ಲೋಕಸಭಾ ಸಚಿವಾಲಯ
azadi ka amrit mahotsav

ಸೆಪ್ಟೆಂಬರ್‌ 11 ರಂದು ಬೆಂಗಳೂರಿನಲ್ಲಿ 11ನೇ ಸಿ.ಪಿ.ಎ ಭಾರತ ವಲಯ ಸಮ್ಮೇಳನವನ್ನು ಉದ್ಘಾಟಿಸಲಿರುವ ಲೋಕಸಭಾ ಸ್ಪೀಕರ್‌


ಕರ್ನಾಟಕದ ರಾಜ್ಯಪಾಲರು, ಕರ್ನಾಟಕದ ಮುಖ್ಯಮಂತ್ರಿ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ

ಸಮ್ಮೇಳನದ ಕಾರ್ಯಸೂಚಿ ‘‘ಶಾಸಕಾಂಗದ ಸದನಗಳಲ್ಲಿ ಚರ್ಚೆಗಳು ಮತ್ತು ಮಾತುಕತೆಗಳು: ಜನರ ನಂಬಿಕೆಯನ್ನು ನಿರ್ಮಿಸುವುದು, ಜನರ ಆಕಾಂಕ್ಷೆಗಳನ್ನು ಪೂರೈಸುವುದು” ಎಂಬುದಾಗಿದೆ

Posted On: 10 SEP 2025 5:08PM by PIB Bengaluru

ನವದೆಹಲಿ, 2025ರ ಸೆಪ್ಟೆಂಬರ್‌ 10 : ಸಿ.ಪಿ.ಎ ಭಾರತ ವಲಯ ಅಧ್ಯಕ್ಷರಾಗಿರುವ ಲೋಕಸಭಾ ಸ್ಪೀಕರ್‌ ಶ್ರೀ ಓಂ ಬಿರ್ಲಾ ಅವರು 2025ರ ಸೆಪ್ಟೆಂಬರ್‌ 11 ರಂದು ಬೆಂಗಳೂರಿನ ವಿಧಾನಸೌಧದಲ್ಲಿ ಕಾಮನ್‌ವೆಲ್ತ್‌ ಸಂಸದೀಯ ಸಂಘ (ಸಿ.ಪಿ.ಎ) ಭಾರತ ಪ್ರದೇಶದ 11ನೇ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಈ ಸಮ್ಮೇಳನದ ಕಾರ್ಯಸೂಚಿಯ ವಿಷಯವೆಂದರೆ ‘‘ಶಾಸಕಾಂಗದ ಸದನಗಳಲ್ಲಿ ಚರ್ಚೆಗಳು ಮತ್ತು ಮಾತುಕತೆಗಳು: ಜನರ ನಂಬಿಕೆ ಮೂಡಿಸುವುದು, ಜನರ ಆಕಾಂಕ್ಷೆಗಳನ್ನು ಪೂರೈಸುವುದು” ಎಂಬುದಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ರಾಜ್ಯಸಭೆಯ ಉಪಸಭಾಪತಿ ಶ್ರೀ ಹರಿವಂಶ್‌ ಮತ್ತು ಇತರ ಗಣ್ಯರು ಗಣ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕರ್ನಾಟಕ ವಿಧಾನಸಭೆಯ ಸ್ಪೀಕರ್‌ ಶ್ರೀ. ಯು.ಟಿ. ಖಾದರ್‌ ಫರೀದ್‌ ಸ್ವಾಗತ ಭಾಷಣ ಮಾಡಲಿದ್ದು, ಸಿ.ಪಿ.ಎ ಕರ್ನಾಟಕ ಶಾಖೆಯ ಕಾರ್ಯದರ್ಶಿ ವಂದನಾರ್ಪಣೆ ಮಾಡಲಿದ್ದಾರೆ.

ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗದ ಅಧ್ಯಕ್ಷರು / ಸ್ಪೀಕರ್‌ಗಳನ್ನು ಒಳಗೊಂಡ ಪೀಠಾಧ್ಯಕ್ಷರು ಭಾಗವಹಿಸಲಿದ್ದಾರೆ.

ಕರ್ನಾಟಕದ ರಾಜ್ಯಪಾಲ ಶ್ರೀ ಥಾವರ್‌ ಚಂದ್‌ ಗೆಹ್ಲೋಟ್‌ ಮತ್ತು ಲೋಕಸಭಾ ಸ್ಪೀಕರ್‌ ಶ್ರೀ ಓಂ ಬಿರ್ಲಾ ಅವರು 2025ರ ಡಿಸೆಂಬರ್‌ 13 ರಂದು ಸಮಾರೋಪ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಮೂರು ದಿನಗಳ ಕಾರ್ಯಕ್ರಮವನ್ನು (ಸೆಪ್ಟೆಂಬರ್‌ 11-13) ಕರ್ನಾಟಕ ವಿಧಾನಸಭೆಯು ಸಿ.ಪಿ.ಎ ಕರ್ನಾಟಕ ಶಾಖೆಯ ಆಶ್ರಯದಲ್ಲಿ ಆಯೋಜಿಸುತ್ತಿದೆ. ಈ ಸಂದರ್ಭದಲ್ಲಿ ಶ್ರೀ ಬಿರ್ಲಾ ಅವರು ವಸ್ತುಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ ಮತ್ತು ಸ್ಮರಣಿಕೆಯನ್ನು ಬಿಡುಗಡೆ ಮಾಡಲಿದ್ದಾರೆ.

ಸಿ.ಪಿ.ಎ ಪ್ರಧಾನ ಕಾರ್ಯದರ್ಶಿ ಮತ್ತು ವಿದೇಶಿ ಸಂಸತ್ತಿನ ಸಭಾಧ್ಯಕ್ಷರನ್ನೂ ಸಮ್ಮೇಳನಕ್ಕೆ ಆಹ್ವಾನಿಸಲಾಗಿದೆ.

ಸಮ್ಮೇಳನದ ವೇಳೆ, ಸಭಾಧ್ಯಕ್ಷರು, ಉಪ ಸಭಾಧ್ಯಕ್ಷರು ಮತ್ತು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗಗಳ ಕಾರ್ಯದರ್ಶಿಗಳು ಸೇರಿದಂತೆ ಪ್ರತಿನಿಧಿಗಳು ಸಂಸದೀಯ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ಸಮಗ್ರ ಅಧಿವೇಶನಗಳು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು, ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಮತ್ತು ಭಾರತ ಪ್ರದೇಶದಾದ್ಯಂತ ಸಂಸದೀಯ ಸಂಸ್ಥೆಗಳನ್ನು ಬಲಪಡಿಸಲು ವೇದಿಕೆಯನ್ನು ಒದಗಿಸುತ್ತವೆ.

****


(Release ID: 2165393) Visitor Counter : 2
Read this release in: English , Urdu , Bengali , Tamil