ರಾಷ್ಟ್ರಪತಿಗಳ ಕಾರ್ಯಾಲಯ
ಓಣಂ ಹಬ್ಬದ ಮುನ್ನಾ ದಿನದಂದು ಶುಭಾಶಯಗಳನ್ನು ಕೋರಿದ ಭಾರತದ ರಾಷ್ಟ್ರಪತಿ
Posted On:
04 SEP 2025 6:02PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಓಣಂ ಹಬ್ಬದ ಮುನ್ನಾ ದಿನದಂದು ತಿಳಿಸಿದ ತಮ್ಮ ಹಬ್ಬದ ಶುಭ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ: -
“ಓಣಂ ಹಬ್ಬದ ಶುಭ ಸಂದರ್ಭದಲ್ಲಿ, ಎಲ್ಲಾ ನಾಗರಿಕರಿಗೆ, ವಿಶೇಷವಾಗಿ ಭಾರತ ಮತ್ತು ವಿದೇಶಗಳಲ್ಲಿ ವಾಸಿಸುವ ಕೇರಳದ ಸಹೋದರ ಸಹೋದರಿಯರಿಗೆ ನನ್ನ ಆತ್ಮೀಯ ಶುಭಾಶಯಗಳು ಮತ್ತು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಹೊಸ ಸುಗ್ಗಿಯ ಸಂತೋಷದಲ್ಲಿ ಆಚರಿಸಲಾಗುವ ಓಣಂ ಹಬ್ಬವು ಕೇರಳದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಗಳ ವಿಶಿಷ್ಟತೆಯ ಉದಾಹರಣೆಯಾಗಿದೆ. ಈ ಹಬ್ಬವು ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆ, ಆಚರಣೆಗಳನ್ನು ಮೀರಿ ಏಕತೆ, ಸಹಕಾರ ಮತ್ತು ಸಾಮರಸ್ಯದ ಮಹತ್ವವನ್ನು ನಮಗೆ ನೆನಪಿಸುತ್ತದೆ. ಈ ಹಬ್ಬವು ನಮ್ಮ ರೈತರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಂದರ್ಭವೂ ಕೂಡ ಆಗಿದೆ.
ಈ ಶುಭ ಸಂದರ್ಭದಲ್ಲಿ, ನಮ್ಮ ಸಾಂಸ್ಕೃತಿಕ ವೈವಿಧ್ಯತೆಯನ್ನು ಗೌರವಿಸಲು ಮತ್ತು ರಾಷ್ಟ್ರೀಯ ಏಕತೆಯನ್ನು ಬಲಪಡಿಸಲು ಪ್ರತಿಜ್ಞೆ ಮಾಡೋಣ”.
ರಾಷ್ಟ್ರಪತಿಯವರ ಸಂದೇಶವನ್ನು ವೀಕ್ಷಿಸಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ
*****
(Release ID: 2164023)
Visitor Counter : 2