ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಭಾರತ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಆಹಾರ ಕಾರ್ಯದರ್ಶಿಗಳೊಂದಿಗೆ ಸಭೆ ಕರೆಯಲಾಯಿತು
ಖಾರಿಫ್ (ಮುಂಗಾರು) ಮಾರುಕಟ್ಟೆ ಋತುವಿನಲ್ಲಿ (ಕೆ.ಎಂ.ಎಸ್) 2025-26 (ಖಾರಿಫ್ ಬೆಳೆಗಳು)ನಲ್ಲಿಆಹಾರ ಧಾನ್ಯಗಳ ಸಂಗ್ರಹಣೆ ಕೇಂದ್ರ ಸಂಗ್ರಹದ ಮುಖ್ಯ ಕಾರ್ಯಸೂಚಿಗಾಗಿ
Posted On:
01 SEP 2025 7:21PM by PIB Bengaluru
2025-26 ರ ಮುಂಗಾರು ಮಾರುಕಟ್ಟೆ ಋತುವಿನಲ್ಲಿ (ಕೆ.ಎಂ.ಎಸ್) ಬೆಳೆಗಳ ಸಂಗ್ರಹಣೆ ವ್ಯವಸ್ಥೆಗಳ ಕುರಿತು ಚರ್ಚಿಸಲು ಭಾರತ ಸರ್ಕಾರದ ಡಿ.ಎಫ್.ಪಿ.ಡಿ ಕಾರ್ಯದರ್ಶಿ ಶ್ರೀ ಸಂಜೀವ್ ಚೋಪ್ರಾ ಅಧ್ಯಕ್ಷತೆಯಲ್ಲಿ ಭಾರತ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಇಂದು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಆಹಾರ ಕಾರ್ಯದರ್ಶಿಗಳು ಮತ್ತು ಭಾರತೀಯ ಆಹಾರ ನಿಗಮ (ಎಫ್.ಸಿ.ಐ) ಜೊತೆ ಸಭೆ ಕರೆಯಲಾಯಿತು.
ಸಭೆಯಲ್ಲಿ, ಭತ್ತದ ಸಂಗ್ರಹಣೆಯ (ಖಾರಿಫ್ ಬೆಳೆ) ಅಂದಾಜುಗಳನ್ನು ಅಕ್ಕಿಗೆ ಸಂಬಂಧಿಸಿದಂತೆ 463.50 ಲಕ್ಷ ಮೆಟ್ರಿಕ್ ಟನ್ (ಎಲ್.ಎಂ.ಟಿ) ಎಂದು ನಿಗದಿಪಡಿಸಲಾಗಿದೆ ಮತ್ತು ಮುಂಬರುವ ಕೆಎಂಎಸ್ 2025-26ರಲ್ಲಿ ಒರಟು ಧಾನ್ಯಗಳು/ರಾಗಿ (ಶ್ರೀ ಅನ್ನ) ಖರೀದಿಯ ಅಂದಾಜುಗಳನ್ನು 19.19 ಎಲ್ಎಂಟಿಗೆ ನಿಗದಿಪಡಿಸಲಾಗಿದೆ. ಬೆಳೆಗಳ ವೈವಿಧ್ಯೀಕರಣ ಮತ್ತು ಆಹಾರ ಪದ್ಧತಿಯಲ್ಲಿ ಪೌಷ್ಠಿಕಾಂಶವನ್ನು ಹೆಚ್ಚಿಸಲು ಸಿರಿಧಾನ್ಯಗಳ ಸಂಗ್ರಹಣೆಯತ್ತ ಗಮನ ಹರಿಸುವಂತೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಲಾಯಿತು.
ಸಭೆಯಲ್ಲಿ, ಮಿಲ್ಲಿಂಗ್ ಅವಧಿಯ ವಿನಂತಿಗಳ ವೆಬ್ ಆಧಾರಿತ ಪ್ರಕ್ರಿಯೆ, ಮೊಬೈಲ್ ಅಪ್ಲಿಕೇಶನ್ ಆಧಾರಿತ ಭತ್ತದ ಜಂಟಿ ಭೌತಿಕ ಪರಿಶೀಲನೆ, ಸ್ಮಾರ್ಟ್ ಪಿಡಿಎಸ್, ಅನ್ನ ಮಿತ್ರ, ಸೆಣಬಿನ ಚೀಲಗಳ ಖರೀದಿಗೆ ನಗದು ಕ್ರೆಡಿಟ್ ಮಿತಿಯ ಅನುಷ್ಠಾನ, ಡಿಪೋ ದರ್ಪಣ್, ಖರೀದಿ ಕೇಂದ್ರಗಳಲ್ಲಿ ಮೂಲಸೌಕರ್ಯ ಸುಧಾರಣೆ, ಆಹಾರ ಸಬ್ಸಿಡಿ ಬಿಲ್‌ಗಳ ಸಂಸ್ಕರಣೆಗಾಗಿ ಸ್ಕ್ಯಾನ್ ಪೋರ್ಟಲ್, ಶೇಖರಣಾ ನೀತಿ ಇತ್ಯಾದಿಗಳ ಬಗ್ಗೆಯೂ ಚರ್ಚಿಸಲಾಯಿತು. ಸಭೆಯಲ್ಲಿ, ಅಕ್ಕಿ ಮಿಲ್ಲಿಂಗ್ ರೂಪಾಂತರ ಯೋಜನೆಗೆ ಸಂಬಂಧಿಸಿದ ವಿವರಗಳನ್ನು ಹಂಚಿಕೊಳ್ಳಲಾಯಿತು, ಇದರಲ್ಲಿ ಕೇವಲ ಶೇ.10ರಷ್ಟು ಮುರಿದ ಅಕ್ಕಿಯ ಕಸ್ಟಮ್ ಮಿಲ್ಲಿಂಗ್ ಅನ್ನು ಕೈಗೊಳ್ಳಬೇಕಾಗಿದೆ.
ಸಭೆಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ (ಆಹಾರ), ಸಿ.ಎಂ.ಡಿ, ಎಫ್.ಸಿ.ಐ ಮತ್ತು ಎಫ್.ಸಿ.ಐ ಅಧಿಕಾರಿಗಳು ಭಾಗವಹಿಸಿದ್ದರು.
*****
(Release ID: 2162933)
Visitor Counter : 2