಸಲು ವಿಶೇಷ ತಂಡವನ್ನು ರಚಿಸಬೇಕು - ಆಗ ಮಾತ್ರ ನಾವು ಈ ಹೋರಾಟವನ್ನು ನಿರ್ಣಾಯಕ ಮಟ್ಟದವರೆಗೆ ಹೋರಾಡಬಹುದು ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. ಪ್ರತಿ ರಾಜ್ಯವು ಮಾದಕವಸ್ತು-ಕೇಂದ್ರಿತ ವಿಧಿವಿಜ್ಞಾನ ಪ್ರಯೋಗಾಲಯದ ಘಟಕವನ್ನು ಹೊಂದಿರಬೇಕು, ಇದರಿಂದ ಅಪರಾಧಿಗಳು ಸುಲಭವಾಗಿ ಜಾಮೀನು ಪಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಎಲ್ಲಾ ಅರ್ಹ ಪ್ರಕರಣಗಳಲ್ಲಿ PITNDPS ಅನ್ನು ಅನ್ವಯಿಸಲು ಯಾವುದೇ ಮುಜುಗರ ಇರಬಾರದು ಮತ್ತು NCB ಆನ್‌ಲೈನ್ ಪೋರ್ಟಲ್‌ನಲ್ಲಿ ಪಟ್ಟಿ ಮಾಡಲಾದ ಪ್ರಕರಣಗಳನ್ನು ಅಧ್ಯಯನ ಮಾಡುವ ಮೂಲಕ ಪ್ರತಿ ರಾಜ್ಯದಲ್ಲಿ ಕಾನೂನು ಪ್ರಕ್ರಿಯೆ ವ್ಯವಸ್ಥೆಗಳನ್ನು ಬಲಪಡಿಸಬೇಕು ಎಂದು ಶ್ರೀ ಶಾ ಹೇಳಿದರು.

ರಾಜ್ಯಮಟ್ಟದ NCORD ಸಭೆಗಳ ವರದಿಯನ್ನು ಪೋರ್ಟಲ್‌ನಲ್ಲಿ ತಿದ್ದುಪಡಿ ಮಾಡಬೇಕಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ನಾವು MANAS ಸಹಾಯವಾಣಿ ಸಂಖ್ಯೆ 1933 ಅನ್ನು ಹೆಚ್ಚು ಬಳಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಮಾದಕ ದ್ರವ್ಯ ಪೂರೈಕೆ ಸರಪಳಿಯನ್ನು ತುಂಡರಿಸಲು ನಾವು ನಿರ್ದಾಕ್ಷಿಣ್ಯವಾದ ವಿಧಾನವನ್ನು ಅಳವಡಿಸಿಕೊಳ್ಳಬೇಕು, ಬೇಡಿಕೆ ಕಡಿತಕ್ಕೆ ಕಾರ್ಯತಂತ್ರದ ವಿಧಾನವನ್ನು ಅಳವಡಿಸಿಕೊಳ್ಳಬೇಕು ಮತ್ತು ಹಾನಿ ಕಡಿತದಲ್ಲಿ ಮಾನವೀಯ ವಿಧಾನವನ್ನು ಅನುಸರಿಸುವ ಮೂಲಕ  ಮೂರು-ಹಂತದ ಕಾರ್ಯತಂತ್ರದ ಅಡಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಶ್ರೀ ಶಾ ಅವರು ಹೇಳಿದರು.

2004 ರಿಂದ 2013 ರವರೆಗೆ ವಶಪಡಿಸಿಕೊಂಡ ಮಾದಕ ವಸ್ತುಗಳ ಪ್ರಮಾಣ 2.6 ದಶಲಕ್ಷ ಕಿಲೋಗ್ರಾಂಗಳಾಗಿದ್ದು, ಇದರ ಮೌಲ್ಯ ₹40,000 ಕೋಟಿ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. 2014 ರಿಂದ 2025 ರವರೆಗೆ ಇದು ₹1.65 ಲಕ್ಷ ಕೋಟಿ ಮೌಲ್ಯದ 1 ಕೋಟಿ ಕಿಲೋಗ್ರಾಂಗಳಿಗೆ ಏರಿಕೆಯಾಯಿತು. ಸಂಘಟಿತ ಪ್ರಯತ್ನಗಳನ್ನು ಮಾಡಿದಾಗ, ಯಶಸ್ಸು ಕಾಣಬಹುದು ಎಂದು ಅವರು ಹೇಳಿದರು. ನಾವು ಕಾರ್ಯತಂತ್ರದ ವಿಧಾನದೊಂದಿಗೆ ನಮ್ಮ ಉಪಕ್ರಮಗಳನ್ನು ವೇಗ ನೀಡಬೇಕು; ಆಗ ಮಾತ್ರ ನಾವು ಮಾದಕವಸ್ತು ಮುಕ್ತ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವತ್ತ ದಾಪುಗಾಲಿಡಬಹುದು.

2004 ಮತ್ತು 2014 ರ ಮಧ್ಯೆ ₹3.63 ಲಕ್ಷ ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಿಲೇವಾರಿ ಮಾಡಲಾಗಿದೆ ಆದರೆ 2014 ಮತ್ತು 2025 ರ ನಡುವೆ ₹35.21 ಲಕ್ಷ ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಶ್ರೀ ಅಮಿತಾ ಶಾ ಹೇಳಿದರು. ವಾಸ್ತವವಾಗಿ 2004 ಮತ್ತು 2014 ರ ಮಧ್ಯೆ ನಾಶವಾದ ಮಾದಕ ವಸ್ತುಗಳ ಮೌಲ್ಯ ₹8,150 ಕೋಟಿಗಳಷ್ಟಿದ್ದರೆ, 2014 ರಿಂದ 2025 ರ ಅವಧಿಯಲ್ಲಿ ಅದು ₹71,600 ಕೋಟಿಗಳಷ್ಟು ಏರಿಕೆಯಾಗಿದೆ. 2020 ರಲ್ಲಿ, ಮಾದಕ ದ್ರವ್ಯ ಕೃಷಿಗೆ ಬಳಸಲಾಗುತ್ತಿದ್ದ 10,700 ಎಕರೆ ಭೂಮಿಯನ್ನು ನಾಶಪಡಿಸಲಾಗಿದೆ; 2021 ರಲ್ಲಿ 11,000 ಎಕರೆ; 2022 ರಲ್ಲಿ 13,000 ಎಕರೆ; ಮತ್ತು 2023 ರಲ್ಲಿ 31,761 ಎಕರೆಗಳನ್ನು ನಾಶಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಅದೇ ರೀತಿ, ಗಾಂಜಾ ಕೃಷಿಗೆ ಬಳಸಲಾಗುತ್ತಿದ್ದ ಭೂಮಿಯ ನಾಶವು 21,000 ಎಕರೆಗಳಿಂದ 34,000 ಎಕರೆಗಳಿಗೆ ಏರಿದೆ. 2004 ರಿಂದ 2014 ರ ಅವಧಿಯಲ್ಲಿ 1.73 ಲಕ್ಷ ಜನರನ್ನು ಬಂಧಿಸಲಾಗಿದೆ ಮತ್ತು 2014 ರಿಂದ 2025 ರ ಮಧ್ಯೆ 7.61 ಲಕ್ಷ ಜನರನ್ನು ಬಂಧಿಸಲಾಗಿದೆ ಎಂದು ಶ್ರೀ ಶಾ ಹೇಳಿದರು. ಸಮಸ್ಯೆಯ ಗಂಭೀರತೆಗೆ ಹೋಲಿಸಿದರೆ, ಈ ಸಾಧನೆ ಬಹಳ ಚಿಕ್ಕದು. ಯಶಸ್ಸು ಸಾಧಿಸಲು ಹಲವು ಪಟ್ಟು ಹೆಚ್ಚು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.

 

*****


(Release ID: 2167418) Visitor Counter : 2