ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಭಾರತದ ಸಮುದ್ರಾಹಾರ ರಫ್ತು ವಲಯವು ಪ್ರಮುಖ ಉತ್ತೇಜನವನ್ನು ಪಡೆಯುತ್ತಿದೆ: ಯುರೋಪಿಯನ್ ಒಕ್ಕೂಟವು 102 ಹೊಸ ಮೀನುಗಾರಿಕೆ ಸ್ಥಾಪನೆಗಳನ್ನು ಪಟ್ಟಿ ಮಾಡಿದೆ
Posted On:
09 SEP 2025 5:48PM by PIB Bengaluru
ಭಾರತದ ಸಮುದ್ರಾಹಾರ ಉದ್ಯಮಕ್ಕೆ ಮಹತ್ವದ ಬೆಳವಣಿಗೆಯಲ್ಲಿ, ಯುರೋಪಿಯನ್ ಒಕ್ಕೂಟ (ಇ.ಯು) ಭಾರತದಿಂದ ಇ.ಯು. ಸದಸ್ಯ ರಾಷ್ಟ್ರಗಳಿಗೆ ರಫ್ತು ಮಾಡಲು 102 ಹೊಸ ಭಾರತೀಯ ಮೀನುಗಾರಿಕೆ ಸ್ಥಾಪನೆಗಳನ್ನು ಪಟ್ಟಿ ಮಾಡಿದೆ. ಈ ಮಹತ್ವದ ವಿಸ್ತರಣೆಯು ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಭರವಸೆ ವ್ಯವಸ್ಥೆಗಳಲ್ಲಿ ಬೆಳೆಯುತ್ತಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಮತ್ತು ಭಾರತೀಯ ಸಮುದ್ರಾಹಾರ ಉತ್ಪನ್ನಗಳಿಗೆ ವಿಶೇಷವಾಗಿ ಜಲಚರ ಸಾಕಣೆ ಸೀಗಡಿಗಳು ಮತ್ತು ಸೆಫಲೋಪಾಡ್ ಗಳಿಗೆ (ಸ್ಕ್ವಿಡ್, ಕಟಲ್ ಮೀನು ಮತ್ತು ಆಕ್ಟೋಪಸ್) ನೂತನ ಐರೋಪ್ಯ ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸುವಲ್ಲಿ ಒಂದು ಪ್ರಮುಖ ಹೆಜ್ಜೆಯನ್ನು ಇದು ಸೂಚಿಸುತ್ತದೆ.
ಇಂದು ಇ.ಯು. ಮತ್ತು ನವದೆಹಲಿಯಲ್ಲಿ ನಡೆದ ಸಭೆಗಳ ಸರಣಿಯಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಮತ್ತು ವಾಣಿಜ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು, ಇದರ ಪರಿಣಾಮವಾಗಿ ರಫ್ತು ಪರಿಶೀಲನಾ ಮಂಡಳಿ ಜಾರಿಗೆ ತಂದ ಭಾರತೀಯ ದೃಢವಾದ ಅಧಿಕೃತ ನಿಯಂತ್ರಣ ಕಾರ್ಯವಿಧಾನಗಳ ಮೇಲೆ ವಿಶ್ವಾಸ ಮೂಡಿತು. ಭಾರತೀಯ ಸಮುದ್ರಾಹಾರ ರಫ್ತುಗಳು ಕಠಿಣ ಅಂತರರಾಷ್ಟ್ರೀಯ ಮಾನದಂಡಗಳನ್ನು ಪೂರೈಸುತ್ತವೆ, ವಿಶೇಷವಾಗಿ ಇ.ಯು. ನಿಗದಿಪಡಿಸಿದ ಮಾನದಂಡ ಪೂರೈಸುತ್ತವೆ.
ಪ್ರಮುಖ ಮುಖ್ಯಾಂಶಗಳು:
- 2025ರಲ್ಲಿ, ಮೀನುಗಾರಿಕೆ ರಫ್ತಿಗಾಗಿ ಇ.ಯು.-ಅನುಮೋದಿತ ಪಟ್ಟಿಗೆ 102 ಹೊಸ ಸ್ಥಾಪನೆಗಳನ್ನು ಸೇರಿಸಲಾಗಿದೆ.
- ಆಹಾರ ಸುರಕ್ಷತೆ, ಪತ್ತೆಹಚ್ಚುವಿಕೆ ಮತ್ತು ಇ.ಯು. ನಿಯಮಗಳ ಅನುಸರಣೆಗೆ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
- ಉತ್ತಮ ಗುಣಮಟ್ಟದ ಸಮುದ್ರಾಹಾರದ ವಿಶ್ವಾಸಾರ್ಹ ಪೂರೈಕೆದಾರರಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ.
- ರಫ್ತು ಪ್ರಮಾಣವನ್ನು ಹೆಚ್ಚಿಸಲು, ಉದ್ಯೋಗ ಸೃಷ್ಟಿಸಲು ಮತ್ತು ವಿದೇಶಿ ವಿನಿಮಯ ಗಳಿಕೆಯನ್ನು ಹೆಚ್ಚಿಸಲು ನಿರೀಕ್ಷಿಸಲಾಗಿದೆ.
ಈ ಬೆಳವಣಿಗೆಯು ಜಾಗತಿಕವಾಗಿ ಅತ್ಯಂತ ಲಾಭದಾಯಕ ಮತ್ತು ಗುಣಮಟ್ಟ-ಸೂಕ್ಷ್ಮ ಮಾರುಕಟ್ಟೆಗಳಲ್ಲಿ ಒಂದಾದ ಯುರೋಪಿಯನ್ ಒಕ್ಕೂಟಕ್ಕೆ ಭಾರತದ ಸಮುದ್ರಾಹಾರ ರಫ್ತುಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಹೊಸ ಸ್ಥಾಪನೆಗಳ ಸೇರ್ಪಡೆಯೊಂದಿಗೆ, ವಿವಿಧ ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತಗಳಾದ್ಯಂತ ರಫ್ತುದಾರರು ಈಗ ಇ.ಯು. ಬೇಡಿಕೆಯನ್ನು ಬಳಸಿಕೊಳ್ಳಲು, ತಮ್ಮ ಉತ್ಪನ್ನ ಕೊಡುಗೆಗಳನ್ನು ವೈವಿಧ್ಯಗೊಳಿಸಲು ಮತ್ತು ವ್ಯಾಪಾರ ಸಂಬಂಧಗಳನ್ನು ಬಲಪಡಿಸಲು ಹೆಚ್ಚಿನ ಅವಕಾಶಗಳನ್ನು ಹೊಂದಿಸಿಕೊಳ್ಳಲಾಗುವುದು.
ನೀತಿ ಸುಗಮಗೊಳಿಸುವಿಕೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾಮರ್ಥ್ಯ ನಿರ್ಮಾಣದ ಮೂಲಕ ರಫ್ತುದಾರರನ್ನು ಬೆಂಬಲಿಸುವ ತನ್ನ ಬದ್ಧತೆಯನ್ನು ವಾಣಿಜ್ಯ ಇಲಾಖೆ ಪುನರುಚ್ಚರಿಸಿದೆ. ಭಾರತೀಯ ಸಮುದ್ರಾಹಾರ ಉತ್ಪನ್ನಗಳು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಬದ್ಧವಾಗಿವೆ ಎಂದು ಖಚಿತಪಡಿಸಿಕೊಳ್ಳುವಲ್ಲಿ ಕೇಂದ್ರ ಸರ್ಕಾರ ಇಲಾಖೆಗಳು ಪ್ರಮುಖ ಪಾತ್ರವನ್ನು ವಹಿಸುತ್ತಿವೆ, ಇದರಿಂದಾಗಿ ಸಾರ್ವಜನಿಕ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಭಾರತದ ಜಾಗತಿಕ ಖ್ಯಾತಿಯನ್ನು ಹೆಚ್ಚಿಸುತ್ತದೆ.
ಇದು ಎರಡೂ ಕಡೆಯವರು ಪರಸ್ಪರರ ಉತ್ಪನ್ನ ಮಾನದಂಡಗಳಲ್ಲಿ ಹೊಂದಿರುವ ಆಶಾವಾದ ಮತ್ತು ಹೆಚ್ಚಿನ ವಿಶ್ವಾಸದ ಒಟ್ಟಾರೆ ವಾತಾವರಣಕ್ಕೆ ಅನುಗುಣವಾಗಿದೆ.
*****
(Release ID: 2165125)
Visitor Counter : 2