ಭಾರೀ ಕೈಗಾರಿಕೆಗಳ ಸಚಿವಾಲಯ
azadi ka amrit mahotsav

ಹೊಸ ಜಿ ಎಸ್ ಟಿ ದರಗಳು ಮತ್ತು ಬೃಹತ್ ಕೈಗಾರಿಕೆಗಳ ಮೇಲೆ ಅವುಗಳ ಪರಿಣಾಮಗಳು 

Posted On: 08 SEP 2025 1:56PM by PIB Bengaluru

ಹೊಸ ಜಿಎಸ್‌ಟಿ ದರಗಳು ಮತ್ತು ಸ್ಲ್ಯಾಬ್‌ಗಳು ಬೃಹತ್ ಕೈಗಾರಿಕೆಗಳಿಗೆ ಸಂಬಂಧಿಸಿದವುಗಳಾಗಿದ್ದು, ಅವುಗಳ ಹಲವು ವಸ್ತುಗಳ ಮೇಲೆ ವ್ಯಾಪಕ ಪರಿಣಾಮ ಬೀರುತ್ತವೆ. ಅದರ ವಿವರವಾದ ಸ್ಪಷ್ಟೀಕರಣಗಳು ಈ ಕೆಳಗಿನಂತಿವೆ:

ಆಟೋಮೊಬೈಲ್ಸ್‌ 

  • ಆಟೋಮೊಬೈಲ್ ವಲಯಕ್ಕೆ ದರ ಕಡಿತವು ವಿವಿಧ ವಿಭಾಗಗಳಲ್ಲಿದೆ. ಅದರಲ್ಲಿ ಬೈಕ್‌ಗಳು (350 ಸಿಸಿ ವರೆಗೆ ಇದರಲ್ಲಿ 350 ಸಿಸಿ ಬೈಕ್‌ಗಳು ಸೇರಿವೆ), ಬಸ್‌ಗಳು, ಸಣ್ಣ ಕಾರುಗಳು, ಮಧ್ಯಮ ಮತ್ತು ಐಷಾರಾಮಿ ಕಾರುಗಳು, ಟ್ರ್ಯಾಕ್ಟರ್‌ಗಳು (<1800 ಸಿಸಿ), ಇತ್ಯಾದಿ ಸೇರಿವೆ.
  • ಆಟೋ ಬಿಡಿಭಾಗಗಳ ಮೇಲಿನ ದರಗಳನ್ನು ಸಹ ತಗ್ಗಿಸಲಾಗುತ್ತಿದೆ.
  • ಕಡಿಮೆ ಜಿಎಸ್‌ಟಿ ಬೇಡಿಕೆಯನ್ನು ಹೆಚ್ಚಿಸುತ್ತದೆ, ಆಟೋಮೊಬೈಲ್ ತಯಾರಕರು ಮತ್ತು ದೊಡ್ಡ ಪೂರಕ ಉದ್ಯಮಕ್ಕೆ (ಟೈರ್‌ಗಳು, ಬ್ಯಾಟರಿಗಳು, ಘಟಕಗಳು, ಗಾಜು, ಉಕ್ಕು, ಪ್ಲಾಸ್ಟಿಕ್‌ಗಳು, ಎಲೆಕ್ಟ್ರಾನಿಕ್ಸ್, ಇತ್ಯಾದಿ) ಸಹಾಯ ಮಾಡುತ್ತದೆ.
  • ವಾಹನಗಳ ಮಾರಾಟದಲ್ಲಿನ ಏರಿಕೆಯು ಈ ಘಟಕಗಳಿಗೆ ಬೇಡಿಕೆಗಳನ್ನು ಹೆಚ್ಚಿಸುತ್ತದೆ, ಈ ಪೂರೈಕೆ ಸರಣಿಯ ದೊಡ್ಡ ಭಾಗವಾಗಿರುವ ಎಂಎಸ್‌ಎಂಇಗಳ ಮೇಲೆ ಹಲವು ಪರಿಣಾಮವನ್ನು ಉಂಟುಮಾಡುತ್ತದೆ.
  • ಇಡೀ ಆಟೋ ಉದ್ಯಮವು ಉತ್ಪಾದನೆ, ಮಾರಾಟ, ಹಣಕಾಸು, ನಿರ್ವಹಣೆ ಇತ್ಯಾದಿಗಳಲ್ಲಿ 3.5 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ನೇರವಾಗಿ ಮತ್ತು ಪರೋಕ್ಷವಾಗಿ ಬೆಂಬಲಿಸುತ್ತದೆ.
  • ಬೇಡಿಕೆಯ ಹೆಚ್ಚಳವು ಎಂಎಸ್‌ಎಂಇಗಳಲ್ಲಿ ಡೀಲರ್‌ಶಿಪ್‌ಗಳು, ಸಾರಿಗೆ ಸೇವೆಗಳು, ಸರಕು ಸಾಗಾಣೆ (ಲಾಜಿಸ್ಟಿಕ್ಸ್) ಮತ್ತು ಬಿಡಿ ಭಾಗಗಳ ವಲಯದಲ್ಲಿ  ಹೊಸ ನೇಮಕಾತಿಗೆ ಕಾರಣವಾಗುತ್ತದೆ.
  • ಅಸಂಘಟಿತ ವಲಯದ ಉದ್ಯೋಗಗಳು (ಚಾಲಕರು, ಮೆಕ್ಯಾನಿಕ್‌ಗಳು, ಸಣ್ಣ ಸೇವಾ ಗ್ಯಾರೇಜ್‌ಗಳು) ಸಹ ಪ್ರಯೋಜನ ಪಡೆಯುತ್ತವೆ.
  • ವಾಹನ ಖರೀದಿಗಳು ಸಹ ಸಾಲ ಆಧಾರಿತವಾಗಿವೆ (ಎನ್ ಬಿಎಫ್ ಸಿಗಳು, ಬ್ಯಾಂಕುಗಳು, ಫಿನ್‌ಟೆಕ್ ಸಾಲದಾತರು). ಆಟೋ ಮಾರಾಟದಲ್ಲಿನ ಪುನರುಜ್ಜೀವನವು ಚಿಲ್ಲರೆ ಸಾಲದ ಬೆಳವಣಿಗೆಯನ್ನು ಬೆಂಬಲಿಸುತ್ತದೆ, ಆಸ್ತಿ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಅರೆ-ನಗರ ಭಾರತದಲ್ಲಿ ಆರ್ಥಿಕ ಸೇರ್ಪಡೆಯನ್ನು ವಿಸ್ತರಣೆ ಮಾಡುತ್ತದೆ.
  • ಏಕರೂಪದ ಜಿಎಸ್ ಟಿ ದರಗಳ ಮೂಲಕ ನೀತಿ ನಿಶ್ಚಿತತೆಯು ಆಟೋಮೊಬೈಲ್ ವಲಯದಲ್ಲಿ ಹೊಸ ಹೂಡಿಕೆಗಳನ್ನು ಉತ್ತೇಜಿಸುತ್ತದೆ. ಇದು ಮೇಕ್ ಇನ್ ಇಂಡಿಯಾ ಮತ್ತು ಉತ್ಪಾದನಾ ವಲಯವನ್ನು ಸಹ ಉತ್ತೇಜಿಸುತ್ತದೆ.
  • ಜಿ ಎಸ್ ಟಿ ದರ ಕಡಿತಗಳು ಹಳೆಯ ವಾಹನಗಳನ್ನು ಹೊಸ, ಇಂಧನ-ಸಮರ್ಥ ಮಾದರಿಗಳೊಂದಿಗೆ ಬದಲಾಯಿಸುವುದನ್ನು ಪ್ರೋತ್ಸಾಹಿಸುತ್ತದೆ, ಇದರಿಂದಾಗಿ ಸ್ವಚ್ಛ ಸಾರಿಗೆಯನ್ನು ಬೆಂಬಲಿಸುತ್ತದೆ.

ದ್ವಿ-ಚಕ್ರವಾಹನಗಳು (350ಸಿಸಿವರೆಗೆ ಬೈಕ್ ಗಳು, ಅದರಲ್ಲಿ  350ಸಿಸಿ ಬೈಕ್‌ ಗಳೂ ಸೇರಿವೆ) – (ಶೇ28 ರಿಂದ ಶೇ. 18ಕ್ಕೆ ಇಳಿಕೆ)

  • ಕಡಿಮೆ ಜಿಎಸ್‌ಟಿ ಬೈಕ್‌ಗಳ ಬೆಲೆಗಳನ್ನು ತಗ್ಗಿಸುತ್ತದೆ, ಯುವಕರು, ವೃತ್ತಿಪರರು ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳಿಗೆ ಅವುಗಳನ್ನು ಹೆಚ್ಚು ಲಭ್ಯವಾಗುವಂತೆ ಮಾಡುತ್ತದೆ.
  • ಗ್ರಾಮೀಣ ಮತ್ತು ಅರೆ-ನಗರ ಭಾರತದಲ್ಲಿ ಬೈಕ್‌ಗಳು ಪ್ರಾಥಮಿಕ ಸಾರಿಗೆ ವಿಧಾನವಾಗಿದೆ; ಅಗ್ಗದ ಬೈಕ್‌ಗಳು ರೈತರು, ಸಣ್ಣ ವ್ಯಾಪಾರಿಗಳು ಮತ್ತು ದಿನಗೂಲಿ ಮಾಡುವವರಿಗೆ ನೇರ ಪ್ರಯೋಜನ ಒದಗಿಸುತ್ತವೆ.
  • ಇದು ದ್ವಿ-ಚಕ್ರ ವಾಹನಗಳ ಸಾಲಗಳಿಗೆ ಕಡಿಮೆ ವೆಚ್ಚ ಮತ್ತು ಇಎಂಐ ತಗ್ಗಿಸುವ ಮೂಲಕ ಗಿಗ್ ಕೆಲಸಗಾರರಿಗೆ ಸಹಾಯ ಮಾಡುತ್ತದೆ ಮತ್ತು ಗಿಗ್ ಕೆಲಸಗಾರರ ಉಳಿತಾಯ ವೃದ್ಧಿಸುತ್ತದೆಂದು ನಿರೀಕ್ಷಿಸಲಾಗಿದೆ. 

ಸಣ್ಣ ಕಾರುಗಳು (ಜಿಎಸ್ ಟಿ ಶೇ.28ರಿಂದ 18ಕ್ಕೆ ಇಳಿಕೆ)

  • ಕೈಗೆಟುಕುವ ವಿಭಾಗದಲ್ಲಿ ಕಾರುಗಳು ಅಗ್ಗವಾಗುತ್ತವೆ, ಮೊದಲ ಬಾರಿಗೆ ಕಾರು ಖರೀದಿದಾರರನ್ನು ಪ್ರೋತ್ಸಾಹಿಸುತ್ತವೆ ಮತ್ತು ಕುಟಂಬಗಳ ಸಂಚಾರವನ್ನು ವಿಸ್ತರಿಸುತ್ತವೆ.
  • ಜಿಎಸ್‌ಟಿ ಇಳಿಕೆಯಾಗುವುದರಿಂದ ಸಣ್ಣ ಕಾರುಗಳು ಪ್ರಾಬಲ್ಯ ಹೊಂದಿರುವ ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ ಮಾರಾಟವನ್ನು ಉತ್ತೇಜಿತವಾಗುತ್ತದೆ.
  • ಹೆಚ್ಚಿನ ಮಾರಾಟವು ಕಾರು ಡೀಲರ್‌ಶಿಪ್‌ಗಳು, ಸೇವಾ ಜಾಲಗಳು, ಚಾಲಕರು ಮತ್ತು ಆಟೋ-ಫೈನಾನ್ಸ್ ಕಂಪನಿಗಳಿಗೆ ಪ್ರಯೋಜನವನ್ನು ನೀಡುತ್ತದೆ.
  • (<1200 cc ಉದ್ದ ಮತ್ತು 4 ಮೀಟರ್ ಮೀರದ ಪೆಟ್ರೋಲ್ ಎಂಜಿನ್ ಕಾರುಗಳು ಮತ್ತು <1500 cc ಉದ್ದ ಮತ್ತು 4 ಮೀಟರ್ ಮೀರದ ಡೀಸೆಲ್ ಕಾರುಗಳನ್ನು ಒಳಗೊಂಡಿದೆ) 

ದೊಡ್ಡ ಕಾರುಗಳು (ಯಾವುದೇ ಸೆಸ್‌ ಇಲ್ಲದೆ ಜಿಎಸ್ ಟಿಯನ್ನು ಫ್ಲಾಟ್‌ ಶೇ.40ಕ್ಕೆ ಇಳಿಕೆ)

  • ಹೆಚ್ಚುವರಿ ಸೆಸ್ ಅನ್ನು ತೆಗೆದುಹಾಕುವುದರಿಂದ ದರಗಳು ಕಡಿಮೆಯಾಗುವುದಲ್ಲದೆ, ತೆರಿಗೆ ಸರಳೀಕರಣಗೊಳ್ಳಲಿದೆ ಮತ್ತು ಊಹಿಸಬಹುದಾದಂತಾಗುತ್ತದೆ.
  • ಶೇ.40ರಷ್ಟು ತೆರಿಗೆ ವಿಧಿಸುತ್ತಿದ್ದರೂ ಸಹ ಸೆಸ್ ಇಲ್ಲದಿರುವುದು ದೊಡ್ಡ ಕಾರುಗಳ ಮೇಲಿನ ತೆರಿಗೆಯನ್ನು ಪರಿಣಾಮಕಾರಿ ತಗ್ಗಿಸುತ್ತದೆ, ಇದು ಮಹತ್ವಾಕಾಂಕ್ಷೆಯ ಖರೀದಿದಾರರಿಗೆ ತುಲನಾತ್ಮಕವಾಗಿ ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ.
  • ತೆರಿಗೆ ದರವನ್ನು ಶೇ.40ಕ್ಕೆ ತರುವುದು ಮತ್ತು ಸೆಸ್ ಅನ್ನು ತೆಗೆದುಹಾಕುವುದರಿಂದ ಈ ಕೈಗಾರಿಕೆಗಳು ಐಟಿಸಿಗೆ ಸಂಪೂರ್ಣವಾಗಿ ಅರ್ಹವಾಗಿವೆ ಎಂದು ಖಾತ್ರಿಪಡಿಸುತ್ತದೆ, ಆದರೆ ಹಿಂದೆ ಐಟಿಸಿಯನ್ನು ಶೇ.28ರವರೆಗೆ ಮಾತ್ರ ಬಳಸಬಹುದಿತ್ತು ಮತ್ತು ಸೆಸ್ ಅಂಶವಲ್ಲ. 

ಟ್ರ್ಯಾಕ್ಟರ್‌ಗಳು (<1800 ಸಿಸಿವರೆಗೆ ಶೇ.12 ರಿಂದ ಶೇ. 5ಕ್ಕೆ ಇಳಿಕೆ)

ರಸ್ತೆ ಟ್ರಾಕ್ಟರುಗಳು ಸೆಮಿ-ಟ್ರೇಲರ್‌ಗಳಿಗೆ (1800 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯವು ಶೇ.28 ರಿಂದ ಶೇ.18 ಕ್ಕೆ ಇಳಿದಿದೆ)

ಟ್ರ್ಯಾಕ್ಟರ್‌ ಬಿಡಿಭಾಗಳಿಗೆ ಶೇ.5ಕ್ಕೆ ಇಳಿಕೆ 

  • ಭಾರತವು ವಿಶ್ವದ ಅತಿದೊಡ್ಡ ಟ್ರ್ಯಾಕ್ಟರ್ ಮಾರುಕಟ್ಟೆಗಳಲ್ಲಿ ಒಂದಾಗಿದೆ; ಜಿಎಸ್ ಟಿ ಕಡಿತವು ದೇಶೀಯ ಮತ್ತು ರಫ್ತು ವಿಭಾಗಗಳಲ್ಲಿ ಬೇಡಿಕೆಯನ್ನು ಹೆಚ್ಚಿಸುತ್ತದೆ.
  • ಟೈರ್‌ಗಳು, ಗೇರ್‌ಗಳು ಮುಂತಾದ ಟ್ರ್ಯಾಕ್ಟರ್ ತಯಾರಿಕೆಯ ಬಿಡಿ ಭಾಗಗಳ ಮೇಲೆ ಕೇವಲ ಶೇ.5ರಷ್ಟು  ತೆರಿಗೆ ವಿಧಿಸಲಾಗುತ್ತದೆ.
  • ಎಂಜಿನ್‌ಗಳು, ಟೈರ್‌ಗಳು, ಹೈಡ್ರಾಲಿಕ್ ಪಂಪ್‌ಗಳು ಮತ್ತು ಬಿಡಿಭಾಗಗಳನ್ನು ತಯಾರಿಸುವ ಪೂರಕ ಎಂಎಸ್ ಎಂಇ ಗಳು ಹೆಚ್ಚಿನ ಉತ್ಪಾದನೆಯಿಂದ ಪ್ರಯೋಜನ ಪಡೆಯುತ್ತವೆ. ಜಿಎಸ್ ಟಿ ಕಡಿತವು ಜಾಗತಿಕ ಟ್ರ್ಯಾಕ್ಟರ್ ಉತ್ಪಾದನಾ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ.
  • ಟ್ರ್ಯಾಕ್ಟರ್‌ಗಳ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ದೊರೆಯುವುದರಿಂದ ಕೃಷಿ ವಲಯದಲ್ಲಿ ಯಾಂತ್ರೀಕರಣವನ್ನು ಹೆಚ್ಚಿಸುತ್ತದೆ. ಇದು ಭತ್ತ, ಗೋಧಿ ಇತ್ಯಾದಿ ಪ್ರಮುಖ ಬೆಳೆಗಳ ಉತ್ಪಾದನೆಯನ್ನು ಸುಧಾರಿಸುತ್ತದೆ.

ಬಸ್‌ ಗಳು (10+ ಅಧಿಕ ವ್ಯಕ್ತಿಗಳ ಸೀಟುಗಳ ಸಾಮರ್ಥ್ಯ) [ಜಿಎಸ್ ಟಿ ಶೇ.28ರಿಂದ ಶೇ.18ಕ್ಕೆ ಇಳಿಕೆ]

  • ಕಡಿಮೆ ತೆರಿಗೆ ದರವು ಬಸ್‌ಗಳು ಮತ್ತು ಮಿನಿಬಸ್‌ಗಳ (10+ ಆಸನಗಳು) ಮುಂಗಡ ವೆಚ್ಚವನ್ನು ತಗ್ಗಿಸುತ್ತದೆ. 
  • ಇದು ಸಾರಿಗೆ ನಿರ್ವಾಹಕರು, ಕಾರ್ಪೊರೇಟ್‌ಗಳು, ಶಾಲೆಗಳು, ಪ್ರವಾಸ ನಿರ್ವಾಹಕರು ಮತ್ತು ರಾಜ್ಯ ಸಾರಿಗೆ ಸಂಸ್ಥೆಗಳಿಂದ ಬೇಡಿಕೆಯನ್ನು ಹೆಚ್ಚಿಸುತ್ತದೆ.
  • ಪ್ರಯಾಣಿಕರಿಗೆ ಕೈಗೆಟುಕುವ ಟಿಕೆಟ್ ದರಗಳು (ವಿಶೇಷವಾಗಿ ಅರೆ-ನಗರ/ಗ್ರಾಮೀಣ ಮಾರ್ಗಗಳಲ್ಲಿ).
  • ಖಾಸಗಿ ವಾಹನಗಳಿಂದ ಹಂಚಿಕೆಯ/ಸಾರ್ವಜನಿಕ ಸಾರಿಗೆಗೆ ಬದಲಾಗುವುದನ್ನು ಪ್ರೋತ್ಸಾಹಿಸುತ್ತದೆ, ದಟ್ಟಣೆ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.
  • ವಾಹನಗಳ ವಿಸ್ತರಣೆ ಮತ್ತು ಆಧುನೀಕರಣವನ್ನು ಪ್ರೋತ್ಸಾಹಿಸುತ್ತದೆ.
  • ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಪ್ರೋತ್ಸಾಹಿಸುತ್ತದೆ.

ವಾಣಿಜ್ಯ ಸರಕು ವಾಹನಗಳು (ಟ್ರಕ್ ಗಳು, ವಿತರಣಾ ವ್ಯಾನ್ ಗಳು ಇತ್ಯಾದಿ) [ಜಿಎಸ್‌ ಟಿಯಲ್ಲಿ ಶೇ. 28 ರಿಂದ ಶೇ. 18ಕ್ಕೆ ಇಳಿಸಲಾಗಿದೆ.]

  • ಟ್ರಕ್ಕುಗಳು ಭಾರತದ ಪೂರೈಕೆ ಸರಣಿಯ ಬೆನ್ನೆಲುಬಾಗಿದೆ (ಸರಕು ಸಂಚಾರದ ಶೇ.65-70ರಷ್ಟನ್ನು ಸಾಗಿಸುತ್ತದೆ).
  • ಜಿ ಎಸ್ ಟಿಯನ್ನು ತಗ್ಗಿಸಿರುವುದರಿಂದ ಟ್ರಕ್‌ಗಳ ಮುಂಗಡ ಬಂಡವಾಳ ವೆಚ್ಚ ಕಡಿಮೆಯಾಗುತ್ತದೆ, ಇದು ಪ್ರತಿ ಟನ್-ಕಿಮೀಗೆ ಸರಕು ಸಾಗಣೆ ದರವನ್ನು ಕಡಿಮೆ ಮಾಡುತ್ತದೆ.
  • ಇದು ಕ್ಯಾಸ್ಕೇಡಿಂಗ್ (ಅಡ್ಡ ) ಪರಿಣಾಮಗಳನ್ನು ಹೊಂದಿದೆ. ಇದು ಕೃಷಿ ಸರಕುಗಳು, ಸಿಮೆಂಟ್, ಉಕ್ಕು, ಎಫ್ ಎಫ್ ಸಿಜಿ ಮತ್ತು ಇ-ಕಾಮರ್ಸ್ ವಿತರಣೆಗಳ ಅಗ್ಗದ ಸಾಗಣೆಗೆ ಕಾರಣವಾಗುತ್ತದೆ. ಇದು ಹಣದುಬ್ಬರದ ಒತ್ತಡಗಳನ್ನು ತಗ್ಗಿಸುತ್ತದೆ.
  • ಭಾರತದ ರಸ್ತೆ ಸಾರಿಗೆ ವಲಯದ ದೊಡ್ಡ ಪಾಲನ್ನು ಹೊಂದಿರುವ ಎಂಎಸ್ ಎಂಇ ಟ್ರಕ್ ಮಾಲೀಕರನ್ನು ಬೆಂಬಲಿಸುತ್ತದೆ.
  • ಅಗ್ಗದ ಟ್ರಕ್‌ಗಳು ನೇರವಾಗಿ ಸಾಗಾಣೆ (ಲಾಜಿಸ್ಟಿಕ್ಸ್) ವೆಚ್ಚವನ್ನು ತಗ್ಗಿಸಲು ಸಹಾಯ ಮಾಡುತ್ತದೆ, ರಫ್ತು ಸ್ಪರ್ಧಾತ್ಮಕತೆಯನ್ನು ಸುಧಾರಿಸುತ್ತದೆ.
  • ಸರಕು ಸಾಗಣೆಯ ಮೂರನೇ ವ್ಯಕ್ತಿಯ ವಿಮೆಯ ಮೇಲೆ ಐಟಿಸಿಯೊಂದಿಗೆ ಜಿಎಸ್ ಟಿಯನ್ನು ಶೇ.12 ರಿಂದ ಶೇ.5 ಕ್ಕೆ ಇಳಿಸುವುದು ಸಹ ಈ ಪ್ರಯತ್ನಗಳಿಗೆ ಪೂರಕವಾಗಿದೆ.
  • 'ರೆಫ್ರಿಜರೇಟೆಡ್ ಮೋಟಾರು ವಾಹನಗಳು' (ಅವು ಪ್ರತ್ಯೇಕ ವರ್ಗೀಕರಣವನ್ನು ಹೊಂದಿವೆ) ಒಳಗೊಂಡಿಲ್ಲ.
  • ಪಿಎಂ ಗತಿ ಶಕ್ತಿ ಮತ್ತು ರಾಷ್ಟ್ರೀಯ ಸರಕು ಸಾಗಾಣೆ (ಲಾಜಿಸ್ಟಿಕ್ಸ್ ) ನೀತಿ ಗುರಿಗಳೊಂದಿಗೆ ಹೊಂದಾಣಿಕೆ ಮಾಡಲು ಸಹಾಯ ಮಾಡುತ್ತದೆ.

ಆಟೋ ಬಿಡಿ ಭಾಗಗಳು 

  • ಮೋಟಾರು ಕಾರುಗಳು ಮತ್ತು ಮೋಟಾರ್ ಬೈಕ್‌ಗಳ ತಯಾರಿಕೆಗೆ ಬಳಸುವ ಬಹುಪಾಲು ಬಿಡಿಭಾಗಗಳು, ಅಂದರೆ ಆಟೋ ಬಿಡಿಭಾಗಗಳನ್ನೂ ಸಹ ಶೇ.18 ಕ್ಕೆ ಇಳಿಸಲಾಗಿದೆ.

ಸರಕು ಮತ್ತು ಪ್ರಯಾಣಿಕರ ಸಾಗಣೆಗೆ ಸಂಬಂಧಿಸಿದ ಸೇವೆಗಳು ಸಹ ಗಮನಾರ್ಹ ಬದಲಾವಣೆಗಳು ಮತ್ತು ಏಕರೂಪಕ್ಕೆ ಒಳಗಾಗಿವೆ ಎಂಬುದನ್ನು ಇಲ್ಲಿ ಗಮನಿಸುವುದು ಅತಿ ಮುಖ್ಯವಾಗಿದೆ. ಅಗತ್ಯವಿರುವಲ್ಲಿ ದರಗಳನ್ನು ಕಡಿಮೆ ಮಾಡಲಾಗಿದೆ ಮತ್ತು ಅಡ್ಡ ಪರಿಣಾಮಗಳು (ಕ್ಯಾಸ್ಕೇಡಿಂಗ್ ) ತಪ್ಪಿಸಲು ಐಟಿಸಿಯನ್ನು ವರ್ಗಾಯಿಸಲಾಗಿದೆ.

ಅಲ್ಲದೆ, ಸಂಪೂರ್ಣ ಸರಕು ಸಾಗಣೆ ಮತ್ತು ರಸ್ತೆಯ ಮೂಲಕ ಪ್ರಯಾಣಿಕರ ಸಾಗಣೆಗೆ ಎರಡು ದರಗಳ ಆಯ್ಕೆಗಳನ್ನು, ಅಂದರೆ ಶೇ.5 ರಷ್ಟು ಅಥವಾ ಶೇ.18 ರಷ್ಟು ಅವರ ವ್ಯವಹಾರದ ಅವಶ್ಯಕತೆಗೆ ಅನುಗುಣವಾಗಿ ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

 

*****
 


(Release ID: 2164733) Visitor Counter : 2